ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ವೈಶಾಖ್‌ಗೆ ಶೌರ್ಯ ಪ್ರಶಸ್ತಿ ಶಿಫಾರಸು: ಐವನ್‌

Thursday, October 6th, 2016
ivan-dsouza

ಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್‌ನನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ತಿಳಿಸಿದ್ದಾರೆ. ಅವರು ಬುಧವಾರ ನಗರದ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಕಂಡು ಆರೋಗ್ಯ ವಿಚಾರಿಸಿದರು. ವೈಶಾಖ್‌ನ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತನನ್ನು ಶಾಲು ಹೊದೆಸಿ, ಹಾರ ಹಾಕಿ ಐವನ್‌  ಡಿ’ಸೋಜಾ ಬಾಲಕನನ್ನು ಗೌರವಿಸಿದರು. ಬಾಲಕನ ತಾಯಿ, ಹರಿಣಾಕ್ಷಿ […]

ಕಾರಂತ ಪ್ರಶಸ್ತಿಗೆ ಲೀಲಾ ಉಪಾಧ್ಯಾಯ ಆಯ್ಕೆ

Thursday, October 6th, 2016
leela-upadyaya

ಮಂಗಳೂರು: ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ “ಕಾರಂತ ಹುಟ್ಟು ಹಬ್ಬ” ಸಂದರ್ಭದಲ್ಲಿ ನೀಡುವ ಕಾರಂತ ಪ್ರಶಸ್ತಿಗೆ ಈ ಬಾರಿ ಡಾ. ಲೀಲಾ ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಅ. 13ರ ಸಂಜೆ ನಗರದ ಡಾನ್ಬಾಸ್ಕೋ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕಾರಂತ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಣಂಬೂರ್ ಬೀಚ್‌‌ನಲ್ಲಿ ಬೋಟ್ ಪಲ್ಟಿ: ಎರಡೂವರೆ ವರ್ಷದ ಮಗು ನೀರುಪಾಲು

Thursday, October 6th, 2016
panamburu-beach

ಮಂಗಳೂರು: ಪಣಂಬೂರ್ ಬೀಚ್‌‌ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಪ್ರಯಾಣಿಕ ಬೋಟ್ ಪಲ್ಟಿಯಾದ ಪರಿಣಾಮ ಎರಡೂವರೆ ವರ್ಷದ ಮಗು ನೀರುಪಾಲಾಗಿದ್ದಾನೆ ಎನ್ನಲಾಗಿದೆ. ಮೊಹಮ್ಮದ್ ಸದಾನ್ ನೀರುಪಾಲಾದ ಮಗು ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದುಬೈ ಉದ್ಯಮಿ ಶಮಿತ್ ಕುಟುಂಬ ಬೋಟಿನಲ್ಲಿತ್ತು. ಶಮಿತ್ ಕೊಣಾಜೆಯ ನಾಟೆಕಲ್ ನಿವಾಸಿಯಾಗಿದ್ದಾರೆ. ಶಮಿತ್ ಪುತ್ರ ಮೊಹಮ್ಮದ್ ಸಮುದ್ರಪಾಲಾಗಿದ್ದಾನೆ. ಉಳಿದವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಚ್ ಪ್ರವಾಸಿಗರ ಮೋಜಿಗಾಗಿ […]

