ಗಿಳಿ ಮಾರಾಟ ಆರೋಪಿ ಕಾವೂರಿನ ದೀಪಕ್‌ ಬಂಧನ

Thursday, September 15th, 2011
parrot-sale

ಮಂಗಳೂರು: ಕಾವೂರಿನ ದೀಪಕ್‌ (25) ಎಂಬಾತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ಬಳಿಯ ಅಂಗಡಿಯೊಂದರ ಬಳಿ ಕಾಡು ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ವೇಳೆ ಬುಧವಾರ ಮಂಗಳೂರು ಅರಣ್ಯ ಸಂಚಾರಿ ದಳದ ವಿಶೇಷ ಪೊಲೀಸರು ಪತ್ತೆ ಹಚ್ಚಿ ಆತನ ಬಳಿ ಇದ್ದ ಹಸಿರು ಬಣ್ಣದ 13 ಕಾಡು ಗಿಳಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿ ದೀಪಕ್‌ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಈ ಗಿಳಿಗಳನ್ನು ಕಾಸರಗೋಡಿನ ವ್ಯಕ್ತಿಯೊಬ್ಬರು ಪೂರೈಕೆ ಮಾಡಿರುವುದಾಗಿ ಆತ ವಿಚಾರಣೆಯ ವೇಳೆ […]

ಮೈಸೂರು ದಸರಾಕ್ಕೆ ಆನೆಕಾಡಿನಿಂದ ಹೋರಾಟ ಆನೆಗಳು.

Wednesday, September 14th, 2011
Elephents Starts Travels to Mysore Dasara

ಮಡಿಕೇರಿ : ಇಲ್ಲಿನ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ನಾಲ್ಕು ಆನೆಗಳಾದ ವಿಕ್ರಮ್‌, ಹರ್ಷ ಗೋಪಿ, ಕಾವೇರಿ ಆನೆಗಳು ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 2ನೇ ಹಂತದ ಪ್ರಯಾಣ ಬೆಳೆಸಿದೆ. ದುಬಾರೆಯ ಆನೆಕಾಡಿನ ಈ ಸಾಕಾನೆಗಳನ್ನು ಬುಧವಾರ ಬೆಳಗ್ಗೆ ಶಿಬಿರದಲ್ಲಿ ನಡೆದ ವಿಶೇಷ ಪೂಜೆಗೆ ತೊಳೆದು – ಸ್ನಾನ ಮಾಡಿಸಿ, ಹಣೆ ಹಾಗೂ ಕಾಲುಗಳಿಗೆ ಹರಳೆಣ್ಣೆ ಲೇಪನ ಮಾಡಿ ಆನೆಗಳ ಮುಖ ಹಾಗೂ ದೇಹಗಳ ಮೇಲೆ ಚಿತ್ತಾರದ ಚಿತ್ರಗಳನ್ನು ಬಿಡಿಸಿ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಬೀಳ್ಕೊಡಲಾಯಿತು. ವಿಕ್ರಮ್‌ ಆನೆಯ […]

ರೆಡ್ಡಿ ಗಳಿಗೆ ಜಾಮೀನು ನಿರಾಕರಿಸಿದ ಸಿಬಿಐ ಕೋರ್ಟ್

Tuesday, September 13th, 2011
ರೆಡ್ಡಿ ಗಳಿಗೆ ಜಾಮೀನು ನಿರಾಕರಿಸಿದ ಸಿಬಿಐ ಕೋರ್ಟ್

ಚೆನ್ನೈ : ಸಿಬಿಐ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಂಬಂಧಿಕ ಶ್ರೀನಿವಾಸ ರೆಡ್ಡಿಗೆ ಮಂಗಳವಾರ ಜಾಮೀನು ನಿರಾಕರಿಸಲಾಗಿದೆ. ಸತತ ಮೂರು ದಿನಗಳ ಕಾಲ ಹೈದರಾಬಾದ್ ನಾಂಪಲ್ಲಿಯಲ್ಲಿರುವ ವಿಶೇಷ ಸಿಬಿಐ ಕೋರ್ಟಿನಲ್ಲಿ ಜಾಮೀನು ಅರ್ಜಿಯ ಕುರಿತಾಗಿ ವಾದ ವಿವಾದಗಳು ಬಲವಾಗಿಯೇ ನಡೆದಿದೆ. ಜನಾರ್ದನ ರೆಡ್ಡಿ ಪರವಾಗಿ ಘಟಾನುಘಟಿ ವಕೀಲರಾದ ಉದಯ್ ಲಲಿತ್ ಹಾಗೂ ಸಿ.ವಿ.ನಾಗೇಶ್ ಸುದೀರ್ಘವಾಗಿ ಮೂರು ದಿನಗಳ ಕಾಲ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಾದ ಮಂಡಿಸಿದ್ದರು. ಆದರೆ ಜನಾರ್ದನ ರೆಡ್ಡಿ ಪ್ರಕರಣ ಗಂಭೀರವಾಗಿದ್ದು, […]

