ವಾಲ್ಮೀಕಿ ರಾಮಾಯಣದ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ : ಪಾಲೆಮಾರ್‌

Wednesday, October 12th, 2011
Krishan Palemar

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದ.ಕ. ಜಿಲ್ಲಾ ಪಂಚಾಯತ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ. ವಾಲ್ಮೀಕಿ ನಾಯಕ ಅಸೋಸಿಯೇಶನ್‌ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅವರು ಉದ್ಘಾಟಿಸಿದರು. ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಗ್ರಂಥದಲ್ಲಿ ಸಾತ್ವಿಕ ಸಮಾಜ ನಿರ್ಮಾಣ ಹಾಗೂ ರಾಮ ರಾಜ್ಯದ ಕನಸನ್ನು ಬಿತ್ತಿದ್ದಾರೆ. ಮುಂದಿನ ಪೀಳಿಗೆಗೆ […]

ನಗರ ಪ್ರದೇಶದಲ್ಲಿ 1ಗಂಟೆ ಗ್ರಾಮೀಣ ಪ್ರದೇಶಗಳಲ್ಲಿ 7ರಿಂದ 8 ಗಂಟೆ ವಿದ್ಯುತ್ ಇಲ್ಲ

Tuesday, October 11th, 2011
Shobha Karandlaje

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ನಗರ ಪ್ರದೇಶದಲ್ಲಿ 1ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 7ರಿಂದ 8 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇಂದು ಶಕ್ತಿಭವನದಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆ ನಂತರ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಯದ ಕುರಿತು ವಿವರಣೆ ನೀಡಿದರು.ಕಲ್ಲಿದ್ದಲು ಕೊರತೆಯಿಂದ ಇಂದಿನಿಂದಲೇ ರಾಜ್ಯಾದ್ಯಂತ ಸಂಜೆ 1ಗಂಟೆ ಪವರ್ ಕಟ್ ಮಾಡುವುದಾಗಿ ಹೇಳಿದರು. ಆದರೆ […]

ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ ಚೆನ್ನಾಗಿ ಬದುಕುತ್ತೇವೆ : ದರ್ಶನ್‌

Monday, October 10th, 2011
Darshan-Vijayalaksmi

ಬೆಂಗಳೂರು: ‘ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಚಿತ್ರನಟ ದರ್ಶನ್‌ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಬಾರಿ ಕ್ಷಮೆ ಕೋರಿದರು. ಏನೋ ಕಹಿ ಘಟನೆ ನಡೀಬಾರದಾಗಿತ್ತು. ನಡೆದು ಹೋಯಿತು. ದಯವಿಟ್ಟು ಕ್ಷಮಿಸಿ. ನಿಮ್ಮ ಮೂಲಕ ಆಭಿಮಾನಿಗಳಿಗೆ ಕ್ಷಮೆ ಕೇಳುತ್ತಿದ್ದೇನೆ. ಎಂದರು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ಹೇಳಿದರು. ನಾನು ನನ್ನ ಹೆಂಡತಿ ಇಬ್ಬರೂ ಚೆನ್ನಾಗಿದ್ದೇವೆ. ಇದೊಂದು ಕೆಟ್ಟ ಘಟ್ಟ ಅಷ್ಟೇ. ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ […]

ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ಪೋಲಿಸ್ ಪೇದೆ ಬಲಿ

Sunday, October 9th, 2011
Mahadeva S Mane

ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಸವಣಾಳು ಬಳಿ ಶನಿವಾರ ಮಧ್ಯರಾತ್ರಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ನಡೆದಿದ್ದು ನಕ್ಸಲ್ ನಿಗ್ರಹ ಪಡೆ ಪೇದೆ ಮಾನೆ ಗುಂಡಿಗೆ ಬಲಿಯಾಗಿದ್ದಾರೆ.ನಕ್ಸಲರ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು. ಬೆಳ್ತಂಗಡಿಯಿಂದ ಹದಿನೇಳು ಕಿ.ಮೀ ದೂರದಲ್ಲಿರುವ ಸವಣಾಳು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಸ್ಥಳೀಯ ಪೊಲೀಸರು […]

