16 ಅನರ್ಹ ಶಾಸಕರನ್ನು ತನ್ನ ಬಳಿ ಸೆಳೆದುಕೊಂಡ ಬಿಜೆಪಿ

Thursday, November 14th, 2019
Shasakaru

ಬೆಂಗಳೂರು : ಕಾಂಗ್ರೆಸ್- ಜೆಡಿಎಸ್ ನ ಹದಿನಾರು ಅನರ್ಹ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದ ಅನರ್ಹ ಶಾಸಕರಾದ ಮಹೇಶ್ ಕುಮಟಹಳ್ಳಿ, ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್, ಶಂಕರ್, ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ನಾರಾಯಣ ಗೌಡ, ಎಚ್.ಟಿ.ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜು, ಮುನಿರತ್ನ, ಎಂಟಿವಿ ನಾಗರಾಜ್,ಡಾ.ಸುಧಾಕರ್, ಶ್ರೀಮಂತ್ ಪಾಟೀಲ್, ಬಿ.ಸಿ. ಪಾಟೀಲ್ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹೊದ್ದು, ಬಿಜೆಪಿ ಬಾವುಟ ಹಿಡಿಯುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡರು. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ

Thursday, November 14th, 2019
MCC-Election

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಾಲಿಕೆಯಲ್ಲಿ ಈ ಬಾರಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. 60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಇದರಿಂದ ಕಳೆದ ಬಾರಿ 35 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಎಸ್ ಡಿಪಿಐ 2 ವಾರ್ಡ್ ಗಳಲ್ಲಿ ಜಯಗಳಿಸಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತವರಲ್ಲಿ […]

ಶಬರಿಮಲೆ ವಿವಾದ : ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್

Thursday, November 14th, 2019
Shabari-Male

ನವದೆಹಲಿ : ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ 2018ರ ಸೆಪ್ಟಂಬರ್ 28ರಂದು ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿ ಕುರಿತು ಸುಪ್ರೀಂಕೋರ್ಟ್ ಪಂಚಸದಸ್ಯ ಸಾಂವಿಧಾನಿಕ ಪೀಠ ಗುರುವಾರ ಅಂಗೀಕರಿಸಿದ್ದು, ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಆದೇಶ ನೀಡಿದೆ. ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ಅವರು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಸಲ್ಲಿಕೆಯಾದ ಮರುಪರಿಶೀಲನೆ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. 3:2 ಬಹುಮತದಿಂದ ಪಂಚಸದಸ್ಯ ಪೀಠ ಪೂರ್ಣಪೀಠಕ್ಕೆ ನೀಡಿದೆ. ತೀರ್ಪು ಹಿಂದೂ ಮಹಿಳೆಯರಿಗೆ […]

ವಾರ್ಡ್ ಸಂಖ್ಯೆ 5 ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಶಂಶಾದ್ ಅಬೂಬಕರ್ ಗೆ ಭರ್ಜರಿ ಗೆಲುವು

Thursday, November 14th, 2019
SDPI

ಮಂಗಳೂರು : ಮನಪಾ ಚುನಾವಣೆಯಲ್ಲಿ ವಾರ್ಡ್ ನಂ.5 ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಶಂಶಾದ್ ಅಬೂಬಕರ್ ಅವರು 2766 ಮತಗಳನ್ನು ಪಡೆದು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಾಗಿದ್ದ ಮಾಜಿ ಮೇಯರ್ ಮೇಯರ್ ಗುಲ್ಝಾರ್ ಬಾನು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಉಮರಬ್ಬ ಅವರ ಪುತ್ರಿ ಫಾತಿಮಾ ಬಿ. ಅವರು ಸೋತಿದ್ದಾರೆ.  

ಮಂಗಳೂರು ಮನಪಾ ಚುನಾವಣೆ : 60 ವಾರ್ಡ್ ಗಳಲ್ಲಿ 20 ಗೆಲುವು ಸಾಧಿಸಿರುವ ಬಿಜೆಪಿ

Thursday, November 14th, 2019
BJP

ಮಂಗಳೂರು : 60 ವಾರ್ಡ್ ಗಳಲ್ಲಿ ಪ್ರಕಟವಾಗಿರುವ ಫಲಿತಾಂಶದಲ್ಲಿ 20ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದೆ. ಕಾಂಗ್ರೆಸ್ ಕೇವಲ 9 ವಾರ್ಡ್ ಗಳಲ್ಲಿ ಮಾತ್ರ ಜಯಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ. ವಾರ್ಡ್ ನಂ.7 ಇಡ್ಯಾ ಪಶ್ಚಿಮ: ಬಿಜೆಪಿಯ ನಯನಾ ಆರ್. ಕೋಟ್ಯಾನ್ ರಿಗೆ ಗೆಲುವು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಕುಳಾಯಿ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 18 ಗೆಲುವು, ಕಾಂಗ್ರೆಸ್ ಗೆ 7ರಲ್ಲಿ ಗೆಲುವು

