ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್‌ ಮತ್ತು ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ ವರ್ಗಾವಣೆ

Saturday, May 14th, 2011
ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್‌ ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ

ಮಂಗಳೂರು : ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್‌  ಮತ್ತು ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾರನ್ನು ಬೆಂಗಳೂರಿಗೆ ಹಾಗೂ ಪ್ರಸ್ತುತ ಚಿಕ್ಕಮಗಳೂರಿನ ಚೆನ್ನಪ್ಪ ಗೌಡರನ್ನು ಮಂಗಳೂರಿನ ಜಿಲ್ಲಾಧಿಕಾರಿಯಾಗಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಡಾ| ಎಂ.ಟಿ. ರೇಜು ಅವರನ್ನು ಉಡುಪಿ ಜಿಲ್ಲಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ. ದ.ಕ. ಜಿಲ್ಲಾಧಿಕಾರಿಯಾಗಿ 2010, ಅ.23 ರಂದು ಸುಬೋಧ್ ಯಾದವ್ ಅಧಿಕಾರ ಸ್ವೀಕರಿಸಿದ್ದರು.  ಕೇವಲ ಏಳು ತಿಂಗಳು ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಗೊಂಡಿದ್ದಾರೆ. ಸರಕಾರಿ ಭೂಮಿ ಒತ್ತುವರಿ ಮಾಡುವವರ ವಿರುದ್ಧ […]

ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರಿಗೆ ಬೀಳ್ಕೊಡುಗೆ

Wednesday, May 11th, 2011
ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರಿಗೆ ಬೀಳ್ಕೊಡುಗೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ 12 ವರ್ಷ ಆರು ತಿಂಗಳ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲ ರಿಗೂ ಮುಖ್ಯ ಯೋಜನಾಧಿಕಾರಿ ಶ್ರೀ ಪಿ ತಾಕತ್ ರಾವ್ ಅವರು ಕೃತಜ್ಞತೆ ಸಲ್ಲಿಸಿದರು. ಇಂದು ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ನೆರವಿನಿಂದ ತಮ್ಮ ಕೆಲಸ ಸುಗಮವಾಗಿ ಸಾಗಿದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಸ್ವಚ್ಛತಾಂದೋಲನದಲ್ಲಿ ಜಿಲ್ಲೆಯ ಯಶೋಗಾಥೆ ಹಾಗೂ ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು. ಮುಖ್ಯ ಯೋಜನಾಧಿಕಾರಿಗಳಾಗಿ ಅಧಿಕಾರ […]

ಪುತ್ತೂರು ರಾಮಕೃಷ್ಣ ಹತ್ಯಾ ಅರೋಪಿಗಳು ನ್ಯಾಯಾಂಗ ವಶಕ್ಕೆ

Monday, May 9th, 2011
ಅಲೋಕ್ ಮೋಹನ್ ಪತ್ರಿಕಾಗೋಷ್ಟಿ

ಮಂಗಳೂರು : ಎಪ್ರಿಲ್ 28ರಂದು ಸುಳ್ಯ ನಗರದಲ್ಲಿ ನಡೆದ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಶ್ರೀ ರಾಮಕೃಷ್ಣ ಎಂಬವರ ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಇಂದು ಸಂಜೆ ಸುಳ್ಯದಲ್ಲಿ  ನ್ಯಾಯಾಂಗ ವಶಕ್ಕೆ ನೀಡಲಾಯಿತು ಎಂದು ಐಜಿಪಿ ಅಲೋಕ್ ಮೋಹನ್ ಇಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪುತ್ತೂರು  ಎಸ್ಪಿ ಯವರ ನೇತೃತ್ವದ ಡಿ.ಸಿ.ಐ.ಬಿ ತಂಡವನ್ನು ಒಳಗೊಂಡಂತೆ 5 ತಂಡವನ್ನು ರಚಿಸಿ, ನಿನ್ನೆ ಡಿ.ಸಿ.ಐ.ಬಿ.  ಪೊಲೀಸರಿಗೆ ಬಂದ ಮಾಹಿತೆಯಂತೆ […]

