ನೀವು ಎಲ್ಲೇ ಹೋಗಿ ರೋಮಿಂಗ್ ಪ್ರೀ

Monday, October 10th, 2011
Kapil-Sibal

ನವ ದೆಹಲಿ : ರಾಷ್ಟ್ರಾದ್ಯಂತ ಮೊಬೈಲ್‌ ಸೇವೆಯನ್ನು ರೋಮಿಂಗ್‌ನಿಂದ ಮುಕ್ತಗೊಳಿಲು ಕೇಂದ್ರ ಸರಕಾರವು ಹೊಸ ದೂರ ಸಂಪರ್ಕ ನೀತಿಯನ್ನು ಜಾರಿಗೊಳಿಸಲು ಸಜ್ಜಾಗಿದ್ದು, ಈ ಮೂಲಕ ಜನತೆಗೆ ಹೊಸ ಕೊಡುಗೆ ನೀಡಲು ಮುಂದಾಗಿದೆ. ಕೇಂದ್ರದ ಹೊಸ ದೂರ ಸಂಪರ್ಕ ನೀತಿ – 2011 ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಬಂಡವಾಳ ಹೂಡಿಕೆಗೆ ಹೊಸ ದೂರ ಸಂಪರ್ಕ ಹಣಕಾಸು ನಿಗಮ ಸ್ಥಾಪನೆ, ಖಾಸಗಿ ದೂರವಾಣಿ ಕಂಪನಿಗಳು ಲೈಸೆನ್ಸ್‌ ಮರಳಿಸಲು ಅವಕಾಶ ಕೊಡುವುದು ಸೇರಿದಂತೆ ಹಲವಾರು ಅಂಶಗಳಿರುವ ದೂರ ಸಂಪರ್ಕ ನೀತಿಯನ್ನು […]

ಮೈಸೂರು ದಸರಾ ಜಂಬೂ ಸವಾರಿ

Thursday, October 6th, 2011
Mysore-Dasara

ಮೈಸೂರು : ವೈಭವಯುತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಬಲರಾಮ ಆನೆಗಳಾದ ಸರಳ ಹಾಗೂ ಮೇರಿ ಮತ್ತು ಅಶ್ವಪಡೆಯೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಪುಷ್ಪಲತಾ ಚಿಕ್ಕಣ್ಣರವರಿಗೆ ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವಸಲ್ಲಿಸಿದವು. ಈ ಸಂದರ್ಭ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ […]

ಭಕ್ತಿ ಭಾವೈಕತೆಯ ಆಯುಧ ಪೂಜೆ

Wednesday, October 5th, 2011
Viajaya Dashami

ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಾದರೆ. ಒಂಭತ್ತನೆ ದಿನ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವನ್ನು ಆಚರಿಸಲಾಗುತ್ತದೆ, ಎಲ್ಲೆಡೆ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ನಡೆಸಲಾಗುತ್ತದೆ ಅಂಗಡಿ, ಕಚೇರಿ, ಮಳಿಗೆಗಳಲ್ಲಿ ವಾಹನ ಸೇರಿದಂತೆ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಹೂ ತೋರಣಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವೈಕತೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಜಾತಿ ಭೇಧವಿಲ್ಲದೆ ಆಯುಧ ಪೂಜೆಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ದೀರ್ಘ ಬಾಳ್ವಿಕೆ ಸಹಿತ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳಲ್ಲಿ ದೇವಾಲಯಗಳಿಗೆ ತೆರಳಿ […]

ರಾಜ್ಯದ ಶ್ರೀಮಂತ ಮಹಿಳೆ ಅನಿತಾ ಕುಮಾರಸ್ವಾಮಿ

Tuesday, October 4th, 2011
Anita Kumaraswamy

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿಯವರು 2010-11ನೇ ಸಾಲಿಗೆ ಆಸ್ತಿ ವಿವರಗಳ ಅಫಡವಿಟ್ ಸಲ್ಲಿಸಿರುವ ಪ್ರಕಾರ ಒಟ್ಟು ಅಧಿಕೃತ ಆಸ್ತಿ ಮೊತ್ತ 160 ಕೋಟಿ ರುಪಾಯಿ. ಶಾಸಕಿಯಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿದೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸುವುದಾದರೆ ಬಳ್ಳಾರಿಯ ಜನಾರ್ಧನ ರೆಡ್ಡಿ ಅಧಿಕೃತ ಆಸ್ತಿ ಲೋಕಾಯಯುಕ್ತ ದಾಖಲೆಗಳ ಪ್ರಕಾರ ಕೇವಲ 144 ಕೋಟಿ ರು. 2009-10ರಲ್ಲಿ ಶಾಸಕಿ ಅನಿತಾರ ಆಸ್ತಿ ಮೊತ್ತ 51.22 ಕೋಟಿ […]

