ಮಂಗಳೂರಿನಲ್ಲಿ ಜಿಲ್ಲಾ ಹಿಂದೂ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು

Monday, February 10th, 2020
hindhu janajagruti

ಮಂಗಳೂರು : “ಆಧ್ಯಾತ್ಮಿಕ ಸಾಧನೆಯ ಬಲದಿಂದ ಹಿಂದೂ ರಾಷ್ಟ್ರದ ಶಿವಧನಸ್ಸನ್ನು ಎತ್ತಲು ಸಾಧ್ಯ‌.” ಎಂದು ಧರ್ಮ ಪ್ರಸಾರಕಿ, ಸನಾತನ ಸಂಸ್ಥೆ ಸೌ.ಮಂಜುಳಾ ಗೌಡ ರವರು ಹೇಳಿದರು. ಸೌ.ಮಂಜುಳಾ ಗೌಡ ಇವರು ಮಾತನಾಡಿ ” ಮನುಷ್ಯ ಜನ್ಮದ ಸಾರ್ಥಕತೆ ಈಶ್ವರ ಪ್ರಾಪ್ತಿ ಯಾಗಿದೆ‌ ಅದಕ್ಕಾಗಿ ಮಾಡುವುದಕ್ಕೆ ಸಾಧನೆ ಎನ್ನುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಸಾಧನೆಯ ಅವಶ್ಯಕತೆ ಇದೆ‌‌.ಇದಕ್ಕಾಗಿ ಭಗವಂತನ ಕೃಪೆ ಮತ್ತು ಸಾಧನೆಯು ಅವಶ್ಯಕ. ಸಾಧನೆಯನ್ನು ಮಾಡಿ ಧರ್ಮಾಭಿಮಾನವನ್ನು ಹೆಚ್ಚಿಸಬೇಕು‌.ಭಗವಂತ ಧರ್ಮಸಂಸ್ಥಾಪನೆಗಾಗಿ ಅವತಾರ ತಾಳುತ್ತಾರೆ.ಹಾಗಾಗಿ ಹಿಂದೂ ರಾಷ್ಟ್ರ […]

“ಹಿಂದೂ ಧರ್ಮವು ಜೀವನದ ಅಂಗವಾಗಬೇಕು ” : ಸೌ.ವಿದ್ಯಾಲಕ್ಮೀ, ಶ್ರೀ ರಾಮ ಚಂದ್ರಾಪುರ ಮಠ

Monday, February 10th, 2020
hindhu-janajagruti

ಮಂಗಳೂರು : ಸನಾತನ ಹಿಂದೂ ಧರ್ಮವೆಂದರೆ ಅವಿನಾಶಿ ಮತ್ತು ಅಜರಾಮರವೇ ಆಗಿದೆ. ಹಿಂದೂ ಧರ್ಮವು ಜೀವನದ ಅಂಗವಾಗಿದೆ.ಹಿಂದೂ ಧರ್ಮವು ಎಲ್ಲಾ ಜೀವಿಗಳಲ್ಲಿಯೂ ದೇವರನ್ನು ಕಾಣುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ‌.ಇಂದು ಇಂದಿನ ಪೀಳಿಗೆಗೆ ಧರ್ಮಶಿಕ್ಷಣವನ್ನು ನೀಡಬೇಕಾಗಿದೆ ಉಡುಪುಗಳಾಗಿರಲಿ, ಉತ್ಸವಗಳಾಗಿರಲಿ ಪಾಶ್ಚಾತ್ಯರಂತೆ ಅಲ್ಲ ಹಿಂದೂ ಧರ್ಮದಂತೆ ಆಚರಿಸಿ ಧರ್ಮದ ರಕ್ಷಣೆಯನ್ನು ಮಾಡಿ ಎಂದು  ಸೌ.ವಿದ್ಯಾಲಕ್ಮೀ ರವರು ವಿಚಾರವನ್ನು ಮಂಡಿಸಿದರು. “ಭಾರತವು ವಿಶ್ವಗುರುವಾಗ ಬೇಕಾದರೆ 4ಜಿ ಬಲಿಷ್ಠವಾಗಬೇಕು !(ಗೋವು, ಗ್ರಾಮ, ಗಂಗೆ, ಗುರುಕುಲ)”ಎಂದು ನ್ಯಾ‌. ಚಂದ್ರಶೇಖರ ರಾವ್ ರವರು ಹೇಳಿದರು. ನ್ಯಾಯವಾದಿಗಳಾದ ಶ್ರೀ.ಚಂದ್ರಶೇಖರ್ ರಾವ್ […]

