ಮಹಾರಾಷ್ಟ್ರದ ಅಯೋಧ್ಯನಗರಿ ಪ್ರಸಿದ್ಧಿ ವಡಾಲದ ಶ್ರೀರಾಮ ಮಂದಿರದಲ್ಲಿ ಸಂಭಮೋಲ್ಲಾಸದ ಶ್ರೀ ರಾಮ ನವಮಿ-ರಥೋತ್ಸವ ಸಂಭ್ರಮ

Thursday, April 10th, 2014
Rama Navami

ಮುಂಬಯಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಇದರ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ಮಂಗಳವಾರ ಮರ್ಯಾದ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವವನ್ನು ವಿಜೃಂಭನೆಯಿಂದ ಸಂಭ್ರಮಿಸಲಾಯಿತು. ವಡಾಲದ ಕತ್ರಾಕ್ ರಸ್ತೆಯಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದಲ್ಲಿ ಕಳೆದ ನಿರಂತರ ಹತ್ತು ದಿನಗಳಿಂದ ದೇವತಾ ಪ್ರಾರ್ಥನೆ, ಅಖಂಡ ರಾಮ ನಾಮ ಸಂಕೀರ್ತನೆ, ಅಭಿಷೇಕ, ಅಷ್ಟವದಾನ ಸೇವೆಗಳೊಂದಿಗೆ ರಾಮನವಮಿ ಸಂಭ್ರಮಕ್ಕೆ ಪೂರ್ಣ ಪ್ರಮಾಣದಲ್ಲಿ […]

ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ಉದ್ಫಾಟನೆ

Wednesday, April 9th, 2014
Congress Web

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಉದ್ಘಾಟನಾ ಸಮಾರಂಭವು ಪಕ್ಷದ ಚುನಾವಣಾ ಪ್ರಚಾರ ಕಛೇರಿಯಲ್ಲಿ ಮಂಗಳವಾರ ಸಂಜೆ ನಡೆಯಿತು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ವೆಬ್ ಸೈಟ್ ಉದ್ಫಾಟನೆ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರ ಹಾದಿ ತಪ್ಪಿಸುವ ಷಡ್ಯಂತ್ರಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜನರಿಗೆ ವಸ್ತುಸ್ಥಿತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾವಂತ ಯುವ ಸಮೂಹದಲ್ಲಿ ಮತದಾನದ ಜನಜಾಗೃತಿ ಮೂಡಿಸುವುದು. ಪಕ್ಷದ ಧ್ಯೇಯ, ಧೋರಣೆ, […]

ಯಾರು ಹಿತವರು ನಮಗೆ ಈ ಮೂವರೊಳಗೆ

Tuesday, April 8th, 2014
3 candidate

ಮಂಗಳೂರು : 16 ಲಕ್ಷ ಮತದಾರರಿರುವ ದಕ್ಷಿಣ ಕನ್ನಡ ಜಿಲ್ಲೆ ಮುಖ್ಯ ಪಕ್ಷಗಳಿಂದ ಬದಲಾವಣೆಯ ಆಶೆಯನ್ನು ಇಡಬಾರದು. ಏಕೆಂದರೆ, ಕಾಂಗ್ರೆಸ್ನ ಅಭ್ಯರ್ಥಿ ಸನ್ಮಾನ್ಯ ಜನಾರ್ಧನ ಪೂಜಾರಿಯವರು 8 ಸಲ, ಈ ಕ್ಷೇತ್ರದಿಂದ ಅವರ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ 4 ಸಲ ಗೆದ್ದಿದ್ದಾರೆ, 4 ಸಲ ಸೋತಿದ್ದಾರೆ. ಇನ್ನೊಂದು 4 ಸಲ ಅವರನ್ನು ಅವರ ಪಕ್ಷ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ. ಹಾಗಾದರೆ ಈ ಮಹಾನುಭಾವರು 8 ಸಲ ಪಾರ್ಲಿಮೆಂಟಿನಲ್ಲಿ ದಕ್ಷಿಣಕನ್ನಡದ ಪ್ರತಿನಿಧಿಯಾಗಿದ್ದರು. ಇವರು 80ರ ಅಂಚಿನಲ್ಲಿದ್ದಾರೆ. ನನ್ನ […]

