ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಒಪ್ಪಿದ ಸರ್ಕಾರ

Wednesday, February 27th, 2013
Ambedkar statue shifted

ಬೆಂಗಳೂರು : ಇಲ್ಲಿನ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಸರ್ಕಾರ ಒಪ್ಪಿಕೊಂಡಿದ್ದು ಈ ಮೂಲಕ  ವಿವಾದದ ಸ್ವರೂಪ ಪಡೆದುಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿವಾದಕ್ಕೆ ಹೈಕೋರ್ಟ್ ಸೋಮವಾರ ಮಂಗಳ ಹಾಡಿದೆ. ಅಮರನಾಥನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಿಂದಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ, `ಪ್ರತಿಮೆಯನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು’ ಎಂದು ಡಿಸೆಂಬರ್ 12ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವು ದಲಿತ ಸಂಘಟನೆಗಳು […]

ಯೋಗೀಶ್ವರ್‌, ರಾಜೂಗೌಡ ಕಾಂಗ್ರೆಸ್ ಸೇರ್ಪಡೆ, ಕಾಂಗ್ರೆಸ್ ಹೈಕಮಾಂಡ್ ತಡೆ

Saturday, February 23rd, 2013
CP Yogishvar & Raju Gauwda

ಬೆಂಗಳೂರು : ರಾಜ್ಯ ಮಾಜಿ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್‌ ಹಾಗೂ ರಾಜೂಗೌಡ ತಮ್ಮ ಬಿಜೆಪಿ ಪಕ್ಷದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಸಿ.ಪಿ. ಯೋಗೀಶ್ವರ್‌ ಮಡಿಕೇರಿಯಲ್ಲಿ  ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ಅವರು ತಮ್ಮ ಬಿ.ಜೆ.ಪಿ.ಯೊಂದಿಗಿನ ನಂಟನ್ನು ಕಡಿದುಕೊಂಡಿದ್ದಾರೆ. ಯೋಗೇಶ್ವರ್‌ ಹಾಗೂ ರಾಜೂಗೌಡ ರಾಜ್ಯ ಕಾಂಗ್ರೆಸ್‌ ನಾಯಕರ ನಿರ್ದೇಶನದಂತೆ ಬಿಜೆಪಿ ಗೆ ರಾಜಿನಾಮೆ ನೀಡಿ ಕಾಂಗ್ರಸ್ ಗೆ ಸೇರುವ ತವಕದಲ್ಲಿದ್ದಾರೆ ಇನ್ನೊಂದೆಡೆ ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ರಾಜ್ಯ […]

ತೀವ್ರ ಹಣಕಾಸು ಮುಗ್ಗಟ್ಟು, ಆಸ್ತಿ ತೆರಿಗೆ ಹೆಚ್ಚಿಸಲು ಮುಂದಾದ ಬಿಬಿಎಂಪಿ

Saturday, February 23rd, 2013
BBMP property tax

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಲು ಉದ್ದೇಶಿಸಿದೆ. ಹಣಕಾಸಿನ ತೀವ್ರ ಮುಗ್ಗಟ್ಟನ್ನು  ಬಿಬಿಎಂಪಿ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.  ಅಲ್ಲದೆ  `ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ಕಾಯ್ದೆ ಪ್ರಕಾರ, ಮೂರು ವರ್ಷದಲ್ಲಿ ಒಂದು ಸಲ ಕನಿಷ್ಠ ಶೇಕಡಾ 15 ಮತ್ತು ಗರಿಷ್ಠ 30ರಷ್ಟು ತೆರಿಗೆ ಹೆಚ್ಚಿಸುವುದು ಕಡ್ಡಾಯವಾಗಿದೆ. ಈ ಹಿಂದೆ 2008ರಲ್ಲಿ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಅದಾದ ನಂತರ 2011ರ ಏಪ್ರಿಲ್‌ನಲ್ಲಿ ಬಿಬಿಎಂಪಿ ತೆರಿಗೆ ಹೆಚ್ಚಳಕ್ಕೆ […]

