ಮೂವರು ಉಗ್ರರನ್ನು ಬಾಗ್ರಂ ಸೆರೆಮನೆಯಿಂದ ಬಿಡುಗಡೆ ಮಾಡಿದ ಅಫ್ಘಾನಿಸ್ಥಾನ

Tuesday, November 19th, 2019
Share

Ugraru

ಕಾಬೂಲ್ : ತಾಲೀಬಾನ್ ಉಗ್ರ ಮುಖ್ಯಸ್ಥ ಸಿರಾಜುದ್ದೀನ್ ಹಖ್ಖಾನಿ ಸಹೋದರ ಅನಾಸ್ ಹಖ್ಖಾನಿ ಸೇರಿದಂತೆ ಮೂವರು ಉಗ್ರರನ್ನು ಬಾಗ್ರಂ ಸೆರೆಮನೆಯಿಂದ ಅಫ್ಘಾನಿಸ್ಥಾನ ಬಿಡುಗಡೆ ಮಾಡಿದೆ.

ಅನಾಸದ ಹಖ್ಖಾನಿ, ಹಾಜಿ ಮಲಿ ಖಾನ್, ಹಫೀಜ್ ರಶೀದ್ ಬಿಡುಗಡೆಯಾದ ಉಗ್ರರು.

ಅಫ್ಘಾನಿಸ್ಥಾನದ ಅಮೇರಿಕನ್ ಯುನಿವರ್ಸಿಟಿಯ ಪ್ರೊಫೆಸರ್ಕೆವಿನ್ ಕಿಂಗ್ ಮತ್ತು ಟಿಮೊತಿ ವೀಕ್ಸ್ ಅವರನ್ನು ತಾಲಿಬಾನ್ ಉಗ್ರರು ಅಪಹರಿಸಿ ಬಂಧಿತ ಉಗ್ರರ ಬಿಡುಗಡೆಗೆ ಬೇಡಿಕೆ ನೀಡಿದ್ದರು.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಉಗ್ರರ ಷರತ್ತು ಬದ್ಧ ಬಿಡುಗಡೆಯ ಬಗ್ಗೆ ಹೇಳಿಕೆ ನೀಡಿದ್ದರು.

ಆದರೆ ಉಗ್ರರ ಬಿಡುಗಡೆಯ ಬಗ್ಗೆಅಮೇರಿಕಾ ರಾಯಭೇರಿ ಕಚೇರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

 

ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ 15 ವರ್ಷದ ಅಣ್ಣ

Friday, November 15th, 2019
Share

hashimಮನಿಲಾ : ಇನ್ನೇನು ದಡ  ಸೇರಬೇಕು ಅನ್ನುವಷ್ಟರಲ್ಲಿ  14 ಅಡಿ ಉದ್ದದ ಮೊಸಳೆಯೊಂದು ಬಾಲಕಿಯ ಕಾಲನ್ನು ಹಿಡಿದು ಬಿಟ್ಟಿತು.  ಇದನ್ನು ಗಮನಿಸಿದ  ಅಣ್ಣ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ.

12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ ಮೇಲೆ ದಾಳಿ ಮಾಡಿದೆ.

ಹೈನಾ ಮತ್ತು ಹಾಶಿಮ್ ಇಬ್ಬರು ನದಿ ದಾಟುವಾಗ, ಹಾಶಿಮ್ ಬೇಗ ಮುಂದೆ ಹೋಗಿದ್ದಾನೆ. ಹೈನಾ ನಿಧಾನವಾಗಿ ಬರುತ್ತಿದ್ದ ವೇಳೆ ದಡ ಸಮೀಪಿಸಿದ ಹೈನಾಳ ಬಲಗಾಲನ್ನು ಮೊಸಳೆ ಜಿಗಿದು ಹಿಡಿದುಕೊಂಡಿದೆ. ಈ ವೇಳೆ ಕಿರುಚುತ್ತಿದ್ದ ತಂಗಿಯ ನೆರವಿಗೆ ಬಂದ ಅಣ್ಣ ಹಾಶಿಮ್ ಕಲ್ಲಿನಿಂದ ಮೊಸಳೆಯ ಬಾಯಿಗೆ ಹೊಡೆದು ನಂತರ ತನ್ನ ತಂಗಿಯನ್ನು ತನ್ನ ಕಡೆ ಎಳೆದುಕೊಂಡು ಮೊಸಳೆಯಿಂದ ಕಾಪಾಡಿದ್ದಾನೆ.

ಈ ವಿಚಾರದ ಬಗ್ಗೆ ಮಾತನಾಡಿರುವ ತಂಗಿ ಹೈನಾ, ಮೊಸಳೆ ನನಗಿಂತ ದೊಡ್ಡದಾಗಿತ್ತು. ನನಗೆ ಅದನ್ನು ನೋಡಿ ಭಯವಾಗಿತ್ತು. ಆದ್ದರಿಂದ ನಾನು ಭಯದಿಂದ ಅಳುತ್ತಿದ್ದೆ. ಅದು ನನ್ನ ಕಾಲನ್ನು ಹಿಡಿದುಕೊಂಡಿತ್ತು. ಆಗ ನನ್ನ ಸಹಾಯಕ್ಕೆ ಹಾಶಿಮ್ ಬಂದ ಅದರ ಬಾಯಿಗೆ ಕಲ್ಲಿನಿಂದ ಹೊಡೆದು ನನ್ನನ್ನು ಕಾಪಾಡಿದ ಎಂದು ಹೇಳಿದ್ದಾಳೆ.

