ಟಿ.ವಿ. ರಮಣ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ವಿತರಣೆ

Tuesday, September 3rd, 2013
deshpande

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯಿಂದ ವಿವಿಧ ಶೈಕ್ಷಣಿಕ ಶ್ರೇಣಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಆರ್‌.ವಿ. ದೇಶಪಾಂಡೆ ವಿದ್ಯಾರ್ಥಿವೇತನಗಳನ್ನು ವಿತರಿಸಿದರು. ವಿದ್ಯಾರ್ಥಿಗಳಲ್ಲಿ ನಾವೀನ್ಯತೆಗೆ (ಇನೋವೆಶನ್‌) ಉತ್ತೇಜನ ನೀಡಲು ಸರಕಾರ ಕ್ರಮ ಕೈಗೊಂಡಿದ್ದು ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಪೋತ್ಸಾಹಧನವಾಗಿ 5 ಕೋ.ರೂ. ಬಿಡುಗಡೆ […]

ದ.ಕ. ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಯುಪಿಎ ಸರಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ

Tuesday, September 3rd, 2013
Bjp

ಮಂಗಳೂರು : ಕೇಂದ್ರದ ಯುಪಿಎ ಸರಕಾರವು ನಿರಂತರವಾಗಿ ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳನ್ನು ಏರಿಸುವ ಮೂಲಕ ಜನಸಾಮಾನ್ಯರ ದೈನಂದಿನ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಜನವಿರೋಧಿ ನೀತಿಯನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೇಂದ್ರದ ಯುಪಿಎ ಸರಕಾರದ ಅಸಮರ್ಪಕವಾದ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆಯೆದುರು ರೂಪಾಯಿಯ ಮೌಲ್ಯ ನಿರಂತರ ಅಪಮೌಲ್ಯಕ್ಕೀಡಾಗುತ್ತಿದೆ. ಇದರಿಂದಾಗಿ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಸರಕಾರ ರೂಪಾಯಿಯ ಮೌಲ್ಯ […]

ಎಪಿಎಲ್-ಬಿಪಿಎಲ್ ಬೇದ ಬೇಡ ಎಲ್ಲರಿಗೂ ತಿಂಗಳಿಗೆ 1.00. ದರದಲ್ಲಿ 35 ಕೆ.ಜಿ. ಅಕ್ಕಿ ನೀಡಿ : ಸಿಪಿಐ(ಎಂ)

Monday, September 2nd, 2013
ration card problem

ಮಂಗಳೂರು : ಸಿಪಿಐ(ಎಂ) ಮಂಗಳೂರು ನಗರ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ ರೇಶನ್ ಅವ್ಯವಸ್ಥೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಯಿತು. ರೇಶನ್ ಪದ್ಧತಿಯಲ್ಲಿ ಎಪಿಎಲ್-ಬಿಪಿಎಲ್ ಭೇದ ಸಲ್ಲದು, ಎಲ್ಲಾ ಕುಟುಂಬಗಳಿಗೂ ತಿಂಗಳಿಗೆ 1.00. ದರದಲ್ಲಿ 35 ಕೆ.ಜಿ. ಅಕ್ಕಿ ವಿತರಣೆಯಾಗಬೇಕು ಎಂದು ಸಿಪಿಐ(ಎಂ) ಮಂಗಳೂರು ನಗರ ಸಮಿತಿಯ ಬಿ.ಮಾದವ ಹೇಳಿದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು ಹೊಸ ರೇಶನ್ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ […]

ವೇಣೂರಿನಲ್ಲಿ ಬಚ್ಚಲು ಮನೆಯಲ್ಲಿ ಗೋಮಾಂಸ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Monday, September 2nd, 2013
BANTWAL

