ಶ್ರೀಕರ್ ಪ್ರಭು ಅವರಿಗೆ “ಆಟೋ ರಿಕ್ಷಾ” ಚಿಹ್ನೆ

Monday, April 30th, 2018
srikara prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” ಆರಿಸಿದ್ದು, ಇದೊಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಚಿಹ್ನೆಯಾಗಿದ್ದು ಈ ಮೂಲಕ ಶ್ರೀಕರ್ ಪ್ರಭು ಅವರು ಭಾರಿ ಮತಗಳ ಅಂತರಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” […]

ಹೊಸ ರಾಜಕೀಯ ಪಕ್ಷ ಕಟ್ಟುವರೇ ಪ್ರಕಾಶ್ ರೈ

Monday, April 30th, 2018
Praksh Rai

ಮಂಗಳೂರುಃ ತಾನೀಗ ಸಕ್ರಿಯ ರಾಜಕಾರಣದಲ್ಲಿದ್ದು, ಮಂದಿನ ದಿನಗಳಲ್ಲಿ ತನ್ನ ರಾಜಕಾರಣವನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲಿದ್ದೇನೆ ಎಂದು ಖ್ಯಾತ ಚಿತ್ರನಟ ಪ್ರಕಾಶ್ ರೈ ಹೇಳಿದ್ದಾರೆ. ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಸಂಘಟಿಸಬೇಕಾಗಿದ್ದು, ದೇಶ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಈಗಾಗಲೇ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಗಳು ಸಂಪರ್ಕದಲ್ಲಿವೆ ಎಂದು ಶನಿವಾರ ನಗರದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಹೇಳಿದರು. ಚುನಾವಣೆ ಮುಕ್ತಾಯ ತನಕ ರಾಜ್ಯದ ಎಲ್ಲಡೆ ಪ್ರವಾಸ ನಡೆಸಲಿದ್ದೇನೆ. ಅನಂತರ, ಯುವ ನಾಯಕರಾದ […]

ಖೆಡ್ಡಾಕ್ಕೆ ಬಿದ್ದ ಅಭಯಚಂದ್ರ ಜೈನ್ ? ನಿಮಗಿದು ಗೊತ್ತೇ ?

Friday, April 27th, 2018
Abhayachandra Jain

ಮಂಗಳೂರು : ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬಿದ್ದಂತೆ ಎಂಬ ಹಳೆಯ ಮಾತಿದೆ. ಭಾರೀ ಬುದ್ಧಿವಂತಿಕೆ ತೋರಿಸಿ ಲಾಭ ಮಾಡಲು ಹೋಗಿ ತಾವೇ ಗುಂಡಿಗೆ ಬೀಳುವ ಜನರಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ವಿಚಾರದಲ್ಲಿ ಈಗ ಹೀಗೆಯೋ ಆದಂತಿದೆ. ಕಳೆದೆರಡು ಮೂರು ತಿಂಗಳಿನಿಂದ ಮೂಡಬಿದಿರೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹವಾ ಭಾರೀ ಜೋರಾಗಿತ್ತು. ಈಗ ಕಾಂಗ್ರೆಸ್ ಹವಾ ಠುಸ್ ಆಗಿದೆ. ಕಾಂಗ್ರೆಸ್ ಪರವಾಗಿದ್ದ ಯುವಕರ ಗುಂಪು ತಂಢಾ ಹೊಡೆದಿದೆ. ಇದಕ್ಕೆ ಕಾರಣ ಯುವಕಾಂಗ್ರೆಸ್ ಮುಖಂಡ […]

ಕುಂದಾಪುರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ನಾಮಪತ್ರ ಸಲ್ಲಿಕೆ

Saturday, April 21st, 2018
rakesh-malli

ಕುಂದಾಪುರ : ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕುಂದಾಪುರ ಸಹಾಯಕ ಆಯುಕ್ತರ ಮೂಲಕ ಉಡುಪಿಯ ಕುಂದಾಪುರದ ಮಿನಿವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭ ದಲ್ಲಿ ಶಾಸ್ತ್ರೀ ಸರ್ಕಲ್‌ನಿಂದ ಮಿನಿವಿಧಾನ ಸೌಧದವರೆಗೆ ಬೃಹತ್ ಮೆರವಣಿಗೆ ಹಾಗೂ ಸಾವಿರಾರು ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಿತು.