ಧರ್ಮಜಾಗೃತಿ ಹಾಗೂ ಹಿಂದೂ ಧರ್ಮದ ಮೇಲಿನ ಆಕ್ರಮಣ ಕುರಿತು ಉಪನ್ಯಾಸ

Saturday, October 8th, 2011
Hindu Jagarana Vedike

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಕಾಶ್ಮೀರದ ಸದ್ಯದ ಸ್ಥಿತಿ, ಹಿಂದೂ ಧರ್ಮದ ಮೇಲಿನ ಆಕ್ರಮಣಗಳು ಮತ್ತು ಪರಿಹಾರೋಪಾಯಗಳು’ ವಿಷಯದಲ್ಲಿ ನಗರದಲ್ಲಿ ಶುಕ್ರವಾರ ಉಪನ್ಯಾಸ ನಡೆಯಿತು. ಧರ್ಮಜಾಗೃತಿ, ಜಮ್ಮು ಕಾಶ್ಮೀರದ ಭಾರತೀಯರ ರಕ್ಷಣೆ ಹಾಗೂ ಅಲ್ಲಿ ನೆಲೆಸಿರುವ ದೇಶಪ್ರೇಮಿಗಳಿಗೆ ಭದ್ರತೆ ವಿಷಯದಲ್ಲಿ  ಅಶ್ವನಿ ಕುಮಾರ ಚುಂಗೋ ಉಪನ್ಯಾಸ ಹೇಳಿದರು. ಪಾಕಿಸ್ಥಾನದಿಂದ ಭಯೋತ್ಪಾದಕರು ಮತ್ತು ದಾಳಿಕೋರರು ನುಸುಳಿ ಬರುವುದು ನಿರಂತರ ನಡೆಯುತ್ತಿದೆ. ಈಗಾಗಲೇ ಭದ್ರತಾ ಪಡೆಯ ಅನೇಕ ಯೋಧರು ಈ ಸಂಚಿನ ದಾಳಿಯಿಂದ ಹತರಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ರಾಜಕೀಯ ಮತ್ತು […]

ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

Friday, October 7th, 2011
Mangalore-dasara

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಗುರುವಾರ ಸಂಜೆ ಶಾರದೆ, ಆದಿಶಕ್ತಿ, ಮಹಾಗಣಪತಿ ಸಹಿತ ನವದುರ್ಗೆಯರ ಅತ್ಯಾಕರ್ಷಕ ಶೋಭಾಯಾತ್ರೆಯೊಂದಿಗೆ ಆರಭಂಗೊಂಡಿತು. ಶೋಭಾಯಾತ್ರೆ ನೇತೃತ್ವವನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ವಹಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಸಂದೇಶ ಸಾರುವ ಟ್ಯಾಬ್ಲೋ ಸಹಿತ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯ ನೂರಾರು ಟ್ಯಾಬ್ಲೋಗಳು, ಪುಣ್ಯಕ್ಷೇತ್ರಗಳ ಸಹಕಾರದ ವರ್ಣಮಯ ಟ್ಯಾಬ್ಲೋಗಳು, ತ್ರಿಶೂರ್‌ನ ವರ್ಣರಂಜಿತ ಕೊಡೆಗಳು, ಕರಾವಳಿಯ ಹುಲಿವೇಷ, ಕೇರಳದ ಚೆಂಡೆವಾದ್ಯ, ಮಹಾರಾಷ್ಟ್ರದ ಡೋಲು ನೃತ್ಯ, […]

ವಿದ್ವಾನ್ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶ

Thursday, October 6th, 2011
Matturu

ಬೆಂಗಳೂರು : ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿದ್ವಾನ್ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಮತ್ತೂರ ಗ್ರಾಮದಲ್ಲಿ 1929 ಆಗಸ್ಟ್ 8ರಂದು ಜನಿಸಿದ್ದ ಕೃಷ್ಣಮೂರ್ತಿ ಅವರ ಕುಮಾರವ್ಯಾಸ ಭಾರತ ವ್ಯಾಖ್ಯಾನಕ್ಕೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಕುಮಾರ ಪರ್ವ, ದ್ರೌಪದಿ ಸ್ವಯಂವರ, ಮಹಾಭಾರ ಉದ್ಯೋಗ ಪರ್ವ ಸೇರಿದಂತೆ ಭಾರತೀಯ ಹಬ್ಬಗಳ ಕುರಿತು ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ರಾಮಕೃಷ್ಣಯ್ಯ ಮತ್ತು […]

ಅಕ್ಟೋಬರ್ 11ರಿಂದ ಹೊರಡಲಿರುವ ಅಡ್ವಾಣಿಯವರ ‘ಜನಚೇತನ ಯಾತ್ರೆ’