ಜಗತ್ತಿನ ಅತ್ಯಂತ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಹತ್ಯೆ

Monday, May 2nd, 2011
ಒಸಾಮಾ ಬಿನ್ ಲಾಡೆನ್‌ ಹತ್ಯೆ

ಇಸ್ಲಾಮಾಬಾದ್ : ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಪಾಕಿಸ್ತಾನದಲ್ಲಿ ಹತ್ಯೆಗೈಯುವ ಮೂಲಕ ಜಗತ್ತಿನ ಅತ್ಯಂತ ಕುಖ್ಯಾತ ಭಯೋತ್ಪಾದಕನ ಅದ್ಯಾಯಕ್ಕೆ ತೆರೆ ಎಳೆದಿದೆ.  ಲಾಡೆನ್ ಪಾಕ್ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿಯೇ ವಾಸವಾಗಿದ್ದರೂ ಕೂಡ ಆತನ ಬಗ್ಗೆ ಯಾವುದೇ ಮಾಹಿತಿಗಳನ್ನು ಪಾಕ್ ಅಮೇರಿಕನ್ ಸೇನೆಗೆ ನೀಡಿರಲಿಲ್ಲ . ಅಮೆರಿಕ ನೇತೃತ್ವದ ಪಡೆ ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಇರುವಿಕೆ ಬಗ್ಗೆ ಯಾವುದೇ ಸುಳಿವು […]

ಕಾನೂನು ಸಚಿವ ಎಂ.ವೀರಪ್ಪ ಮೊಲಿಯವರಿಂದ ನೂತನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

Friday, April 29th, 2011
ಕಾನೂನು ಸಚಿವ ಎಂ.ವೀರಪ್ಪ ಮೊಲಿಯವರಿಂದ ನೂತನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು : ಮಂಜನಾಡಿ ಗ್ರಾಮದ ನಾಟೆಕಲ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಮಂಜನಾಡಿ, ರಕ್ಷಾ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್ ಇಲ್ಲಿ ಸುಮಾರು 1ಕೋಟಿ. ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಲಿ ಶಂಕುಸ್ಥಾಪನೆಗೈದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಮುದ್ರ ಸೇರುವ ನದಿ ನೀರಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಿ, ಸಂಗ್ರಹವಾದ ನೀರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ವ್ಯರ್ಥವಾಗಿ ಪೋಲಾಗುವ ನದಿ ನೀರನ್ನು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಆಡಳಿತ ಅನುಭವ ತಂದಿದೆ- ರೋಹಿಣಿ ಸಿಂಧೂರಿ

Wednesday, April 27th, 2011
ರೋಹಿಣಿ ಸಿಂಧೂರಿ

ಮಂಗಳೂರು : ಭಾರತ ಆಡಳಿತ ಸೇವೆ ಖಾಯಂ ಪೂರ್ವ ಅವಧಿ (ಪ್ರೊಬೇಷನರಿ)ಸೇವೆಗೆ ದಕ್ಷಿಣಕನ್ನಡ ಜಿಲ್ಲೆಗೆ ನಿಯೋಜಿಸಿದ ತಮಗೆ ಜಿಲ್ಲೆಯಲ್ಲಿ ವಿಶಿಷ್ಟವಾದ ಉತ್ತಮ ಆಡಳಿತ ಅನುಭವ ಆಗಿದೆ. ಇದರಿಂದ ನನ್ನ ಮುಂದಿನ ಸರ್ಕಾರಿ ಸೇವೆಗೆ ಬಹಳಷ್ಟು ನೆರವಾಗಲಿದೆ ಎಂದು ಐಎಎಸ್ ಪ್ರೊಬೇಷನರಿ ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಅವರು ಇಂದು ಪ್ರೋಬೆಷನರಿ ಅವಧಿ ಮುಗಿಸಿದ ಬಗ್ಗೆ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು. ಇಲ್ಲಿಯ […]

ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಗೆ ಮೇಲುಗೈ

Tuesday, April 26th, 2011
ಎಪಿಎಂಸಿ ಚುನಾವಣೆ

ಮಂಗಳೂರು : ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭಾನುವಾರ ನಡೆದ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹದಿನಾಲ್ಕು ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದ ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಜೆಡಿಎಸ್ ಮೂರು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. 14 ಕ್ಷೇತ್ರಗಳ ಪೈಕಿ ಮೂಲ್ಕಿ, ವಾಮಂಜೂರು, ಎಡಪದವು, ಬಜಪೆ, ಬೆಳುವಾಯಿ, ಸುರತ್ಕಲ್ ಹಾಗೂ ಪುತ್ತಿಗೆ(ಕಾಂಗ್ರೆಸ್ ಬೆಂಬಲಿತ ರೈತ ಸಂಘ) ಕ್ಷೇತ್ರಗಳು ಕಾಂಗ್ರೆಸ್‌ನ ಪಾಲಾಗಿವೆ. ಕೋಟೆಕಾರ್, ವರ್ತಕರ […]

