ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆಯಾಗಬೇಕು : ಹರಿಕೃಷ್ಣ ಪುನರೂರು

Monday, August 12th, 2013
Harikrishna Punarooru

ಮಂಗಳೂರು: ತುಳುನಾಡು ಟ್ರಸ್ಟ್ ನೇತೃತ್ವದಲ್ಲಿ ದ.ಕ. ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ತುಳು ಸಂಘಟನೆಗಳ ಪದಾಧಿಕಾರಿಗಳಿಂದ ಶನಿವಾರ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಂಭಾಗಣದಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ಈ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೆತ್ತಿಗೋಳ್ಳಲಾಯಿತು. ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುಭಾಷೆಯನ್ನು ಸೇರ್ಪಡೆಗೋಳಿಸಬೇಕು, ಅದಲ್ಲದೆ ಪ್ರತ್ಯೇಕ ತುಳುರಾಜ್ಯದ ಬೇಡಿಕೆಯನ್ನು ಈಡೇರಿಸಬೇಕು ಇವು ಪೂರ್ವಭಾವಿ ಸಭೆಯಲ್ಲಿ ಕೈಗೆತ್ತಿಕ್ಕೊಂಡ ಪ್ರಮುಖ ನಿಣರ್ಾಯಗಳು. ಸೆಪ್ಟೆಂಬರ್ 7ರಂದು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿಯವರ ಕಛೇರಿಯವರೆಗೆ ಬೃಹತ್ […]

ಕರಾವಳಿ ಜಿಲ್ಲೆಯಾದ್ಯಂತ ಭಕ್ತಾದಿಗಳಿಂದ ಸಂಭ್ರಮೋಲ್ಲಾಸದ ನಾಗರಮಂಚಮಿ ಆಚರಣೆ

Monday, August 12th, 2013
Nagara panchami Kudupu Temple

ಮಂಗಳೂರು : ಸನಾತನ ಸಂಸ್ಕೃತಿಯಂತೆ ನಾಗರಮಂಚಮಿ ಹಬ್ಬವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ನಾಗರಪಂಚಮಿಯು ಮನೆ ಮನೆಗಳಲ್ಲಿ, ಪ್ರಕೃತಿಯ ಮಡಿಲ ಬನಗಳಲ್ಲಿ, ದೇವಾಲಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ತಿಂಗಳಿನ ಉಜ್ವಲ ಪಕ್ಷದ ಐದನೆಯ ದಿನವು ನಾಗರಪಂಚಮಿಯ ದಿನವಾಗಿದೆ. ಈ ಹಬ್ಬವನ್ನು ನಾಡಿನ ಜನರು ಭಕ್ತಿಯಿಂದ ಆಚರಿಸುತ್ತಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಜನರು ಸರ್ಪದೇವರಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ. ನಾಗರಪಂಚಮಿಯ ದಿನದಂದು ಭಕ್ತಾಧಿಗಳಿಲ್ಲರೂ ಬೆಳಿಗ್ಗೆ ಎದ್ದು ನಾಗನಗುಡಿಗೆ ಹೋಗಿ ಸಿಯಾಳಭಿಷೇಕ […]

ಆಮ್ ಆದ್ಮಿ ಪಕ್ಷದ ವತಿಯಿಂದ ಕೇಂದ್ರ ಸರಕಾರದ ರಾಜಕೀಯ ನೀತಿಯನ್ನು ವಿರೋಧಿಸಿ ಪ್ರತಿಭಟನೆ

Saturday, August 10th, 2013
Dc-office

ಮಂಗಳೂರು : ಆಮ್ ಆದ್ಮಿ ಪಕ್ಷವು ಮಾಹಿತಿ ಹಕ್ಕು ಕಾಯ್ದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವ ಕೇಂದ್ರ ಸರಕಾರದ ನೀತಿಯನ್ನು  ವಿರೋಧಿಸಿ  ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ರಾಜಕೀಯ ಪಕ್ಷಗಳು  ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡುತ್ತಿವೆ. ಈ ಪ್ರಕ್ರಿಯೆ ಎಲ್ಲಾ  ಹಗರಣಗಳಿಗೆ ಕಾರಣವಾಗಿದೆ. ಆದ್ದರಿಂದ ರಾಜಕೀಯ ಪಕ್ಷಗಳ ದುಡ್ಡಿನ ಸಂಗ್ರಹ ವಿವರ ಮತ್ತು ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುವುದು ಅಗತ್ಯವಾಗಿದೆ  ಎಂದು ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಆಮ್ ಆದ್ಮಿ […]

