ಸ್ವತ್ಛ ಭಾರತ ಅಭಿಯಾನಕ್ಕೆ ಪ್ರತಿಯೋರ್ವ ನಾಗರಿಕನ ಸಹಕಾರ ಅಗತ್ಯ: ಅಭಿನವ್‌ ಯಾದವ್‌

Thursday, September 29th, 2016
udupi-free-city

ಉಡುಪಿ: ಭಾರತ ದೇಶವೇ 2019ರ ವೇಳೆಗೆ ಬಯಲು ಶೌಚ ಮುಕ್ತವಾಗಬೇಕು ಎಂಬುದು ಸ್ವತ್ಛ ಭಾರತ ಅಭಿಯಾನದ ಪ್ರಮುಖ ಗುರಿ. ಇದರ ಸಾಕಾರಕ್ಕೆ ಪ್ರತಿಯೋರ್ವ ನಾಗರಿಕನ ಸಹಕಾರ ಅಗತ್ಯ ಎಂದು ಸ್ವತ್ಛ ಭಾರತ ಅಭಿಯಾನದ ಮಾಪನ ಸಂಸ್ಥೆ ಕ್ವಾಲಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಮುಖ್ಯಸ್ಥ ಅಭಿನವ್‌ ಯಾದವ್‌ ಅವರು ಹೇಳಿದರು. ಸ್ವತ್ಛ ಭಾರತ ಅಭಿಯಾನದಡಿ “ಬಯಲು ಶೌಚ ಮುಕ್ತ ನಗರ’ ಎಂದು ಘೋಷಿಸಲಾಗಿರುವ ಉಡುಪಿ ನಗರಸಭೆಗೆ ಸೆ. 28ರಂದು ಪ್ರಮಾಣಪತ್ರ ಹಸ್ತಾಂತರಿಸಿ ಅವರು ಮಾತನಾಡಿದರು. ಬಯಲು ಶೌಚ ಮುಕ್ತ […]

ವಿಶ್ವ ತುಳುವೆರೆ ಆಯನೊ ಯಶಸ್ವಿಗೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭರವಸೆ

Thursday, September 29th, 2016
veerappa-moyli

ಬದಿಯಡ್ಕ: ವಿಶ್ವ ತುಳುವೆರೆ ಆಯನೊದ ಉದ್ದೇಶ ಈಡೇರಿಸುವಲ್ಲಿ ಸರ್ವ ರೀತಿಯ ಸಹಕಾರ ನೀಡುವುದಾಗಿ ಮಾಜಿ ಕೇಂದ್ರ ಸಚಿವ,ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಭರವಸೆ ನೀಡಿದರು. ವಿಶ್ವ ತುಳುವೆರೆ ಆಯನೊದ ಸಮಿತಿ ಪದಾಧಿಕಾರಿಗಳು ಮಂಗಳವಾರ ಮಂಜೇಶ್ವರದಲ್ಲಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವ ತುಳುವೆರೆ ಆಯನೊ ಚರಿತ್ರೆ ಸೃಷ್ಠಿಸಿ ತುಳು ಭಾಷೆ ಎಂಟನೇ ಪರಿಚ್ಛೆದಕ್ಕೆ ಸೇರ್ಪಡೆಗೊಳಿಸುವಲ್ಲಿ ಸಹಕಾರವಾಗಲಿ ಎಂದರು. ಈ ಸಂದರ್ಭದಲ್ಲಿ ಡಾ.ಬಿ.ಎ.ವಿವೇಕ ರೈ,ಡಾ.ಡಿ.ಕೆ.ಚೌಟ,ಮಹಾನಗರ ಪಾಲಿಕೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ,ಡಾ.ರಮಾನಂದ ಬನಾರಿ, ಎಂ.ಜೆ.ಕಿಣಿ, […]

ದ.ಕ ಜಿಲ್ಲಾ ಪೊಲೀಸರಿಂದ 5 ಮಂದಿ ಅಂತಾರಾಜ್ಯ ಕಳ್ಳರ ಬಂಧನ

Wednesday, September 28th, 2016
mangalore-police

ಮಂಗಳೂರು: ಕರ್ನಾಟಕದ ನಾನಾ ದೇವಸ್ಥಾನಗಳು ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಅಂತಾರಾಜ್ಯ ಕಳ್ಳರನ್ನು ದ.ಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಥಾಣಾದಲ್ಲಿ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನ ಸೇರಿದಂತೆ ಒಟ್ಟು 12.5 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೊನ್ನಾವರದ ಚಂದ್ರಕಾಂತ ಪೂಜಾರಿ (36), ದೊಡ್ಡಬಳ್ಳಾಪುರದ ನರಸಿಂಹ ರಾಜು (38), ಮಹಾರಾಷ್ಟ್ರ-ಥಾಣೆಯ ನವೀನ್ ಚಂದ್ರ ಬಾನ್ ಸಿಂಗ್ (21), ವಿಜಯ ಸುರೇಶ್ ಬೋನ್ಸೆ (35) […]