ಪತ್ರಕರ್ತರ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

Monday, April 7th, 2014
Indiana

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂಡಿಯಾನ ಹಾಸ್ಟಿಟಲ್ ಸಹಯೋಗದಲ್ಲಿ ಪತ್ರಕರ್ತರಿಗೆ ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂಡಿಯಾನ ಹಾಸ್ಪಿಟಲ್ನ ಅಧ್ಯಕ್ಷ ಡಾ.ಆಲಿ ಕುಂಬ್ಳೆ ಸೋಮವಾರ ಉದ್ಘಾಟಿಸಿದರು. ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯ ಸುರಕ್ಷತೆ ಬಗ್ಗೆ ಗಮನ ಹರಿಸುವುದು ಅವಶ್ಯ. ಕಾಯಿಲೆ ಗುಣ ಪಡಿಸುವುದಕ್ಕಿಂತ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂಡಿಯಾನ ಆಸ್ಪತ್ರೆ ಪತ್ರಕರ್ತರಿಗೆ ಈ […]

ಮಂಗಳೂರು ಬಿಷಪ್ ರನ್ನು ಬೇಟಿ ಮಾಡಿದ ಕಾಸರಗೋಡು ಲೋಕಸಭಾ ಅಭ್ಯರ್ಥಿ ಸಿದ್ದೀಕ್

Monday, April 7th, 2014
Siddiq Kasargod

ಮಂಗಳೂರು : ಕಾಸರಗೋಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಿದ್ದೀಕ್ ರವರು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರು ಬಿಷಪ್ ಡಾ. ಅಲೋಸಿಯಸ್ ಪೌಲ್ ಡಿ.ಸೋಜರವರನ್ನು ಮಂಗಳೂರು ಬಿಷಪ್ ಹೌಸ್ನಲ್ಲಿ ಭೇಟಿಯಾಗಿ ಅವರ ಆಶೀರ್ವಚನ ಪಡೆದರು. ಅವರೊಂದಿಗೆ ಕೇರಳ ಸರಕಾರದ ಗ್ರಾಮೀಣವೃದ್ಧಿ, ಸಂಸ್ಕೃತಿ, ಯೋಜನೆ ಮತ್ತು ಎನ್.ಆರ್.ಐ. ಸಚಿವರಾದ ಶ್ರೀ ಕೆ.ಸಿ.ಜೋಸೆಫ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ, ಕಾಸರಗೋಡು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀಧರನ್ ಮೊದಲಾದವರು ಉಪಸ್ಥಿತರಿದದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ವಿನೂತನ ರೀತಿಯಲ್ಲಿ ಮತದಾರರ ಜಾಗೃತಿ

Monday, April 7th, 2014
Milk Federation

ಮಂಗಳೂರು : ಲೋಕಸಭಾಚುನಾವಣೆ 2014 ರಅಂಗವಾಗಿ ಮತದಾರರನ್ನು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣಕನ್ನಡ ಹಾಲು ಒಕ್ಕೂಟವು ನಂದಿನಿ ಹಸುವಿನ ಹಾಲಿನ ಪ್ಯಾಕೆಟ್ ಗಳ ಮೇಲೆ ಜಾಗೃತಿ ಸಂದೇಶವನ್ನುದಿನಾಂಕ 02-04-2014 ರಿಂದ ಮುದ್ರಿಸುತ್ತಿದೆ. ಜಿಲ್ಲೆಯಸಾರ್ವಜನಿಕರಿಗೆಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ sveep ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದಿನವಹಿ ಸುಮಾರು 4,32,000 ಪ್ಯಾಕೆಟ್ ಗಳಲ್ಲಿ ಚುನಾವಣೆ ಮುಗಿಯುವತನಕ ಈ ಜಾಗೃತಿ ಸಂದೇಶ ಮೂಡಿ ಬರಲಿದೆ. ಅಲ್ಲದೆ, ದಕ್ಷಿಣಕನ್ನಡ ಹಾಲು ಒಕ್ಕೂಟದ ಆಡಳಿತ ಮಂಡಲಿ […]

