ನಗರದ ಜೋಕಟ್ಟೆ ಪ್ರದೇಶದಲ್ಲಿ ಮತ್ತೆ ಹಾರು ಬೂದಿ ಸಮಸ್ಯೆ..!

Wednesday, November 21st, 2018
manglore

ಮಂಗಳೂರು: ನಗರದ ಜೋಕಟ್ಟೆ ಪ್ರದೇಶದಲ್ಲಿ ಮತ್ತೆ ಹಾರು ಬೂದಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಳಗಾಗಿದ್ದಾರೆ. ಮರಗಿಡಗಳು, ಮನೆ ಮತ್ತು ವಾಹನಗಳ ಮೇಲೆ ಹಾರು ಬೂದಿ ಕಾಣಿಸಿಕೊಂಡಿದೆ. ಇಲ್ಲಿ ಎಂಆರ್ಪಿಎಲ್ನ ಕೋಕ್ ಮತ್ತು ಸಲ್ಪರ್ ಘಟಕದ ಆರಂಭದ ಬಳಿಕ ಈ ಹಾರು ಬೂದಿ ಸಮಸ್ಯೆ ಎದುರಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಇದರ ವಿರುದ್ಧವಾಗಿ ಕೆಲ ದಿನಗಳ ಹಿಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕ ಈ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಈಗ ಎಂಆರ್ಪಿಎಲ್ ಕೋಕ್ ಮತ್ತು […]

ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಮೂವರ ಬಂಧನ

Wednesday, November 21st, 2018
vajubai-vala

ಬೆಂಗಳೂರು: ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿರುವ ಘಟನೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ನಡೆದಿದೆ. ರಾಜ್ಯಪಾಲರ ಆಗಮನದ ವೇಳೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ವಾಹನಗಳನ್ನು ಪೊಲೀಸರು ತಡೆದಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸ್ ಪೇದೆಗೆ ಇಂಡಿಕಾ ಕಾರು ಡಿಕ್ಕಿ ಹೊಡದಿದೆ. ಕಾರಿನಲ್ಲಿದ್ದ ಚಾಲಕ ಯಾವನೋ ಹೋಗುವಾಗ ಅವನಿಗೆ ದಾರಿ ಮಾಡಿಕೊಟ್ಟು ನಮ್ಮನ್ನು ಯಾಕ್ ನಿಲ್ಲಿಸ್ತಿಯಾ ಎಂದು ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೇದೆ […]

ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ..!

Wednesday, November 21st, 2018
kambala

ಉಡುಪಿ: ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳ ಪ್ರಿಯರಿಗೆ ದುಃಖ ತಂದಿದೆ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಈ ರಾಕೆಟ್ ಮೋಡ ಕೋಣದ್ದಾಗಿತ್ತು. ಇದು ಮಾತ್ರವಲ್ಲದೆ, ಕಂಬಳ ಪ್ರಿಯರಿಗೆ ಇದು ಚಿರಪರಿಚಿತ ಕೋಣವಾಗಿತ್ತು. ಕೊಂಡೊಟ್ಟು ಮೋಡ, ರಾಕೆಟ್ ಮೋಡ […]

ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ನಡೆಸುತ್ತಿದೆ: ಶೋಭಾ ಕರಂದ್ಲಾಜೆ

Wednesday, November 21st, 2018
shobha-karandlaje

ಬೆಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಧರಣಿ ನಡೆಸಿದರು. ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಯ್ಯಪ್ಪ ಭಕ್ತರು ಇಂದು ಸಂಕಷ್ಟದಲ್ಲಿ ಇದ್ದಾರೆ, ದೇವಸ್ಥಾನದಲ್ಲಿ ಇರಬೇಕಾದ ಭಕ್ತರು ಪೋಲಿಸ್ ಸ್ಟೇಷನ್ನಲ್ಲಿ ಇದ್ದಾರೆ, ಪೋಲಿಸ್ ಸ್ಟೇಷನ್ ಇರಬೇಕಾದ ಪೋಲಿಸರು ಅಯ್ಯಪ್ಪ ದೇವಸ್ಥಾನದಲ್ಲಿ ಇದ್ದಾರೆ ಎಂದು ಟೀಕಿಸಿದರು. ಕೇರಳದ ಕಮ್ಯುನಿಸ್ಟ್ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಕೇಸ್ ನಡೆಯಬೇಕಾದರೆ ಮೌನವಹಿಸಿತು ಇದರ […]

ನಂತೂರು ಸರ್ಕಲ್ ಬಳಿ ಉರುಳಿ ಬಿದ್ದ ಗ್ಯಾಸ್​ ತುಂಬಿದ ಟ್ಯಾಂಕರ್​..!