ಸೆ. 30 ರ ವರೆಗೆ 6000 ಕ್ಯೂಸೆಕ್ ನೀರು: ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಉಗ್ರ ಪ್ರತಿಭಟನೆ

Wednesday, September 28th, 2016
kaveri-protest

ಮೈಸೂರು: ಸೆ. 30 ರ ವರೆಗೆ ನಿತ್ಯ 6000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಮಂಗಳವಾರ ನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಿದವು. ನಗರದ ನ್ಯಾಯಾಲಯದ ಎದುರು ಕನ್ನಡ ಚಳವಳಿಗಾರರ ಸಂಘದಿಂದ ಖಾಲಿ ತಟ್ಟೆ, ಪಾತ್ರೆ, ಲೋಟಗಳನ್ನಿಡಿದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಮ್ಮ ರಾಜ್ಯದ ಶತ್ರುವಿನಂತೆ ವರ್ತಿಸುತ್ತಿದ್ದಾರೆ. ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯಲು ನೀರಿಲ್ಲ. ಆದರೂ ಸುಪ್ರೀಂ ಕೋರ್ಟ್‌ ಮೂಲಕ ಸಾಂಬಾ ಬೆಳೆಗೆ ನೀರು ಕೇಳುತ್ತಿರುವುದು […]

ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಸಹಿತ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ: ರಮಾನಾಥ ರೈ

Wednesday, September 28th, 2016
world-tourism-day

ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ದ.ಕ. ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ. ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಸಹಿತ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವೆಂದು ಸಚಿವ ಬಿ.ರಮಾನಾಥ ರೈ ಹೇಳಿದರು. ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆಯಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು. ಜಿಲ್ಲಾಧಿಕಾರಿ ಡಾ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ […]

ಕಣಚೂರು ಸಂಸ್ಥೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯಲಿದೆ: ರಮಾನಾಥ ರೈ

Wednesday, September 28th, 2016
kanachur-institution

ಉಳ್ಳಾಲ: ಕಣಚೂರು ಮೋನು ಅವರು ಶ್ರಮಜೀವಿಯಾಗಿ, ಯಶಸ್ವಿ ಉದ್ಯಮಿಯಾಗಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಕಾಲಿರಿಸಿ ಇದೀಗ ವೈದ್ಯಕೀಯ ಕಾಲೇಜು ಸ್ಥಾಪಿಸಿರುವುದು ಅವರಲ್ಲಿರುವ ಕ್ರಿಯಾಶೀಲತೆ ಮತ್ತು ಕಾರ್ಯತತ್ಪರತೆಗೆ ಸಾಕ್ಷಿ ಎಂದು ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು. ದೇರಳಕಟ್ಟೆಯ ನಾಟೆಕಲ್‌ನ ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ನ ಕ್ಯಾಂಪಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ಯಾರಾ ಮೆಡಿಕಲ್‌ ಕೋರ್ಸ್‌, ನರ್ಸಿಂಗ್‌ ಹಾಗೂ ಫಿಸಿಯೋಥೆರಪಿ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯ ಬದುಕಿನಲ್ಲಿ ಶ್ರೀಮಂತಿಕೆ, ಆಸ್ತಿ, ಸಂಪತ್ತು ಕ್ಷಣಿಕ. […]

ವ್ಯಾಪಕ ಮರಳು ಸಾಗಾಟ: 7 ವಾಹನ ವಶ

Wednesday, September 28th, 2016
sand-mafia

ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 2 ಲಾರಿ ಹಾಗೂ 1 ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 7 ಮಂದಿಯನ್ನು ಸೆರೆಹಿಡಿಯಲಾಗಿದೆ. ತಲಪಾಡಿ ಭಾಗದಿಂದ ಕಾಸರಗೋಡು ಕಡೆಗೆ ಸಾಗಿಸುತ್ತಿದ್ದ ಮರಳು ತುಂಬಿದ ಪಿಕ್‌ಅಪ್‌ನ್ನು ಸೋಮವಾರ ವಶಪಡಿಸಿದ್ದು ಚಾಲಕ ಕಡಂಬಾರ್ ನಿವಾಸಿ ಜಯರಾಜ್ (28) ಎಂಬಾತನನ್ನು ಬಂಧಿಸಲಾಗಿದೆ. ಪಿಕ್‌ಅಪ್‌ನಲ್ಲಿ ಸುಮಾರು 30 ಚೀಲ ಮರಳು ತುಂಬಿಸಿಡಲಾಗಿತ್ತು. ಇದೇವೇಳೆ ಇನ್ನೊಂದು ಮರಳು ಲಾರಿಯನ್ನು ವಶಪಡಿಸಿ ಚಾಲಕ ಮಂಗಳೂರು ನಿವಾಸಿ ಅಬ್ದುಲ್ […]

ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಆತ್ಮಹತ್ಯೆ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆ

Tuesday, September 27th, 2016
ksrtc protest

ಮಂಗಳೂರು :  ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಒಂದನೇ ಘಟಕಕ್ಕೆ ಸೇರಿದ ಮಂಗಳೂರು- ಸುಬ್ರಹ್ಮಣ್ಯ ರೂಟ್‌ನ ಬಸ್ಸಲ್ಲಿ ಚಿಲ್ಲರೆ ಹಣದ ವಿಚಾರಕ್ಕೆ ಸಂಬಂಧಿಸಿ  ಯುವತಿಯೋರ್ವಳು ಮಾಡಿದ ಆರೋಪದಿಂದ ಮನನೊಂದು ಚಲಿಸುತ್ತಿದ್ದ ಬಸ್‌ನಿಂದ ಕುಮಾರಧಾರಾ ನದಿಗೆ ಹಾರಿ ನಿರ್ವಾಹಕ ದೇವದಾಸ್ ಶೆಟ್ಟಿ(41) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಡಿಪೋ ಮುಂದೆ  ವಿವಿಧ ಸಂಘಟನೆಗಳ  ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ಕಡಬ ಠಾಣಾ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ್ದು, ಯುವತಿಯ ಹೇಳಿಕೆಯನ್ನೇ ಆಧರಿಸಿ ನಿರ್ವಾಹಕರ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ […]

ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ: ಡಾ| ಡಿ. ವೀರೇಂದ್ರ ಹೆಗ್ಗಡೆ

Tuesday, September 27th, 2016
heggade

ಬೆಳ್ತಂಗಡಿ: ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ. ಮದ್ಯ ಮನುಷ್ಯನಲ್ಲಿ ಭ್ರಮೆ ತುಂಬಿ ಪಾಪದ ಕೆಲಸಗಳನ್ನು ಮಾಡಿಸುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ಸಂಜೆ ಇಲ್ಲಿನ ಎಸ್‌ಡಿಎಂ ಕಲಾಭವನದಲ್ಲಿ ನಡೆಯುತ್ತಿರುವ 1000ನೇ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು. ಮದ್ಯವ್ಯಸನಿಗಳನ್ನು ಜಗತ್ತು ತಮಾಷೆಯ ವಸ್ತುವಾಗಿ, ಕನಿಕರ, ಅವಮಾನಕಾರಿ, ಅವಹೇಳನಕಾರಿಯಾಗಿ ನೋಡುತ್ತದೆ. ಆದ್ದರಿಂದ ಬುದ್ಧಿ ಭ್ರಮಣೆ ಮಾಡುವ, ಚಿತ್ತಚಾಂಚಲ್ಯಗೊಳಿಸುವ, ನಾಲಿಗೆ ಚಾಪಲ್ಯ ಕೆಡಿಸುವ, ಇಂದ್ರಿಯಗಳ ಹತೋಟಿ ತಪ್ಪಿಸುವ ಮದ್ಯವ್ಯವ್ಯಸನದಿಂದ ದೂರವಾಗಲು ಸ್ಥಿರತೆ ಬೇಕು ಎಂದರು. […]

ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕಂಡೆಕ್ಟರ್‌: ಇನ್ನೂ ಪತ್ತೆಯಾಗದ ಮೃತದೇಹ

Tuesday, September 27th, 2016
condacter

ಸುಬ್ರಹ್ಮಣ್ಯ: ಯುವತಿಯೊಂದಿಗಿನ ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕೆಎಸ್ಸಾರ್ಟಿಸಿ ಬಸ್‌ ಕಂಡೆಕ್ಟರ್‌ ಮಂಗಳೂರು ಗುರುಪುರ ನಿವಾಸಿ ದೇವದಾಸ್‌ (47) ಅವರಿಗಾಗಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಎರಡನೇ ದಿನವಾದ ಸೋಮವಾರವೂ ತೀವ್ರ ಶೋಧ ನಡೆಯಿತು. ಆದರೆ ದೇವದಾಸ್‌ ಅವರ ಸುಳಿವು ಲಭಿಸಿಲ್ಲ. ಸೋಮವಾರ ಮುಂಜಾನೆಯೇ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿತು. ಸಂಜೆ 6 ಗಂಟೆಯ ತನಕ ನಿರಂತರವಾಗಿ ಅಗ್ನಿ […]