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ : ಸಂಸದೆ ಶೋಭಾ ಕರಂದ್ಲಾಜೆ

Saturday, February 8th, 2020
shobha

ಚಿಕ್ಕಮಗಳೂರು : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಶನಿವಾರ ನಗರಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಅಶಾಂತಿ ಸೃಷ್ಟಿಸಿ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದರು. ದೆಹಲಿ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವಪೌರತ್ವ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಜನರನ್ನು ಹಣ ಕೊಟ್ಟು ಕರೆ ತಂದಿದ್ದಾರೆ ಎಂದರು. ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ […]

ಭೀಕರ ಅಪಘಾತ : ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿ; ಆರು ಜನ ದುರ್ಮರಣ

Saturday, February 8th, 2020
belagavi

ಬೆಳಗಾವಿ : ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಒಂದು ಬೋಗೂರ ಗ್ರಾಮದ ಬಳಿಯ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದು ಸುಮಾರು ಆರು ಜನ‌ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಬೋಗೂರ ಗ್ರಾಮದ ಸಾವಿತ್ರಿ ಬಾಬು ಹುಣಸಿಕಟ್ಟಿ, ತಂಗೆವ್ವ ಯಲ್ಲಪ್ಪ ಹುಣಸೀಕಟ್ಟಿ, ಅಶೋಕ ಫಕೀರ ಕೇದಾರಿ, ಶಾಂತಮ್ಮ ಯಲ್ಲಪ್ಪ ಜುಂಜರಿ, ಶಾಂತವ್ವ ಹನುಮಂತ ಅಳಗುಂಡಿ, ನಾಗವ್ವ ಯಶವಂತ ಮಾಠೋಳ್ಳಿ ಮೃತಪಟ್ಟವರು. ಖಾನಾಪುರ ತಾಲೂಕಿನ ಬೋಗೂರ ಗ್ರಾಮದಿಂದ ಕಾರ್ಮಿಕರು ಕೂಲಿ […]

ಮಂಗಳೂರಿನಲ್ಲಿ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಆರಂಭ

Saturday, February 8th, 2020
janajagruti

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ 8 ಜನವರಿ 2020 ರಂದು ದಕ್ಷಿಣ ಜಿಲ್ಲಾ ಹಿಂದೂ ಅಧಿವೇಶನ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಗೃಹ, ಡೊಂಗರಕೇರಿ ಪ್ರಾರಂಭವಾಯಿತು. ಈ ಅಧಿವೇಶನದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ.ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ್ ಗೌಡ , ಶ್ರೀ.ಕೃಷ್ಣಮೂರ್ತಿ, ನ್ಯಾಯವಾದಿಗಳು, ಶ್ರೀ.ದಯಾನಂದ ಕತ್ತಲ್ ಸಾರ್, ಅಧ್ಯಕ್ಷರು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರು ದೀಪಪ್ರಜ್ವಲನೆ ಮಾಡಿದರು. ” ಹಿಂದೂ […]

ಸ್ಮೃತಿ ಮಂಧನಾ ಮತ್ತು ಶಿಫಾಲಿ ವರ್ಮಾ ಬ್ಯಾಟಿಂಗ್ ಸಾಹಸ : ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ವನಿತೆಯರು

Saturday, February 8th, 2020
bating

ಮೆಲ್ಬೋರ್ನ್ : ಉಪನಾಯಕಿ ಸ್ಮೃತಿ ಮಂಧನಾ ಮತ್ತು ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮಾ ಬ್ಯಾಟಿಂಗ್ ಸಾಹಸದಿಂದ ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಇಲ್ಲಿನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ವನ್ ಡೌನ್ ಆಟಗಾರ್ತಿ ಗಾರ್ಡ್ನರ್ 93 ರನ್ ಗಳಿಸಿದರು. ಭಾರಿ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಸ್ಮೃತಿ ಮಂಧನಾ (55 […]