ಸೈಂಟ್ ಕ್ರಿಸ್ಟೊಫರ್ ಅಸೋಸಿಯೇಶನ್ ಅಧ್ಯಕ್ಷರಾಗಿ ರೇಮಂಡ್ ಡಿಕುನ್ಹಾ ಆಯ್ಕೆ

Saturday, August 10th, 2013
Raymond

ಮಂಗಳೂರು: ಮಂಗಳೂರು ಧರ್ಮಪ್ರಾಂತದ ಕ್ರಿಶ್ಚಿಯನ್ ವಾಹನ ಚಾಲಕ ಮಾಲಕರ ಸಂಘ ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಪತ್ರಕರ್ತ ರೇಮಂಡ್ ಡಿಕುನ್ಹಾ ಆಯ್ಕೆಯಾದರು. ಉಪಾದ್ಯಕ್ಷರಾಗಿ ಫ್ರಾನ್ಸಿಸ್ ಡಿಸೋಜಾ,ಕಾರ್ಯದರ್ಶಿಯಾಗಿ ಹೆರಾಲ್ಡ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ ಡೆನ್ನಿಸ್ ಡಿಸೋಜ ಹಾಗೂ ಲೀನಾ ಡಿಸೋಜ. ಗೌರವ ಅಧ್ಯಕ್ಷರಾಗಿ ಸುಶೀಲ್ ನೊರೊನ್ಹಾ, ನಿಕಟಾಪೂರ್ವ ಅಧ್ಯಕ್ಷರಾಗಿ ವಿಕ್ಟರ್ ಮೆನೆಜಸ್ ರೊಜಾರಿಯೊ ಚರ್ಚ್ ಬೋಳಾರಾ ಇದರ ಫಾದರ್ ಖಜಾಂಜಿ ಹಾಗೂ ಅಧ್ಯಾತ್ಮಿಕ ನಿರ್ದೇಶಕರು ಮಂಗಳೂರು ಧರ್ಮಪ್ರಾಂತದ ಬಿಷಪ್ ರಾದ ಪಾವ್ಲ್ ಡಿಸೋಜ ಸಂಸ್ಥೆಯ ಪ್ರವರ್ತಕರಾಗಿದ್ಧಾರೆ. […]

ಪರಿಸರಕ್ಕೆ ಹಾನಿವಿರುವ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರಕ್ಕೆ ನನ್ನ ವಿರೋಧವಿದೆ: ಜನಾರ್ಧನ ಪೂಜರಿ

Saturday, August 10th, 2013
poojary

ಮಂಗಳೂರು: ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಅಪಾರವಾದ ಹಾನಿ ಇರುವುದರಿಂದ ಸರಕಾರವು ಇದನ್ನು ತಕ್ಷಣ ಕೈಬೀಡಬೇಕು. ಈ ಸ್ಥಾವರದ ಪರಿಣಾಮವು ಅಘಾತಕಾರಿಯಾಗಿರುವುದರಿಂದ ಈ ಯೋಜನೆಗೆ ನನ್ನ ವಿರೋಧವಿದೆ ಎಂದು ಶುಕ್ರವಾರ ಕಾಂಗ್ರೆಸ್ ಆಫೀಸ್ನಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು. ಅದಲ್ಲದೆ ಈ ಯೋಜನೆಗೆ ಅಲ್ಲಿಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗಾಗಿ ಜನರ ಬೇಡಿಕೆಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ ಹಾಗೂ ನನ್ನ ಧರ್ಮ, ನಾನೊಬ್ಬ ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿಯ ಸದಸ್ಯನಾಗಿರುದರಿಂದ ಇದನ್ನು ನಿಲ್ಲಿ ಸುವಂತೆ […]

ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರೇಟ್ಸ್ ಇವರಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

Friday, August 9th, 2013
Billavas Dubai

ಮಂಗಳೂರು: ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರೇಟ್ಸ್ ಈ ಸಂಸ್ಥೆಯ ವತಿಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರೆಸಿಡೆಂಟ್ ಕೋರಗಪ್ಪ ಮೇಮೋರಿಯಲ್ ಹಾಲ್ ಕುದ್ರೋಳಿಯಲ್ಲಿ  ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ಯಾರ್ಥಿವೇತನ ಪಡೆಯಲು ಅರ್ಜಿಗಳ ಮಹಾಪೂರವೇ ಬಂದಿದ್ದು ಅದರಲ್ಲಿ 225 ಅರ್ಹ ವಿದ್ಯಾರ್ಥಿಗಳನ್ನು ಆರಿಸುವಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತದೆ. ಅದಲ್ಲದೆ 8 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 14 ಮಂದಿ ಅನಾರೋಗ್ಯ ಪೀಡಿತರಿಗೆ ಸಹಾಯಧನವಾಗಿ ಒಟ್ಟು 12ಲಕ್ಷ […]

