ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

Tuesday, October 12th, 2010
ಕೆನಡಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

ಮಂಗಳೂರು :  ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ಮೇಯರ್ ಲೂಯಿಸ್ ಇ.ಜಾಕ್ಸನ್ ತನ್ನ ನಿಯೋಗದೊಂದಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ್ದಾರೆ.  ಮಂಗಳೂರು ಮಹಾ ನಗರ ಪಾಲಿಕೆ ಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಮತ್ತು ಮಹಾನಗರ  ಪಾಲಿಕೆಯ ಅಭಿವೃದ್ದಿ ಕಾರ್ಯಗಳ ಅಧ್ಯಯನಕ್ಕೆ ಈ ತಂಡ ನಗರಕ್ಕೆ ಭೇಟಿ ನೀಡಿದೆ. ನಿಯೋಗದಲ್ಲಿ ಮೇಯರ್ ಸಹಿತ ಅಲ್ಲಿನ ಸಿ‌ಇ‌ಒ ಜಾರ್ಜ್ ವಿ. ಹಾರ್ವೆ, ಆಡಳಿತ ವ್ಯವಸ್ಥಾಪಕಿ ಮಂಜತ್ ಕೈಲಾ ಮತ್ತಿತರರು ಇದ್ದರು. ಇಂದು ಬೆಳಿಗ್ಗೆ ಮಂಗಳೂರು ಮಹಾನಗರ  ಪಾಲಿಕೆಯ ಸಭೆಯಲ್ಲಿ […]

ದಲಿತ ವಿರೋಧಿ ವಿನಯ್ ಗಾಂವ್ಕರ್ ರನ್ನು ಅಮಾನತುಗೊಳಿಸಲು ದಸಂಸ ಮನವಿ.

Monday, October 11th, 2010
ದಸಂಸದಿಂದ ಪ್ರತಿಭಟನೆ

ಮಂಗಳೂರು: ಬಿಲ್ಲವ ಕುಟುಂಬದ ಬಡ ಮಹಿಳೆಯೊಬ್ಬರು ಮೋಸ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ದೂರು ಕೊಡಲು ಹೋದಾಗ ಬಂದರು ಠಾಣೆಯ ಇನ್ಸ್ ಪೆಕ್ಟರ್ ವಿನಯ್ ಗಾಂವ್ಕರ್ ಅಮಾನವೀಯವಾಗಿ ನಡೆಸಿಕೊಂಡದನ್ನು ವಿರೋದಿಸಿ ದಲಿತ ಸಂಘರ್ಷ ಸಮಿತಿಯಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಯಿತು. ಕಳೆದ ಸಪ್ಟೆಂಬರ್ ನಲ್ಲಿ ರಮೇಶ ಎಂಬುವವರು ನೀರುಮಾರ್ಗದ ಗಾಯತ್ರಿ ಎಂಬ ಮಹಿಳೆಗೆ ತನ್ನ ಪರಿಚಯ ಮಾಡಿಸಿಕೊಂಡು ಹಂಪನ್ ಕಟ್ಟದಲ್ಲಿರುವ ಭಾರತ್ ಫೈನಾನ್ಸ್ ನ ಮಾಲಕರ ಮೂಲಕ ಸೊಸೈಟಿಯಲ್ಲಿರುವ 181 ಗ್ರಾಂ ಚಿನ್ನವನ್ನು ತೆಗೆಸಿ, […]

ದ.ಕ. ಜಿಲ್ಲಾ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷರಾಗಿ ಹಾಜಿ ಎಸ್. ಎಚ್ ಉಸ್ಮಾನ್ ಅಧಿಕಾರ ಸ್ವೀಕಾರ.

Monday, October 11th, 2010
ದ.ಕ. ಜಿಲ್ಲಾ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷರಾಗಿ ಹಾಜಿ ಎಸ್. ಎಚ್ ಉಸ್ಮಾನ್

ಮಂಗಳೂರು: 1962 ರಲ್ಲಿ ಸ್ಥಾಪನೆಯಾದ ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಇದರ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್.ಎಚ್. ಉಸ್ಮಾನ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ಕಳೆದ ಮೂರು ಬಾರಿಯ ಅವಧಿಯಲ್ಲಿ ವೈ. ಮೊಹಮ್ಮದ್ ಕುಂಞ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸರಕಾರದ ವತಿಯಿಂದ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಈ ಸಂಸ್ಥೆಯಲ್ಲಿ, ಸರಕಾರದ ವಿವಿಧ ಯೋಜನೆಗಳು, ಜಿಲ್ಲೆಯ ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗಾಗಿ ಸರಕಾರ ಬಿಡುಗಡೆ ಮಾಡುವ ಯೋಜನೆಗಳನ್ನು ತಲುಪಿಸುವುದಾಗಿದೆ ಎಂದು ನೂತನ […]