ಶಬರಿಮಲೆ ಅಯ್ಯಪ್ಪಸ್ವಾಮಿ ದೇವರ ಆಭರಣಗಳ ಪಟ್ಟಿ ತಯಾರಿಸಲು ಆದೇಶ

Saturday, February 8th, 2020
ayyappa

ನವದೆಹಲಿ : ಕೇರಳದ ಪಂದಳಂ ರಾಜಮನೆತನದ ಆಂತರಿಕ ಕಲಹಗಳಿಂದಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವರ ಆಭರಣಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅಯ್ಯಪ್ಪಸ್ವಾಮಿಗೆ ಸೇರಿರುವ ಎಲ್ಲ ಆಭರಣಗಳ ಸಮಗ್ರ ಪಟ್ಟಿ ತಯಾರಿಸಲು ಆದೇಶಿಸಿದೆ. ಕೇರಳ ಹೈಕೋರ್ಟ್ನ ನಿವೃತ್ತ ಜಡ್ಜ್ ಸಿ.ಎನ್. ರಾಮಚಂದ್ರನ್ ನಾಯರ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ನಾಲ್ಕು ವಾರದೊಳಗೆ ಪಟ್ಟಿ ಸಲ್ಲಿಸಬೇಕು ಎಂದು ಕೋರ್ಟ್ ಶುಕ್ರವಾರ ಆದೇಶಿಸಿದೆ. ದೇವರ ಆಭರಣಗಳ ಉಸ್ತುವಾರಿ ಮತ್ತು ದೇವಸ್ಥಾನ ಆಡಳಿತಕ್ಕಾಗಿ ಸಮಿತಿ ನೇಮಿಸುವಂತೆ ಕೋರಿ ಪಂದಳಂ ರಾಜಮನೆತನದ ಕೆಲವರು […]

ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸ್ವಾತಂತ್ರ್ಯವನ್ನು ಹೈಕಮಾಂಡ್ ನೀಡಿಲ್ಲ : ಸಿದ್ದರಾಮಯ್ಯ

Saturday, February 8th, 2020
siddaramaiah

ಕಲಬುರಗಿ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸ್ವಾತಂತ್ರ್ಯವನ್ನು ಹೈಕಮಾಂಡ್ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಯಡಿಯೂರಪ್ಪನವರು ಖಾತೆ ಹಂಚಿಕೆಯೂ ಮಾಡದಷ್ಟು ಇಕ್ಕಟ್ಟಿನ ಸ್ಥಿತಿಯಲ್ಲಿ ಇದ್ದಾರೆ. ಬಿಎಸ್‍ವೈ ಅವರ ಮಂತ್ರಿಮಂಡಲ ಸಹ ಇನ್ ಬ್ಯಾಲೆನ್ಸ್ ಆಗಿದ್ದು, ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದರು. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯವೂ ಇಲ್ಲ. ಇದರಿಂದ ಅಸಮಾಧಾನ ತೀವ್ರಗೊಳ್ಳುವ ಸಾಧ್ಯತೆಯಿದೆ. ದೆಹಲಿ […]

ತಾಲಿಬಾನ್ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿ

Saturday, February 8th, 2020
ugra

ಇಸ್ಲಾಮಾಬಾದ್ : 2012ರಲ್ಲಿ ಮಲಾಲಾ ಯುಸುಫ್ ಝೈ ಅವರ ಮೇಲೆ ಗುಂಡಿ ಹಾರಿಸಿದ್ದ ಮತ್ತು 2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಉಗ್ರ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಈ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾನಿರುವ ಸ್ಥಳದ ಮಾಹಿತಿ ನೀಡದ ಉಗ್ರ, ದೇವರ ಸಹಾಯದಿಂದ ನಾನು ಭದ್ರತಾ […]

ನಾಳೆ ಮಂಗಳೂರಿನಲ್ಲಿ ಬ್ರಹ್ಮಾಕುಮಾರಿ ಶಿವಾನಿಯವರ ಕಾರ್ಯಕ್ರಮ

Saturday, February 8th, 2020
BK-Shivani

ಮಂಗಳೂರು : ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ನಗರಕ್ಕೆ ಆಗಮಿಸಿದ್ದಾರೆ. ಆ ಪ್ರಯುಕ್ತ ಪ್ರತಿಷ್ಟಿತ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಶಿವಾನಿಯವರ ಇದು ಎರಡನೆಯ ಕಾರ್ಯಕ್ರಮವಾಗಿದೆ. 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫೆಬ್ರುವರಿ 9 ರಂದು ಬೆಳಿಗ್ಗೆ10.30ರಿಂದ 12.30ರವರೆಗೆ “ಆರೋಗ್ಯ ಸಂತೋಷ ಮತ್ತು ಸಾಮರಸ್ಯ” ಎಂಬ ವಿಷಯದ ಮೇಲೆ ಹಾಗೂ ಸಾಯಂಕಾಲ 5.30ರಿಂದ 7.30 ರವರೆಗೆ ವಿರಾಮ… ಶಾಂತಿಗಾಗಿ” ಎನ್ನುವ […]