ಕುಂದಾಪುರ : ಅಂಕದಕಟ್ಟೆ ಸಮೀಪದ ಮನೆಯೊಂದರಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಷ್ಟ

Tuesday, April 2nd, 2013
Ankadakatte fire mishap

ಕುಂದಾಪುರ : ಕುಂದಾಪುರ ಸಮೀಪದ ಅಂಕದಕಟ್ಟೆ ಎಂಬಲ್ಲಿ  ಸುಮತಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದಾಗಿ ಮನೆ ಹಾಗು ಮನೆಯೊಳಗಿನ ವಸ್ತುಗಳು ಸಂಪೂರ್ಣ ಹತ್ತಿ ಉರಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸುಮತಿ ಎಂಬುವವರು ಈ ಮನೆಯಲ್ಲಿ ಅವರ ತಮ್ಮ ತಮ್ಮಂದಿರಾದ ರವಿಕುಮಾರ್, ಪ್ರತಾಪ್ ರೊಂದಿಗೆ ವಾಸವಾಗಿದ್ದು  ರಾತ್ರಿ ೧.೩೦ ರ ಸುಮಾರಿಗೆ ವಸ್ತುಗಳು ಬೀಳುವ ಸದ್ದು ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಆದರೆ ಆ ವೇಳೆಗಾಗಲೇ  ಬೆಂಕಿ ಹತ್ತಿ ಉರಿಯುತ್ತಿದ್ದು ಏನೂ ಮಾಡಲು […]

ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ, ಮತ್ತೊಬ್ಬ ಆರೋಪಿಯ ಬಂಧನ

Tuesday, April 2nd, 2013
Girish Putran murder case

ಬಜಪೆ : ಹೊಯ್ಗೆ ಬಜಾರ್‌ನ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ರಿತೇಶ್‌ (28) ನನ್ನು ಬಜಪೆ ಪೊಲೀಸ್‌ ಇನ್ಸ್‌ಪೆಕ್ಟರ್‌ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡ ಸೋಮವಾರ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣ ಕುರಿತಂತೆ ಬಂಧಿತರಾದವರ ಸಂಖ್ಯೆ 3 ಕ್ಕೇರಿದೆ. ಆರೋಪಿ ರೀತು ಯಾನೆ ರಿತೇಶ್‌ನನ್ನು ಖಚಿತ ಮಾಹಿತಿ ಮೇರೆಗೆ  ಮೂಲ್ಕಿ ಬಪ್ಪನಾಡು ಬಳಿ ಬಂಧಿಸಲಾಗಿದ್ದು, ಕೊಲೆಗೆ ಉಪಯೋಗಿಸಿದ್ದ ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ. ರಿತೇಶ್‌ ಹಳೆ ಆರೋಪಿಯೂ ಆಗಿದ್ದಾನೆ. […]

ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರರ ಅಂತ್ಯಸಂಸ್ಕಾರ

Tuesday, April 2nd, 2013
Krishnaiah Mogaveera

ಕುಂದಾಪುರ : ಮಧ್ಯ ಆಫ್ರಿಕಾದ ಬಾಂಗ್ವೆ ವಿಮಾನ ನಿಲ್ದಾಣದಲ್ಲಿ ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಶರೀರವನ್ನು ಸೋಮವಾರ ಮಧ್ಯಾಹ್ನ ಹುಟ್ಟೂರಿಗೆ  ತರಲಾಯಿತು. ಫ್ರಾನ್ಸ್‌ ರಾಯಭಾರ ಕಚೇರಿಯ ಎರಿಕ್‌ ಲೆವೆರ್ಟೊ ಅವರು  ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವ ಮುನ್ನ  ಬಳ್ಕೂರಿನ ಮೃತರ ಮನೆಗೆ ಆಗಮಿನಿಸಿ ಫ್ರೆಂಚ್‌ ಸೈನಿಕರಿಂದ ಆದ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರು. ಊರಿನ ಸಾವಿರಾರು ಮಂದಿ ಕೃಷ್ಣಯ್ಯ ಅವರ […]

ಇಂದಿನಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ ;ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