ಬೆಳ್ತಂಗಡಿ : ಬಚ್ಚಲು ಮನೆಯಲ್ಲಿ ಗೋಮಾಂಸದ ಪ್ಯಾಕೆಟ್‌ಗಳನ್ನು ತಯಾರಿ ಮಾಡಿ ಸುತ್ತಲಿನ ಹಳ್ಳಿಗಳಿಗೆ ಅವ್ಯಾಹತವಾಗಿ ಸರಬರಾಜು ಮಾಡುತ್ತಿದ್ದ ಕಾಶಿಪಟ್ಣದ ಮುಂಗುಲ್‌ದೋಡಿ ನಿವಾಸಿ ಶಬೀರ್‌ (34)  ಎಂಬಾತನನ್ನು ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ  ಪೊಲೀಸರ ವಶಕ್ಕೆ ಒಪ್ಪಿಸಿದ  ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಶಿಪಟ್ಣದಲ್ಲಿ  ರವಿವಾರ ನಡೆದಿದೆ. ಆರೋಪಿ ಶಬೀರ್‌ ಮನೆಯ ಸ್ನಾನದ ಮನೆಯಲ್ಲಿ ಗೋಮಾಂಸ ಸಜ್ಜುಗೊಳಿಸುತ್ತಿದ್ದ. ಮನೆಯವರು ಅಲ್ಲದೇ ಲತೀಫ್‌, ಮೊದಿನ್‌ ಹಾಗೂ ಹಮೀದ್‌ ಎಂಬವರ ಸಹಾಯದಿಂದ ಹಳ್ಳಿಗಳಿಗೆ ಸರಬರಾಜು ಮಾಡುತಿದ್ದ ಎನ್ನಲಾಗಿದೆ. ಲತೀಫ್‌ನ ಬೈಕನ್ನು […]

ಹೈಮಾಸ್ಟ್ ದ್ವೀಪ ಉದ್ಘಾಟಿಸಿದ ಶಾಸಕ ಲೋಬೊ

Monday, September 2nd, 2013
Dalit-leaders

ಮಂಗಳೂರು: ಜನರ ಬೇಡಿಕೆ ಹಾಗೂ ಆಶೋತ್ತರಗಳನ್ನು ನಿರಂತರವಾಗಿ ಸ್ಪಂದಿಸುವುದು ನಮ್ಮ ಧರ್ಮವಾಗಿದೆ ಈ ಊರಿನ ಅಭಿವೃದ್ದಿಗೆ ಸದಾ ಚಿಂತಿಸಿ ಅದಕ್ಕೆ ಪೂರಕವಾಗಿರುವ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ದೇವಮಾತೆ ಇಗರ್ಜಿ ಮರಿಯಗಿರಿ ಶಕ್ತಿನಗರ ಇದರ ಸಮೀಪ  ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ಹೈಮಾಸ್ಟ್ ದ್ವೀಪವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಬೋರನ್ನು ಮತ್ತು ಸ್ಥಳೀಯ ಕಾರ್ಪೋರೇಟರ್ ಅಖಿಲ ಆಳ್ವರನ್ನು ಚರ್ಚ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. […]

ವೇಣೂರಿನ ಬಚ್ಚಲು ಮನೆಯಲ್ಲಿ ಗೋಮಾಂಸ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Monday, September 2nd, 2013
Illegal slaughterhouse

ಬೆಳ್ತಂಗಡಿ : ಬಚ್ಚಲು ಮನೆಯಲ್ಲಿ ಗೋಮಾಂಸದ ಪ್ಯಾಕೆಟ್‌ಗಳನ್ನು ತಯಾರಿ ಮಾಡಿ ಸುತ್ತಲಿನ ಹಳ್ಳಿಗಳಿಗೆ ಅವ್ಯಾಹತವಾಗಿ ಸರಬರಾಜು ಮಾಡುತ್ತಿದ್ದ ಕಾಶಿಪಟ್ಣದ ಮುಂಗುಲ್‌ದೋಡಿ ನಿವಾಸಿ ಶಬೀರ್‌ (34)  ಎಂಬಾತನನ್ನು ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ  ಪೊಲೀಸರ ವಶಕ್ಕೆ ಒಪ್ಪಿಸಿದ  ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಶಿಪಟ್ಣದಲ್ಲಿ  ರವಿವಾರ ನಡೆದಿದೆ. ಆರೋಪಿ ಶಬೀರ್‌ ಮನೆಯ ಸ್ನಾನದ ಮನೆಯಲ್ಲಿ ಗೋಮಾಂಸ ಸಜ್ಜುಗೊಳಿಸುತ್ತಿದ್ದ. ಮನೆಯವರು ಅಲ್ಲದೇ ಲತೀಫ್‌, ಮೊದಿನ್‌ ಹಾಗೂ ಹಮೀದ್‌ ಎಂಬವರ ಸಹಾಯದಿಂದ ಹಳ್ಳಿಗಳಿಗೆ ಸರಬರಾಜು ಮಾಡುತಿದ್ದ ಎನ್ನಲಾಗಿದೆ. ಲತೀಫ್‌ನ ಬೈಕನ್ನು […]

ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಗಣೇಶೋತ್ಸವ

Saturday, August 31st, 2013
press-meet

ಮಂಗಳೂರು : ಕೋಡಿಕಲ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಚೌಟ ಸೆ.೯ರಿಂದ ಸೆ.೧೧ರವರೆಗೆ ಗಣೇಶೋತ್ಸವ ಸಮಿತಿ  ಮತ್ತು  ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು. ಹಬ್ಬದ ಪ್ರಯುಕ್ತ   ಸೆ.೯ರಂದು ಧಾರ್ಮಿಕ ಸಭೆ,   ಗಣೇಶ ದೇವರ ಬಿಂಬ ಪ್ರತಿಷ್ಠಾಪನೆ ನಡೆಯಲಿದ್ದು,  ಸೆ.೧೦ರಂದು ೧೨೮ಕಾಯಿಗಳ ಗಣಪತಿ ಹವನ ನಡೆಯಲಿದೆ ಹಾಗು ಕೋಡಿಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವಿವಿಧ ಆಟೋಟ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಮತ್ತು ದಂಬೇಲ್ ನದಿಯಲ್ಲಿ ಗಣೇಶ ಮೂರ್ತಿಯನ್ನು  ಜಲಸ್ತಂಭನ […]

ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ “ಢುಂಢಿ” ಕಾದಂಬರಿಯ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ

Friday, August 30th, 2013
Hindu Jagaran Vedike

ಮಂಗಳುರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀಗಣೇಶನ ಅಪಮಾನ ಮಾಡಿದ “ಢುಂಢಿ” ಕಾದಂಬರಿಯನ್ನು ನಿಷೇಧಿಸಿ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತು ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಆಗಸ್ಟ್ 30, ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ಸದಸ್ಯರಾದ ಸುಕನ್ಯ ಆಚಾರ್ ದಿನಾಂಕ 25.8.2013 ರಂದು ಬೆಂಗಳೂರಿನ ಸಭಾಂಗಣದಲ್ಲಿ ಯೊಗೀಶ್ ಮಾಸ್ಟರ್  ರಚಿಸಿದ  “ಢುಂಢಿ” ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. […]

ಕದ್ರಿ ದೇವಾಲಯದಲ್ಲಿ ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆ

Thursday, August 29th, 2013
ashtami

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಕಲ್ಕೂರ ಪ್ರತಿಷ್ಠಾನದ ವತಿಯಿಂದ  ಕದ್ರಿ ದೇವಸ್ಥಾನದಲ್ಲಿ  ಶ್ರೀ ಕೃಷ್ಣ ವೇಷ ಸ್ಪರ್ಧೆ ಬುಧವಾರ ನಡೆಯಿತು. ನಂದ ಗೋಕುಲ,  ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಕಂದಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ,ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಮತ್ತಿತರ  ಮಕ್ಕಳ ಕೃಷ್ಣ ವೇಷ ಸ್ಪರ್ಧೆ 18 ವಿಭಾಗಗಳಲ್ಲಿ ಮತ್ತು   ಶ್ರೀ ಕೃಷ್ಣ ರಸಪ್ರಶ್ನೆ, ಛಾಯಾ ಕೃಷ್ಣ ಸ್ಪರ್ಧೆ, ಬಾಲಕೃಷ್ಣ ರಸ ಪ್ರಶ್ನೆ ಸ್ಪರ್ಧೆಯೂ ನಡೆಯಿತು. […]

ಗ್ರಾಮೀಣ ಪ್ರದೇಶಗಳಲ್ಲಿ ಪಿಂಚಣಿ ಅದಾಲತ್ -ರಮಾನಾಥ ರೈ

Tuesday, August 27th, 2013
ramanathan

ಮಂಗಳೂರು : ಸಾಮಾಜಿಕ ಭದ್ರತಾ ಯೊಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ ನಿರ್ಗತಿಕರು, ಬಡವರಿಗೆ ಕ್ರಮಬದ್ಧವಾಗಿ ಪ್ರತೀ ತಿಂಗಳು ಮಾಸಾಶನ-ಪಿಂಚಣಿ ದೊರಕಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರ ಎಲ್ಲಾ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಗಳನ್ನು ನಡೆಸಲು ಉಪ ವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಸರಕಾರರದ ಸಾಧನೆಗಳನ್ನು ಬಿಂಬಿಸುವ  “ನೂರು […]