ಮಹಾಯುದ್ಧದ ನಂತರವಷ್ಟೆ ಪಾಕಿಸ್ತಾನ ಬುದ್ಧಿ ಕಲಿಯಲಿದೆ: ಮಾತೆ ಮಾಣಿಕೇಶ್ವರಿ

Thursday, October 6th, 2016
matha-manikeshwari

ಕಲಬುರಗಿ: ಪ್ರಪಂಚದಲ್ಲಿ ಅಧರ್ಮ ಹಾಗೂ ಪಾಪ ಮಾಡುವರ ಸಂಖ್ಯೆ ಹೆಚ್ಚುತ್ತಿದೆ. ಮಾನವನ ವಿನಾಶಕ್ಕೆ ದಾರಿಯಾಗಿರುವ ಅಧರ್ಮವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ನಡೆದಾಡುವ ದೇವತೆ ಯಾನಗುಂದಿ ಮಾತೆ ಮಾಣಿಕೇಶ್ವರಿ ಅಮ್ಮನವರು ತಿಳಿಸಿದ್ದಾರೆ. ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕ್ಯಗಿರಿ ಬೆಟ್ಟದ ತಮ್ಮ ಗುಹೆಯಲ್ಲಿ ಪ್ರಥಮ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ದುಷ್ಟತನ ಮೆರೆಯುತ್ತಿದೆ. ಈ ಎಲ್ಲದರ ಪರಿಣಾಮ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವುದು ಖಚಿತವೆಂದು ಮಾಣಿಕೇಶ್ವರಿ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ನಿತ್ಯ ಹೆಚ್ಚಾಗುತ್ತಿರುವ […]

ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಅಕ್ಟೋಬರ್ 13 ರಂದು ತೆರೆಗೆ

Wednesday, October 5th, 2016
barsa-film

ಮಂಗಳೂರು: ಬೊಳ್ಳಿ ಮೂವೀಸ್ ಲಾಂಚನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಸೆನ್ಸಾರ್‌ನಲ್ಲಿ ಯು ಸರ್ಟಿಪಿಕೇಟ್ ಪಡೆದಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಬರ್ಸ ಪಾತ್ರವಾಗಿದೆ. ಇದೀಗ ಈ ಸಿನಿಮಾವನ್ನು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೆ ಭರದ ಸಿದ್ದತೆ ನಡೆಸಲಾಗಿದೆ. ಅಕ್ಟೋಬರ್ 13 ರಂದು ಕರವಳಿ ಜಿಲ್ಲೆಯಾದ್ಯಂತ ಸಿನಿಮಾತೆರೆಗೆ ಬರಲಿದೆ. ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ ಬರ್ಸ ಸಿನಿಮಾದಲ್ಲಿ ಲವ್ ಸೆಂಟಿಮೆಂಟ್, ಫೈಟ್ ಕ್ವಾಮಿಡಿ ಎಲ್ಲವೂ ಇದೆ. ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಈ ಸಿನಿಮಾದಲ್ಲಿ […]

ಹೆಬ್ಟಾವಿನ ಜತೆ ಕಾದಾಡಿ ಜೀವವುಳಿಸಿಕೊಂಡು ಸಾಹಸ ಮೆರೆದ ಬಾಲಕ ವೈಶಾಖ್‌

Wednesday, October 5th, 2016
python-attack

ಮಂಗಳೂರು: ದಾರಿಯಲ್ಲಿ ಸಾಗುತ್ತಿದ್ದಾಗ ಮೈಮೇಲೆ ಹಾರಿ ಸುತ್ತಿಕೊಳ್ಳಲಾರಂಭಿಸಿದ ಹೆಬ್ಟಾವಿನ ಜತೆ ಬಾಲಕನೋರ್ವ ಕಾದಾಡಿ ಜೀವವುಳಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಸಮೀಪದ ಕೊಳಕೆಯಲ್ಲಿ ಮಂಗಳವಾರ ನಡೆದಿದೆ. ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ 11ರ ಹರೆಯದ ವೈಶಾಖ್‌ ಸಾಹಸ ಮೆರೆದು ಪ್ರಾಣವುಳಿಸಿಕೊಂಡ ಬಾಲಕ. ಕೊಳಕೆ ಕೂಡೂರು ನಿವಾಸಿ ಸುರೇಶ್‌ ಅವರ ಪುತ್ರ ವೈಶಾಖ್‌ ಎಂದಿನಂತೆ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ, ಸಮೀಪದಲ್ಲೇ ಇರುವ ತನ್ನ ಅಜ್ಜನ ಮನೆಗೆ ತೆರಳಿದ್ದ. ಸಾಗುವ ಹಾದಿ […]

ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿ ಬಂಧನ

Wednesday, October 5th, 2016
ganja-pedler

ಮಂಗಳೂರು: ಕಳೆದ ಐದು ವರ್ಷಗಳಿಂದ ನಿರಂತರ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಜೈಲಿಗೆ ಸ್ಥಳಾಂತರಿಸಿದ್ದಾರೆ. ಬಂದರು ಅನ್ಸಾರಿ ರಸ್ತೆ ಸಿ.ಪಿ.ಸಿ. ಕಾಂಪೌಂಡ್ ಬಳಿಯ ನಿವಾಸಿ ಟಿ.ಪಿ. ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಿಂಡಿ ರಹೀಂ (41) ಬಂಧಿತ ಆರೋಪಿ. ಮಂಗಳೂರು ಪೊಲೀಸರು ಈ ರೀತಿ ಮೊದಲ ಬಾರಿಗೆ ಗೂಂಡಾ ಕಾಯ್ದೆ ಹೇರಿದ್ದು, ಇನ್ನುಳಿದ ಮಾದಕ […]

ಕೆಸ್‌‌ಆರ್‌‌ಟಿಸಿ ಬಸ್‌‌ ಬೈಕ್‌‌ಗೆ ಡಿಕ್ಕಿ ಹೊಡೆದು ಬೈಕ್‌‌ ಸವಾರ ಯುವಕ ಸಾವು

Wednesday, October 5th, 2016
ksrtc-accident

ಮಂಗಳೂರು: ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕೆಸ್‌‌ಆರ್‌‌ಟಿಸಿ ಬಸ್‌‌ ಬೈಕ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಮಣಿಹಳ್ಳ ಬಳಿ ಸಂಭವಿಸಿದೆ. ಪಿಲಾತಬೆಟ್ಟು ಗ್ರಾಮದ ಕೊಡೆಂಜಾರು ನಿವಾಸಿ ಜನಾರ್ದನ ರೈ ಎಂಬುವರ ಪುತ್ರ, ಬೈಕ್ ಸವಾರ ಸುಶಾಂತ್ ರೈ(30) ಮೃತ ಯುವಕ. ಮೃತ ಸುಶಾಂತ್ ಬೈಕ್‌ನಲ್ಲಿ ಕಾರ್ಯ ನಿಮಿತ್ತ ಬಂಟ್ವಾಳ ಕಡೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಧರ್ಮಸ್ಥಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಸ್‌‌ಆರ್‌‌ಟಿಸಿ […]

ಪಾರ್ಕಿಂಗ್ ಸ್ಥಳದಲ್ಲಿ ಮಳಿಗೆ ನಿರ್ಮಿಸಿ ಕಾನೂನು ಉಲ್ಲಂಘನೆ: ಚಂದ್ರಶೇಖರ್

Wednesday, October 5th, 2016
chandra-sekhar

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯ 194 ವಾಣಿಜ್ಯ ಕಟ್ಟಡಗಳು ಪಾರ್ಕಿಂಗ್ ಸ್ಥಳದಲ್ಲಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪೈಕಿ ನಿಯಮ ಉಲ್ಲಂಘಿಸಿರುವ 69 ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಪತ್ರದ ಮೂಲಕ ಸೂಚಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳಾವಕಾಶವಿದ್ದರೂ ಅಲ್ಲಿ ಮಳಿಗೆ ನಿರ್ಮಿಸಿ ಕಾನೂನು ಉಲ್ಲಂಘಿಸಿರುವುದು ದೃಢಪಟ್ಟಿದೆ ಎಂದರು. 69 […]

ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರ ಸಾವು

Tuesday, October 4th, 2016
accident

ಕಾರ್ಕಳ: ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹೆಬ್ರಿಯಲ್ಲಿ ನಡೆದಿದೆ. ಶಿವಪುರ ಕಾಚಿಲ ನಿವಾಸಿ, ರಿಕ್ಷಾ ಚಾಲಕ ಗುರುಪ್ರಸಾದ್ ಹಾಗೂ ವಸಂತ್ ದುರ್ಘಟನೆಯಲ್ಲಿ ಮೃತಪಟ್ಟ ಸಹೋದರರು. ಶಿವಪುರದಿಂದ ಹೆಬ್ರಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಮಿನಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗುರುಪ್ರಸಾದ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗುರುಪ್ರಸಾದ್ ಅಣ್ಣ ವಸಂತ್‌ಗೂ ಗಂಭೀರ […]