ಪ್ರವಾಸ ಬಂದಿದ್ದ ಬೆಂಗಳೂರಿನ ಬಾಲಕಿ ಸೋಮೇಶ್ವರ ಬೀಚಿನಲ್ಲಿ ನೀರುಪಾಲು

Monday, December 24th, 2018
someshwara

ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್ಗೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬ ಸಮುದ್ರದ ಸೆಳೆತಕ್ಕೆ ಸಿಲುಕಿದ ಪರಿಣಾಮ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ನಾಲ್ಕು ವರುಷದ ಬಾಲಕಿ ಮೈತ್ರೇಯಿ ಕೇತ್ಕರ್ ಸಾವನ್ನಪ್ಪಿದ ಬಾಲಕಿ. ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ಕುಟುಂಬ ಸೋಮೇಶ್ವರ ಬೀಚಿನಲ್ಲಿ ಮೋಜು ಮಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಕ್ಕಿದೆ. ಚಿಂತಾಮಣಿ ಕೇತ್ಕರ್, ಶ್ರದ್ದಾ ಕೇತ್ಕರ್ ಮತ್ತು ಅವರ ಮಕ್ಕಳಾದ ಏಳು ವರ್ಷದ ಜಾರ್ಜಿ ಕೇತ್ಕರ್ ಹಾಗೂ ಮೈತ್ರೇಯಿ ಕೇತ್ಕರ್ ಸಮುದ್ರದ ಸೆಳೆತಕ್ಕೆ ಸಿಲುಕಿದ್ದರು. ಸೋಮೇಶ್ವರ ಬೀಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್ […]

ಜಾರಕಿಹೊಳಿ ಯಾವಾಗ ಪಕ್ಷಕ್ಕೆ ರಾಜೀನಾಮೆ ಕೊಡುತ್ತಾರೋ ಆಗ ಮಾತ್ರ ಮಾತುಕತೆ: ಶೋಭಾ ಕರಂದ್ಲಾಜೆ

Monday, December 24th, 2018
shobha-karandlaje

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಯಾವೊಬ್ಬ ಶಾಸಕರಾದರೂ ತಮ್ಮ ಪಕ್ಷ ತೊರೆದರೆ ಮಾತ್ರ ಅವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಮಾಜಿ ಸಚಿವ ರಮೇಶ್ ಕುಮಾರ್ ಅವರನ್ನು ಸಂಪರ್ಕಿಸಿಲ್ಲ, ಪಕ್ಷಕ್ಕೆ ಆಹ್ವಾನವನ್ನೂನೀಡಿಲ್ಲ, ಯಾವಾಗ ಅವರು ತಮ್ಮ ಪಕ್ಷಕ್ಕೆ ರಾಜೀನಾಮೆ ಕೊಡುತ್ತಾರೋ ಆಗ ಮಾತ್ರ ನಾವು ಮಾತನಾಡಿಸುತ್ತೇವೆ ಎಂದರು. ರಮೇಶ್ ಜಾರಕಿಹೊಳಿ ನೋವಿನ ಮಾತುಗಳು ಕಾಂಗ್ರೆಸ್ ಆಂತರಿಕ ಭಾವನೆ. ಕಾಂಗ್ರೆಸ್ – ಜೆಡಿಎಸ್ […]

ಬಡ ರೋಗಿಗಳಿಗೆ ನೆರವಿನ ಹಸ್ತ: ಮಂಗಳೂರು ಯುವಕನ ಸೇವೆಗೆ ಶ್ಲಾಘನೆ

Monday, December 24th, 2018
manglore

ಮಂಗಳೂರು: ಬೇರೆಯವರ ಕಷ್ಟವನ್ನು ಕಂಡರೂ ಕಾಣದಂತೆ ಹೋಗುವವರು ಅದೆಷ್ಟೊ, ಅವರ ಬೆನ್ನಿಗೆ ನಿಂತು ಸಹಾಯ ಮಾಡುವ ಕೈಗಳು ಕೆಲವು ಮಾತ್ರ. ಮಂಗಳೂರು ಮೂಲದ ಯುವಕ ಪುನೀತ್ ಕುಮರಾ್ ಮಡಂತ್ಯಾರ್ ಬಡ ರೋಗಿಗಳ ಪಾಲಿಗೆ ಬಂಧುವಾಗಿ ನಿಂತಿದ್ದು, ಈತನ ನಿಸ್ವಾರ್ಥ ಸೇವೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಪುನೀತ್ ಸಾಮಾಜಿಕ ಕಳಕಳಿಗೆ ಮೊದಲ ಸ್ಪೂರ್ತಿ 2014 ರ ಚುನಾವಣೆಯ ಸಂದರ್ಭ, ಚುನಾವಣೆ ಎಂದರೆ ತಮ್ಮ ಪಕ್ಷಕ್ಕೆ ಮತ ಕೊಡಿ ಎಂದು ಕಾರ್ಯಕರ್ತರು ಮನೆಮನೆಗೆ ತೆರಳುವುದು ಸಾಮಾನ್ಯ. ಈ ಸಂದರ್ಭ ಪಕ್ಷವೊಂದರ […]