ತುಳುನಾಡಿನ ಉದಯಕ್ಕೆ ಹೋರಾಟಕ್ಕೂ ಸಿದ್ಧ – ಒಡಿಯೂರು ಶ್ರೀ

Friday, August 9th, 2013
odiyooru Tulu Nadu

ವಿಟ್ಲ : ತುಳು ಭಾಷೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತುಳುನಾಡು, ತುಳು ಭಾಷೆ ಉಳಿವಿಗಾಗಿ ನಾವು ಒಟ್ಟಾಗಿ ಹೋರಾಡಬೇಕು. ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು; ತುಳುವರು. ತುಳು ಮಾತನಾಡುವಾಗ ನಮ್ಮಲ್ಲಿ ಆತ್ಮೀಯತೆ ಉಕ್ಕಿ ಬರುವುದರೊಂದಿಗೆ ಪ್ರತಿಯೊಂದು ಶಬ್ದದ ಹಿಂದೆಯೂ ಪ್ರೀತಿಯ ಸೆಳೆ ಇದೆ. ಈ ನಿಟ್ಟಿನಲ್ಲಿ ತುಳು ಒರಿಪು ಕೇಂದ್ರ ಸ್ಥಾಪಿಸುವ ಇರಾದೆ ಇದೆ. ತುಳು ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಇದೆ. ತುಳುನಾಡಿನಲ್ಲಿ ಯಾರೆಲ್ಲ ಇದ್ದಾರೆಯೋ ಅವರೆಲ್ಲರೂ ತುಳುವರೇ. […]

ಮನೆಯಲ್ಲೇ ಕಸವಿಭಜನೆಯಿಂದ ತ್ಯಾಜ್ಯ ವಿಲೇ ಸುಲಲಿತ: ಸಿಇಒ

Friday, August 9th, 2013
Tulasi-Maddineni

ಮಂಗಳೂರು : ಸುಶಿಕ್ಷಿತ ಜಿಲ್ಲೆ ದಕ್ಷಿಣ ಕನ್ನಡ; ಇಲ್ಲಿನ ಸುಶಿಕ್ಷಿತರಿಗೆ ಕಸವಿಭಜನೆ ಮೂಲಕ ಕಸ ವಿಲೇ ಹಾಗೂ ತ್ಯಾಜ್ಯದ ಬಳಕೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಅರಿವಿನ ಶಿಕ್ಷಣ ಶಾಲೆಯ ಮೂಲಕವೇ ಆರಂಭವಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಹೇಳಿದರು. ಇಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಸಭೆಯ ಅನುಪಾಲನಾ ವರದಿ ಪರಿಶೀಲಿಸಿದರು. ಸ್ವಚ್ಛತೆಗಾಗಿ ಸಾಕಷ್ಟು ಬಹುಮಾನ ಪಡೆದಿರುವ […]

ದನ ಕಳವು ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ : ಎಮ್. ಎನ್. ರೆಡ್ಡಿ

Thursday, August 8th, 2013
ದನ ಕಳವು ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ : ಎಮ್. ಎನ್. ರೆಡ್ಡಿ

ಮಂಗಳೂರು: ಸಾರ್ವಜನಿಕರು ದನ ಕಳವು ಪ್ರಕರಣದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಸಹಕರಿಸಬೇಕು, ದನ ಕಳವು ಮತ್ತು ಸಾಗಟದ ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನನ್ನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು. ದನ ಕಳವು ಪ್ರಕರಣಗಳನ್ನು ಹತ್ತಿಕ್ಕಲು ಗಸ್ತು ಕಾರ್ಯಚರಣೆ ಮತ್ತು ಪೋಲಿಸ್ ಕಾವಲನ್ನು ಬಿಗಿಗೊಳಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಶಿಸ್ತು ವಿಭಾಗದ ಎಡಿಜಿಪಿ ಎಮ್. ಎನ್. ರೆಡ್ಡಿ ತಿಳಿಸಿದರು. ಎ.ಡಿ.ಜಿ.ಪಿಯಾಗಿ ಅಧಿಕಾರ ಸ್ವಿಕರಿಸಿದ ಮೊದಲ […]

ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ ನಿಧನ

Thursday, August 8th, 2013
Kurunji Venkataramana Gowda

ಸುಳ್ಯ : ಶಿಕ್ಷಣ ಕ್ಷೇತ್ರದ ಹರಿಕಾರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಸ್ಥಾಪಕಾಧ್ಯಕ್ಷ, ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ(85) ಆ. 7ರಂದು ಸಂಜೆಯ ವೇಳೆಗೆ  ಶ್ರೀರಾಂಪೇಟೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ವಿದ್ಯಾ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ದ.ಕ ಮತ್ತು  ಕೊಡಗು ಜಿಲ್ಲೆಗಳ ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಿಗೆ  ಉಕ್ಕಿನ ಕವಾಟು ಹಾಗೂ ಆಂಗ್ಲ  ಭಾಷಾ ಪುಸ್ತಕಗಳನ್ನು ಉಚಿತವಾಗಿ ನೀಡಿ, ಆಂಗ್ಲ ಭಾಷಾ ಗ್ರಂಥಾಲಯವನ್ನು ನಿರ್ಮಿಸಿದವರು. ಸಮಾಜದೊಂದಿಗೆ ತನ್ನ ಸಂಪತ್ತನ್ನು ಉದಾರವಾಗಿ ಹಂಚಿಕೊಂಡಾಗ ಮಾತ್ರ ಅದರ ನೈಜ ಮೌಲ್ಯ ಅರಿವಾಗುವುದು […]