ಗಾಂಜಾ ಮಾರಾಟ ಆರೋಪಿಗಳ ಸೆರೆ

Wednesday, February 13th, 2013
Ganja seized at Sullia

ಮಂಗಳೂರು : ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಬೆಳಗ್ಗಿನ ಜಾವ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಅವರಿಂದ ಕಾರು ಸಹಿತ ೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕುರುಂಜಿಭಾಗ್ ದೇವರಕಳಿಯ ನಿವಾಸಿ ತೀರ್ಥಪ್ರಸಾದ್(೨೧), ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಇರ್ಫಾನ್ (೨೦) ಮತ್ತು ಜೂನಿಯರ್ ಕಾಲೇಜು ನಿವಾಸಿ ವಿನೋದ್(೨೩) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡಿನ ಚೆರ್ಕ ಎಂಬವನು ತಲೆಮರೆಸಿಕೊಂಡಿದ್ದಾನೆ. ಸುಳ್ಯದ ಕ್ಯಾಂಪಸ್ ರಸ್ತೆಯ […]

ತೆನೆ ಹೊತ್ತ ಮಹಿಳೆ ಪೂಜಾಗಾಂಧಿ ಕೆಜೆಪಿ ಸೇರ್ಪಡೆ

Saturday, December 8th, 2012
Pooja Gandhi KJP

ಬೆಂಗಳೂರು :ಕಳೆದ ಆರು ತಿಂಗಳ ಹಿಂದೆಯಷ್ಟೆ ಜೆಡಿಎಸ್‌ ಮೂಲಕ ರಾಜಕೀಯಕ್ಕೆ ಪಾದಾರ್ಪಣೆಮಾಡಿದ್ದ ಮಳೆ ಹುಡುಗಿ ಪೂಜಾಗಾಂಧಿ ಈಗ ಪಕ್ಷ ಬದಲಾಯಿಸಿದ್ದಾರೆ. ಎರಡು ತಿಂಗಳ ಹಿಂದೆ ತಮ್ಮ ವಿರುದ್ಧ ಆರೋಪ ಕೇಳಿಬಂದಾಗ ಪಕ್ಷದ ಯಾವೊಬ್ಬ ಪ್ರಮುಖ ನಾಯಕರೂ ತಮ್ಮ ಬೆಂಬಲಕ್ಕೆ ಬಂದಿರಲಿಲ್ಲ ಆದ್ದರಿಂದ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕೆಜೆಪಿಗೆ ಸೇರ್ಪಡೆಗೊಂಡಿದುದಾಗಿ ತಿಳಿಸಿದರು. ಶುಕ್ರವಾರ ಮಲ್ಲೇಶ್ವರದಲ್ಲಿರುವ ಕೆಜೆಪಿ ಕಚೇರಿಯಲ್ಲಿ ಪಕ್ಷದ ಬಾವುಟ ಹಿಡಿಯುವ ಮೂಲಕ ನೂತನ ಪಕ್ಷಕ್ಕೆ ಸೇರ್ಪಡೆಗೊಂಡ ಅವರನ್ನು ಕೆಜೆಪಿ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯೆ ಐಶ್ವರ್ಯ ಅವರು […]

ಬಿಜೆಪಿ :ಶಾಸಕ ಸ್ಥಾನಕ್ಕೆ ಬಿ ಎಸ್ ವೈ ರಾಜೀನಾಮೆ

Friday, November 30th, 2012
Yeddyurappa resignation

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಮೂಡಿದ್ದ ಕುತೂಹಲಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಸುಮಾರು 40 ವರ್ಷಗಳ ಕಾಲ ಭಾರೀ ಪರಿಶ್ರಮ ಪಟ್ಟು ತಾನೇ ಕಟ್ಟಿದ ಮನೆಯಿಂದ ಯಡಿಯೂರಪ್ಪ ಹೊರ ನಡೆದಿದ್ದಾರೆ. ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ವಿಧಾನಸೌಧಕ್ಕೆ ತೆರಳಿದ ಯಡಿಯೂರಪ್ಪ ಸ್ಪೀಕರ್ ಬೋಪಯ್ಯಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡುವುದಕ್ಕೂ ಮುನ್ನ ಯಡಿಯೂರಪ್ಪ ಫ್ರೀಡಂ ಪಾರ್ಕ್ ನಲ್ಲಿ ತನ್ನ […]

ಮುಜರಾಯಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಜುಲೈ 27 ರಿಂದ

Saturday, July 21st, 2012
Rain

ಬೆಂಗಳೂರು : ರಾಜ್ಯ ಸರ್ಕಾರ, ಮುಜರಾಯಿ ದೇವಾಲಯಗಳಲ್ಲಿ ‘ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ಪೂಜೆ’ ನಡೆಸಲು ಆದೇಶ ಹೊರಡಿಸಿದೆ. ತೀವ್ರ ಬರಗಾಲ ಆವರಿಸಿರುವುದರಿಂದ ಮಳೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ಸುಮಾರು 34 ಸಾವಿರ ದೇವಾಲಯಗಳಲ್ಲಿ ಎರಡು ದಿನ ವಿಶೇಷ ಪೂಜೆ ನಡೆಯಲಿದೆ. ಪ್ರತಿ ದೇವಾಲಯದಲ್ಲಿ ತಲಾ ಐದು ಸಾವಿರ ರೂ. ವೆಚ್ಚದಲ್ಲಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಈ ಜಲ ಪೂಜೆಗಾಗಿ ಒಟ್ಟು  17 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. […]

