ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜಿನಾಮೆ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ

Tuesday, October 5th, 2010
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಐ.ಎ.ಡಿ.ಬಿ ಹಗರಣದಲ್ಲಿ ಭಾಗಿಯಾಗಿರುವ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಟು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯೆದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ, ಮುಖ್ಯಮಂತ್ರಿಗಳು ಅದಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ಹಾಗೂ ಅವರ ಮಗ ಕಟ್ಟಾ ಜಗದೀಶ್ ನಾಯ್ಡು ಅಧಿಕಾರವನ್ನು ದುರುಪಯೋಗ ಮಾಡಿ ರಾಜ್ಯದ ಸಂಪತ್ತನ್ನು ಲೂಟಿಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ […]

ರಾಜ್ಯ ಸಚಿವ ಸಂಪುಟದ ವಿಸ್ತರಣೆ : ಆರು ಮಂದಿ ಸಚಿವರಿಗೆ ಪ್ರಮಾನವಚನ

Wednesday, September 22nd, 2010
ಆರು ಮಂದಿ ನೂತನ ಸಚಿವರು

ಬೆಂಗಳೂರು : ರಾಜ್ಯ ಸರಕಾರವು ಸಚಿವ ಇಂದು ಬೆಳಗ್ಗೆ 9.30ಕ್ಕೆ ಸಂಪುಟದ ಪುನಾರಚನೆ ಮಾಡಿದೆ.  ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಮಂದಿ  ಸಚಿವರಿಗೆ ರಾಜ್ಯಪಾಲರು ಪ್ರಮಾನವಚನ ಭೋದಿಸಿದರು. ನೂತನ ಸಂಪುಟದದಲ್ಲಿ ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಅವರು ರಾಜ್ಯಪಾಲರಿಂದ ಪ್ರಮಾನವಚನ ಸ್ವೀಕರಿಸಿದರು. ಬಿ.ಜೆ.ಪಿ ಶಾಸಕರ ಮತ್ತು ಸಚಿವರುಗಳ ಬೆದರಿಕೆ ನಡುವೆಯೂ ಸಂಪುಟ ಪುನರ್ ರಚನೆ ಇಂದು ನಡೆಯಿತು. ಶೋಭಾ ಕರಂದ್ಲಾಜೆ ಮತ್ತು ವಿ. […]

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

Tuesday, September 21st, 2010
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

ಬೆಂಗಳೂರು : ಚಿಕ್ಕಮಗಳೂರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕ ಸಿ.ಟಿ.ರವಿ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಗೊಂಡಿದೆ. ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಯಾವುದೇ ಬೆಲೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಸಿ.ಟಿ.ರವಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಮಾತುಕತೆ […]

ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

Sunday, September 19th, 2010
ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

ಬೆಂಗಳೂರು : ರಾಜ್ಯ ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದಗೊಂಡಿದ್ದು, ಇಂದು ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ  ಅಂತಿಮ ಪಟ್ಟಿ ತಯಾರಿಸಲಾಗಿದೆ. ಇದೀಗ ದೆಹಲಿನಲ್ಲಿರುವ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಬಿ. ಎಸ್ ಯಡ್ಡಿಯೂರಪ್ಪ ದೆಹಲಿಗೆ ಪಯಾಣಿಸಿದ್ದಾರೆ. ಗೃಹ ಸಚಿವ ವಿ ಎಸ್ ಆಚಾರ್ಯ ಸಿಎಂ ಜತೆ  ದೆಹಲಿಗೆ ಪಯಾಣಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಜತೆ ನಡೆಯಲಿರುವ ಚರ್ಚೆ ಬಳಿಕ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಬಿಡುಗಡೆ ಗೊಳ್ಳಲಿದೆ. ಸಿಎಂ ನಿವಾಸದಲ್ಲಿ  ಈಶ್ವರಪ್ಪ ಮತ್ತು ರಾಜ್ಯಸಭಾ ಸದಸ್ಯ […]

ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

Thursday, September 16th, 2010
ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

ಗುಲ್ಬರ್ಗಾ : ಸೋಮವಾರ ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮರು ಮತದಾನದ  ಮತಎಣಿಕೆ ಮುಕ್ತಾಯವಾಗಿದ್ದು ಆಡಳಿತ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. , ಪ್ರತಿಷ್ಠೆಯಮಾರ್ಪಟ್ಟಿದ್ದ , ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆಯ  ಕಣವಾಗಿದ್ದ   ಕಡೂರಿನಲ್ಲಿ ಬಿಜೆಪಿಯ ಡಾ. ವೈ.ಸಿ. ವಿಶ್ವನಾಥ್  ಗೆಲುವು ದಾಖಲಿಸಿದ್ದರೆ, ಜೆಡಿಎಸ್‌ನ ವೈ.ಎಸ್.ವಿ. ದತ್ತಾ ಅವರು ಸೋಲು ಅನುಭವಿಸಿದ್ದಾರೆ.  ಕಾಂಗ್ರೆಸ್‌ನ ಕೆಂಪರಾಜು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ […]

ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ

Sunday, September 12th, 2010
ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ

ಬೆಂಗಳೂರು,  : ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ಹಾಸನ ಹಾಗೂ ಮೈಸೂರು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ  ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ರಾಮಚಂದ್ರಗೌಡರು ಅವರ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ್ ನಡೆದಿಲ್ಲ ಎಂದು ರಾಜ್ಯ ಹೈಕೋರ್ಟ್  ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಆದರೆ ಆಸ್ಪತ್ರೆಗಳ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಸಚಿವ ರಾಚಂಗೌಡ ಅವರ ಅಫಿಡವಿಟ್ ಅನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಸಿಎಂ ಯಡಿಯೂರಪ್ಪ […]

ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

Saturday, September 4th, 2010
ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

ಮಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಗೂ ಕಾಶ್ಮೀರಕ್ಕೆ ಸ್ವಾಯತ್ತತೆ ವಿರೋಧಿಸಿ, ಭಾರತೀಯ ಜನತಾಪಾರ್ಟಿ ವತಿಯಿಂದ ಪ್ರತಿಭಟನೆಯು ಇಂದು ಬೆಳಿಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಜರಗಿತು.

ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

Saturday, August 21st, 2010
ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ,  ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗುವ ಮೂಲಕ ರೆಡ್ಡಿ ಸಹೋದರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಿರು ಸಾಗಾಟ ರಫ್ತು ಪರ್ಮಿಟ್ ರದ್ದು ಮಾಡಿರುವುದಾಗಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿ ಸಲ್ಲಿಕೆಯಾಗುವವರೆಗೂ ಈ ತಡೆಯಾಜ್ಞೆ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ […]

ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

Saturday, August 21st, 2010
ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

ಮಂಗಳೂರು : ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ ಶುಕ್ರವಾರ ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ 21ನೇ ಶತಮಾನದಲ್ಲಿ ಭಾರತವನ್ನು ಅಭಿವೃದ್ದಿಯ ಪಥಕ್ಕೆ ಕೊಂಡುಹೋಗಬೇಕೆಂದು ಕನಸು ಕಂಡವರು ರಾಜಿವ್ ಗಾಂಧಿ , ಇವರು ಆಕಸ್ಮಿಕ ಸನ್ನಿವೇಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದರು, ಸಾಕ್ಷಾರತಾ ಆಂದೋಲನಕ್ಕೆ ಕಾರಣ ರಾಜೀವ್ ಗಾಂಧಿಯವರಾಗಿದ್ದಾರೆ. ಮೀಸಲಾತಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ತಂದವರು ರಾಜೀವ್ ಗಾಂಧಿಯವರಾಗಿದ್ದು […]