ಕೊಣಾಜೆ ಬಳಿ ಬಾಲಕನನ್ನು ಕಟ್ಟಿ ಹಾಕಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Monday, August 8th, 2011
House theft/ ಮನೆ ದರೋಡೆ

ಮಂಗಳೂರು : ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಪಜೀರು ಪೆರ್ನದ ಮನೆಯೊಂದರಿಂದ ಭಾನುವಾರ ಮುಂಜಾನೆ ಸುಮಾರು 3 ಲಕ್ಷ ರೂ. ಮೌಲ್ಯದ 15 ಪವನ್‌ ಚಿನ್ನಾಭರಣ ಕಳವು ಮಾಡಲಾಗಿದೆ. ಕಳ್ಳರು ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿ ಕಳ್ಳತನದ ಕೃತ್ಯ ನಡೆಸಿದ್ದಾರೆ . ಮನೆಯ ಮಾಲೀಕ ಡೆನಿಸ್‌ ಅಪೋಸ್‌ ವಿದೇಶದಲ್ಲಿದ್ದು ಫಜೀರು ಪೆರ್ನದ ಅವರ ಮನೆಯಲ್ಲಿ ಡೆನಿಸ್‌ ಅಪೋಸ್‌ರವರ ಹತ್ತು ವರ್ಷದ ಮಗ ಮತ್ತು ಅತ್ತೆ ಮಾತ್ರ ಮನೆಯಲಿದ್ದರು. ಅವರ ಮನೆಯಲ್ಲಿ ಪತ್ನಿ ಡೊಡ್ಡಿ, ಪುತ್ರ ಡೆನ್ಮರ್‌,ಅತ್ತೆ ರೊಸಾಲಿನ್‌ […]

ಮುಂಬಯಿ- ಮಂಗಳೂರು ಖಾಸಗಿ ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

Friday, August 5th, 2011
Bus-Passenger-Luted/ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

ಮಂಗಳೂರು : ಮುಂಬಯಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಾಸರಗೋಡಿನ ಕುಂಬಳೆಯ ವಿಶ್ವನಾಥ ಶೆಟ್ಟಿ (36) ಯವರನ್ನು ಬುಧವಾರ ರಾತ್ರಿ ಮತ್ತು ಬರುವ ಪದಾರ್ಥ ನೀಡಿ. ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿಗೈಯಲಾಗಿದೆ. ಮಂಗಳೂರಿಗೆ ತಲುಪುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಉಟ್ಟ ಬಟ್ಟೆ ಮತ್ತು ಮೊಬೈಲ್‌ ಫೋನ್‌ ಹೊರತು ಪಡಿಸಿ ಉಳಿದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮುಂಬಯಿನ ಮಲಾಡ್‌ನಿಂದ ಖಾಸಗಿ ಸಂಸ್ಥೆಯ ವೋಲ್ವೊ ಬಸ್ಸನ್ನೇರಿದ ವಿಶ್ವನಾಥ ಶೆಟ್ಟಿ ಅವರು ಗುರುವಾರ ಪೂರ್ವಾಹ್ನ 10.30 ಕ್ಕೆ ಮಂಗಳೂರಿಗೆ ತಲುಪಿದಾಗ […]

ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು, ಬೆಳ್ಳಿ ಪ್ರಭಾವಳಿ ಸಹಿತ 2.74 ಲಕ್ಷ ರೂ. ವೌಲ್ಯದ ಸೊತ್ತು ಕಳವು

Monday, August 1st, 2011
Rama bajana-Mandhir/ ರಾಮ ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್‌ಕಟ್ಟೆ ಬಳಿ ಇರುವ ಶ್ರೀರಾಮ ಭಜನಾ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಮತ್ತು ಚಿನ್ನಾಭರಣ ,ಕಾಣಿಕೆ ಹುಂಡಿಯ ನಗದು ಸೇರಿದಂತೆ ಒಟ್ಟು 2.74 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಭಜನಾ ಮಂದಿರದ ಹೊರ ಬಾಗಿಲಿನ ಬೀಗ ಮುರಿದ ಕಳ್ಳರು ಗರ್ಭಗುಡಿಯ ಕಿಟಕಿಯ ಸರಳು ಬಗ್ಗಿಸಿ ಒಳ ನುಗ್ಗಿದ್ದಾರೆ. ರಾಮದೇವರ ಮೂರ್ತಿಗೆ ಅಳವಡಿಸಿದ 2 ಕೆಜಿ ಬೆಳ್ಳಿ ಪ್ರಭಾವಳಿ, ಅರ್ಧ ಕೆಜಿ […]

ಹೊಸ ಚಲನಚಿತ್ರಗಳ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟಗಾರರ ಬಂಧನ.

Thursday, October 21st, 2010
ಹೊಸ ಚಲನಚಿತ್ರಗಳ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟಗಾರರ ಬಂಧನ.

