ಸರ್ಕಾರದಿಂದ ಚಿಕಿತ್ಸಾ ವೆಚ್ಚ ಪಾವತಿ: ಉಮಾಶ್ರೀ

Saturday, March 1st, 2014
Umashree

ಬೆಂಗಳೂರು: ರಂಗಕರ್ಮಿ ಮತ್ತು ಹಿರಿಯ ಚಿತ್ರ ನಟ ಸಿ.ಆರ್. ಸಿಂಹ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಿಂಹ ಅವರ ಇದುವರೆಗಿನ ವೈದ್ಯ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಹೇಳಿದ್ದಾರೆ. ಸಿಂಹ ಅವರ ನಿಧನ ವಾರ್ತೆ ಕೇಳಿ ನನಗೆ ದಿಗ್ಭ್ರಮೆಯಾಗಿದೆ. ಅವರ ಅಗಲಿಕೆಯಿಂದ ಕನ್ನಡ ಕಲಾ ಜಗತ್ತು ಒಬ್ಬ ಮೇರು ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ. ನಟರಂಗದ ಮೂಲಕ ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿದ್ದ ಸಿಂಹ, ಕನ್ನಡ ಚಿತ್ರರಂಗದಲ್ಲಿ […]

ಮಾರ್ಚ್8 ರಂದು ಆಕಾಂಕ್ಷಾ ಚಿತ್ರಕಲಾ ಪ್ರದರ್ಶನ

Saturday, March 1st, 2014
Art-Exhibition

ಬೆಂಗಳೂರು: ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 50 ಮಹಿಳೆಯರ  ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮಾರ್ಚ್ 8, 2014 ಸಂಜೆ 3 ಗಂಟೆಗೆ ಡಾ. ಚೂಡಾಮಣಿ ನಂದಗೋಪಾಲ್ (ಡೀನ್- ಹ್ಯುಮಾನಿಟೀಸ್ ಆ್ಯಂಡ್ ಸೋಷ್ಯಲ್ ಸಯನ್ಸ್ , ಜೈನ್ ಯುನಿವರ್ಸಿಟಿ) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಪುಷ್ಪಾ ದ್ರಾವಿಡ್(ಖ್ಯಾತ ಕಲಾವಿದೆ), ಡಾ. ಜಯಾ ನರೇಂದ್ರ ( ಖ್ಯಾತ ಸ್ತ್ರೀರೋಗ ತಜ್ಞೆ), ಪದ್ಮಶ್ರೀ ಶಶಿ ದೇಶಪಾಂಡೆ ( ಖ್ಯಾತ ಸಾಹಿತಿ), ಅಶ್ವಿನಿ ನಾಚಪ್ಪ ( […]

ಹೆಚ್ಚಿನ ಚಿಕಿತ್ಸೆಗಾಗಿ ನಟ ಅಂಬರೀಷ್ ಸಿಂಗಾಪುರಕ್ಕೆ ಶಿಫ್ಟ್

Saturday, March 1st, 2014
Ambarish

ಬೆಂಗಳೂರು: ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಿಂಗಾಪುರಕ್ಕೆ ಶನಿವಾರ ಸ್ಥಳಾಂತರಿಸಲಾಗಿದೆ. ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲು ಖ್ಯಾತ ನಟ ಚಿತ್ರನಟ ರಜನಿಕಾಂತ್ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಷ್ ಅವರನ್ನು ಇಂದು ಬೆಳಗ್ಗೆ 6.45ರ ಸುಮಾರಿಗೆ ವಿಕ್ರಂ ಆಸ್ಪತ್ರೆಯಿಂದ ಸಿಂಗಾಪುರಕ್ಕೆ ಕರೆದೊಯ್ಯೂಲಾಗಿದೆ. ಅಂಬರೀಷ್ ಅವರ ಜೊತೆಗೆ ಪತ್ನಿ ಸುಮಲತಾ, ಹಾಗೂ ವಿಕ್ರಂ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಇಂದು ಬೆಳಗ್ಗೆ ವಿಶೇಷ […]

ಚುನಾವಣೆ ಹೊಸ್ತಿಲಲ್ಲಿ ಭರವಸೆಗಳ ಸುಗ್ಗಿ, ಸರ್ಕಾರಿ ನೌಕರ, ಪಿಂಚಣಿದಾರರೇ ಟಾರ್ಗೆಟ್, ಇದು ಕೊಡುಗೈ ಸಂಪುಟ