ಧರ್ಮಸ್ಥಳದಲ್ಲಿ 13ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉದ್ಘಾಟನೆ

Tuesday, September 13th, 2011
Darmasthala Bajana Kammata

ಬೆಳ್ತಂಗಡಿ :  ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 13ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉದ್ಘಾಟನಾ ಸಮಾರಂಭವನ್ನು ಸೋಮವಾರ ಹೇಮಾವತಿ ವೀ. ಹೆಗ್ಗಡೆ ಅವರು ಉದ್ಘಾಟಿಸಿದರು. ಕಮ್ಮಟ ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ ಅವರು, ಭಗವಂತನ ಜತೆ ಸಂವಾದ ನಡೆಸುವ, ಭಗವಂತನನ್ನು ಒಲಿಸಿಕೊಳ್ಳುವ ಯತ್ನ ಭಜನೆ. ನಮ್ಮ ಧ್ವನಿಯನ್ನು ವಿಶ್ವದ ಧ್ವನಿ ಜತೆಗೆ ಸೇರಿಸುವ ಭಜನೆಯಿಂದ ಸಾಮಾಜಿಕ ಅಂತಸ್ತು, ಮೇಲು ಕೀಳೆಂಬ ಭಾವ ಮರೆಸಿ ಸಾಮಾಜಿಕ ಧ್ವನಿಯಾಗುತ್ತದೆ ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ […]

ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ನೇಮಕ

Tuesday, September 13th, 2011
ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ನೇಮಕ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ಅವರು ಸೋಮವಾರ ಇಲ್ಲಿನ ಲಾಲ್‌ಬಾಗ್‌ನ ಕೊಂಕಣಿ ಅಕಾಡೆಮಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮವನ್ನು ಮಂಗಳೂರು ಮೇಯರ್‌ ಕೆ. ಪ್ರವೀಣ್‌, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೇಮಕಾತಿ ಆದೇಶದ ಪ್ರತಿಯನ್ನು ರಿಜಿಸ್ಟಾರ್ ಡಾ| ದೇವದಾಸ್‌ ಪೈ ಅವರು ಚಿನ್ನಾ ಕಾಸರಗೋಡು ಅವರಿಗೆ ಹಸ್ತಾಂತರಿಸಿದರು. ಚಿನ್ನಾ ಅವರು ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು. ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಕುಂದಾಪುರ […]

ಬ್ರಹ್ಮಶ್ರೀ ನಾರಾಯಣ ಗುರುಗಳ 157ನೇ ಜನ್ಮ ದಿನಾಚರಣೆ

Monday, September 12th, 2011
Narayana Guru Jayanti

ಮಂಗಳೂರು: ಅಖೀಲ ಭಾರತ ಬಿಲ್ಲವರ ಯೂನಿಯನ್‌, ಬಿಲ್ಲವರ ಮಹಿಳಾ ಸಂಘ ಹಾಗೂ ಕುದ್ರೋಳಿಯ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಅವರ 157ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾರಾಯಣ ಗುರು ಅವರ ಜನ್ಮದಿನವನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನೂ ಪಾಲಿಸಬೇಕು. ಬಿಲ್ಲವ ಸಮಾಜದ ಅಭಿವೃದ್ಧಿಗೆ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ, ನಗರದ ಕುಂಜತ್ತಬೈಲ್‌ನಲ್ಲಿ ನಿರ್ಮಿಸಲು […]

ಬಜಪೆ ಸಹಕಾರಿ ಬ್ಯಾಂಕ್ ಹಾಗೂ ಎಸ್.ಡಿ.ಸಿ.ಸಿ. ಬ್ಯಾಂಕಿಗೆ ಅಪೆಕ್ಸ್‌ ಪ್ರಶಸ್ತಿ

Sunday, September 11th, 2011
Apex-Award

ಬಜಪೆ: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 2009 -10ನೇ ಸಾಲಿಗೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ನೀಡುವ ಪ್ರಥಮ ಸ್ಥಾನದ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೆ. 10ರಂದು ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು. ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಹಾಗೂ ಪ್ರದಾನ […]