Monday, April 1st, 2013
SSLC Exams

ಮಂಗಳೂರು : ಇಂದಿನಿಂದ ಆರಂಭಗೊಂಡಿರುವ ಎಸೆಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 35,061 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ  18,060 ಗಂಡು ಮತ್ತು 17,001 ಹೆಣ್ಮಕ್ಕಳಿದ್ದಾರೆ. ಇದುವರೆಗೂ  ಬೆಳಗ್ಗೆ 10:30ಕ್ಕೆ ಪರೀಕ್ಷೆಯು ಆರಂಭಗೊಳ್ಳುತ್ತಿತ್ತು. ಆದರೆ ಈ ಬಾರಿ 9:30ಕ್ಕೆ ಆರಂಭ ಗೊಂಡು, 12:45ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಸಾಲಿನ ಪರೀಕ್ಷೆಗೆ ಜಿಲ್ಲೆಯಲ್ಲಿ 96 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ […]

ಕದ್ರಿ ದೇವಾಲಯದಲ್ಲಿ ಗುಂಡು ಸಿಡಿತ, ಹಿನ್ನಲೆ ಇನ್ನೂ ನಿಗೂಢ

Monday, April 1st, 2013
Gun fired at Kadri temple

ಮಂಗಳೂರು : ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹೊರ ಅಂಗಣದಲ್ಲಿ ಫೈರ್ ಆದ ಗುಂಡಿನ ತುಣುಕೊಂದು ಭಾನುವಾರ ಪತ್ತೆಯಾಗಿ ದೇವಾಲಯದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಕಂಡುಬಂಡಿತು. ಮಂಗಳೂರಿನಲ್ಲಿ ಅವಿನಾಶ್ ಮೊಸಾಯಿಕ್ ಉದ್ಯಮ ನಡೆಸುತ್ತಿರುವ ಉದ್ಯಮಿ ಪ್ರಕಾಶ್ ಶೇರಿಗಾರ್ ಅವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರವನ್ನು ಸಂಪ್ರದಾಯದಂತೆ ದೇವರ ಮುಂದಿಡಲು ಭಾನುವಾರ ಕುಟುಂದ ಸಮೇತರಾಗಿ  ಅವರು ಕದ್ರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಕದ್ರಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಗುಡಿಗೆ ಪ್ರವೇಶಿಸುವ […]

ಕಾರ್ಯಕರ್ತರು ಪಾಂಡವರ ರಥದ ಸಾರಥಿಗಳಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ : ಪ್ರಹ್ಲಾದ್ ಜೋಶಿ

Saturday, March 30th, 2013
BJP samavesha

ಮಂಗಳೂರು : ಬಿಜೆಪಿಯೊಳಗೆ  ಜಗಳವಾಡಿದವರಾರೂ ಈಗ ಬಿಜೆಪಿಯಲ್ಲಿಲ್ಲ,  ಅವರ ಬಗ್ಗೆ ಯಾರೂ ಚಿಂತಿಸುವುದು ಬೇಡ,  ಹಳೆಯದನ್ನು ಕ್ಷಮಿಸಿ, ನಮಗೆ ಮತ ನೀಡಿ ಎಂದು ಮತದಾರ ಬಂಧುಗಳಲ್ಲಿ ವಿನಂತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ ಹೀಗೆ ಪಂಚ ಪಾಂಡವರ ನೇತೃತ್ವದ ಬಿಜೆಪಿ ಯು ವಿಒಧಾನಸಭಾ ಚುನಾವಣೆಯನ್ನು ಎದುರಿಸಲು […]

ಕುಂದಾಪುರ : ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಗಂಬೀರ

Saturday, March 30th, 2013
kundapur jeep lory mishap

ಕುಂದಾಪುರ : ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಜೀಪ್ ಚಾಲಕ ರಾಮ ಗುರುವಾರ ರಾತ್ರಿ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್‌ ಹತ್ತಿರ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಗಂಬೀರವಾಗಿ ಗಾಯಗೊಂಡಿದ್ದಾರೆ. ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಕುಂಭಾಶಿ ಕಡೇಯೀಂದ ಕುಂದಾಪುರದ ಕಡೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆಯಲ್ಲಿ ಜೀಪಿಗೆ ಸಂಗಮ್ ಕಡೆಯಿಂದ ವಾಹನವೊಂದು ರಸ್ತೆಯ ಬಲಬದಿಗೆ ಬಂದ ಕಾರಣ ಅಪಘಾತವಾಗುವುದನ್ನು ತಪ್ಪಿಸಲು,  ರಸ್ತೆಯ ಎಡಬದಿಗೆ ಜೀಪನ್ನು ಚಲಾಯಿಸಿಲಾಯಿತು ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿ […]

ಕಾಸರಗೋಡು : ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಭೀಕರ ರಸ್ತೆ ಅಪಘಾತ ಬೈಕ್ ಸವಾರರಿಬ್ಬರ ಸಾವು