ದಕ್ಷಿಣ ಕನ್ನಡದ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಂಟ ಸಮುದಾಯಕ್ಕೆ ಟಿಕೇಟು

Saturday, April 21st, 2018
Bjp 4 bunts

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದ್ದು 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಜಿಲ್ಲೆಯ ಪ್ರಭಾವಿ ಬಂಟ ಸಮುದಾಯಕ್ಕೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು ಜಿಲ್ಲೆಯ ಕಮಲ ಪಾಳಯದಲ್ಲಿ ಬಂಡಾಯ ಸ್ಪೋಟಗೊಳ್ಳುವ ಪರಿಸ್ಥಿತಿ ಸೃಷ್ಠಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ, ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್‌ ಉಳಿಪಾಡಿಗುತ್ತು, ಮಂಗಳೂರು ವಿಧಾನ ಸಬಾ […]

ಮಂಡ್ಯ ಜಿಲ್ಲೆಯಲ್ಲಿ ಹೊಸ ಸಂಚಲನ… ರಮ್ಯಾ ತಾಯಿ ರಾಜಕೀಯಕ್ಕೆ

Tuesday, March 20th, 2018
ramya

ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಯೇ? ಇಂತಹದ್ದೊಂದು ಹೊಸ ಬಾಂಬ್ ಈಗಷ್ಟೇ ಸ್ಫೋಟಗೊಂಡಿದೆ. ಇದು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನಕ್ಕೂ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ತಮ್ಮನ್ನು ಸರಿಯಾದ ರೀತಿ ನಡೆಸಿಕೊಳ್ಳುತ್ತಿಲ್ಲ. ಎರಡೂವರೆ ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ ಸೂಕ್ತ ಸ್ಥಾನ-ಮಾನ ನೀಡಿಲ್ಲವೆಂಬ ಕಾರಣದಿಂದ ಅಸಮಾಧಾನಗೊಂಡಿರುವ ರಂಜಿತಾ ಅವರು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಆಪ್ತ ಮೂಲಗಳು […]

ಕಾಂಗ್ರೆಸ್ : ರಾಜ್ಯ ವಿಧಾನ ಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಜೆ.ಆರ್.ಲೋಬೊ ಕಣಕ್ಕೆ

Saturday, April 6th, 2013
JR Lobo & Ivan D Souza

ಮಂಗಳೂರು : ಕಾಂಗ್ರೆಸ್ ಪಕ್ಷದಿಂದ ರಾಜ್ಯ ವಿಧಾನ ಸಭೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈಗ ಸಿದ್ಧವಾಗಿರುವ ಪಟ್ಟಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಜೆ.ಆರ್.ಲೋಬೊ ರಿಗೆ ಟಿಕೆಟ್ ನೀಡಲಾಗಿದೆ. ಕೆಲ ತಿಂಗಳ ಹಿಂದೆ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿದ  ಜೆ.ಆರ್.ಲೋಬೊ ಪಕ್ಷಕ್ಕೆ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ತೆರೆ ಮರೆಯಲ್ಲೇ  ತನ್ನ ಪಾಲಿನ ಕೆಲಸ ಮಾಡಿಕೊಂಡಿದ್ದರು. ಒಂದೆಡೆ ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ಪರ್ಧಿಸುವ ಅವಕಾಶ ಒದಗಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ಹತ್ತೂರಿನ ಪುತ್ತೂರಿನಲ್ಲಿ ಡಿವಿಎಸ್ ವಿರುದ್ಧ ಕರಂದ್ಲಾಜೆ

Monday, January 28th, 2013
Sadananda Gowda, Shobha Karandlaje

ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ […]

ಕರಾವಳಿಯ ಜೆಡಿಎಸ್ ನಲ್ಲಿ `ಸದಾ’ ಹೊಸ ಸಂಚಲನ

Friday, December 28th, 2012
Sadananda Shetty

ಮಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ರಾಜಕೀಯ ಕಸರತ್ತು ಆರಂಭಗೊಂಡಿದೆ. ಅದರಲ್ಲೂ ಜೆಡಿಎಸ್ ಈ ನೆಲೆಯಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ. ಸದಾನಂದ ಶೆಟ್ಟಿ ಅವರನ್ನು ಘೋಷಿಸಿದೆ. ಈ ಮೂಲಕ ರಾಜ್ಯದಲ್ಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಅದು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಅಂತಿಮ ನಿರ್ಧಾರವನ್ನು ವನ್ನು […]