ಮಂಗಳೂರು ತಾ.ಪಂ: ಅಧ್ಯಕ್ಷೆ-ರಜನಿ, ಉಪಾಧ್ಯಕ್ಷ ಪ್ರಕಾಶ್

Saturday, June 7th, 2014
Rajani-Prakash

ಮಂಗಳೂರು : ಮಂಗಳೂರು ತಾಲೂಕ್ ಪಂಚಾಯತ್ ನ ಪ್ರಸಕ್ತ ಆಡಳಿತದ 3ನೇ ಅವಧಿಯ ಅಧ್ಯಕ್ಷೆಯಾಗಿ ರಜನಿ (ಕಾಂಗ್ರೆಸ್) ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್(ಬಿಜೆಪಿ) ಆಯ್ಕೆಯಾಗಿದ್ದಾರೆ. ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾದ ರಜನಿ ಅವರು ಪಡುಮಾರ್ನಾಡು ಕ್ಷೇತ್ರ ಹಾಗೂ ಉಪಾಧ್ಯಕ್ಷ ಪ್ರಕಾಶ್ ಅವರು ಬಡಗ ಎಡಪದವು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳೂರು ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ […]

ಉಗ್ರರಿಗೆ ಹಣಕಾಸು ಪೂರೈಕೆ ಮಾಡಿದ ಆರೋಪಿ ಆಯೆಷಾ ಬಾನು ಮಗು ಆಸ್ಪತ್ರೆಗೆ ದಾಖಲು

Wednesday, June 4th, 2014
Ayesha banu

ಮಂಗಳೂರು : ಇಂಡಿಯನ್‌ ಮುಜಾಹಿದೀನ್‌ ಸದಸ್ಯರಿಗೆ ಹಣಕಾಸು ಪೂರೈಕೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಂಗಳೂರು ಮೂಲದ ಆಯೆಷಾ ಬಾನು– ಜುಬೇರ್‌ ದಂಪತಿಯ11 ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಪಂಜಿಮೊಗರಿನಲ್ಲಿರುವ ಆಯೆಷಾ ಮನೆಯ ಬಾಗಿಲಿಗೆ ಚೀಟಿ ಅಂಟಿಸಲಾಗಿದೆ. ಛತ್ತೀಸ್‌ಗಡದ ರಾಯಪುರ ಕೇಂದ್ರೀಯ ಕಾರಾಗೃಹದ ಸಿಬ್ಬಂದಿ ಆಯೆಷಾ ಬಾನು ಅವರು ನಗರದ ಪಂಜಿಮೊಗರಿನಲ್ಲಿ ಹೊಂದಿರುವ ಮನೆಯ ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದಾರೆ.ಚೀಟಿಯಲ್ಲಿ, ‘ರಾಯಪುರದ ಕೇಂದ್ರೀಯ ಕಾರಾಗೃಹ­ದಲ್ಲಿರುವ ವಿಚಾರಣಾಧೀನ ಮಹಿಳಾ ಕೈದಿ ಆಯೆಷಾ ಬಾನು ಅವರ 11 ತಿಂಗಳ […]

ಕ್ರೀಡಾ ಅಂಕಣಕಾರ ಎಸ್‌.ಜಗದೀಶ್ಚಂದ್ರ ಅಂಚನ್‌ ಸೂಟರ್‌ಪೇಟೆ ಅವರಿಗೆ ವಚನ ಸಾಹಿತ್ಯ ರಾಜ್ಯ ಪ್ರಶಸ್ತಿ

Wednesday, June 4th, 2014
Jagadish scdcc bank

ಮಂಗಳೂರು : ಬೆಂಗಳೂರಿನ ಶ್ರೀಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ವತಿಯಿಂದ ನೀಡಲಾಗುವ ಅಖಲ ಭಾರತ ವಚನ ಸಾಹಿತ್ಯ ಸಮ್ಮೇಳನದ ರಾಜ್ಯ ಮಟ್ಟದ ಪ್ರಶಸ್ತಿ ಕ್ರೀಡಾ ಅಂಕಣಕಾರ ಎಸ್‌. ಜಗದೀಶ್ಚಂದ್ರ ಅಂಚನ್‌ ಸೂಟರ್‌ಪೇಟೆ ಅವರಿಗೆ ಲಭಿಸಿದೆ. ನಗರದ ಪುರಭವನದಲ್ಲಿ ನಡೆದ ಅಖೀಲ ಭಾರತ ಮೂರನೇ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಸಮ್ಮೇಳನಾಧ್ಯಕ್ಷ ಚಿದಾನಂದ ಕಾಮತ್‌ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, […]