Wednesday, November 21st, 2018
tankar

ಮಂಗಳೂರು: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ತುಂಬಿದ ಟ್ಯಾಂಕರ್ ಮಗುಚಿ ಬಿದ್ದಿರುವ ಘಟನೆ ನಂತೂರು ಬಳಿ ನಡೆದಿದೆ. ಭಾರತ್ ಗ್ಯಾಸ್ ತುಂಬಿದ ಈ ಟ್ಯಾಂಕರ್ ನಂತೂರಿನಿಂದ ಬಿಕರ್ನಕಟ್ಟೆ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನಗರದ ಕದ್ರಿ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಟ್ಯಾಂಕರ್ನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಒಂದು ರೂಪಾಯಿ ಕಾಣಿಕೆಯನ್ನು ಹಾಕದಿರಿ: ವೈ.ಭರತ್ ಶೆಟ್ಟಿ

Wednesday, November 21st, 2018
shabarimala

ಮಂಗಳೂರು: ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಒಂದು ರೂಪಾಯಿ ಕಾಣಿಕೆಯನ್ನು ಹಾಕದಿರಿ. ಯಾಕೆಂದರೆ ನಾವು ಹಾಕಿದ ಆ ಕಾಣಿಕೆ ಹಣವನ್ನು ಯಾವುದೇ ಕಾರಣಕ್ಕೂ ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ ಎಂದು ಶಾಸಕ ವೈ.ಭರತ್ ಶೆಟ್ಟಿ ಹೇಳಿದರು. ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿಯಿಂದ ನಡೆದ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯದ ವಿರುದ್ಧ ಇಂದು ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೆ ಶಬರಿಮಲೆಯಲ್ಲಿ ಪೊಲೀಸರನ್ನು ಸೆಕ್ಯುರಿಟಿಗಾಗಿ ಇಡಲಾಗುತ್ತಿತ್ತು. […]

ಪ್ರವಾದಿ ಮುಹಮ್ಮದ್ ಮುಸ್ತಫ ರ ಜನ್ಮದಿನ: ಕರಾವಳಿಯಾದ್ಯಂತ ಮೀಲಾದುನ್ನಬಿ ಸಂಭ್ರಮಾಚರಣೆ

Tuesday, November 20th, 2018
eid-milad

ಮಂಗಳೂರು: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ.)ರವರ ಜನ್ಮದಿನದ ಪ್ರಯುಕ್ತ ಇಂದು ಕರಾವಳಿಯಾದ್ಯಂತ ಬೆಳಗ್ಗೆಯಿಂದಲೇ ಮೀಲಾದುನ್ನಬಿ ಸಂಭ್ರಮಾಚರಣೆ ಆರಂಭಗೊಂಡಿದ್ದು, ಪ್ರವಾದಿ ಮುಹಮ್ಮದ್ (ಸ)ರ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕರಾವಳಿಯ ವಿವಿಧೆಡೆಗಳಲ್ಲಿ ಮುಸ್ಲಿಂ ಭಾಂದವರು ಮೀಲಾದುನ್ನಬಿಯನ್ನು ಆಚರಿಸಿದರು. ನಗರದ ಬಂದರ್‌ನ ಪ್ರಮುಖ ರಸ್ತೆಗಳಲ್ಲಿ ವಿವಿಧ ಮದ್ರಸಗಳ ವಿದ್ಯಾರ್ಥಿಗಳು ಬೆಳಗ್ಗೆ ಆಕರ್ಷಕ ಮೀಲಾದ್ ರ್ಯಾಲಿ ನಡೆಸಿದರು. ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದ್ರಸದ ವತಿಯಿಂದ ಮೀಲಾದ್ ಜಾಥಾ ನಡೆಯಿತು. ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಧ್ವಜಾರೋಹಣಗೈದರು. […]

ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ‌ ನಿರ್ಮಾಣಕ್ಕೆ ಯೋಜನೆ: ಡಾ. ಜಿ.ಪರಮೇಶ್ವರ್