Saturday, March 30th, 2013
Mishap at Mogral Puttur

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮೊಗ್ರಾಲ್ ಪುತ್ತೂರು ಕೆ.ಕೆ. ರಸ್ತೆಯ ಕುನ್ನಿಲ್‌ನ ಸಾದಿಕ್(19) ಮತ್ತು ಕುನ್ನಿಲ್ ಸಬೀನಾ ಮಂಝಿಲ್‌ನ ಸಮೀರ್ ಆಸಿಫ್ (20) ಎಂದು ಗುರುತಿಸಲಾಗಿದೆ. ಆಟೊ ಪ್ರಯಾಣಿಕರಾದ ಮುಹಮ್ಮದ್ ಎಂಬವರ ಪುತ್ರಿ ಡಾನಿಯಾ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಪ್ರಯಾ ಣಿಕರಾದ ಅಬ್ದುಲ್ ಖಾದರ್ ಎಂಬವರ ಪತ್ನಿ ಮರಿಯಾ, […]

ಮಾಜಿ ಪಕ್ಷ ಬಿಜೆಪಿ ಗೆ ತೆರಳಲು ಮುಂದಾದ ನಾಗರಾಜ ಶೆಟ್ಟಿ

Friday, March 29th, 2013
B Nagaraja Shetty

ಮಂಗಳೂರು : ಬಿಜೆಪಿ ಯಿಂದ ಹೊರನಡೆದು ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷ ಸೇರ್ಪಡೆ ಗೊಂಡ ಮಾಜಿ ಬಿಜೆಪಿ ಸಚಿವ ನಾಗರಾಜ ಶೆಟ್ಟಿ  ಜೆಡಿಎಸ್ ನಲ್ಲಿ ರಾಜ್ಯ ಉಪಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಇದೀಗ ಜೆಡಿಎಸ್ ನಲ್ಲಿನ ಬಿನ್ನಭಿಪ್ರಾಯಗಳಿಂದಾಗಿ  ಅವರು ತಮ್ಮ ಮಾಜಿ ಪಕ್ಷ ಬಿಜೆಪಿ ಸೇರಿಕೊಳ್ಳುವ ಸೂಚನೆ ಕಂಡುಬರುತ್ತಿದೆ. ಈಗಾಗಲೇ ಜೆಡಿಎಸ್ ಗೆ ರಾಜಿನಾಮೆ ನೀಡಿರುವ ನಾಗರಾಜ ಶೆಟ್ಟಿ ಬಿಜೆಪಿ ಪಕ್ಷದಲ್ಲಿನ ಬಿನ್ನಭಿಪ್ರಾಯದಿಂದಾಗಿ ಜೆಡಿಎಸ್ ಸೇರಿದ್ದೇ ಆದರೆ ಜೆಡಿಎಸ್ ನ ಜಿಲ್ಲಾಧ್ಯಕ್ಷರ ಕಾರ್ಯಗಳಿಂದಾಗಿ ಬೇಸತ್ತು ಆ ಪಕ್ಷಕ್ಕೆ ರಾಜಿನಾಮೆ […]

ಎಂ.ಬಿ.ಸದಾಶಿವ ರ ಅಧ್ಯಕ್ಷತೆಯಲ್ಲಿನ ಪಕ್ಷ ಇನ್ನು ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ನೆಲೆ ಕಳೆದುಕೊಳ್ಳುತ್ತದೆ : ಡಿ.ಎಂ.ಅಸ್ಲಂ

Friday, March 29th, 2013
DM Aslam

ಮಂಗಳೂರು : ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಆದರೆ ಈ ಬಗ್ಗೆ ಯಾವುದೇ ಮಾಹಿತಿ ತನಗೆ ಲಭಿಸಿಲ್ಲ ಮತ್ತು ಯಾವುದೇ ಆದೇಶದ ಪ್ರತಿ ನನ್ನ ಕೈ ಸೇರಿಲ್ಲ ಮಾದ್ಯಮಗಳಲ್ಲಿ ಪ್ರಕಟವಾದ ವರದಿಯಿಂದಲೇ ಈ ಬಗ್ಗೆ ತಿಳಿದಿದ್ದೇನೆ ಎಂದು ಜೆಡಿ‌ಎಸ್ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನನ್ನು ಪಕ್ಷದಿಂದ ಅಮಾನತು ಗೊಳಿಸಿರುವ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಪಕ್ಷಕ್ಕಾಗಿ ಯಾವುದೇ ರೀತಿಯ […]