ಸ್ಯಾಂಡಲ್‌ವುಡ್‌ನ ಚಿರು ಮತ್ತು ಮೇಘನಾ ರಾಜ್‌ ಜೋಡಿ ಡಿ. 6 ರಂದು ದಾಂಪತ್ಯ ಜೀವನಕ್ಕೆ

Wednesday, October 11th, 2017
sandalwood

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅ. 22ರಂದು ಚಿರು ಮತ್ತು ಮೇಘನಾ ರಾಜ್‌ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಡಿ. 6ಕ್ಕೆ ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಹಿರಿಯ ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ‘ಆಟಗಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಒಟ್ಟಿಗೆ ಅಭಿನಯಿಸಿದ್ದರು. ಬಹುಕಾಲ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ದಂಪತಿಯ […]

“ಮುಂಗಾರು ಮಳೆ 2′ ಚಿತ್ರದ ನಾಯಕಿ ನೇಹಾ ಶೆಟ್ಟಿ ಮಂಗಳೂರಿನಲ್ಲಿ

Monday, September 26th, 2016
nehashetty

ಮಂಗಳೂರು:  “ಮುಂಗಾರು ಮಳೆ 2′ ಚಿತ್ರದ ನಾಯಕಿ ಕರಾವಳಿಯ 19ರ ಹರೆಯದ ನೇಹಾ ಶೆಟ್ಟಿ. ಶನಿವಾರ ನಗರದ ಸಿನೆಪೊಲಿಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರವಿಚಂದ್ರನ್‌ ಅವರ ಎದುರುನಟಿಸಲು ನಿಜಕ್ಕೂ ನನಗೆ ನರ್ವಸ್‌ ಆಗಿತ್ತು. ಆದರೆ ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ ಎಂದರು. ಗಣೇಶ್‌ ಅಭಿನಯದ ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಶಾಲೆಗೆ ಹೋಗುತ್ತಿದ್ದ ನೆನಪು. ಅದರ ಮೊಲ ನನಗೆ ತುಂಬಾ […]

ಮಂಗಳೂರು ಮತ್ತು ಉಡುಪಿಯಲ್ಲಿ ‘ಒರಿಯನ್ ತೂಂಡ ಒರಿಯಗಾಪುಜಿ’ ಏಕಕಾಲದಲ್ಲಿ ತುಳು ಚಲನಚಿತ್ರದ ಬಿಡುಗಡೆ

Saturday, May 16th, 2015
Oriyan Thoond Oriyagapuji

ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು. ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ತುಳು ಭಾಷೆಯೆನ್ನುವುದು ನಮ್ಮ ಮಾತೃ ಭಾಷೆ, ತುಳು ಸಂಸ್ಕೃತಿ ಎನ್ನುವುದು ನಮ್ಮ ಮನೆ ಇದ್ದ ಹಾಗೆ. ಅದನ್ನು ಉಳಿಸಲು ನಿರ್ಮಾಪಕರು ‘ಒರಿಯನ್ ತೂಂಡ ಒರಿಯಗಾಪುಜಿ ತುಳು ಚಲನಚಿತ್ರದ ಮೂಲಕ ಪ್ರಯತ್ನ […]

ಒಂದು ರೊಮ್ಯಾಂಟಿಕ್‌ ಕ್ರೈಮ್‌ ಕಥೆ’

Thursday, March 5th, 2015
crime Kathe

ಕನ್ನಡದಲ್ಲಿ “ಒಂದು ರೊಮ್ಯಾಂಟಿಕ್‌ ಕ್ರೈಮ್‌ ಕಥೆ’ ಶೀರ್ಷಿಕೆಯಡಿ ತೆಲುಗಿನಲ್ಲಿ ಸೂಪರ್‌ ಹಿಟ್‌ ಆಗಿದ್ದ ಸಿನಿಮಾ ರಿಮೇಕ್‌ ಆಗಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಸ್ಯಾಮ್‌ ಜೆ ಚೈತನ್ಯ ನಿರ್ದೇಶಕರು. ಇದು ಸಂಪೂರ್ಣ ಯೂತ್ಸ್ ಸಿನಿಮಾ ಆಗಿದ್ದು, ಪೋಷಕರೊಂದಿಗೆ ಹುಡುಗ, ಹುಡುಗಿಯರು ನೋಡಲೇಬೇಕಾದ ಸಿನಿಮಾ ಇದು ಎಂಬುದು ನಿರ್ದೇಶಕರ ಹೇಳಿಕೆ. “ಇದು ಈಗಿನ ಟ್ರೆಂಡ್‌ ಸಿನಿಮಾ. ಅದರಲ್ಲೂ ಹುಡುಗ, ಹುಡುಗಿಯರು ನೋಡಲೇಬೇಕಾದ ಚಿತ್ರ. ಹಾಗಂತ ದೊಡ್ಡವರು ನೋಡಬಾರದು ಅಂತಲ್ಲ, ಅವರೇ ಮುಖ್ಯವಾಗಿ ಸಿನಿಮಾ ನೋಡಬೇಕು ಎಂಬುದು ಸ್ಯಾಮ್‌ ಮಾತು. […]