ಈ ಘಟನೆಯಲ್ಲಿ ಹೈನಾಳ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಲೆಫ್ಟಿನೆಂಟ್ ಕರ್ನಲ್ ಸಾಕ್ರಟೀಸ್ ಫಾಲ್ಟಾಡೊ, ಈ ಭಾಗದ ನಿವಾಸಿಗಳಿಗೆ ಮೊಸಳೆಯಿಂದ ಇತ್ತೀಚೆಗೆ ಬಹಳ ತೊಂದರೆಯಾಗುತ್ತಿದೆ. ಮೊಸಳೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು. ಅವರ ಅಣ್ಣನ ಧೈರ್ಯದಿಂದ ಹುಡುಗಿ ಬದುಕಿ ಬಂದಿದ್ದಾಳೆ ಎಂದು ಹೇಳಿದ್ದಾರೆ.

ನೇಪಾಳದ 36 ಹೆಕ್ಟೇರ್​ ಭೂಮಿ ಆಕ್ರಮಿಸಿಕೊಂಡ ಚೀನಾ : ಚೀನಾದ ವಿರುದ್ಧ ನೇಪಾಳದಲ್ಲಿ ತೀವ್ರ ಪ್ರತಿಭಟನೆ

Tuesday, November 12th, 2019
Share

nepal

ಬರ್ದಿಯಾ : ಭಾರತವನ್ನು ದೂರ ಸರಿಸಿ ನೇಪಾಳದ ದೊಡ್ಡಣ್ಣ ಎನಿಸಿಕೊಳ್ಳಲು ಹವಣಿಸುತ್ತಿದ್ದ ಚೀನಾದ ವಿರುದ್ಧ ನೇಪಾಳದಲ್ಲಿ ತೀವ್ರ ಪ್ರತಿಭಟನೆಗಳು ಶುರುವಾಗಿವೆ.

ನೇಪಾಳದ ಭೂ ಪ್ರದೇಶಗಳನ್ನು ಮೆಲ್ಲಮೆಲ್ಲಗೆ ಚೀನಾ ಆಕ್ರಮಿಸುತ್ತಿದ್ದು, ಅದರ ವಿಸ್ತರಣಾವಾದದ ವಿರುದ್ಧ ನೇಪಾಳಿಗರು ಸಿಡಿದೆದ್ದಿದ್ದಾರೆ. ಸೋಮವಾರ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿದಿದ್ದಾರೆ.

ಚೀನಾ ವಿರೋಧಿ ಪ್ಲಕಾರ್ಡ್ಗಳು, ಬ್ಯಾನರ್ಗಳನ್ನು ಹೊಂದಿದ್ದ ಪ್ರತಿಭಟನಾಕಾರರು ಚೀನಾ ವಿರೋಧಿ ಘೋಷಣೆಗಳು ಕೂಗಿದ್ದಾರೆ. “ಗೋ ಬ್ಯಾಕ್ ಚೀನಾ, ನಮ್ಮ ಭೂ ಭಾಗವನ್ನು ವಾಪಸ್ ನೀಡು” ಎಂದು ಪ್ರತಿಭಟನೆ ವೇಳೆ ಕೂಗಿದ್ದಾರೆ.

ಇತ್ತೀಚೆಗೆ ನೇಪಾಳದ ಸರ್ವೇ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ನೇಪಾಳದ 36 ಹೆಕ್ಟೇರ್ ಭೂಮಿ ಚೀನಾ ವಶದಲ್ಲಿರುವುದು ಬಹಿರಂಗವಾಗಿದೆ. ಹುಮ್ಲಾ ಜಿಲ್ಲೆಯಲ್ಲಿ ಮತ್ತು ಕರ್ನಾಲಿ ಜಿಲ್ಲೆಯಲ್ಲಿ ಅತಿಕ್ರಮ ನಡೆದಿದೆ.

ಸರ್ಕಾರದ ಮಾಹಿತಿಯ ಪ್ರಕಾರ, ನೇಪಾಳವು ಚೀನಾಕ್ಕೆ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ನೇಪಾಳಿಗರಿಗೆ ಇದೀಗ ಅರಿವಾಗಿದ್ದು ಪ್ರತಿಭಟನೆಗೆ ಇಳಿದಿದ್ದಾರೆ.

