ಬಿಜೆಪಿ :ಶಾಸಕ ಸ್ಥಾನಕ್ಕೆ ಬಿ ಎಸ್ ವೈ ರಾಜೀನಾಮೆ

Friday, November 30th, 2012
Yeddyurappa resignation

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಮೂಡಿದ್ದ ಕುತೂಹಲಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಸುಮಾರು 40 ವರ್ಷಗಳ ಕಾಲ ಭಾರೀ ಪರಿಶ್ರಮ ಪಟ್ಟು ತಾನೇ ಕಟ್ಟಿದ ಮನೆಯಿಂದ ಯಡಿಯೂರಪ್ಪ ಹೊರ ನಡೆದಿದ್ದಾರೆ. ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ವಿಧಾನಸೌಧಕ್ಕೆ ತೆರಳಿದ ಯಡಿಯೂರಪ್ಪ ಸ್ಪೀಕರ್ ಬೋಪಯ್ಯಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡುವುದಕ್ಕೂ ಮುನ್ನ ಯಡಿಯೂರಪ್ಪ ಫ್ರೀಡಂ ಪಾರ್ಕ್ ನಲ್ಲಿ ತನ್ನ […]

ಮುಜರಾಯಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಜುಲೈ 27 ರಿಂದ

Saturday, July 21st, 2012
Rain

ಬೆಂಗಳೂರು : ರಾಜ್ಯ ಸರ್ಕಾರ, ಮುಜರಾಯಿ ದೇವಾಲಯಗಳಲ್ಲಿ ‘ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ಪೂಜೆ’ ನಡೆಸಲು ಆದೇಶ ಹೊರಡಿಸಿದೆ. ತೀವ್ರ ಬರಗಾಲ ಆವರಿಸಿರುವುದರಿಂದ ಮಳೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ಸುಮಾರು 34 ಸಾವಿರ ದೇವಾಲಯಗಳಲ್ಲಿ ಎರಡು ದಿನ ವಿಶೇಷ ಪೂಜೆ ನಡೆಯಲಿದೆ. ಪ್ರತಿ ದೇವಾಲಯದಲ್ಲಿ ತಲಾ ಐದು ಸಾವಿರ ರೂ. ವೆಚ್ಚದಲ್ಲಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಈ ಜಲ ಪೂಜೆಗಾಗಿ ಒಟ್ಟು  17 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. […]

ಶಿಘ್ರದಲ್ಲೇ ಡಿ.ವಿ.ಸದಾನಂದ ಗೌಡರ ಸಂಪುಟ ವಿಸ್ತರಣೆ

Monday, May 7th, 2012
Dv Sadananada Gowda

ಬೆಂಗಳೂರು : ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇನ್ನು ಒಂದು ವಾರದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಸೋಮವಾರ ಮತ್ತೊಮ್ಮೆ ಹೇಳಿದ್ದಾರೆ. ಸುಮಾರು 21 ಖಾತೆಗಳ ಹೊರೆಯನ್ನು ಹೊಂದಿರುವ ಅವರು ಖಾತೆ ಹಂಚಿಕೆಯ ಮೂಲಕ ತಮ್ಮ ಮೇಲಿರುವ ಜವಾಬ್ದಾರಿಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಸಂಪುಟ ಪುನಾರಚನೆ, ಖಾತೆ ಹಂಚಿಕೆ ಸಂಬಂಧ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ವಿಸ್ತರಿಸುವುದಾಗಿ ಸಿಎಂ ವಿಶ್ವಾಸದಿಂದ ಹೇಳಿದ್ದಾರೆ. ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭವಲ್ಲ. ಎಲ್ಲ ಖಾತೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ […]

ಯಡಿಯೂರಪ್ಪ ಮೊದಲು ಆರೋಪ ಮುಕ್ತರಾಗಲಿ ಅಮೇಲೆ ನಾಯಕತ್ವ : ಗಡ್ಕರಿ

Friday, February 24th, 2012
Nithin Gadkari

ಬೆಂಗಳೂರು : ಹೊಸೂರು ರಸ್ತೆಯ ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ದಯಮಾಡಿ ಬಂಡಾಯ ರಾಜಕೀಯ ಮಾಡಬೇಡಿ. ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎರಡೂ ಕೈಮುಗಿದು ಮನವಿ ಮಾಡಿಕೊಂಡ ಘಟನೆ ಶುಕ್ರವಾರ ನಡೆಯಿತು. ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚಿಂತನ-ಮಂಥನ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ ಗಡ್ಕರಿ, ರಾಜ್ಯದಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ […]