ದೇವ ಮಾನವ, ಪವಾಡ ಪುರುಷ ಸತ್ಯ ಸಾಯಿ ಬಾಬ ಅಸ್ತಂಗತ

Sunday, April 24th, 2011
ಸತ್ಯಸಾಯಿಬಾಬಾ

ಪುಟ್ಟಪರ್ತಿ : ನ್ಯೂಮೋನಿಯಾ, ಉಸಿರಾಟ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸಾಯಿ ಬಾಬ (86) ಸುಮಾರು ಒಂದು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಭಾನುವಾರ ಬೆಳಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದಾರೆ. ಸಾಯಿಬಾಬಾ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಹೃದಯ ಸ್ತಂಭನಗೊಂಡು ಸಾವನ್ನಪ್ಪಿದ್ದಾರೆ. ಈ ಕುರಿತು ಸತ್ಯಸಾಯಿ ಬಾಬಾ ಟ್ರಸ್ಟ್ 10.10ಕ್ಕೆ ಅಧಿಕೃತ ಘೋಷಣೆ ಮಾಡಿದೆ. ಪುಟ್ಟಪರ್ತಿಯಲ್ಲಿ ಸ್ಮಶಾನ ಮೌನ ನೆಲೆಸಿದೆ. ಸಾಯಿ ಕುಲವಂತ್ ಹಾಲ್ ನಲ್ಲಿ ಸಾಯಿಬಾಬಾ ಅಂತಿಮ ದರ್ಶನಕ್ಕೆ ಇಂದು ಸಂಜೆ 6 ಗಂಟೆಗೆ […]

ಮಹಾನಗರಪಾಲಿಕೆ ಕಾಮಗಾರಿ-ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಬಿಲ್ ಪಾವತಿಸಿ-ಶ್ರೀ ಜೆ.ಕೃಷ್ಣ ಪಾಲೇಮಾರ್

Saturday, April 23rd, 2011
ಜೆ.ಕೃಷ್ಣ ಪಾಲೇಮಾರ್

ಮಂಗಳೂರು : ಮಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ವಿಶೇಷ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಂಡ   20 ದಿನಗಳೊಳಗೆ ಬಿಲ್ಲಿನ ಹಣ ಪಾವತಿ ಮಾಡುವಂತೆ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ,ಮೀನುಗಾರಿಕೆ,ಪರಿಸರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್ರವರು ಸೂಚಿಸಿದ್ದಾರೆ. ಅವರು  ನಿನ್ನೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಈ ವಿಷಯ ತಿಳಿಸಿದರು. […]

‘ಅಡಿಕೆಯಿಂದ ಆಹಾರ ಬೆಳೆಯತ್ತ ಮುಖ ಮಾಡುವ ರೈತರಿಗೆ ಪೈಲಟ್ ಯೋಜನೆ ರೂಪಿಸಿ’

Thursday, April 21st, 2011
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆ

ಮಂಗಳೂರು : ಅಡಿಕೆ ಕೃಷಿಯಿಂದ ಆಹಾರ ಬೆಳೆಯನ್ನು ಬೆಳೆಯಲು ಉತ್ಸುಕರಾಗಿರುವ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೈತರಿಗಾಗಿ ಪೈಲಟ್ ಯೋಜನೆಯನ್ನು ರೂಪಿಸಬೇಕು ಎಂದು ರೈತ ಮುಖಂಡರಲ್ಲೊಬ್ಬರಾದ ಶ್ರೀ ರವಿಕಿರಣ ಪುಣಚ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾಲಮನ್ನಾ ಯೋಜನೆ, ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಹಳದಿರೋಗ, ಕೊಳೆ ರೋಗ ತಡೆಗೆ ಕ್ರಮ, ಕುಮ್ಕಿ ಜಮೀನು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಡಳಿತದ ಗಮನ ಸೆಳೆದರು. ರೈತರ […]