ಬಾಪೂಜಿಯವರ 142ನೇ ಜನ್ಮದಿನ

Sunday, October 2nd, 2011
Mahatma Gandhi

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 142ನೇ ಜನ್ಮದಿನವನ್ನು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಅಕ್ಟೋಬರ್ 2 ರಂದು ಆಚರಿಸಲಾಗುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನವದಹಲಿಯಲ್ಲಿರುವ ಗಾಂಧಿ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋನಿಯಾ ಗಾಂಧಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಿಜೆಪಿ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ, ದಹೆಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಹಿತ ಹಲವು ಗಣ್ಯರು ಸಹ ರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪುಷ್ಪಾರ್ಪಣೆ ಸಲ್ಲಿಸಿ ನಮನ ಸಲ್ಲಿಸಿದರು. […]

ಎಬಿವಿಪಿ ಕಾರ್ಯ ಕರ್ತನಿಂದ ಸಚಿವ ವಿ. ಸೋಮಣ್ಣ ನವರಿಗೆ ಚಪ್ಪಲಿ ಸೇವೆ

Saturday, October 1st, 2011
V Somanna

ಬೆಂಗಳೂರು  : ನೂತನ ಮುಖ್ಯಮಂತ್ರಿ ಡಿ.ವಿ ಸದಾನಂದ  ಗೌಡರ ಸಂಪುಟದಲ್ಲಿ ಸ್ಥಾನ ಪಡೆದ ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ  ಎಬಿವಿಪಿ ಕಾರ್ಯಕರ್ತನೊರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಧಾನಸೌಧದ ಅಂಗಳದಲ್ಲಿಯೇ (ಅ.1) ಇಂದು ನಡೆಯಿತು. ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ. ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ […]

ಮಲ್ಲೇಶ್ವರಂನಲ್ಲಿ ಸರಗಳ್ಳರನ್ನು ಹಿಡಿದ ಜಗ್ಗೇಶ್

Friday, September 30th, 2011
jaggesh

ಬೆಂಗಳೂರು : ಮಲ್ಲೇಶ್ವರಂನಲ್ಲಿ ಯುವತಿಯೊಬ್ಬಳ ಸರ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಸರಗಳ್ಳರನ್ನು ನವರಸನಾಯಕ ನಟ ಜಗ್ಗೇಶ್ ಮತ್ತು ಅವರ ಕಾರಿನ ಚಾಲಕ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬಂಧಿತರು ಶೇಷಾದ್ರಿಪುರಂ ಹಾಗೂ ಆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಮಲ್ಲೇಶ್ವರಂ ಹನ್ನೊಂದನೆ ಅಡ್ದರಸ್ತೆಯಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಸಂಜೆ 6 ರ್ ಹೊತ್ತಿಗೆ ಕಾಲೇಜು ಮುಗಿಸುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸರ […]

ಕೊಪ್ಪಳ ಕರಡಿ ಸಂಗಣ್ಣ ವಿಜಯ

Thursday, September 29th, 2011
ಕೊಪ್ಪಳ ಕರಡಿ ಸಂಗಣ್ಣ ವಿಜಯ

ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜ ಕೆ. ಹಿಟ್ನಾಳ್ ಎರಡನೇ ಸ್ಥಾನ ಗಳಿಸಿದ್ದರೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು […]

ಮೂರು ಮಕ್ಕಳನ್ನು ಹುಟ್ಟಿಸಿದರೆ ಮೂರು ತಿಂಗಳು ಜೈಲು 10 ಸಾವಿರ ದಂಡ

Wednesday, September 28th, 2011
Kerala family plan

ತಿರುವನಂತಪುರ : ಕೇರಳದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ಕೇರಳ ಸರ್ಕಾರ ಎರಡು ಮಕ್ಕಳು ಮಾತ್ರ ಎಂಬ ಕಾಯಿದೆ ಜಾರಿಗೊಳಿಸಲು ನಿರ್ಧರಿಸಿದೆ. ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಆಯೋಗ ಹಲವು ಕಠಿಣ ಕ್ರಮಗಳನ್ನು ಜ್ಯಾರಿ ಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಮೂರನೇ ಮಗುವನ್ನು ಹೊಂದುವ ತಂದೆ ತಾಯಿಗೆ ಜೈಲು ಶಿಕ್ಷೆ ಮತ್ತು ಸರ್ಕಾರಿ ಸೌಲಭ್ಯ ಮಾನ್ಯತೆಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಆಯೋಗದ 12 ಸದಸ್ಯರ ಸಲಹೆ […]

ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

Monday, September 26th, 2011
BANK MANAGER

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅವರು ವಾಸವಾಗಿರುವ ಮನೆಯಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಓರಿಯೆಂಟಲ್ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಅವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ವೇಳೆಗೆ ಕೊಲೆ ನಡೆದಿರಬಹುದು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ. ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಶಂಕಿಸಲಾಗಿದ್ದು. ಹೊರಬಾಗಿಲಿಗೆ ಒಳಗಿನಿಂದ […]