ಕರಾವಳಿಯಾದ್ಯಂತ ಏಕಕಾಲದಲ್ಲಿ ಚಾಲಿಪೋಲಿಲು ಚಿತ್ರ ಬಿಡುಗಡೆ

Saturday, November 1st, 2014
Chali-Polilu

ಮಂಗಳೂರು: ಮನರಂಜನೆಯನ್ನು ಬಯಸಿ ಥಿಯೇಟರ್ಗೆ ಬರುವ ಪ್ರೇಕ್ಷಕರಿಗೆ ಚಾಲಿ ಪೋಲಿಲು ತುಳು ಸಿನಿಮಾ ಇಷ್ಟವಾಗಲಿದೆ. ತುಳುರಂಗಭೂಮಿಯ ಬಹಳಷ್ಟು ಕಲಾವಿದರನ್ನು ಚಾಲಿಪೋಲಿಲು ಸಿನಿಮಾದಲ್ಲಿ ಬಳಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು. ಜ್ಯೋತಿ ಚಲನ ಚಿತ್ರಮಂದಿರದಲ್ಲಿ ಚಾಲಿಪೋಲಿಲು ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಾದ್ಯಮಗಳು ಯಾವಾಗಲೂ ನಿಷ್ಠುರವಾದಿಗಳು ಇದ್ದುದನ್ನೇ ಇದ್ದಂತೆ ಹೇಳುವ ಪತ್ರಕರ್ತರು ವಸ್ತುನಿಷ್ಠ ವರದಿಯನ್ನೇ ಪ್ರತಿಪಾದಿಸುತ್ತಾರೆ. ಚಾಲಿಪೋಲಿಲು ಸಿನಿಮಾದ ಬಗ್ಗೆ ಪತ್ರಿಕೆಗಳು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅವರು […]

ಚಿರು ಅಭಿನಯದ ‘ಚಂದ್ರಲೇಖ’ ಚಿತ್ರ ವಿಮರ್ಶೆ

Friday, March 7th, 2014
ಚಿರು ಅಭಿನಯದ ‘ಚಂದ್ರಲೇಖ’ ಚಿತ್ರ ವಿಮರ್ಶೆ

ಬೆಂಗಳೂರುಃ ಕಾಮಿಡಿ, ಥ್ರಿಲ್ಲಿಂಗ್ ಹಾಗೂ ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ ಮಾಡಿದ ಚಿತ್ರವಿದು. ಆಕಡೆ ತೀರಾ ಹಾರರ್ ಅಲ್ಲದ ಈಕಡೆ ತೀರಾ ಕಾಮಿಡಿ ಅಲ್ಲದ ವಿಭಾಗಕ್ಕೆ ಈ ಚಿತ್ರವನ್ನು ಸೇರಿಸಬಹುದು. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ ಅನ್ನಬಹುದು. ಆದರೆ ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಸಿಗೋದು ಮಾತ್ರ ತೆಲುಗಿನ ‘ಪ್ರೇಮ ಕಥಾ ಚಿತ್ರಂ’ಗೆ. ಏಕೆಂದರೆ ‘ಚಂದ್ರಲೇಖ’ ಚಿತ್ರ ಅದರ ಪಡಿಯಚ್ಚು. ತೆಲುಗು ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ಓಂ ಪ್ರಕಾಶ್ ರಾವ್. ಇಲ್ಲಿ ಅವರ ತನ […]