 

80 ವರ್ಷ ಯಶಸ್ವಿ ದಾಂಪತ್ಯ ಜೀವನ : ಗಿನ್ನಿಸ್ ವರ್ಲ್ಡ್‌ ರೆಕಾರ್ಡ್

Monday, November 11th, 2019
Share

tecnes

ಟೆಕ್ಸಸ್ : ಇತ್ತೀಚಿನ ಕಾಲಘಟ್ಟದಲ್ಲಿ ಮದುವೆಯಾದ ತಿಂಗಳೊಳಗೆ ದಂಪತಿ ದೂರವಾಗುವ ಪ್ರಕರಣಗಳು ನಡೆಯುತ್ತಿರುತ್ತೆ. ಆದರೆ ಅಮೆರಿಕದ ಟೆಕ್ಸಸ್‍ನಲ್ಲಿ ಜೋಡಿಯೊಂದಿದೆ. ಬರೋಬ್ಬರಿ 80 ವರ್ಷದಿಂದ ಯಶಸ್ವಿ ದಾಂಪತ್ಯ ಜೀವನ ನಡೆಸಿಕೊಂಡು ಒಟ್ಟಿಗೆ ಬಾಳುತ್ತಿದ್ದಾರೆ. ಜೊತೆಗೆ ಜಗತ್ತಿನಲ್ಲಿಯೇ ಅತೀ ಹಿರಿಯ ದಂಪತಿ ಆಗುವ ಮೂಲಕ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಮಾಡಿದ್ದಾರೆ.

ಹೌದು. ಈ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತೆ. ಆದರೂ ಇದು ಸತ್ಯ. ಸತತ 80 ವರ್ಷಗಳಿಂದ ಟೆಕ್ಸಸ್ ಜಾನ್ ಹ್ಯಾಂಡರ್ಸನ್(106) ಹಾಗೂ ಚಾರ್ಲೆಟ್ (105) ಯಶಸ್ವಿ ದಾಂಪತ್ಯ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಡಿ.15ರಂದು ಈ ದಂಪತಿ ತಮ್ಮ 80ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಮೊದಲೇ ಇವರಿಬ್ಬರ ದಾಂಪತ್ಯ ನೋಡಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಇವರನ್ನು ಜಗತ್ತಿನ ಅತೀ ಹಿರಿಯ ದಂಪತಿ ಎಂದು ಅಧಿಕೃತವಾಗಿ ಘೋಷಿಸಿ ಗೌರವಿಸಿದೆ.

ವಿಶ್ವದ ಅತೀ ಹಿರಿಯ ದಂಪತಿ ವಯಸ್ಸು ಕೇಳಿದರೆ ಎಂಥವರಾದ್ರು ದಂಗಾಗುತ್ತಾರೆ. ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಪ್ರಕಾರ, ಹ್ಯಾಂಡರ್ಸನ್ 106 ವರ್ಷ, ಚಾರ್ಲೆಟ್ 105 ವರ್ಷ ವಯಸ್ಸು. ಇವರಿಬ್ಬರ ಒಟ್ಟು ಆಯಸ್ಸು ಸೇರಿಸಿದರೆ 211 ವರ್ಷವಾಗುತ್ತದೆ. ಡಿಸೆಂಬರ್ 15ರಂದು ದಂಪತಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಯಶಸ್ವಿ 80 ವರ್ಷ ಆದರ್ಶ ದಾಂಪತ್ಯ ಜೀವನ ನಡೆಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಅವರಿಬ್ಬರು 1934ರಲ್ಲಿ ಟೆಕ್ಸಸ್ ವಿಶ್ವ ವಿದ್ಯಾಲಯದಲ್ಲಿ ಭೇಟಿಯಾಗಿದ್ದರು. ಇವರಿಬ್ಬರು ಸಹಪಾಠಿಗಳಾಗಿದ್ದರು. ಅಲ್ಲಿ ಜಾನ್ ಫುಟ್‍ಬಾಲ್ ತಂಡದ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಕಾಲೇಜಿನ ಸಮಯದಲ್ಲೇ ಚಾರ್ಲೆಟ್ ಹಾಗೂ ಜಾನ್ ನಡುವೆ ಪ್ರೀತಿ ಬೆಳೆದಿತ್ತು. ಹೀಗಾಗಿ 1939ರಲ್ಲಿ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲದೆ ಜಾನ್ ಅವರು ಟೆಕ್ಸಸ್ ವಿದ್ಯಾಲಯದ ಫುಟ್‍ಬಾಲ್ ತಂಡದ ಅತ್ಯಂತ ಹಳೆಯ ಆಟಗಾರರು ಎಂಬ ಹೆಗ್ಗಳಿಕೆಯನ್ನೂ ಗಳಿಸಿದ್ದಾರೆ.

ಸತತ 84 ವರ್ಷಗಳಿಂದ ವರ್ಷಕ್ಕೆ ಒಮ್ಮೆಯಾದರೂ ಜಾನ್ ಟೆಕ್ಸಸ್ ವಿಶ್ವವಿದ್ಯಾಲಯದ ಫುಟ್‍ಬಾಲ್ ಪಂದ್ಯವನ್ನು ವೀಕ್ಷಿಸಲು ಹೋಗುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಇಬ್ಬರೂ ಆರೋಗ್ಯವಾಗಿದ್ದಾರೆ. ಜಾನ್ ಅವರು ಪ್ರತಿ ದಿನ ದೇಹಸ್ಥಿತಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಮಾಡುತ್ತಾರೆ.