ವಿಶ್ವಾಸ ಮತ ಗೆದ್ದ ಯಡಿಯೂರಪ್ಪ ಸರಕಾರ, ಸದನದಲ್ಲಿ ಪ್ರತಿ ಪಕ್ಷಗಳ ಗದ್ದಲ

Monday, October 11th, 2010
ವಿಶ್ವಾಸಮತ ಗೆದ್ದ ಯಡಿಯೂರಪ್ಪ

ಬೆಂಗಳೂರು :  ಧ್ವನಿಮತದ ಮೂಲಕ ವಿಶ್ವಾಸಮತವನ್ನು ಅಂಗೀಕರಿಸಲಾಗಿದೆ ಎಂದು ಸೋಮವಾರ ಬೆಳಗ್ಗೆ 10ಗಂಟೆಗೆ ಸರಿಯಾಗಿ ಸ್ಪೀಕರ್ ಕೆ ಜಿ ಬೋಪಯ್ಯ ಸದನದಲ್ಲಿ ಘೋಷಿಸುತ್ತಿದ್ದಂತೆ . ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆ ರಣರಂಗವಾಗಿ ಮಾರ್ಪಟ್ಟಿತು. ಬಳಿಕ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು ಸರಕಾರದ ಪರವಾಗಿ 106 ಮತಗಳು ಇರುವುದರಿಂದ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಾಗಿದ್ದು, ವಿರುದ್ಧ ಶೂನ್ಯ ಮತಗಳು ಬಿದ್ದಿವೆ ಎಂದು ಬೋಪಯ್ಯ ಘೊಷಿಸಿದ್ದಾರೆ. ಇನ್ನು ಮುಂದಿನ ನಿರ್ಣಯ ರಾಜ್ಯಪಾಲರ ಕೈಯಲ್ಲಿದೆ ಅಲ್ಲೂ ಸಾಧ್ಯವಾಗದಿದ್ದರೆ ಪ್ರತಿ ಪಕ್ಷಗಳು ರಾಷ್ಟ್ರ […]

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

Sunday, October 10th, 2010
ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

ಮಂಗಳೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ದಲಿತರಿಗೆ ಆಗುವ ತೊಂದರೆಗಳು, ಪೊಲೀಸ್ ಇಲಾಖೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ಕಿರುಕುಳ ಮೊದಲಾದ ದೂರುಗಳನ್ನು ಇಂದು ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತಮ್ಮ ಕಛೇರಿಯಲ್ಲಿ ಆಲಿಸಿದರು. ಪೊಲೀಸ್ ನಿರೀಕ್ಷಕರಾದ ಬಿ.ಜೆ.ಭಂಡಾರಿ, ಬಂಟ್ವಾಳ ಪೊಲೀಸ್ ನಿರೀಕ್ಷಕರಾದ ನಜುಂಡೇ ಗೌಡ, ಸುಳ್ಯ ಪೊಲೀಸ್ ನಿರೀಕ್ಷಕರಾದ ಮಂಜಯ್ಯ ಹಾಗೂ ಜಿಲ್ಲೆಯ ಇನ್ನಿತರ ಠಾಣೆಗಳ ಉಪ ನಿರೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಗೋಪಾಲ ಕಾಡು […]

ನಿರ್ಮಲ ನಗರ ಅಭಿಯಾನದೊಂದಿಗೆ ಬೀದಿ ನಾಟಕ.

Sunday, October 10th, 2010
ನಿರ್ಮಲ ನಗರ ಅಭಿಯಾನ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಹಾಗೂ ರಾಮಕೃಷ್ಣ ಪದವಿ ಪೂರ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರ ನೈರ್ಮಲೀಕರಣ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ನಗರ ಅಭಿಯಾನ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ನಡೆಯಿತು. ನಿರ್ಮಲ ನಗರ ಅಭಿಯಾನವು ಜಾಥಾ ಹಾಗೂ ಬೀದಿನಾಟಕದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಾವು ನಮ್ಮ ಮನೆ ಹಾಗೂ ಹಿತ್ತಿಲನ್ನು ಹೇಗೆ ಸ್ವಚ್ಚವಾಗಿಡುತ್ತೇವೆಯೋ […]

ದಿ| ಕೆ. ಅನಂತರಾಮ ರಾವ್ ಸಂಸ್ಮರಣೆ ಕಾರ್ಯಕ್ರಮ.

Sunday, October 10th, 2010
ಕೆ. ಅನಂತರಾಮ ರಾವ್ ಸಂಸ್ಮರಣೆ ಕಾರ್ಯಕ್ರಮ.