ಅಪ್ರಾಪ್ತೆ ಮೇಲೆ ನಾಲ್ಕು ದಿನ ಸತತ ಅತ್ಯಾಚಾರ: ಕಾಮುಕನ ಬಂಧನ

Monday, December 24th, 2018
attacked

ಮೈಸೂರು: 14 ವರ್ಷದ ಅಪ್ರಾಪ್ತೆಯನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೊಳವಿಗೆ ಗ್ರಾಮದ ದಿನೇಶ (27) ಬಂಧಿತ. ಕಳೆದ ನಾಲ್ಕು ದಿನಗಳಿಂದ ಅಪ್ರಾಪ್ತೆ ಮೇಲೆ ಸತತ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಈತನ ವಿರುದ್ಧ ಹುಡುಗಿ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಈತನಿಗಾಗಿ ಎಚ್.ಡಿ.ಕೋಟೆ ಮತ್ತು ಸರಗೂರು ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕಡೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ […]

3 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಮೇಶ್ ರಾಜೀನಾಮೆ:ರಮೇಶ್ ಜಾರಕಿಹೊಳಿ

Monday, December 24th, 2018
ramesh-jarakihole

ಬೆಂಗಳೂರು: ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇನ್ನು 3 ದಿನಗಳಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ನೀಡುವುದು ಸತ್ಯ, ಇನ್ನು ಮೂರು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಜೊತೆಗೆ ಚರ್ಚೆ ನಡೆಸುವುದಿಲ್ಲ, ಹಾಗೆಯೇ ಬಿಜೆಪಿಗೂ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

ದೇಶದ ನವೋದಯ ಶಾಲೆಗಳಲ್ಲಿ 5 ವರ್ಷಕ್ಕೆ 49 ವಿದ್ಯಾರ್ಥಿಗಳ ಆತ್ಮಹತ್ಯೆ… ದಲಿತ, ಬುಡಕಟ್ಟು ಮಕ್ಕಳೇ ಹೆಚ್ಚು

Monday, December 24th, 2018
navodaya

ದೆಹಲಿ: ಗ್ರಾಮಿಣ ಭಾಗದ ಪ್ರತಿಭಾನ್ವಿತ ಮಕ್ಕಳಿಗೆಂದು ಕೇಂದ್ರ ಸರ್ಕಾರದಿಂದ ನಿರ್ಮಿಸಲಾದ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್ವಿ) ಕೇವಲ ಐದು ವರ್ಷಗಳಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಸುಮಾರು 49 ಆತ್ಮಹತ್ಯೆ ಪ್ರಕರಣಗಳು ನಡೆದಿದೆ ಎಂದು ಆರ್ಟಿಐ ಮಾಹಿತಿಯೊಂದು ಹೇಳಿದೆ. 2013 ರಿಂದ 2017 ರವರೆಗೆ ನಡೆದ 49 ಆತ್ಮಹತ್ಯೆ ಪ್ರಕರಣಗಳಲ್ಲಿ ಅರ್ಧದಷ್ಟು ದಲಿತ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿರುವ ವಿದ್ಯಾರ್ಥಿಗಳೇ ಇದ್ದಾರೆ. ಇದರಲ್ಲಿ ಹೆಚ್ಚಿನವರು ಹುಡುಗರು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಇಂಗ್ಲಿಷ್ ದೈನಿಕವೊಂದು ಪಡೆದ ದಾಖಲೆಗಳಿಂದ ತಿಳಿದುಬಂದಿದೆ. ಸರ್ಕಾರದ […]

ರೈತರ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಸ್ಪಂದನೆ: ಡಾ. ಜಯಮಾಲಾ

Monday, December 24th, 2018
jayamala

ಉಡುಪಿ: ರೈತರು ದೇಶದ ಬೆನ್ನುಲುಬು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಕ್ಷಾತೀತವಾಗಿ ಪರಿಹರಿಸಲು ಎಲ್ಲಾ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ. ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂದಿತ ಇಲಾಖೆಗಳು ಹಾಗೂ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು […]

ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್​​ ಅಸಮಾಧಾನ ಸ್ವಾಭಾವಿಕ: ಪರಮೇಶ್ವರ್

Saturday, December 22nd, 2018
parameshwar

ದೇವನಹಳ್ಳಿ: ಸಚಿವ ಸ್ಥಾನ ಹಂಚಿಕೆ ವೇಳೆ ಸ್ವಾಭಾವಿಕವಾಗಿ ಅಸಮಾಧಾನ ಇದ್ದೆ ಇರುತ್ತೆ. ಇವೆಲ್ಲವೂ ಸರಿ ಹೋಗುತ್ತೆ ಎಂದು ಡಿಸಿಎಂ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿಸಿಎಂ ಪರಮೇಶ್ವರ್ ಏರ್ಪೋರ್ಟ್ನಲ್ಲಿ ಮಾತನಾಡಿ, ವರಿಷ್ಠರು ಆರು ಸ್ಥಾನಗಳ ಜತೆಗೆ ಇಬ್ಬರ ಹೆಸರನ್ನು ಡ್ರಾಪ್ ಮಾಡಿ ಎಂಟು ಶಾಸಕರಿಗೆ ಸಚಿವ ಸ್ಥಾನ ನೀಡಲು ಸಮ್ಮತಿಸಿದ್ದಾರೆ.. ರಾಮಲಿಂಗಾರೆಡ್ಡಿ ಹಾಗೂ ಬಿಸಿ ಪಾಟೀಲ್ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಅವರು ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ. ಇವೆಲ್ಲವೂ ಸರಿ ಹೋಗುತ್ತದೆ ಎಂದರು. ಸಚಿವ […]

ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದು ನನಗೆ ದುಃಖ ತಂದಿದೆ: ಲಕ್ಷ್ಮಿ ಹೆಬ್ಬಾಳ್‌ ಕರ್‌

Saturday, December 22nd, 2018
laxmi-hebbalkar

ಬೆಂಗಳೂರು: ರಮೇಶ್‌ ಜಾರಕಿ ಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿರುವುದು ನನಗೆ ವೈಯಕ್ತಿಕವಾಗಿ ತುಂಬಾ ದುಃಖ ತಂದಿದೆ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ ಕರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಷ್ಠರು 22 ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದರು. ಹೈಕಮಾಂಡ್‌ ಏನು ಹೇಳುತ್ತದೆಯೋ ಅದನ್ನು ಕೇಳುವವಳು ನಾನು ,ಪಕ್ಷದ ಶಿಸ್ತಿನ ಸಿಪಾಯಿ,ಚೌಕಟ್ಟನ ಒಳಗೆ ಇರುವವಳು. ಎಂದೂ ಸಚಿವ ಹುದ್ದೆಯ ಆಕಾಂಕ್ಷಿ ಎಂದಿರಲಿಲ್ಲ ಎಂದರು. […]

ಎಂಆರ್​ಪಿಎಲ್ ವಿಸ್ತರಣೆ ತುಂಬಾ ಗಾಬರಿಗೊಳಗಾಗಬಹುದಾದ ಸಂಗತಿ: ಡಾ.ಸತಿನಾಥ್ ಸಾರಂಗಿ

Saturday, December 22nd, 2018
MRPL-2

ಮಂಗಳೂರು: ಎಂಆರ್ಪಿಎಲ್ ವಿಸ್ತರಣೆ ಸಣ್ಣ ಸಂಗತಿಯಲ್ಲ. ತುಂಬಾ ಗಾಬರಿಗೊಳಗಾಗಬಹುದಾದ ಸಂಗತಿ ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ.ಸತಿನಾಥ್ ಸಾರಂಗಿ ಹೇಳಿದರು. ಕರಾವಳಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ವತಿಯಿಂದ ದಕ್ಷಿಣ ಕನ್ನಡ‌ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ, ಎಂಆರ್ಪಿಎಲ್ ವಿಸ್ತರಣೆ ವಿರೋಧಿಸಿ, ‘ತುಳುನಾಡು ಉಳಿಸಿ’ ಜನಾಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಂಆರ್ಪಿಎಲ್ ಸುತ್ತಮುತ್ತಲಿನ ಪರಿಸರದಲ್ಲಿ ನಾನು ಈಗಾಗಲೇ ಸುತ್ತಾಡಿದ್ದು, ಅಲ್ಲಿಯ ಪರಿಸರ ನೋಡಿ ನನಗೆ ಆನಂದವಾಯಿತು. ಆದರೆ ಇಷ್ಟು ಒಳ್ಳೆಯ ಭೂಪ್ರದೇಶಗಳು ಎಂಆರ್ಪಿಎಲ್ನಿಂದಾಗಿ […]