2009ರಲ್ಲಿ ದಂಪತಿ ಲಾಂಗ್‍ಹಾರ್ನ್ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಗ್ರಾಮದಲ್ಲಿ ಟೆಕ್ಸಾಸ್ ವಿವಿ ಹಳೇ ವಿದ್ಯಾರ್ಥಿಗಳ ಕೂಟದಿಂದ ಸೀನಿಯರ್ ಲಿವಿಂಗ್ ಕಮ್ಯುನಿಟಿ ರಚನೆಕೊಂಡಿದೆ. ಅಲ್ಲಿ ಜಾನ್ ಹಾಗೂ ಚಾರ್ಲೆಟ್ ವಾಸವಾಗಿದ್ದಾರೆ.

 

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್

Friday, July 28th, 2017
Share

Nawaz Sherifಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.

ವಿಶ್ವದಾದ್ಯಂತ ಬಾರಿ ಸುದ್ದಿಗೆ ಗ್ರಾಸವಾಗಿದ್ದ  ಈ  ಹಗರಣ ಸಂಬಂಧ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಕೋರ್ಟ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದೆ.

 

 

ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Monday, September 29th, 2014
Share
Yogeshwar Poovamma

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು.

ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಪೂವಮ್ಮ ಅವರು ನಿಗದಿತ ಗುರಿಯನ್ನು 52.36 ಸೆ.ಗಳಲ್ಲಿ ಕ್ರಮಿಸಿದರು.

ಬೆಳ್ಳಿ ಪದಕ: ಖುಷ್‌ಬಿರ್‌ ಕೌರ್ ಅವರು ಮಹಿಳಾ ವಿಭಾಗದ 20 ಕಿ.ಮೀ ದೂರದ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.

21 ವರ್ಷದ ಕೌರ್ ಅವರು 1:33:07 ನಿಮಿಷಗಳಲ್ಲಿ ನಿಗದಿತ ದೂರವನ್ನು ತಲುಪಿದರು. 1:31:06 ನಿಮಿಷಗಳಲ್ಲಿ ಗುರಿ ತಲುಪಿದ ಚೀನಾದ ಲು ಕ್ಸಿಯುಝಿ ಚಿನ್ನದ ಪದಕ ಗೆದ್ದರು.

18 ಕಿ.ಮೀ ವರೆಗೂ ಮೂರನೇ ಸ್ಥಾನದಲ್ಲಿದ್ದ ಕೌರ್‌ ಬಳಿಕದ ಎರಡು ಕಿ.ಮೀ ದೂರದಲ್ಲಿ ವೇಗ ಹೆಚ್ಚಿಸಿಕೊಂಡು ಬೆಳ್ಳಿ ಪದಕ ಪಡೆದರು.

ಟೆನಿಸ್‌ನಲ್ಲಿ ಮೂರು ಕಂಚು: ಭಾರತದ ಟೆನಿಸ್‌ ಆಟಗಾರರು ಪದಕ ಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ. ಮೂರು ಕಂಚು ಜಯಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭರವಸೆಯ ಆಟಗಾರ ಯೂಕಿ ಭಾಂಬ್ರಿ ಕಂಚು ಗೆದ್ದರು. ಪುರುಷರ ಡಬಲ್ಸ್‌ನಲ್ಲಿ ದಿವಿಜ್‌ಶರಣ್ ಅವರ ಜತೆಗೂಡಿದ ಭಾಂಬ್ರಿ ಭಾರತಕ್ಕೆ ಮತ್ತೊಂದು ಕಂಚು ತಂದಿತ್ತರು.

ಇನ್ನು, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಪ್ರಾರ್ಥನಾ ಥೋಂಬರೆ ಅವರು ಕಂಚಿನ ಪದಕ ಗೆದ್ದರು.

ನಿರಾಸೆ: ಭಾರತೀಯ ಮಹಿಳಾ ತಂಡ ಆರ್ಚರಿ ಸ್ಪರ್ಧೆಯ ರಿಕರ್ವ್‌ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡು ನಿರಾಸೆ ಅನುಭವಿಸಿದರು.

ಭಾನುವಾರ 6 ಪದಕ (ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚು) ಸೇರಿ ಭಾರತ ಒಟ್ಟು ನಾಲ್ಕು ಬಂಗಾರ, ಆರು ಬೆಳ್ಳಿ ಹಾಗೂ 24 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಚೆಲುವಿಯ ಮನ ಕದ್ದರೆ 800 ಕೋಟಿ ವರದಕ್ಷಿಣೆ

Monday, January 27th, 2014
Share

Gigi

ಹಾಂಕಾಂಗ್: ನೋಡಲು ರಾಜಕುಮಾರಿಯಂತಿರುವ ಹಾಂಕಾಂಗ್‌ನ ಹುಡುಗಿಗೆ ವರ ಬೇಕಾಗಿದೆ. ಈಕೆಯ ಪಾಣಿಗ್ರಹಣ ಮಾಡಿದ ಅದೃಷ್ಟವಂತ ನಿಜಕ್ಕೂ ದಿನಬೆಳಗಾಗುವುದರೊಳಗೆ ಕುಬೇರನಾಗುತ್ತಾನೆ. ಹೆಣ್ಣು ಮತ್ತು ಹೊನ್ನು ಇನ್ನೇನು ಬೇಕು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹುರುಪು ಈಗಲೇ ಬಂದರೆ ಕೊಂಚ ತಾಳಿ ಮಾವ, ಮಗಳು ಹೇಳುವ ಕಂಡೀಷನ್‌ಗಳನ್ನು ಕೇಳಿ.