ಮಂಗಳೂರು: ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಾಧನೆಮಾಡಿದ ಹಿರಿಯ ಸಾಹಿತಿ ದಿ| ಕೆ. ಅನಂತರಾಮ ರಾವ್ ಅವರ ಸಂಸ್ಮರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ನಾರಾಯಣ ಭಟ್ ರಾಮಕುಂಜ ಬರೆದ ‘ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ಕೃತಿಯನ್ನು ವಿಶ್ವೇಶ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದಿ| ಅನಂತರಾಮರು ಅಪಾರ ಸೇವೆಯನ್ನು ಮಾಡಿದ್ದಾರೆ. ಅವರ ಜೀವಿತದಲ್ಲಿ ಸಂಪೂರ್ಣ […]

ಭಾರ್ಗವನಿಗೊಲಿದ ಮಂಗಳಾದೇವಿ : ಸಂಪೂರ್ಣ ಲೇಖನ

Saturday, October 9th, 2010
ಮಂಗಳಾದೇವಿ

ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಇದೀಗ ನವಿರಾಗಿ ಅಲಂಕರಿಸಿಕೊಂಡು ನಗರಕ್ಕೆ ಶೋಭೆ ತಂದಿದೆ. ಜಾತ್ರಾ ಮಹೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಸಾವಿರಾರು ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದೆ. ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಪರಮ ಪವಿತ್ರ ಭಕ್ತಿಭಾವದಿಂದ ಪರಸ್ಪರ ಬಂಧಿಸಿರುವ ದೇವಸ್ಥಾನದ ಪೌರಾಣಿಕ ಹಿನ್ನೆಲೆ ನಿಜಕ್ಕೂ ರೋಮಾಂಚನಗೊಳಿಸುವಂತಾಗಿದೆ. ಒಂದು ಬಾರಿ, ಸಪ್ತ ಋಷಿಗಳು ಶ್ರೀ ಹರಿಯ ದರ್ಶನ ಪಡೆಯಲೆಂದು ವೈಕುಂಠಕ್ಕೆ ಬಂದಿದ್ದಾಗ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸಪ್ತಋಷಿಗಳನ್ನು ಒಳಹೋಗಲು ಬಿಡದೆ, […]

ಗೋವಾ ರಾಜ್ಯದಿಂದ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮದ್ಯ ಸಾಗಾಟ

Saturday, October 9th, 2010
ಮದ್ಯ ಸಾಗಾಟ

ಮಂಗಳೂರು: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಕೇರಳ ರಾಜ್ಯಕ್ಕೆ ಕೆ.ಎ.19 ಝಡ್ 1636 ಇಂಡಿಕಾ ಕಾರಿನಲ್ಲ್ಲಿ ಸಾಗಿಸಿ ಅಲ್ಲಿ ಹೆಚ್ಚಿನ ಜಿಲ್ಲೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪಡೆದ ಪಶ್ಚಿಮ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿಶ್ವನಾಥ ಪಂಡಿತ್ ರವರು ಪೊಲೀಸ್ ಉಪನಿರೀಕ್ಷಕರಾದ ನಾರಾಯಣ ಬೈಂದೂರು ಹಾಗೂ ಸಿಬ್ಬಂದಿಯವರೊಂದಿಗೆ ದಿನಾಂಕ 07-10-2010 ರಂದು ಮಧ್ಯಾಹ್ನ ಮುಡಿಪು ಜಂಕ್ಷನ್ ನಲ್ಲಿ ಹೊಂಚು ಹಾಕಿ ಕಾದು ಕುಳಿತುಕೊಂಡಿದ್ದಾಗ ಮಧ್ಯಾಹ್ನ ಸುಮಾರು 3.30 […]

ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಂದ ಬ್ರಹತ್ ಮಂಗಳೂರು ದಸಾರಕ್ಕೆ ಚಾಲನೆ

Friday, October 8th, 2010
ಮಂಗಳೂರು ದಸರಾ

ಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾವನ್ನು ದ.ಕ. ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ದೀಪ ಬೆಳಗಿಸುವುದರ ಮೂಲಕ ಇಂದು ಮಧ್ಯಾಹ್ನ ಚಾಲನೆ ನೀಡಿದರು. ಅ.8 ರಿಂದ 18 ರವರೆಗೆ ನಡೆಯುವ ನವರಾತ್ರಿ ಉತ್ಸವ ಮತ್ತು ಮಂಗಳೂರು ದಸರಾ ಪೂಜಿಸಲ್ಪಡುವ ನವದುರ್ಗೆಯರ ಮತ್ತು ಶಾರದ ಮಾತೆಯ ವಿಗ್ರಹ ಹಾಗೂ ಗಣಪತಿಯ ವಿಗ್ರಹ ವನ್ನು  ಕ್ಷೇತ್ರದ ಶ್ರೀ ಗೋಕರ್ಣ  ಕಲ್ಯಾಣಮಂಟಪದಲ್ಲಿ ಆಕರ್ಷಕವಾಗಿ ನಿರ್ಮಿಸಿದ ಸ್ವರ್ಣಮಯ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾದ್ಯಕ್ಷರಾದ ರಾಘವೇಂದ್ರ ಕುಳೂರು, […]