Thursday, November 14th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಪ್ರಕಟವಾಗಿರುವ ವಾರ್ಡ್ ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ ಗೆ 7ರಲ್ಲಿ ಗೆಲುವು ಸಾಧಿಸಿದೆ. ವಾರ್ಡ್ ನಂ.3 ಕಾಟಿಪಳ್ಳ ಪೂರ್ವ: 2486 ಮತಗಳನ್ನು ಗಳಿಸಿರುವ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಶೀರ್ ಅಹ್ಮದ್ ಗೆ‌ ಸೋಲುಂಡಿದ್ದಾರೆ. ವಾರ್ಡ್ ನಂ.57 ಹೊಯ್ಗೆ ಬಝಾರ್: ಬಿಜೆಪಿಯ ರೇವತಿ ಶ್ಯಾಂಸುಂದರ್ 2116 ಮತಗಳನ್ನು ಪಡೆದು ಜಯಸಿದ್ದಾರೆ. ವಾರ್ಡ್ ನಂ.6 ಇಡ್ಯಾ ಪೂರ್ವ: ಬಿಜೆಪಿಯ ಸರಿತಾ ಶಶಿಧರ್ […]

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ

Thursday, November 14th, 2019
Bresil

ನವದೆಹಲಿ : ಪ್ರತಿ ಬಾರಿಯೂ ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವ ವಿಶೇಷ ಅತಿಥಿಯ ಕುರಿತು ಕುತೂಹಲವಿರುತ್ತದೆ. ಈ ಬಾರಿ ವಿಶೇಷ ಅತಿಥಿಯನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಅವರು ಸಹ ಸ್ವೀಕರಿಸಿ ಆಗಮಿಸಲು ಒಪ್ಪಿಗೆ ನೀಡಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಆಹ್ವಾನವನ್ನು ಬ್ರೆಜಿಲ್ ಅಧ್ಯಕ್ಷ ಬುಧವಾರ ಸ್ವೀಕರಿಸಿದ್ದು, ಈ ಮೂಲಕ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪಕ್ಕಾ ಆಗಿದೆ. ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ

Thursday, November 14th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಬಿಜೆಪಿ ಇದುವರೆಗೆ ಐದು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ ಹಾಗೂ ಸೆಂಟ್ರಲ್ ಮಾರ್ಕೆಟ್ ವಾರ್ಡ್ 41ರಲ್ಲಿ ಗೆದ್ದಿರುವ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್ ವಿಜಯಿಯಾಗಿದ್ದಾರೆ. ಶೋಭಾ ರಾಜೇಶ್ 985 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ರೇವತಿ ಪುತ್ರನ್ 760 ಮತ, ಶಾಂತಾ ರಾವ್ 548 ಮತಗಳನ್ನು […]

ರಸ್ತೆ ವಿಸ್ತರಣೆಗೆ ವಿರೋಧ ಬೇಡ : ಶಾಸಕ ಕೆ.ಜಿ.ಬೋಪಯ್ಯ ಮನವಿ; ವಿರಾಜಪೇಟೆಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

Thursday, November 14th, 2019
virajpete

ಮಡಿಕೇರಿ : ರಸ್ತೆ ವಿಸ್ತರಣೆಯಂತಹ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆ ಹೊರತು ಅಡ್ಡಿ ಪಡಿಸಬಾರದೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ. ವಿರಾಜಪೇಟೆ ಸುಂಕದಕಟ್ಟೆ ತಿರುವಿನಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣಾ ಕಾರ್ಯಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಲೇ ಇದ್ದು, ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ಕಳೆದ ಹಲವು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. […]

ಇಂದಿನ ರಾಶಿ ಫಲ : ಕನ್ಯಾ ರಾಶಿ ಶತ್ರುಗಳ ಉಪಟಳ ಹೆಚ್ಚಾಗಲಿದೆ ಜಾಗ್ರತೆ ವಹಿಸಿ !

Thursday, November 14th, 2019
Sri Guru-Raghavendra

ಶ್ರೀ ಗುರು ರಾಘವೇಂದ್ರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ರೋಹಿಣಿ ಋತು : ಶರದ್ ರಾಹುಕಾಲ 13:30 – 14:46 ಗುಳಿಕ ಕಾಲ 09:11 – 10:38 ಸೂರ್ಯೋದಯ 06:18:45 ಸೂರ್ಯಾಸ್ತ 17:49:04 ತಿಥಿ : ದ್ವಿತೀಯ ಪಕ್ಷ : ಕೃಷ್ಣ ಮೇಷ ರಾಶಿ ಪ್ರೀತಿಪಾತ್ರರೊಡನೆ ಉತ್ತಮ ರೀತಿಯ ಸ್ಪಂದನೆ […]