ಹಾಂಕಾಂಗ್ ಉದ್ಯಮಿ ಸೆಸಿಲ್ ಚಾವೊ, ತನ್ನ ಮಗಳ ಹೃದಯ ಗೆಲ್ಲುವ ಹುಡುಗನಿಗೆ 130 ಮಿಲಿಯನ್ ಡಾಲರ್ (815 ಕೋಟಿ ರೂ) ವರದಕ್ಷಿಣೆ ನೀಡುವುದಾಗಿ ಘೋಷಿಸಿದ್ದಾರೆ. ವಿವಾಹಿತರಿಗೂ ಚಾನ್ಸ್ ಇದೆ ಎಂದು ಅವರೇ ಹೇಳಿದ್ದಾರೆ.

2012ರಲ್ಲಿ 60 ಮಿಲಿಯನ್ ಡಾಲರ್ ಕೊಡುವುದಾಗಿ ಪ್ರಕಟಿಸಿದ್ದರು. ಜಗತ್ತಿನಾದ್ಯಂತ ಇಪ್ಪತ್ತು ಸಾವಿರ ಯುವಕರು ನಾ ಮುಂದು ತಾ ಮುಂದು ಎಂದು ಹಸೆಮಣೆ ಏರಲು ಸಜ್ಜಾಗಿದ್ದರು. ಉಹೂಂ ಸೆಸಿಲ್ ಸುಪುತ್ರಿ ಗಿಗಿ ಎಲ್ಲರನ್ನೂ ಒಲ್ಲೆಂದಳು.

ಏಕೆಂದರೆ ಆಕೆ ಸಲಿಂಗಕಾಮಿ. 2 ವರ್ಷಗಳ ಹಿಂದೆ 9 ವರ್ಷದ ಗೆಳತಿ ಇವಾ ಜತೆಯಲ್ಲಿ ಮದುವೆ ಆಗಿಬಿಟ್ಟಿದ್ದಾಳೆ. ಇದಕ್ಕೆ ಹಾಂಕಾಂಗ್‌ನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಫ್ರಾನ್ಸ್‌ಗೆ ಹೋಗಿ ಲಗ್ನ ಮಾಡಿಕೊಂಡಿದ್ದಳು. ಆದರೆ ಎಲ್ಲ ಸಹೃದಯಿ ಅಪ್ಪಂದಿರಂತೆ, ತನ್ನ ಮಗಳು ಎಲ್ಲರಂತೆ ಸಂಸಾರವಂದಿಗಳಾಗಬೇಕು. ಮಕ್ಕಳನ್ನು ಹೆರಬೇಕು. ತಾನು ಅಜ್ಜನಾಗಬೇಕು ಎಂಬ ಆಸೆಯಿಂದ ಸೆಸಿಲ್ ಈ ಪ್ರಕಟಣೆ ಹೊರಡಿಸಿದ್ದಾರೆ.

Cecil-Chao
”ನನ್ನ ಮಗಳ ವೈಯಕ್ತಿಕ ಬದುಕಿನ ಆಯ್ಕೆಗಳಿಗೆ ನಾನು ಅಡ್ಡಿ ಪಡಿಸಲು ಇಚ್ಛಿಸುವುದಿಲ್ಲ. ನಮ್ಮ ವಂಶ ಉದ್ಧಾರವಾಗಿ ಮೊಮ್ಮಕ್ಕಳೊಂದಿಗೆ ನಾನು ಆಡಬೇಕು. ಜತೆಗೆ ಅಳಿಯ, ನನ್ನ ಉದ್ಯಮವನ್ನೂ ಸುಸೂತ್ರವಾಗಿ ನಡೆಸಬೇಕು,” ಇದೇ ನನ್ನ ಕನಸು ಎನ್ನುತ್ತಾರೆ ಅವರು. ಭಾವಿ ಅಳಿಯನಿಗೆ ವರದಕ್ಷಿಣೆ ಮೊತ್ತ ಏರಿಕೆ ಮಾಡಿದ ಅಪ್ಪನ ಬಗ್ಗೆ ಮಗಳು ಮುನಿಸಿಗೊಂಡಿದ್ದಾಳೆ. ಪುರುಷ ಪ್ರತಿಸ್ಪರ್ಧಿ ಬರುವುದನ್ನು ಇವಾ ಕೂಡ ಅಸಂತೋಷಗೊಂಡಿದ್ದಾಳೆ.