ಸಚಿವರಿಂದ ಸದನದಲ್ಲಿ ಬ್ಲೂಫಿಲ್ಮ್ ವೀಕ್ಷಣೆ, ಪಾಲೇಮಾರ್ ಕೂಡ ಬಾಗಿ

Wednesday, February 8th, 2012
watching porn Video at Assembly

ಬೆಂಗಳೂರು : ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿಯ ಕುರಿತು ವಿಪಕ್ಷಗಳ ಸದಸ್ಯರು ಸರ್ಕಾರದ ಗಮನ ಸೆಳೆಯಲು ಗಂಭೀರವಾಗಿ ಮಾತನಾಡುತ್ತಿದ್ದ ವೇಳೆ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಅಶ್ಲೀಲ ದೃಶ್ಯಗಳನ್ನು ಒಳಗೊಂಡ ಬ್ಲೂಫಿಲ್ಮ್ ತನ್ನ ಮೊಬೈಲ್‌ನಲ್ಲಿ ವೀಕ್ಷಿಸಿ ಸಿಕ್ಕಿಬಿದ್ದ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಶಾಸಕಾಂಗದ ಪರಮೋಚ್ಚ ಸ್ಥಳವಾದ ವಿಧಾನಸಭೆಯಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದಲ್ಲಿ ತಲೆತಗ್ಗಿಸುವಂಥ ಘಟನೆಯೊಂದು ನಡೆದಿದೆ. ದೇಶದಲ್ಲೇ ಇಂಥದೊಂದು ಹೀನ ಸಂಸ್ಕೃತಿಯ ಬೆಳವಣಿಗೆ ನಡೆದಿರುವುದು ಇದೇ […]

ಹೆಣ್ಣು ಮಗುವಿಗೆ ಜನ್ಮ ನೀಡಿದ ಭುವನ ಸುಂದರಿ ಐಶ್‌

Thursday, November 17th, 2011
Aishwarya Rai

ಮುಂಬೈ:   ಮಾಜಿ ಭುವನ ಸುಂದರಿ ಐಶ್ವರ್ಯ ರೈ ಅಂಧೇರಿಯ ಸೆವೆನ್‌ ಹಿಲ್ಸ್‌ ಎಂಬ ಐಷಾರಾಮಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮಿತಾಬ್ ಕುಟುಂಬಕ್ಕೆ ಬುಧವಾರ ಪುಟ್ಟ ಅತಿಥಿಯ ಆಗಮನವಾಗಿದೆ. ಸೋಮವಾರ ರಾತ್ರಿಯೇ ಐಶ್ವರ್ಯ ರೈ ಅವರನ್ನು ದಾಖಲಿಸಲಾಗಿತ್ತು. 11.11.11ರಂದು ಹೆರಿಗೆಯಾಗುತ್ತದೆ, ಮಕ್ಕಳ ದಿನವಾದ ನ.14ರಂದು ಆಗುತ್ತದೆ ಎಂಬೆಲ್ಲಾ ವದಂತಿ ಹಾಗೂ ಬೆಟ್ಟಿಂಗ್‌ಗಳನ್ನು ಹುಸಿಗೊಳಿಸಿ ಸಾಮಾನ್ಯ ದಿನವಾದ ಗುರುವಾರ ಹೆರಿಗೆಯಾಗಿದ್ದು ವಿಶೇಷ. ಅವಳಿ ಮಗುವಾಗುತ್ತದೆ ಎಂಬ ಜ್ಯೋತಿಷ್ಯ ಕೂಡ ಸುಳ್ಳಾಗಿದೆ. ಐಶ್‌ಗೆ ಹೆರಿಗೆಯಾಗುತ್ತಿದ್ದಂತೆ ಪತಿ ಅಭಿಷೇಕ್‌ […]