ದರ್ಶನ್ ಕುಡಿದು ಬಂದು ಹಲ್ಲೆ ಮಾಡಿದರಲ್ಲದೆ, ಮಗುವಿನ ಮೇಲೆ ಸಂಶಯ ಪಟ್ಟರು

Saturday, September 10th, 2011
Darshan-Vijayalakshmi

ಬೆಂಗಳೂರು: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರದ ಕೈದಿಯಾಗಿದ್ದಾರೆ. ಈ ಪ್ರಕರಣ ದರ್ಶನ್ ಸಿನಿಮಾ ಲೈಫಿಗೆ ಮಾರಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರಿಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಅವರಿಂದಲೇ ನಟಿ ನಿಖಿತಾ ಪರಿಯಚಯವಾಗಿದ್ದು ಎಂದು ಗಾಂಧೀ ನಗರದ ಜನ ಹೇಳುತ್ತಿದ್ದಾರೆ. ಇಷ್ಟು ದಿನ ಬೆಳ್ಳಿ ತೆರೆಯ […]

ನೋ ಪಾರ್ಕಿಂಗ್‌ : ಪಾಲಿಕೆಯ ಆರೋಗ್ಯ ಅಧಿಕಾರಿಗೆ ದಂಡ

Saturday, September 10th, 2011
Manjayya-Shetty-Car

ಮಂಗಳೂರು : ನೋ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಅವರ ವಾಹನಕ್ಕೆ ಮಂಗಳೂರು ನಗರದ ಟ್ರಾಫಿಕ್‌ ಪೊಲೀಸರು ಲಾಕ್‌ ಮಾಡಿ ಪ್ರಕರಣ ದಾಖಲಿಸುವ ಮೂಲಕ ಕಾನೂನು ಪಾಲನಾ ನಿಯಮಕ್ಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ. ಮಂಜಯ್ಯ ಶೆಟ್ಟಿ ಅವರು ಶುಕ್ರವಾರ ಸಂಜೆ 5.15 ರ ವೇಳೆಗೆ ತನ್ನ ಕಾರನ್ನು ಪಿ.ವಿ.ಎಸ್‌. ಜಂಕ್ಷನ್‌ ಬಳಿ ಎಂ.ಜಿ. ರಸ್ತೆಯಲ್ಲಿ ಮಾನಸ ಟವರ್ ಎದುರು ನಿಲ್ಲಿಸಿ ಹೋಗಿದ್ದರು. ಈ ಮಾರ್ಗವಾಗಿ ಬಂದ ಟ್ರಾಫಿಕ್‌ […]

ಪರಿಸರ ನಿಯಂತ್ರಣ ಮಂಡಳಿಯ ಉಪ ಅಧಿಕಾರಿ ಲೋಕಾಯುಕ್ತ ಬಲೆಗೆ

Friday, September 9th, 2011
Lokayukta Raid/ಲೋಕಾಯುಕ್ತ ಬಲೆಗೆ

ಉಡುಪಿ: ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರವಿಚಂದ್ರ ಕೆ. ಅವರು ಮಣಿಪಾಲದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪನೆಯ ಪರವಾನಿಗೆಗೆ ಲಂಚ ಪಡೆಯುತ್ತಿದ್ದಾಗ ಉಡುಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿಸರ್ಗ ಕೋಕನೆಟ್‌ ಇಂಡಸ್ಟ್ರೀಸ್‌ ಎಂಬ ಕೈಗಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಕುಂದಾಪುರ ತಾಲೂಕು ಯೆಡ್ಯಾಡಿ-ಮತ್ಯಾಡಿ ಗ್ರಾಮದ ಗಣೇಶ್‌ ಆನಂದ ಅವರು ನಿರಾಕ್ಷೇಪಣಾ ಪತ್ರ ಕೋರಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪರಿಸರ ಮಾಲಿನ್ಯ ಅಧಿಕಾರಿಯವರಿಗೆ ಆ.12ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರೂ.5,000 ಶುಲ್ಕ ಪಾವತಿಸಿದ್ದರು. ಪರಿಸರ ಮಾಲಿನ್ಯ […]