”ಒಬ್ಬ ಹುಡುಗನನ್ನು ಸಂಗಾತಿಯಾಗಿ ಸ್ವೀಕರಿಸಿ ಜೀವನ ಸವೆಸಲು ತಯಾರಿದ್ದೇನೆ. ನನ್ನ ಮೇಲಿರುವ ಪ್ರೀತಿಯಿಂದ ಅಪ್ಪ ಮಾಡುತ್ತಿರುವ ವಿಭಿನ್ನ ಪ್ರಯತ್ನಕ್ಕೆ ನನ್ನ ವಿರೋಧವಿಲ್ಲ. ಆದರೆ, ಹಣದಾಸೆಗೆ ನನ್ನನ್ನು ಇಷ್ಟ ಪಡುವ ವ್ಯಕ್ತಿಯನ್ನು ನಾನೊಲ್ಲೆ. ಡ್ಯಾಡಿ ಐಲವ್‌ಯೂ. ಆದರೆ ಪದೇ ಪದೇ ವರದಕ್ಷಿಣೆ ಘೋಷಣೆ ಮಾಡುವುದನ್ನು ನಿಲ್ಲಿಸಿ,” ಎಂದು ಗಿಗಿ ತಿಳಿಸಿದ್ದಾಳೆ.

ಸಿನಿಮಾ ಆಗಲಿದ್ದಾಳೆ ಗಿಗಿ
ಉದ್ಯಮಿ ಸೆಸಿಲ್ ಮತ್ತು ಆತನ ಮಗಳು ಗಿಗಿ ಬದುಕಿನ ಬಗ್ಗೆ ಸಿನಿಮಾವೊಂದು ತೆರೆಗೇರಲು ಸಿದ್ಧವಾಗುತ್ತಿದೆ. ಬ್ರಿಟನ್‌ನ ಖ್ಯಾತ ನಿರ್ದೇಶಕ ಸಚ ಬಾರೊನ್ ಕೊಹೆನ್ ಈ ಕುರಿತು ಸಿನಿಮಾ ತೆಗೆಯಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ.

ಗಿಗಿ ಕರಾರು
ತನಗೆ ತಕ್ಕ ವರನನ್ನು ಹುಡುಕಲು ಉದ್ಯಮಿ ಸೆಸಿಲ್ ಮಾಡುತ್ತಿರುವ ಪ್ರಯತ್ನದ ಬಗ್ಗೆ ಬೇಡ ಬೇಡ ಎನ್ನುತ್ತಲೇ ಒಪ್ಪಿಗೆ ಸೂಚಿಸಿರುವ ಆಕೆ, ಹಣದಾಸೆಗೆ ವಿವಾಹವಾಗುವ ಹುಡುಗನನ್ನು ಒಲ್ಲೆ ಎನ್ನುತ್ತಿದ್ದಾಳೆ. ಹಾಗಾಗಿ ಗಿಗಿ ವಿವಾಹವಾಗುವ ಹುಡುಗ ಧರ್ಮಾರ್ಥ ಕಾರ್ಯಗಳಿಗಾಗಿ ಸ್ಥಾಪಿಸಿರುವ ಟ್ರಸ್ಟ್‌ವೊಂದಕ್ಕೆ ತನಗೆ ವರದಕ್ಷಿಣೆಯಾಗಿ ಬಂದ ಹಣವನ್ನು ಕೊಡಬೇಕೆಂಬುದು ಕರಾರು ಹಾಕಿದ್ದಾಳೆ. ನೆನೆಗುದಿಗೆ ಬಿದ್ದಿದ್ದ ರಂಗಮಂದಿರ, ಅಂಬೇಡ್ಕರ್‌ ಭವನ, ಸರ್ವಿಸ್‌ ಬಸ್‌ ನಿಲ್ದಾಣ ಈ ವರ್ಷದಲ್ಲಿ ನಿರ್ಮಾಣ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ವಿವರಿಸಿದರು.

ವಿರೇಂದ್ರ ಹೆಗ್ಗಡೆಯವರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಚಾಲನೆ

Friday, December 20th, 2013
Share
Alvas Nudisiri Virasat

ಮೂಡಬಿದಿರೆ : ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರು ಗುರುವಾರ ಸಂಜೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆಳ್ವ ಆವರಣದಲ್ಲಿ ಸಂಜೆ 6.30 ರ ವೇಳೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಬತ್ತಕ್ಕೆ ಹಾಲೆರೆಯುವ ಮೂಲಕ ಇತರ ಗಣ್ಯರು ಉದ್ಘಾಟನೆಗೆ ಜತೆಗೂಡಿದರು.

ಸಂಜೆ 3.30ಕ್ಕೆ ಸಾಂಸ್ಕ್ರತಿಕ ಮೆರವಣಿಗೆ ಆರಂಭಗೊಂಡಿತು. ಜನಪದ ಕಲಾವಿದೆ ನಾಡೋಜ ಸುಕ್ರಿ ಬೊಮ್ಮಗೌಡ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆಯು ಚೌಟರ ಅರಮನೆಯಿಂದ ಹೊರಟು ವೆಂಕಟ್ರಮಣ ದೇವಸ್ಥಾನ, ಹನುಮಾನ್ ದೇವಸ್ಥಾನದ ಮುಂಭಾಗದಿಂದ ಸಾಗಿ, ಮೂಡುಬಿದಿರೆ ಪಟ್ಟಣದ ಮೂಲಕ ವಿದ್ಯಾಗಿರಿಗೆ ತಲುಪಿತು.