ಬಾಬರಿ ಮಸೀದಿ ಧ್ವಂಸ ಪೂರ್ವನಿಯೋಜಿತ: ಕೋಬ್ರಾ ಪೋಸ್ಟ್ ಸ್ಟಿಂಗ್

Friday, April 4th, 2014
ಬಾಬರಿ ಮಸೀದಿ ಧ್ವಂಸ ಪೂರ್ವನಿಯೋಜಿತ: ಕೋಬ್ರಾ ಪೋಸ್ಟ್ ಸ್ಟಿಂಗ್

ಹೊಸದಿಲ್ಲಿ : ಬಾಬರಿ ಮಸೀದಿ ಧ್ವಂಸವು ಪೂರ್ವನಿಯೋಜಿತ ಎಂದು ಕೋಬ್ರಾಪೋಸ್ಟ್ ಬಿಡುಗಡೆ ಮಾಡಿರುವ ಸ್ಟಿಂಗ್ ನ ಸಿ.ಡಿ.ಯಿಂದ ಬಹಿರಂಗವಾಗಿದೆ. ಆದರೆ ಲೋಕಸಭಾ ಚುನಾವಣೆಗೆ ಮೊದಲು ಈ ಸಿ.ಡಿ. ಬಿಡುಗಡೆ ಬಗ್ಗೆ ಹಲವಾರು ಸಂಶಯ ಹುಟ್ಟುಹಾಕಿದೆ. ಬಾಬರಿ ಮಸೀದಿ ಧ್ವಂಸದ ಬಗ್ಗೆ ಕೋಬ್ರಾ ಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇದು ಪೂರ್ವನಿಯೋಜಿತವಾಗಿ ನಡೆಸಿರುವ ಕೃತ್ಯ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಆಗಿನ ಪ್ರಧಾನಿ ನರಸಿಂಹ ರಾವ್, ಎಲ್. ಕೆ. ಅಡ್ವಾಣಿ ಮೊದಲಾದವರಿಗೆ ಇದರ ಬಗ್ಗೆ ಮಾಹಿತಿ […]

ಡಾ| ಹೆಗ್ಗಡೆಯವರಿದ ಗಿನ್ನೆಸ್‌ ದಾಖಲೆ ಪತ್ರ ಪ್ರದಾನ

Friday, April 4th, 2014
ಡಾ| ಹೆಗ್ಗಡೆಯವರಿದ ಗಿನ್ನೆಸ್‌ ದಾಖಲೆ ಪತ್ರ ಪ್ರದಾನ

ಬೆಂಗಳೂರು: ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ಏಕಕಾಲದಲ್ಲಿ ಅತಿ ಹೆಚ್ಚು ಯೋಗಾಸನ ಪ್ರದರ್ಶನ ಕಾರ್ಯಕ್ರಮ ಗಿನ್ನೆಸ್‌ ವಿಶ್ವದಾಖಲೆಗೆ ಸೇರ್ಪಡೆಗೊಂಡ ಪ್ರಯುಕ್ತ ಗುರುವಾರ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಪಾಲರು ಟ್ರಸ್ಟ್‌ನ ಅಧ್ಯಕ್ಷ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರಿಗೆ ಗಿನ್ನೆಸ್‌ ದಾಖಲೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಯೋಗಕ್ಕೆ ಸುದೀರ್ಘ‌ ಪರಂಪರೆ ಇದೆ. ಇಡೀ ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ. ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ಯೋಗಾಭ್ಯಾಸ ಉಪಯುಕ್ತ. ಆದರೆ, ಇತೀಚಿನ ದಿನಗಳಲ್ಲಿ ಯೋಗಾಭ್ಯಾಸವನ್ನು ಹೊಟ್ಟೆಪಾಡಿನ ವೃತ್ತಿ ಮಾಡಿಕೊಂಡಿರುವ ಕೆಲವು ನಕಲಿ […]

ನನ್ನ ಹೇಳಿಕೆಯನ್ನು ತಿರುಚಿದ್ದು ಮಾಧ್ಯಮಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ

Thursday, April 3rd, 2014
ನನ್ನ ಹೇಳಿಕೆಯನ್ನು ತಿರುಚಿದ್ದು ಮಾಧ್ಯಮಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರೈತ ವಿಠಲ್ ಅರಬಾವಿ ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಉಲ್ಟಾ ಹೊಡೆದಿದ್ದಾರೆ. ನಾನು ರೈತನ ಸಾವಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದೇ, ಇದನ್ನು ಮಾಧ್ಯಮಗಳು ತಿರುಚಿವೆ ಎಂದು ಹೇಳಿದ್ದಾರೆ. ರೈತ ವಿಠಲ್ ಅರಬಾವಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ನಾನು ರೈತನ ಸಾವಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದೇ. ಸದ್ಯ ವಿಠಲ್ ಅರಬಾವಿ ಆತ್ಮಹತ್ಯೆ […]

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎ 4ಕ್ಕೆ ಮಂಗಳೂರಿಗೆ

Thursday, April 3rd, 2014
ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಎ 4ಕ್ಕೆ ಮಂಗಳೂರಿಗೆ

ಮಂಗಳೂರು: ಲೋಕ ಸಭಾ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಮಂಗಳೂರಿಗೆ ಎ. 4ರಂದು ಭೇಟಿ ನೀಡಲಿದ್ದಾರೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಐವನ್‌ ಡಿ’ಸೋಜಾ ಬುಧವಾರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌, ದಿಗ್ವಿಜಯ ಸಿಂಗ್‌ ಸಹಿತ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರು  ಭಾಗವಹಿಸಲಿದ್ದಾರೆ .  ರಾಹುಲ್‌ ಗಾಂಧಿ ಅವರು ಮಧ್ಯಾಹ್ನ 3 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ 4 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ […]