ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಸಮರ್ಪಕ ಜಾರಿಗೆ ಎಲ್ಲರ ಪ್ರಯತ್ನ ಅಗತ್ಯ : ಡಾ.ಉಮೇಶ್ ಆರಾಧ್ಯ

Tuesday, March 12th, 2013
Children's Right to Education Act

ಮಂಗಳೂರು : ಇಂದು ನಗರದ ಎಸ್.ಡಿ.ಎಂ ಕಾಲೇಜಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಕುರಿತು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು  ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು  ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಉಮೇಶ್ ಆರಾಧ್ಯ ನೆರವೇರಿಸಿದರು. ಎಸ್.ಡಿ.ಎಂ ಲಾ ಕಾಲೇಜು ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ನೆರವೇರಿಸಿದ  ಡಾ.ಉಮೇಶ್ ಆರಾಧ್ಯ  ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣ ಪಡೆಯಲು ಬಹಳಷ್ಟು […]

ಸ್ಥಳೀಯ ಚುನಾವಣಾ ಫಲಿತಾಂಶ, ಕೆಜೆಪಿಯತ್ತ ಬಿಜೆಪಿ

Tuesday, March 12th, 2013
BJP & KJP

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿರುವ, ಕಾಂಗ್ರೆಸ್ ನ್ನು ಬಲವಾಗಿ ವಿರೋದಿಸುವ ಬಿಜೆಪಿ ಇದೀಗ ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಒಲವು ತೋರಿದೆ ಎಂಬ ಸುದ್ದಿಯೊಂದಿಗೆ,  ಪಕ್ಷದಿಂದ ಹೊರಹೋಗಿ  ತನ್ನದೇ ಆದ ಮತ್ತೊಂದು ಪಕ್ಷ ವನ್ನು ಸ್ಥಾಪಿಸಿ ಆ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸಿದ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ. ಈಗಾಗಲೇ ನಿನ್ನೆ ಫಲಿತಾಂಶ ಪ್ರಕಟಗೊಂಡು ಸೋಲು ಖಚಿತ ಗೊಳ್ಳುತ್ತಿದ್ದಂತೆ […]

ಪುತ್ತೂರು : ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಸೆರೆ

Tuesday, March 12th, 2013
ಪುತ್ತೂರು : ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಸೆರೆ

ಪುತ್ತೂರು : ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಪೊಲೀಸರು ಸೋಮವಾರ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ರಾಘವೇಂದ್ರ ಹಾಗೂ ಪುತ್ತೂರಿನ ರಿಜ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ನ್ಯಾನೋ ಕಾರೊಂದರಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಪುತ್ತೂರು ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಫೀಕ್ ಅವರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಹಿನ್ನೆಲೆ ಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ರೂಪಾಯಿ ೧೦ ಸಾವಿರ […]

ಜನತೆಗೆ ನೀಡಿದ ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್ ಬದ್ದ : ಜನಾರ್ದನ ಪೂಜಾರಿ

Tuesday, March 12th, 2013
Janardhan Poojary

ಮಂಗಳೂರು : ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚಿನ ಕಡೆಗಳಲ್ಲಿ  ಕಾಂಗ್ರೆಸ್ ಗೆಲುವನ್ನು ಸಾಧಿಸಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿರುವ ಜನತೆಗೆ ಪ್ರಣಾಳಿಕೆಯಲ್ಲಿ ಪಕ್ಷವು ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಚುನಾವಾಣಾ ಉಸ್ತುವಾರಿ ವಹಿಸಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು  ಸೋಮವಾರ ಕಾಂಗ್ರೆಸ್ ನ ಪ್ರಚಾರ ಸಮಿತಿ ಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದರು. ಮುಂದಿನ 5 ವರ್ಷಗಳ ಕಾಲ ಆಸ್ತಿ ತೆರಿಗೆಯನ್ನು ಮತ್ತು ನೀರಿನ […]