80 ನುಡಿಸಿರಿ ವಿರಾಸತ್ ಘಟಕಗಳ ಅದ್ಯಕ್ಷರುಗಳು, ಪದಾಧಿಕಾರಿಗಳು, ಊರಿನ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಜಾನಪದ ಕಲಾವಿದರು, 100 ಕ್ಕೂ ಹೆಚ್ಚು ತಂಡಗಳು , ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಡೊಳ್ಳುಕುಣಿತದ ಕಲಾವಿದರು, ಕೊರಗರ ಡೋಲು, ಜನ ವೀರಭದ್ರ ಕುಣಿತದ ಕಲಾವಿದರು, ಕಲ್ಲಡ್ಕ ಗೊಂಬೆಯಾಟದ ಕಲಾವಿದರು, ಅಟಿಕಳೆಂಜಗಳು, ದುಡಿಕುಣಿತ ಕಲಾವಿದರು, ದಫ್, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕ ಕಲಾವಿದರು, ಯಕ್ಷಗಾನದ ವಿವಿಧ ವೇಷಗಳು, ಬಂಜಾರ ನೃತ್ಯಗಾರ್ತಿಯರು, ತಟ್ಟೀರಾಯ, ಸೋಮನ ಕುಣಿತ, ಹುಲಿವೇಷ, ಕೇರಳದ ವೇಷಗಳು, ತೆಯ್ಯಂ, ಕಥಕ್ಕಳಿ, ಕೇರಳದ ಮಹಿಳಾ ಚೆಂಡೆ ಬಳಗ, ತ್ರಿವರ್ಣ ಧ್ವಜ , ಹಾಲಕ್ಕಿ, ಕರಗ, ಶಂಖಧ್ವನಿ, ಕಂಸಾಳೆ, ನಂದಿಧ್ವಜ, ಪಟದ ಕುಣಿತ, ಕೊಡಗಿನ ಉಮ್ಮತ್ತಾಟು, ಕೋಲಾಟ, ಮರಗಾಲು ಕುಣಿತ, ಕಂಗೀಲು, ಶ್ರೀಲಂಕಾದ ಡ್ರಮ್ಸ್ ಹೀಗೆ ಸುಮಾರು 5000 ಕಲಾವಿದರು ಸೇರಿದಂತೆ 7000ದಷ್ಟು ಜನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವ ನುಡಿಸಿರಿ ವಿರಾಸತ್ ನ ರೂವಾರಿ ಎಂ.ಮೋಹನ್ ಆಳ್ವ ಹಾಗೂ ಇನ್ನಿತರ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾಕೃತಿಗಳು, ಕಲಾಕಾರರು ವೇದಿಕೆಯಲ್ಲಿ ತಮ್ಮ ಪ್ರದರ್ಶನ ನೀಡಿದರು.

ಉದ್ಘಾಟನಾ ಮಾತುಗಳನ್ನಾಡಿದ ಡಾ. ಡಿ ವಿರೇಂದ್ರ ಹೆಗ್ಗಡೆಯವರು ರಾಜ್ಯದ ವಿವಿಧ ಅಚಾರಗಳನ್ನು ಒಂದು ಸಣ್ಣ ಪಟ್ಟಣ್ದಲ್ಲಿ ಕ್ರೋಡಿಕರಿಸಿ ಅದನ್ನು ವಿಶ್ವದೆಲ್ಲೆಡೆ ಪಸರಿಸುವ ಆಳ್ವರ ಈ ಸಾಧನೆ ಮಹತ್ತರವಾದುದು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಈ ಕಾರ್ಯಕ್ರಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat

ಇಂಡಿಯಾ ಫ್ರಟೆರ್ನಿಟಿ ಫೋರಂ ನೇತೃತ್ವದಲ್ಲಿ ಪೂರ್ವ ವಲಯದಾದ್ಯಂತ ಬೃಹತ್ ಇಫ್ತಾರ್ ಸಂಗಮ

Thursday, August 1st, 2013
Share

India Fraternity Forum Hosts Iftar Partyದಮ್ಮಾಮ್ ( ಸೌದಿ ಅರೇಬಿಯಾ) : ಇಂಡಿಯಾ ಫ್ರಟೆರ್ನಿಟಿ ಫೋರಂ ಪೂರ್ವ  ವಲಯದ ನೇತೃತ್ವದಲ್ಲಿ ದಮ್ಮಾಮ್ , ಜುಬೈಲ್ ,ಹಪರಲ್ ಭಾತಿನ್  ಹಾಗೂ ಅಲ್ ಹಸ್ಸಾಗಳಲ್ಲಿ ಬೃಹತ್ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗಿತ್ತು.

ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ  ಸಾಮಾಜಿಕ ಸೇವೆಯಲ್ಲಿ  ಮಂಚೂಣಿಯಲ್ಲಿರುವ ಇಂಡಿಯಾ ಫ್ರಟೆರ್ನಿಟಿ ಫೋರಂ ಭಾರತದ ಹಲವು  ರಾಜ್ಯಗಳ ಸದಸ್ಯರನ್ನೊಳಗೊಂಡಿದೆ.