ಶಿಘ್ರದಲ್ಲೇ ಡಿ.ವಿ.ಸದಾನಂದ ಗೌಡರ ಸಂಪುಟ ವಿಸ್ತರಣೆ

Monday, May 7th, 2012
Dv Sadananada Gowda

ಬೆಂಗಳೂರು : ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇನ್ನು ಒಂದು ವಾರದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಸೋಮವಾರ ಮತ್ತೊಮ್ಮೆ ಹೇಳಿದ್ದಾರೆ. ಸುಮಾರು 21 ಖಾತೆಗಳ ಹೊರೆಯನ್ನು ಹೊಂದಿರುವ ಅವರು ಖಾತೆ ಹಂಚಿಕೆಯ ಮೂಲಕ ತಮ್ಮ ಮೇಲಿರುವ ಜವಾಬ್ದಾರಿಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಸಂಪುಟ ಪುನಾರಚನೆ, ಖಾತೆ ಹಂಚಿಕೆ ಸಂಬಂಧ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ವಿಸ್ತರಿಸುವುದಾಗಿ ಸಿಎಂ ವಿಶ್ವಾಸದಿಂದ ಹೇಳಿದ್ದಾರೆ. ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭವಲ್ಲ. ಎಲ್ಲ ಖಾತೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ […]

ಯಡಿಯೂರಪ್ಪ ಮೊದಲು ಆರೋಪ ಮುಕ್ತರಾಗಲಿ ಅಮೇಲೆ ನಾಯಕತ್ವ : ಗಡ್ಕರಿ

Friday, February 24th, 2012
Nithin Gadkari

ಬೆಂಗಳೂರು : ಹೊಸೂರು ರಸ್ತೆಯ ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ದಯಮಾಡಿ ಬಂಡಾಯ ರಾಜಕೀಯ ಮಾಡಬೇಡಿ. ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎರಡೂ ಕೈಮುಗಿದು ಮನವಿ ಮಾಡಿಕೊಂಡ ಘಟನೆ ಶುಕ್ರವಾರ ನಡೆಯಿತು. ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚಿಂತನ-ಮಂಥನ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ ಗಡ್ಕರಿ, ರಾಜ್ಯದಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ […]

ಸಚಿವರಿಂದ ಸದನದಲ್ಲಿ ಬ್ಲೂಫಿಲ್ಮ್ ವೀಕ್ಷಣೆ, ಪಾಲೇಮಾರ್ ಕೂಡ ಬಾಗಿ

Wednesday, February 8th, 2012
watching porn Video at Assembly

ಬೆಂಗಳೂರು : ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿಯ ಕುರಿತು ವಿಪಕ್ಷಗಳ ಸದಸ್ಯರು ಸರ್ಕಾರದ ಗಮನ ಸೆಳೆಯಲು ಗಂಭೀರವಾಗಿ ಮಾತನಾಡುತ್ತಿದ್ದ ವೇಳೆ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಅಶ್ಲೀಲ ದೃಶ್ಯಗಳನ್ನು ಒಳಗೊಂಡ ಬ್ಲೂಫಿಲ್ಮ್ ತನ್ನ ಮೊಬೈಲ್‌ನಲ್ಲಿ ವೀಕ್ಷಿಸಿ ಸಿಕ್ಕಿಬಿದ್ದ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಶಾಸಕಾಂಗದ ಪರಮೋಚ್ಚ ಸ್ಥಳವಾದ ವಿಧಾನಸಭೆಯಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದಲ್ಲಿ ತಲೆತಗ್ಗಿಸುವಂಥ ಘಟನೆಯೊಂದು ನಡೆದಿದೆ. ದೇಶದಲ್ಲೇ ಇಂಥದೊಂದು ಹೀನ ಸಂಸ್ಕೃತಿಯ ಬೆಳವಣಿಗೆ ನಡೆದಿರುವುದು ಇದೇ […]