ಉಡುಪಿಯಲ್ಲಿ 3 ದಶಕಗಳ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್

Monday, March 11th, 2013
Congress in Udupi

ಉಡುಪಿ : ಉಡುಪಿ ನಗರಸಭೆಯ ಇತಿಹಾಸದಲ್ಲಿ 3 ದಶಕಗಳಲ್ಲಿ ಇದೆ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವು ದಾಖಲಿಸಿಕೊಂಡಿದೆ. ಒಟ್ಟು 35 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 22 ವಾರ್ಡ್ ಗಳಲ್ಲಿ ಗೆಲುವನ್ನು ಸಾದಿಸಿದರೆ ಬಿಜೆಪಿ ಪಕ್ಷ ಕೇವಲ 12 ಸೀಟುಗಳನ್ನು ಗೆದ್ದುಕೊಂಡು ತೀವ್ರ ನಿರಾಸೆಯನ್ನನುಭವಿಸಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಕಾರ್ಕಳ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಒಟ್ಟು 23 ವಾರ್ಡುಗಳಲ್ಲಿ ಕಾಂಗ್ರೆಸ್‌ 12 ಸ್ಥಾನಗಳನ್ನು, ಬಿಜೆಪಿ 11 ಸ್ಥಾನಗಳನ್ನು ಪಡೆದಿದೆ. ಕುಂದಾಪುರ ಪುರಸಭೆಯಲ್ಲಿ […]

ಮಂಗಳೂರು ಮಹಾನಗರಪಾಲಿಕೆ ಮತ್ತು ಉಡುಪಿ ನಗರ ಸಭೆ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿ ಹೀನಾಯ ಸೋಲು

Monday, March 11th, 2013
MCC Election Winners

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಮಾರ್ಚ್ 7 ರಂದು ನಡೆದ 60 ವಾರ್ಡ್ ಗಳ ಫಲಿತಾಂಶ  ಮಾರ್ಚ್ 11 ರಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಹೊರಬಿದ್ದಿದೆ. ಮಂಗಳೂರು ಮಹಾನಗರಪಾಲಿಕೆ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್-2, ಸಿಪಿಐಯು-1, ಪಕ್ಷೇತರ-1. ಪುತ್ತೂರು ಒಟ್ಟು  27, ಘೋಷಿತ-27. ಬಿಜೆಪಿ-12, ಕಾಂಗ್ರೆಸ್-15, ಜೆಡಿಎಸ್-1. ಮೂಡಬಿದ್ರೆ ಒಟ್ಟು 23 ಸ್ಥಾನಗಳು ಘೋಷಿತ 23 ಸ್ಥಾನಗಳು. ಬಿಜೆಪಿ-5, ಕಾಂಗ್ರೆಸ್-14, ಜೆಡಿಎಸ್-3, ಸಿಪಿಐಯಂ -1. ಬಂಟ್ವಾಳ ಒಟ್ಟು 23 […]

ಮಂಗಳೂರು : ರವೀಂದ್ರ ಕಲಾಭವನದಲ್ಲಿ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

Saturday, March 9th, 2013
Vidyarhi sahitya sammelana

ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿಶ್ವ ವಿದ್ಯಾನಿಲಯ ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾರ್ಚ್ 9 -ಶನಿವಾರ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿದರು.  ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಜಾತಿ ಧರ್ಮದ ಬಗೆಗೆ ತಪ್ಪು ಸಂದೇಶವನ್ನು […]

ಕದ್ರಿ ಉದ್ಯಾವನದಲ್ಲಿ ಫಲಪುಷ್ಪ ಹಾಗೂ ಮಧುವೇಳದ ಉದ್ಘಾಟನೆ

Saturday, March 9th, 2013
Palapushpa pradarshana

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಿರಿ ತೋಟಗಾರಿಕೆ ಸಂಘ (ರಿ) ಹಾಗೂ ತೋಟಗಾರಿಕೆ ಇಲಾಖೆ ದ.ಕ ಮಂಗಳೂರು ಇವುಗಳ ಜಂಟಿ ಆಶ್ರಮದಲ್ಲಿ ಫಲಪುಷ್ಪ ಪ್ರದರ್ಶನ – 2013 ಹಾಗೂ ಮಧುವೇಳವು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮಾರ್ಚ್ 9ನೇ ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನು ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇವರು ನೆರೆವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಡಾ. ಮೋಹನ್ ಆಳ್ವ. ಸಸ್ಯ ಸಂಪತ್ತು […]