India Fraternity Forum Hosts Iftar Partyದಮ್ಮಾಂ ಹಾಗೂ ಹಫರಲ್  ಬಾತಿನ್ನಲ್ಲಿ ಸಲೀಂ ಜಿ. ಕೆ.  ರವರು,   ಜುಬೈಲ್ ನಲ್ಲಿ ಪರ್ವೇಜ್ ಅಹ್ಮದ್ ಬಿಹಾರ್,  ಮತ್ತು ಅಲ್  ಹಸ್ಸಾ ದಲ್ಲಿ ಅಬ್ದು ಸ್ಸುಭಾನ್  ರವರು  ಪವಿತ್ರ  ರಂಝಾನ್ ತಿಂಗಳ ಶ್ರೇಷ್ಠತೆ , ಗುರಿ ಹಾಗೂ ರಂಝಾನ್ ಉಪವಾಸ ವ್ರತದ ಮಹತ್ವಗಳ ಸಂದೇಶಗಳನ್ನು ನೀಡಿದರು.

ದಮ್ಮಾಮ್ ನಾಹ್ದ ಕ್ಲಬ್ ನಲ್ಲಿ  ಏರ್ಪಡಿಸಿದ ಇಫ್ತಾರ್ ನಲ್ಲಿ ಸುಮಾರು 275   ಕ್ಕಿಂತಲೂ ಹೆಚ್ಚು  ಜನ , ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರೂ ಮಕ್ಕಳೂ  ಸೇರಿದಂತೆ  400  ರಷ್ಟು  ನಾಗರೀಕರು ಪಾಲ್ಗೊಂಡರು. ಅಲ್ ಹಸ್ಸಾದ ಇಸ್ತ್ರಾ ಅಲ್  ಮಲಿಕಿಯಲ್ಲಿ  ಆಯೋಜಿಸಿದ್ದ ಇಫ್ತಾರ್ ಸಂಗಮದಲ್ಲಿ ಸುಮಾರು 280 ಮಂದಿ ಹಾಗೂ  ಹಫರಲ್  ಬಾತಿನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 100 ರಷ್ಟು  ನಾಗರೀಕರು ಭಾಗವಹಿಸಿದರು.

India Fraternity Forum Hosts Iftar Partyಫಯಾಝ್  ಎನ್. ದಮ್ಮಾಂ ನಲ್ಲಿ  ,  ಸಲೀಂ  ಜುಬೈಲ್ ನಲ್ಲಿ , ಅಕ್ಬರ್   ಅಲ್ ಹಸ್ಸಾ ದಲ್ಲಿ  ಮತ್ತು  ಅಶ್ರಫ್ ಕೆ.  ಹಫರಲ್  ಬಾತಿನ್ನಲ್ಲಿ ಐ.ಎಫ್.ಎಫ್. ನ ಸ್ಥೂಲ ಮಾಹಿತಿ ನೀಡಿ  ಕಾರ್ಯಕ್ರಮ ನಿರ್ವಹಿಸಿದರು.

ನರ್ಸ್ ಜೆಸಿಂತಾ ಕಾನೂನು ಹೋರಾಟ, ಆರ್ಥಿಕ ಸಂಕಷ್ಟದಲ್ಲಿ ಕುಟುಂಬ

Friday, March 8th, 2013
Share

jacintha saldanha legal caseಲಂಡನ್ : ಇಂಗ್ಲೆಂಡ್ ರಾಜಮನೆತನದ ಅಧೀನದಲ್ಲಿರುವ ಕಿಂಗ್‌ ಎಡ್ವರ್ಡ್ಸ್‌ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ  ಉಡುಪಿ ಶಿರ್ವಾ ಮೂಲದ ನರ್ಸೆ ಜೆಸಿಂತಾ ರೇಡಿಯೋ ಜಾಕಿಗಳ ತಮಾಷೆಯ ಕರೆಗೆ ಬೇಸತ್ತು ಆತ್ಮಹತೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆಕೆಯ ಸಾವಿನ ಪ್ರಕರಣದ ಕುರಿತಾಗಿ ಸರಕಾರದ ಕಾನೂನಿನ ನೆರವನ್ನು ಪಡೆಯಲು ಆಕೆಯ ಕುಟುಂಬ ನಿರಾಕರಿಸಿದೆ.

ಜೆಸಿಂತಾ ಸಾವಿನ ಪ್ರಕರಣ ಇನ್ನು ನಿಗೂಡ ವಾಗಿಯೇ ಉಳಿದಿದ್ದು, ಸರಕಾರ ನೀಡುವ ಕಾನೂನು ನೆರವನ್ನು ಕುಟುಂಬ ನಿರಾಕರಿಸಿರುವ ಹಿನ್ನಲೆಯಲ್ಲಿ ಜೆಸಿಂತಾ ಕುಟುಂಬ ವೇ ಕಾನೂನು ತಜ್ಞ್ಯರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡಬೇಕಾಗುವ ಅನಿವಾರ್ಯತೆ ಇದೆ ಆದರೆ ಜೆಸಿಂತಾ ಕುಟುಂಬ ವಕೀಲರ ವೆಚ್ಚ ಕೂಡ ಭರಿಸಲು ಹಣವಿಲ್ಲದೇ ಪರದಾಡುತ್ತಿದ್ದು, ಇದು ಕಾನೂನು ಹೋರಾಟಕ್ಕೆ ಅಡ್ಡಿಯಾಗಿದೆ.