ಮಂಗಳೂರು:  ಮಂಗಳೂರು ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ರವೀಂದ್ರ ಕೆ. ಗಡಾದಿ ರವರಿಗೆ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಮುಂಬಯಿಯ ಯುನಿವರ್ಸಲ್ ಕಾಪಿರೈಟ್ ಪ್ರೊಟೆಕ್ಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮುಖೇಶ್ಚಂದ್ರ ಭಟ್ ರವರು ನೀಡಿದ ಖಚಿತ ಮಾಹಿತಿಯ ಮೇರೆಗೆ ತಮ್ಮ ಕಛೇರಿಯ ಸಿಬ್ಬಂದಿಗಳ ಸಹಾಯದೊಂದಿಗೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಇರುವ ಶಿವಂ ಮ್ಯೂಸಿಕ್ ಮತ್ತು ಲಾಲ್ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್ನಲ್ಲಿರುವ ಸತ್ಯಂ ವಿಡಿಯೋ ಸಿಡಿ ಅಂಗಡಿಗಳಿಗೆ ದಿಢೀರ್ ದಾಳಿ […]

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

Wednesday, October 6th, 2010
ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಮಂಗಳೂರು : ಭಾಮಿನಿ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್. ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಭಾಮಿನಿ ಪತ್ರಿಕೆಯ ಬಿಡುಗಡೆಯನ್ನು ಆಳ್ವಾಸ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷ ಎಂ. ಮೋಹನ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭಾಮಿನಿ ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು […]

ದಂಡುಪಾಳ್ಯ ಗ್ಯಾಂಗ್ ನ 11 ಮಂದಿಗೆ ಮರಣದಂಡನೆ

Friday, October 1st, 2010
ದಂಡುಪಾಳ್ಯ ಗ್ಯಾಂಗ್

ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್  ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ […]

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ಪತ್ರಿಕಾ ಮಾರಟಕ್ಕೆ ಅಡ್ಡಿ ಪಡಿಸಿ ಅಂಗಡಿ ಜಖಂಗೊಳಿಸಿದ ದುಷ್ಕರ್ಮಿಗಳು

Monday, September 27th, 2010
Paper stall

ಮಂಗಳೂರು :  ನಗರದ ಮಿಲಾಗ್ರಿಸ್ ಬಳಿ ಟೆಲಿಫೋನ್ ಬೂತ್ ಹಾಗೂ ಪೇಪರ್ ಸ್ಟಾಲ್ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಮೆಲ್ವಿಲ್ ಪಿಂಟೋ ಎಂಬವರ ಅಂಗಡಿಗೆ ಭಾನುವಾರ ಸಂಜೆ ಆಗಮಿಸಿದ ದುಷ್ಕರ್ಮಿಗಳು ‘ಕರಾವಳಿ ಅಲೆ’ ಮಾರಾಟ ಮಾಡಬಾರದು ಎಂದು ಬೆದರಿಸಿ ಕಾಯಿನ್ ಬಾಕ್ಸ್ ಮತ್ತು ಕಪಾಟಿಗೆ ಹಾನಿ ಮಾಡಿ ‘ಕರಾವಳಿ ಅಲೆ’ಯ ಪ್ರತಿಗಳನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬೈಕ್‌ನಲ್ಲಿ ಮೂರು ಮಂದಿ ಬಂದಿದ್ದು ಒಬ್ಬಾತನ ಬಳಿ ಮಾರಕಾಯುಧ ಇತ್ತು ಎಂದು ಮೆಲ್ವಿಲ್ ಪಿಂಟೊ ತಿಳಿಸಿದ್ದಾರೆ. ಬಳಿಕ ಕಂಕನಾಡಿ ಆಸುಪಾಸಿನ […]

ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

Friday, September 24th, 2010
ದ ಕ ಎಸ್ ಪಿ ಪತ್ರಿಕಾಗೋಷ್ಠಿ

ಮಂಗಳೂರು : ರೌಡಿ ಶೀಟರ್  ತಿಂಗಳಾಡಿ ಉಮೇಶ್‌ ರೈ (36)  ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಅಮ್ಮಣ್ಣ ರೈ ಅವರ ಬಾವ ಈಶ್ವರಮಂಗಲ ನಿವಾಸಿ ಜಯರಾಜ ರೈ ಹಾಗೂ ಅರಿಯಡ್ಕ ನಿವಾಸಿಗಳಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ಬಂದಿತ ಆರೋಪಿಗಳು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಉಮೇಶ್‌ ರೈ […]

ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

Tuesday, September 7th, 2010
ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

ಮಂಗಳೂರು : ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರ ಕುರಿತಂತೆ ಐಡಿಯಾಕ್ಟ್ಸ್ ಇನೋವೇಶನ್ಸ್ ಹಾಗೂ ಮಂಗಳೂರು ನಗರ ಪೊಲೀಸ್ ಸೈಬರ್ ಕೆಫೆ ಮಾಲಕರೊಂದಿಗೆ ಸಂವಾದವು ಸೋಮವಾರ ಕಮಿಷನರೇಟ್ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಉಪ ಕಮಿಷನರ್ ಆರ್. ರಮೇಶ್ ಸಭೆಯನ್ನು ಉದ್ದೇಶೀಸಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕಾಯಿದೆ ತಿದ್ದುಪಡಿ-2008 ರಲ್ಲಿ ಸೈಬರ್ ಕೆಫೆಗಳ ಬಗ್ಗೆ ರೂಪಿಸಿರುವ ನಿಯಮಗಳನ್ನು ಪಾಲಿಸುವುದು ಸುರಕ್ಷತೆಯ ದ್ಥಷ್ಟಿಯಲ್ಲಿ ಅತ್ಯವಶ್ಯ ಎಂದು ಹೇಳಿದರು. ಸೈಬರ್ ಕೆಫೆಗಳಿಗೆ ಬರುವ ಪ್ರತಿಯೋರ್ವ ಗ್ರಾಹಕರ ಭಾವಚಿತ್ರ ಸಹಿತ ಪೂರ್ಣ […]