ಕೇಂದ್ರ ರೈಲ್ವೇ ಸಚಿವ ಸದಾನಂದ ಗೌಡರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದ ಯು.ಟಿ ಖಾದರ್

Wednesday, June 4th, 2014
UT Khader

ಮಂಗಳೂರು : ಹೊಸದಿಲ್ಲಿಯಲ್ಲಿ ರೈಲ್ವೇ ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾದ ರಾಜ್ಯ ಆರೋಗ್ಯ ಸಚಿವ ಖಾದರ್‌ ಅವರು, ಕರಾವಳಿಯ ಇತರ ರೈಲ್ವೇ ಬೇಡಿಕೆ ಈಡೇರಿಸುವಂತೆ ಹಾಗೂ ಮೆಟ್ರೋ ರೈಲು ಆರಂಭಕ್ಕೆ ಚಾಲನೆಯನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು. ಮಣಿಪಾಲ, ಮಂಗಳೂರು ಹಾಗೂ ಕೊಣಾಜೆಯನ್ನು ‘ಎಜುಕೇಶನಲ್‌ ಹಬ್‌’ ಎಂದು ಪರಿಗಣಿಸಿ ಈ ನಗರಗಳ ಮಧ್ಯೆ ಮೆಟ್ರೋ ರೈಲು ಓಡಿಸುವಂತೆ ಈ ಹಿಂದೆ ಮನವಿ ಕೂಡ ಸಲ್ಲಿಕೆಯಾಗಿತ್ತು. ರೈಲ್ವೇ ಸಚಿವರು ಕರಾವಳಿ ಜಿಲ್ಲೆಯವರೇ ಆಗಿರುವುದರಿಂದ ಈ ಬೇಡಿಕೆಯನ್ನು ಈಗ […]

ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಶ್ರೀ ಹರೀಶ್ ಆಚಾರ್ ಆಯ್ಕೆ

Tuesday, June 3rd, 2014
KMF

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಮಂಗಳೂರು ಇದರ 2014-15 ರಿಂದ ಮುಂದಿನ 5 ಸಹಕಾರಿ ವರ್ಷಗಳಿಗೆ ಅಧ್ಯಕ್ಷರಾಗಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಸುಂದರ ಗೌಡ ಇಚ್ಚಿಲ (ಉಜಿರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು) ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಹೊನ್ನಯ್ಯ ಇವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ನೂತನ ಆಡಳಿತ ಮಂಡಳಿಯ ಅಭಿನಂದನಾ ಸಮಾರಂಭವು ದ. ಕ. ಜಿಲ್ಲಾ ಕೇಂದ್ರ […]

ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ಡಿಕ್ಕಿ: ಮೂವರು ಸ್ಥಳದಲ್ಲೇ ಮೃತ

Tuesday, June 3rd, 2014
Shiradi Accident

ಮಂಗಳೂರು : ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ನಡುವೆ ಶಿರಾಡಿಯ ಅಡ್ಡಹೊಳೆ ಸಮೀಪ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ. ತೂಫಾನ್‌ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ದಾವಣಗೆರೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸುಬ್ರಮಣ್ಯ ದೇವರ ದರ್ಶನ ಪಡೆದು ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಸೋಮವಾರ ತೂಫಾನ್‌ ವಾಹನಕ್ಕೆ ಗ್ಯಾಸ್ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಮೃತಪಟ್ಟವರನ್ನು ತೂಫಾನ್ […]

ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ: ದಿನೇಶ್ ಅಮೀನ್ ಮಟ್ಟು

Sunday, June 1st, 2014
Mattu Dinesh

ಮುಂಬಯಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಛೇರಿಗೆ ಭೇಟಿ ನೀಡಿದರು. ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ-ಚಿಂತಕ, ರವಿ.ರಾ.ಅಂಚನ್, ಸಂಘದ ಸಲಹಾಗಾರ ಗ್ರೇಗರಿ ಎಲ್.ಡಿ’ಅಲ್ಮೇಡಾ ಮತ್ತು ಉದ್ಯಮಿ ಸುಧಾಕರ್ ಉಚ್ಚಿಲ್ ಅವರು ವೇದಿಕೆಯಲ್ಲಿ ಆಸೀನರಿದ್ದು, ದಿನೇಶ್ ಮಟ್ಟು […]

ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ನಾಯ್ಕ ರಿಗೆ ಅಭಿನಂದನೆ

Saturday, May 31st, 2014
Naika

ಬಂಟ್ವಾಳ: 20ತಿಂಗಳ ಕಾಲ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ನಾಯ್ಕ್ ಅವರನ್ನು ತಾಲೂಕು ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಜಿಲ್ಲಾ ಉಪಕಾರ್ಯದರ್ಶಿ ಉಮೇಶ್, ತಾ.ಪಂ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ, ಉಪಾಧ್ಯಕ್ಷ ಆನಂದ ಎ.ಶಂಭೂರು, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರೀಯಂ ಮಿರಾಂಡಾ, ಜಿಲ್ಲಾ ಪಂ.ಅಧಿಕಾರಿ ಮಂಜುಳಾ, ಮ್ಯಾನೇಜರ್ ನಾಗೇಶ್, ಗೂಕುಲದಾಸ ಭಕ್ತ, ಇಂಜಿನಿಯರ್ ಗಿರೀಶ್ ಮಂಜು ವಿಟ್ಲ, ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

ನಳಿನ್ ಕುಮಾರ್ ಹಾಗು ಮೋದಿ ಜಯಗಳಿಸಿದ್ದಕ್ಕೆ ಕಟೀಲಿಗೆ ಪಾದಯಾತ್ರೆ ಹೊರಟ ಯುವಕ

Saturday, May 31st, 2014
Padayatre

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ಮೋದಿ ಜಯಗಳಿಸಿದರೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಪಕ್ಷದ ಸಕ್ರಿಯ ಯುವ ಕಾರ್ಯಕರ್ತ ಅವಿಷಿತ್ ರೈ ಶುಕ್ರವಾರ ಸಂಜೆ ತಮ್ಮ ಹರಕೆಯನ್ನು ಪೂರೈಸಲು ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಿದರು. ನಗರದ ಅವಿಷಿತ್ ರೈ ಬಿಜೆಪಿ ಪಕ್ಷ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಕಟೀಲ್ ಹಾಗು ಮೋದಿ ಜಯಗಳಿಸಿದಲ್ಲಿ ಪಾದಯಾತ್ರೆ ಹೊರಡುವುದಾಗಿ […]

ಕೇಂದ್ರ ರೈಲ್ವೇ ಮಂತ್ರಿ ಡಿ.ವಿ ಸದಾನಂದ ಗೌಡರಿಗೆ ಅಭಿನಂದಿಸಿದ ಕೆ.ಸಿ ಶೆಟ್ಟಿ

Friday, May 30th, 2014
KC Shetty

ಮುಂಬಯಿ : ನಗರದ ಹೆಸರಾಂತ ಕೈಗಾರಿಕೋದ್ಯಮಿ, ಲುಮೆನ್ಸ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಕುತ್ಪಾಡಿ ದೊಡ್ಡಮನೆ ಪಾಟೇಲರ ಮನೆತನದ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಅವರು ತಮ್ಮ ಪರಿವಾರ ಮಿತ್ರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿ ಭರ್ಜರಿ ಮತಗಳಿಂದ ಚುನಾಯಿತರಾಗಿ ಇದೀಗ ಎನ್ಡಿಎ ಸರಕಾರದ ಭಾರತ ರಾಷ್ಟ್ರದ 15ನೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾಗಿ ಆಯ್ಕೆಯಾದ ಡಿ.ವಿ ಸದಾನಂದ ಗೌಡ ಅವರನ್ನು […]