ಅಮೂಲ್ಯ ಎರಡನೇ ಇನ್ನಿಂಗ್ಸ್

Thursday, July 4th, 2013
Shravani Subhrahmanya

ಬೆಂಗಳೂರು : ಅಮೂಲ್ಯ ಎರಡನೇ ಇನ್ನಿಂಗ್ಸ್ ಗೆ ಸಜ್ಜಾಗಿದ್ದಾರೆ. ಈ ಬಾರಿ ಅವರು ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ನಾಯಕ ನಟನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೂ ತೆಲುಗಿನ ‘ಶ್ರಾವಣಿ ಸುಬ್ರಹ್ಮಣ್ಯಂ’ ಚಿತ್ರಕ್ಕೂ ಸಂಬಂಧವಿಲ್ಲವಂತೆ. ಹೆಸರಷ್ಟೇ ರಿಮೇಕ್, ಕಥೆ ಸ್ವಮೇಕ್ ಎನ್ನುತ್ತದೆ ಚಿತ್ರತಂಡ. ಬ್ರೇಕ್ ನಿರೀಕ್ಷೆಯಲ್ಲಿ ಅಮೂಲ್ ಬೇಬಿ ಅಮೂಲ್ಯ ಶ್ರಾವಣಿ ಸುಬ್ರಹ್ಮಣ್ಯ ‘ಶಿಶಿರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಂಜು ಸ್ವರಾಜ್ ಈ ಚಿತ್ರದ ನಿರ್ದೇಶಕರು. […]

ಕಾಲಿವುಡ್ ನಲ್ಲಿ ಕುಡ್ಲದ ಪೊಣ್ಣು !

Monday, March 25th, 2013
Sanchita Shetty

ಮಂಗಳೂರು : ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್ ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..? ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ […]

ಮಣಿ ರತ್ನಂ ರ ಹೊಸ ಪ್ರಾಜೆಕ್ಟ್ ನಲ್ಲಿ ನಟಿಸಲಿರುವ ಅಮೀರ್ – ಕರೀನಾ

Wednesday, March 6th, 2013
Amir Khan & Kareena

ಟಾಪ್‌ಮೋಸ್ಟ್ ತಾರೆಗಳಿದ್ದ ರಾವಣನ್ ಮತ್ತು ಗೌತಮ್ ಕಾರ್ತಿಕ್ ಮತ್ತು ತುಳಸಿ ನಟಿಸಿದ ಕಡಲ್ ಚಿತ್ರ ಫ್ಲಾಪ್ ಆದ ನಂತರ ತನ್ನ ಜಾದೂ ಕಳೆದುಹೋಗಿದೆ ಎಂಬ ಅಪವಾದವನ್ನು ಹೋಗಲಾಡಿಸಲು  ಮಣಿ ರತ್ನಂ ರವರು ತಮ್ಮ  ಹೊಸ ಹೊಸ ಪ್ರಾಜೆಕ್ಟ್ ವೊಂದನ್ನು ಕೈಗೆತ್ತಿಕೊಂಡಿದ್ದು  ಇದರಲ್ಲಿ ಬಾಲಿವುಡ್ ನಟ  ಅಮೀರ್ ಹಾಗು ನಟಿ  ಕರೀನಾಳನ್ನು  ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೊತೆಗೆ  ಹಿಂದಿ ಮತ್ತು ತಮಿಳಿನಲ್ಲಿಯೂ ಈ ಚಿತ್ರ  ನಿರ್ಮಾಣವಾಗಲಿದ್ದು ಚಿತ್ರ ಇಂಡಿಯಾ-ಪಾಕಿಸ್ತಾನದ ವಿಭಜನೆಯ ಕಥೆಯನ್ನು ಹೊಂದಿದೆಯಂತೆ. ಬಾಂಬೆ, ರೋಜಾದಂಥ […]

ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ದೋಚಿದ ಲೈಫ್ ಆಪ್‌ ಪೈ

Monday, February 25th, 2013
Life of Pi

ಲಾಸ್‌ ಏಂಜಲಿಸ್‌ : ಈ ಬಾರಿಯ 85ನೇ ಅಕಾಡೆಮಿ ಆಸ್ಕರ್‌ ಪ್ರಶಸ್ತಿ ಭಾನುವಾರ ರಾತ್ರಿ ಘೋಷಣೆಯಾಗಿದ್ದು, ನಾವೆಯ ಭಾರತೀಯ ಯುವಕನ ಜೀವನ್‌ಮರಣ ಹೋರಾಟವನ್ನು ಚಿತ್ರಿಸುವ ಲೈಫ್ ಆಪ್‌ ಪೈ ಚಲನಚಿತ್ರ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ವಿಷುವಲ್ ಎಫೆಕ್ಟ್ ಸಹಿತ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, “ಅರ್ಗೋ” ಅತ್ಯುತ್ತಮ ಚಿತ್ರ ಪುರಸ್ಕಾರಕ್ಕೆ ಪಾತ್ರಗಿದೆ. ಭಾರತದ ಕಥಾವಸ್ತುವನ್ನೊಳಗೊಂಡ ‘ಲೈಫ್ ಆಫ್ ಪೈ’ ಚಿತ್ರವನ್ನು ಆಂಗ್ ಲೀ ನಿರ್ದೇಶಿಸಿದ್ದು, ಭಾರತೀಯರಾದ ಸೂರಜ್ ಶರ್ಮಾ, ಇರ್ಫಾನ್ […]