ಮಹಿಳಾ ದೌರ್ಜನ್ಯದ ವಿರುದ್ಧ ಬೆಸೆಂಟ್ ಮಹಿಳಾ ಕಾಲೇಜು ವಿದ್ಯಾರ್ಥಿ ಗಳಿಂದ ಬೀದಿ ನಾಟಕ

Friday, March 8th, 2013
Besant students

ಮಂಗಳೂರು :ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ದೇಶದಲ್ಲಿ ಇಂದು ಮಹಿಳೆಯ ಮಳೆ ನಡೆಯುತ್ತಿರುವ ದೌರ್ಜನ್ಯ ಮತ್ತು ಈ ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತಬೇಕಾದ ಅಗತ್ಯಗಳ ಬಗ್ಗೆ ಬೀದಿ ನಾಟಕವನ್ನು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಳು ಪ್ರಸ್ತುತಪಡಿಸಿದರು. ಬೀದಿ ನಾಟಕದಲ್ಲಿ ಕಾಲೇಜಿನ ಸುಮಾರು ೨೦ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನಾಟಕವನ್ನು ಪ್ರಮುಖವಾಗಿ ಕೇಂದ್ರ ಮಾರುಕಟ್ಟೆ, ರಥಬೀದಿ, ಸಿಟಿ ಸೆಂಟರ್ ಮಾಲ್ ಹಾಗೂ ಬೆಸೆಂಟ್ ಕಾಲೇಜುಗಳ ಬಳಿ ಆಡಿಸಲಾಯಿತು. ಈ ಬೀದಿ […]

ನರ್ಸ್ ಜೆಸಿಂತಾ ಕಾನೂನು ಹೋರಾಟ, ಆರ್ಥಿಕ ಸಂಕಷ್ಟದಲ್ಲಿ ಕುಟುಂಬ

Friday, March 8th, 2013
jacintha saldanha legal case

ಲಂಡನ್ : ಇಂಗ್ಲೆಂಡ್ ರಾಜಮನೆತನದ ಅಧೀನದಲ್ಲಿರುವ ಕಿಂಗ್‌ ಎಡ್ವರ್ಡ್ಸ್‌ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ  ಉಡುಪಿ ಶಿರ್ವಾ ಮೂಲದ ನರ್ಸೆ ಜೆಸಿಂತಾ ರೇಡಿಯೋ ಜಾಕಿಗಳ ತಮಾಷೆಯ ಕರೆಗೆ ಬೇಸತ್ತು ಆತ್ಮಹತೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆಕೆಯ ಸಾವಿನ ಪ್ರಕರಣದ ಕುರಿತಾಗಿ ಸರಕಾರದ ಕಾನೂನಿನ ನೆರವನ್ನು ಪಡೆಯಲು ಆಕೆಯ ಕುಟುಂಬ ನಿರಾಕರಿಸಿದೆ. ಜೆಸಿಂತಾ ಸಾವಿನ ಪ್ರಕರಣ ಇನ್ನು ನಿಗೂಡ ವಾಗಿಯೇ ಉಳಿದಿದ್ದು, ಸರಕಾರ ನೀಡುವ ಕಾನೂನು ನೆರವನ್ನು ಕುಟುಂಬ ನಿರಾಕರಿಸಿರುವ ಹಿನ್ನಲೆಯಲ್ಲಿ ಜೆಸಿಂತಾ ಕುಟುಂಬ ವೇ ಕಾನೂನು ತಜ್ಞ್ಯರಿಗೆ […]