ಸೀಲಿಂಗ್‌ ಫ್ಯಾನ್‌ ಹಿಡಿದು ಬೀದಿಗಿಳಿದ ಶ್ರೀರಾಮುಲು

Thursday, November 17th, 2011
Sri Ramulu

ಬಳ್ಳಾರಿ: ಇಷ್ಟು ದಿನ ಬಿಜೆಪಿಯಲ್ಲಿದ್ದು  ಇದೀಗ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ತಮ್ಮ ಚಿಹ್ನೆ‌ ಸೀಲಿಂಗ್‌ ಫ್ಯಾನ್‌ ಹಿಡಿದು ಪ್ರಚಾರ ನಡೆಸಲು  ಬೀದಿಗಿಳಿದಿದ್ದಾರೆ. ಬಳ್ಳಾರಿ  ಜನರಿಗೆ ಶ್ರೀರಾಮುಲು ಅಂದರೆ ಬಿಜೆಪಿ ಹಾಗೂ ಕಮಲ ಎಂದರೆ ರಾಮುಲು ಎಂಬಾಂತಾಗಿತ್ತು. ಹೀಗಾಗಿ ಹಳ್ಳಿಗಾಡಿನ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ರಾಮುಲು ಮತದಾರರಿಗೆ ತನ್ನ  ಚುನಾವಣಾ ಪ್ರಚಾರದಲ್ಲಿ ತಿಳಿಸಿದರು. ಬುಧವಾರ ಮೋಕಾ, ಯರಗುಡಿ, ಬೆಣಕಲ್ಲು, ಸಿಂಧವಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ […]

ನಗರ ಪ್ರದೇಶದಲ್ಲಿ 1ಗಂಟೆ ಗ್ರಾಮೀಣ ಪ್ರದೇಶಗಳಲ್ಲಿ 7ರಿಂದ 8 ಗಂಟೆ ವಿದ್ಯುತ್ ಇಲ್ಲ

Tuesday, October 11th, 2011
Shobha Karandlaje

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ನಗರ ಪ್ರದೇಶದಲ್ಲಿ 1ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 7ರಿಂದ 8 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇಂದು ಶಕ್ತಿಭವನದಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆ ನಂತರ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಯದ ಕುರಿತು ವಿವರಣೆ ನೀಡಿದರು.ಕಲ್ಲಿದ್ದಲು ಕೊರತೆಯಿಂದ ಇಂದಿನಿಂದಲೇ ರಾಜ್ಯಾದ್ಯಂತ ಸಂಜೆ 1ಗಂಟೆ ಪವರ್ ಕಟ್ ಮಾಡುವುದಾಗಿ ಹೇಳಿದರು. ಆದರೆ […]

ವಿದ್ವಾನ್ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶ

Thursday, October 6th, 2011
Matturu

ಬೆಂಗಳೂರು : ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿದ್ವಾನ್ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಮತ್ತೂರ ಗ್ರಾಮದಲ್ಲಿ 1929 ಆಗಸ್ಟ್ 8ರಂದು ಜನಿಸಿದ್ದ ಕೃಷ್ಣಮೂರ್ತಿ ಅವರ ಕುಮಾರವ್ಯಾಸ ಭಾರತ ವ್ಯಾಖ್ಯಾನಕ್ಕೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಕುಮಾರ ಪರ್ವ, ದ್ರೌಪದಿ ಸ್ವಯಂವರ, ಮಹಾಭಾರ ಉದ್ಯೋಗ ಪರ್ವ ಸೇರಿದಂತೆ ಭಾರತೀಯ ಹಬ್ಬಗಳ ಕುರಿತು ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ರಾಮಕೃಷ್ಣಯ್ಯ ಮತ್ತು […]

ಭಕ್ತಿ ಭಾವೈಕತೆಯ ಆಯುಧ ಪೂಜೆ

Wednesday, October 5th, 2011
Viajaya Dashami

ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಾದರೆ. ಒಂಭತ್ತನೆ ದಿನ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವನ್ನು ಆಚರಿಸಲಾಗುತ್ತದೆ, ಎಲ್ಲೆಡೆ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ನಡೆಸಲಾಗುತ್ತದೆ ಅಂಗಡಿ, ಕಚೇರಿ, ಮಳಿಗೆಗಳಲ್ಲಿ ವಾಹನ ಸೇರಿದಂತೆ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಹೂ ತೋರಣಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವೈಕತೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಜಾತಿ ಭೇಧವಿಲ್ಲದೆ ಆಯುಧ ಪೂಜೆಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ದೀರ್ಘ ಬಾಳ್ವಿಕೆ ಸಹಿತ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳಲ್ಲಿ ದೇವಾಲಯಗಳಿಗೆ ತೆರಳಿ […]