Saturday, March 1st, 2014
K.H.-Muniyappa

ನವದೆಹಲಿ: ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯುಪಿಎ ಸರ್ಕಾರ ತನ್ನ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಮತದಾರರ ಓಲೈಕೆಗೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.10ರಷ್ಟು ಹೆಚ್ಚಳ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ 54 ಕೇಂದ್ರೀಯ ವಿದ್ಯಾಲಯ ಹಾಗೂ 3,500 ಮಾದರಿ ಶಾಲೆ, ಕೋಲಾರದಲ್ಲಿ ರೈಲು ಬೋಗಿ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸಿದೆ. ಕೇಂದ್ರ ಸರ್ಕಾರಿ ನೌಕರರ ಓಲೈಕೆ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ನೌಕರರ ತುಟ್ಟಿ […]

ಖ್ಯಾತ ನಟ,ರಂಗಕರ್ಮಿ ಸಿ.ಆರ್.ಸಿಂಹ ವಿಧಿವಶ

Friday, February 28th, 2014
C.R.Simha

ಬೆಂಗಳೂರು: ಖ್ಯಾತ ಚಿತ್ರನಟ ಮತ್ತು ರಂಗಕರ್ಮಿ ಸಿ.ಆರ್.ಸಿಂಹ ಅವರು ವಿಧಿವಶರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸಿ.ಆರ್.ಸಿಂಹ ಅವರು ಬೆಂಗಳೂರಿನ ಜಯನಗರದಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಿಂಹ ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರನ್ನು ಜಯನಗರದ ರಾಗಿಗುಡ್ಡದ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖ್ಯಾತ ನಟ ಶ್ರೀನಾಥ್ ಅವರ ಸಹೋದರ […]

ಸದ್ಯಕ್ಕೆ ಅಂಬರೀಷ್ ಸಿಂಗಾಪುರಕ್ಕೆ ಸ್ಥಳಾಂತರ ಇಲ್ಲ: ಡಾ.ಗುಲೇರಿಯಾ

Friday, February 28th, 2014
Ambarish

ಬೆಂಗಳೂರು: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ಹಿರಿಯ ನಟ, ವಸತಿ ಸಚಿವ ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ನಿರ್ಧಾರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ರಣದೀಪ್ ಗುಲೇರಿಯಾ ಅವರು ಶುಕ್ರವಾರ ಹೇಳಿದ್ದಾರೆ. ಅಂಬರೀಷ್ ಚಿಕಿತ್ಸೆ ಪಡೆಯುತ್ತಿರುವ ವಿಕ್ರಂ ಆಸ್ಪತ್ರೆಗೆ ಭೇಟಿ, ಅಂಬಿ ಆರೋಗ್ಯ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಲೇರಿಯಾ, ಸಚಿವ ಅಂಬರೀಷ್ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಬಗ್ಗೆ ಇನ್ನು ಕೆಲವು ವರದಿಗಳು ಬರಬೇಕಿದೆ. […]

ಶಿವ ಧ್ಯಾನದಿಂದ ದೋಷ ನಿವಾರಣೆ: ಡಾ. ಹೆಗ್ಗಡೆ

Friday, February 28th, 2014
Dr.-Veerendra-Heggade

ಬೆಳ್ತಂಗಡಿ: ಶಿವ ಧ್ಯಾನದಿಂದ ಮಂಗಳ ಕಾರ್ಯಗಳು ನಡೆದು ದೋಷಗಳು ನಿವಾರಣೆಯಾಗುತ್ತವೆ. ಸಾಧಕನಿಗೆ ಶಿವ ಒಲಿಯುತ್ತಾನೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಗುರುವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣದ ಕಾರ್ಯಕ್ಕೆ ಚಾಲನೆ ನೀಡಿ ಅವರು ಸಂದೇಶ ನೀಡಿದರು. ಹಿಂದಿನ ಕಾಲದಲ್ಲಿ ದೇವರ ದರ್ಶನಕ್ಕೆ ಬರುವುದು ಕಷ್ಟಕರವಾಗಿತ್ತು. ಪಾದಯಾತ್ರೆ ಮೂಲಕವೋ, ರೈಲುಗಳ ಮೂಲಕವೋ ಬರಬೇಕಾಗಿತ್ತು. ಅದಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ವರ್ಷಗಳಿಂದ ಕೂಡಿಡಬೇಕಾಗಿತ್ತು. ಹೀಗೆ ಕಷ್ಟಪಟ್ಟು ಬಂದ ನಂತರ ಮಾಡಿದ ದೇವರ ದರ್ಶನದಿಂದ ಅಪಾರ […]

ನಾಳೆಯಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ: ರೈ

Friday, February 28th, 2014
Ramanda-Rai

ಬಂಟ್ವಾಳ: ಮಾ. 1ರಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ ನಡೆಸಲಾಗುವುದು. ಅರ್ಹ ಎಂಡೋ ಸಂತ್ರಸ್ತರನ್ನು ಪತ್ತೆ ಹಚ್ಚಿ ಅವರಿಗೂ ಸರ್ಕಾರದ ಸೌಲಭ್ಯ ಒದಗಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಇದರ ಆಶ್ರಯದಲ್ಲಿ ಗುರುವಾರ ಮಂಚಿಯ ಲಯನ್ಸ್ ಮಂದಿರದಲ್ಲಿ ನಡೆದ ಎಂಡೋ ಸಂತ್ರಸ್ತರ ಮಿತವೇತನದ (ಸ್ಟೈಫಂಡ್) ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಎಂಡೋ ಸಂತ್ರಸ್ತರಿಗೆ ಆದೇಶ ಪತ್ರ ವಿತರಿಸಿ […]

ಎಫ್‌ಡಿಐ, ಜಿಎಸ್‌ಟಿ ಇರಲಿ ಮಾರಕ ಕಾನೂನು ತೊಲಗಲಿ

Friday, February 28th, 2014
Narendra-Modi

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಪಕ್ಷದ ಆರ್ಥಿಕ ನೀತಿಯನ್ನು ಬಹಿರಂಗಪಡಿಸಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರಕು ಹಾಗೂ ಸೇವೆಗಳ ತೆರಿಗೆ(ಜಿಎಸ್‌ಟಿ) ಪಕ್ಷದ ವಿರೋಧವಿಲ್ಲ ಎಂದಿದ್ದಾರೆ. ಜಿಎಸ್‌ಟಿ ಜಾರಿಗೆ ಸಂಬಂಧಿಸಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಇದರ ಅನುಷ್ಠಾನಕ್ಕೆ ಬೇಕಾದ ಪೂರ್ವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್‌ಟಿ ಜಾರಿಗೂ ಮುನ್ನ ಮಾಹಿತಿ ತಂತ್ರಜ್ಞಾನ ಎಲ್ಲೆಡೆ ಲಭ್ಯವಾಗಬೇಕಿದೆ. ಜತೆಗೆ, ರಾಜ್ಯ ಸರ್ಕಾರಗಳಿಗೆ ಹಣಕಾಸಿಗೆ ಸಂಬಂಧಿಸಿ ಒಂದಷ್ಟು ಕಳವಳಗಳಿವೆ. […]

ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಬಂಧನ

Friday, February 28th, 2014
Subrata-Roy

ನವದೆಹಲಿ: ಸಹಾರಾ ಸಂಸ್ಥೆಯ ಮುಖ್ಯಸ್ಥ ಸುಬ್ರತಾ ರಾಯ್ ಅವರನ್ನು ಲಖನೌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಳೆದ ಬುಧವಾರ ರಾಯ್‌ನನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಲಖನೌ ಪೊಲೀಸರನ್ನು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹೂಡಿಕೆದಾರರಿಗೆ 20 ಸಾವಿರ ಕೋಟಿ ರುಪಾಯಿ ಮರುಪಾವತಿ ಮಾಡದ ಪ್ರಕರಣ ಸಂಬಂಧ ಕೋರ್ಟ್ ಮುಂದೆ ಹಾಜರಾಗುವಲ್ಲಿ ವಿಫಲರಾಗಿದ್ದ ರಾಯ್‌ನನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ರಾಯ್‌ರನ್ನು ಬಂಧಿಸಿ ಮಾರ್ಚ್ 4ರ ಮಧ್ಯಾಹ್ನ 2 ಗಂಟೆಗೆ […]