Wednesday, October 5th, 2011
LK ADWANI

ಬೆಂಗಳೂರು : ಭ್ರಷ್ಟಚಾರ ವಿರುದ್ಧ ಎಲ್. ಕೆ. ಅಡ್ವಾಣಿ ಕೈಗೊಳ್ಳಲಿರುವ ‘ಜನಚೇತನ ಯಾತ್ರೆ’ಯು ಅಕ್ಟೋಬರ್ 11ರಿಂದ ಜಯಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಸಿತಾಬ್ದಿಯಾರಾದಿಂದ ಆರಂಭವಾಗಲಿದೆ ರಥಯಾತ್ರೆಗೆ ಬಿಹಾರ ಮುಖಮಂತ್ರಿ ನಿತೀಶ್ ಕುಮಾರ್ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್. ಅನಂತ್ ಕುಮಾರ್ ತಿಳಿಸಿದ್ದಾರೆ. ಜನಚೇತನ ಯಾತ್ರೆಯ ದೇಶದ 23 ರಾಜ್ಯಗಳಲ್ಲಾಗಿ ಒಟ್ಟು 7,600 ಕೀ. ಮೀ. ಸಂಚರಿಸಲಿದೆ ಎಂದು ಬುಧವಾರ ಬಿಜೆಪಿ ಸಂಸದ ಅನಂತ್ ಕುಮಾರ್ ತಿಳಿಸಿದ್ದಾರೆ, ಇದರ ಮುಖ್ಯ ಉದ್ದೇಶ ಉತ್ತಮ […]

ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿ

Tuesday, October 4th, 2011
Janardhana-poojary

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ, ಮಂಗಳೂರು ದಸರಾ ಸಂಭ್ರಮದಲ್ಲಿ ಸೋಮವಾರ ಪತಿಯನ್ನು ಕಳೆದುಕೊಂಡ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ನೆಲೆಯೂರಿರುವ ಅನಿಷ್ಟ ಪದ್ಧತಿಯೆನಿಸಿ ಕೊಂಡ ವಿಧವಾ ಪದ್ದತಿಯನ್ನು ಧಿಕ್ಕರಿಸಲು ಪತಿಯನ್ನು ಕಳೆದುಕೊಂಡ ಸುಮಾರು 2,500 ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾಹೋಮ, ಬೆಳ್ಳಿ ರಥೋತ್ಸವ ನಡೆಸಿ ವಿಧವೆಯರಿಗೆ ಸೀರೆ, ಕುಂಕುಮ, ಹೂವು, ಬಳೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಬಿ. ಜನಾರ್ದನ ಪೂಜಾರಿ ಅವರು, ಹೋಮದ ಸಂಕಲ್ಪ ವಿಧಿಯನ್ನು ನೆರವೇರಿಸಿದ ಬಲಿಕ ಮಾತನಾಡಿ ಭಾರತದಲ್ಲಿ […]

ರಥಬೀದಿಯಲ್ಲಿ ರಾಮ ಮೂರ್ತಿಯ ಚಿನ್ನದ ಸರ ಕದ್ದ ಕಳ್ಳರು

Tuesday, October 4th, 2011
Rama-Mandira

ಮಂಗಳೂರು: ಮಂಗಳೂರು ರಥಬೀದಿಯ ಟೆಂಪಲ್‌ ಸ್ಕೇರ್ ನಲ್ಲಿರುವ ಶ್ರೀರಾಮ ಮಂದಿರ ದ ಕಿಟಿಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ರಾಮ ಮೂರ್ತಿಯ ಮೇಲಿದ್ದ ಒಂದುವರೆ ಪವನು ತೂಕದ ಬಂಗಾರದ ಸರವನ್ನು ಅಪಹರಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಚಿನ್ನದ ಸರದ ಬೆಲೆ ಸುಮಾರು 24,500 ರೂ ಎಂದು ಅಂದಾಜಿಸಲಾಗಿದೆ. ಸೋಮವಾರ ಬೆಳಗ್ಗೆ ಮಂದಿರದ ಬಾಗಿಲನ್ನು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂತು. ಮೆನೇಜರ್ ಮಂಗಲ್‌ದಾಸ್‌ ಗುಲ್ವಾಡಿ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಬಂದರು ಪೊಲೀಸರು ಕೇಸು […]