Tuesday, November 20th, 2018
parameshwar

ಬೆಂಗಳೂರು: ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಪ್ಯಾರಾ ಏಷಿಯನ್‌ ಗೇಮ್ಸ್ನಲ್ಲಿ 9 ಪದಕ ಪಡೆದ ಏಳು ವಿಕಲಚೇತನ ಕ್ರೀಡಾಪಟುಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ. ಜಿ.ಪರಮೇಶ್ವರ್ ಅವರು ಗೃಹ ಕಚೇರಿಯಲ್ಲಿ ಇಂದು ಸನ್ಮಾನಿಸಿದರು. ಪ್ಯಾರಾ ಒಲಂಪಿಕ್‌ನಲ್ಲಿ‌ ಚಿನ್ನ ಗಳಿಸಿದ ರಕ್ಷಿತಾ ಆರ್., ಬೆಳ್ಳಿ ಹಾಗೂ ಕಂಚು ಪದಕ ವಿಜೇತೆ ವಿ.ರಾಧ, ಜಾವಲಿನ್ ಥ್ರೋ ವಿಭಾಗದಲ್ಲಿ ಕಂಚು ಪಡೆದ ಎನ್‌.ಎಸ್‌. ರಮ್ಯಾ, ಪ್ಯಾರ ಬ್ಯಾಡ್ಮಿಂಟನ್‌ನಲ್ಲಿ ಕಂಚು ವಿಜೇತ ಆನಂದ ಕುಮಾರ್, ಚೆಸ್‌ನಲ್ಲಿ ಚಿನ್ನದ ಪದಕ […]

ಟ್ರ್ಯಾಕ್ಟರ್​​ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

Tuesday, November 20th, 2018
accident

ಕಲಬುರಗಿ: ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹತ್ತಿರ ನಡೆದಿದೆ. ಯಾದಗಿರಿ ತಾಲೂಕು ಯರಗೋಳ ಗ್ರಾಮದ ನಿವಾಸಿ ಹಳ್ಳೆಪ್ಪ (25) ಮೃತಪಟ್ಟ ಬೈಕ್ ಸವಾರನೆಂದು ಗುರುತಿಸಲಾಗಿದೆ. ಯರಗೋಳದಿಂದ ನಾಲವಾರ ಕಡೆ ಹಳ್ಳೆಪ್ಪ ಬೈಕ್ನಲ್ಲಿ ಹೊರಟ್ಟಿದ್ದ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಾಲೆಯ ಕಂಪೌಂಡ್ ಮೇಲೆ ಉರುಳಿ ಬಿದ್ದ ಲಾರಿ ‌ಕಂಟೈನರ್ ಬಾಕ್ಸ್..!

Tuesday, November 20th, 2018
building

ಮಂಗಳೂರು: ಖಾಸಗಿ ಸಂಸ್ಥೆಗೆ ಸೇರಿದ ಬೃಹತ್ ಗಾತ್ರದ ಲಾರಿ ಕಂಟೈನರ್ ಬಾಕ್ಸ್ಗಳು ಶಾಲೆಯೊಂದರ ಮೇಲೆ ಉರುಳಿಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸ.ಹಿ.ಪ್ರಾ. ಶಾಲೆಯ ಪಕ್ಕದ ಜಮೀನಿನಲ್ಲಿ ಎನ್ಎಂಪಿಟಿಯಿಂದ ತಂದ ಬೃಹತ್ ಗಾತ್ರದ ಕಂಟೈನರ್ಗಳನ್ನು ಸಂಗ್ರಹಿಸಿಟ್ಟು ಖಾಸಗಿ ಸಂಸ್ಥೆಯೊಂದು ವ್ಯವಹಾರ ನಡೆಸುತ್ತಿತ್ತು. ಇಂದು ಬೆಳಗ್ಗೆ ಶಾಲೆ ತೆರೆದ ಸಂದರ್ಭ ಶಾಲೆಯ ಒಂದು ಬದಿ ಕುಸಿದುಬಿದ್ದಿದೆ. ಪರಿಶೀಲಿಸಿದಾಗ, ಪಕ್ಕದ ಜಮೀನಿನಲ್ಲಿದ್ದ ಒಂದರ ಮೇಲೊಂದು ಇರಿಸಿದ್ದ ಲಾರಿ ಕಂಟೈನರ್ಗಳು ಶಾಲೆಯ ಮೇಲೆಯೇ […]