ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

Saturday, September 27th, 2014
ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

ಇಂಚೆನ್‌ : ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಶನಿವಾರ ಶುಭದಿನ. 17ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ತಲಾ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಂಪೌಂಡ್ ಪುರುಷರ ಆರ್ಚರಿ  ತಂಡವು ಬಂಗಾರ ಗೆದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕವಿದು. ಇದೇ ವಿಭಾಗದ ಮಹಿಳೆಯರ ತಂಡವು   ಕಂಚಿನ ಸಾಧನೆ ಮಾಡಿದೆ. ಮತ್ತೊಂದೆಡೆ ಪುರುಷರ […]

ಸಿದ್ದರಾಮಯ್ಯನವರಿಂದ ಗುರುಪೀಠ ಉದ್ಘಾಟನೆ

Saturday, September 27th, 2014
Siddaramaiah-at-guru-peeta

ಬ್ರಹ್ಮಾವರ : ಇಲ್ಲಿನ ಬಾರಕೂರಿನ ಬೆಣ್ಣೆಕುದುರಿನಸಮಸ್ತ ಮೊಗವೀರರ ಕುಲದೇವರು   ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ  ನವೀಕೃತ ಗುರುಪೀಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ  ಬೆಳಗ್ಗೆ 11ಕ್ಕೆ  ಉದ್ಘಾಟಿಸಿದರು. ಸಚಿವರಾದ ವಿನಯ್‌ಕುಮಾರ್‌ ಸೊರಕೆ ,ಶಾಸಕ ಪ್ರಮೋದ್‌ ಮಧ್ವರಾಜ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೀಗ ಮುಖ್ಯಮಂತ್ರಿಗಳು ಬ್ರಹ್ಮಾವರದ ಗಾಂಧೀ ಮೈದಾನದಲ್ಲಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮೊಗವೀರ ಯುವ ವೇದಿಕೆ,ಮಣಿಪಾಲ ವಿ.ವಿ. ಸಹಯೋಗದಲ್ಲಿ ಕೊಡುವ ಜಿ. ಶಂಕರ್‌- ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ […]

ಜಯಲಲಿತಾ ದೋಷಿ : ಕೋರ್ಟ್‌ ತೀರ್ಪು

Saturday, September 27th, 2014
Jayalalitha

ಬೆಂಗಳೂರು : ದೇಶಾದ್ಯಂತ ಕುತೂಹಲ ಕೆರಳಿಸಿರುವ, ಸುಮಾರು 18 ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ತೀರ್ಪು ಹೊರ ಬಿದ್ದಿದ್ದು ಅವರನ್ನು ದೋಷಿ ಎಂದು ಶನಿವಾರ ನ್ಯಾಯಾಲಯ ಹೇಳಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ ಅವರ ವಿರುದ್ದ ಮಾಡಲಾಗಿರುವ ಆರೋಪ ಭೃಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಜಯಲಲಿತಾ ಅವರನ್ನು ಪೊಲೀಸರು ತಮ್ಮ […]

ಬಿಜೈ ಯಲ್ಲಿ ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಬರ್ಬರ ಹತ್ಯೆ

Sunday, September 21st, 2014
Mescom Engineer murder

ಮಂಗಳೂರು : ಇಬ್ಬರು ದುಷ್ಕರ್ಮಿಗಳು ಮೆಸ್ಕಾಂ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಒಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸೆಪ್ಟೆಂಬರ್ 21 ರ ಭಾನುವಾರ ಬೆಳಗಿನ ಜಾವ ನಗರದ ಬಿಜೈ ನಲ್ಲಿ ನಡೆದಿದೆ. ಹತ್ಯೆಗೀಡಾದವರನ್ನು ಮೆಸ್ಕಾಂ ಕಾರ್ಪೋರೇಟ್‌ ಕಜೇರಿಯಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿರುವ ಜಗದೀಶ್‌ ರಾವ್‌ (55) ಎನ್ನುವವರಾಗಿದ್ದಾರೆ. ರಾತ್ರಿ 2.30 ರ ವೇಳೆಗೆ ಗಾಢ ನಿದ್ದೆಯಲ್ಲಿದ್ದ ಜಗದೀಶ್‌ ಅವರ ಪತ್ನಿ ಅರಚಾಟ ಕೇಳಿ ಎಚ್ಚರಗೊಂಡು ನೋಡಿದಾಗ ಜಗದೀಶ್‌ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ನೆರಮನೆವರನ್ನು ಕರೆದು ಆಸ್ಪತ್ರಗೆ […]

ಉಸ್ತುವಾರಿ ಸಚಿವರ ಸೀಮೆಎಣ್ಣೆ ಮುಕ್ತ ನಗರ ಅವಾಸ್ತವಿಕ DYFI

Wednesday, September 17th, 2014
Rai

ಮಂಗಳೂರು : ಮಂಗಳೂರು ನಗರವನ್ನು ನವೆಂಬರ್ ಒಂದರಿಂದ ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಘೋಷಿಸಲಾಗುವುದು ಎಂಬ ಉಸ್ತುವಾರಿ ಸಚಿವರ ಹೇಳಿಕೆಯನ್ನು ಅವಾಸ್ತವಿಕ ಎಂದು DYFI ನಗರ ಸಮಿತಿ ಹೇಳಿದೆ. ಮಂಗಳೂರು ನಗರದಲ್ಲಿ ವಾಸಿಸುವ ಕಡುಬಡವರಿಗೆ ಬ್ಯಾಂಕ್ ಸಾಲದ ಮೂಲಕ ಅಡುಗೆ ಅನಿಲ ಸಂಪರ್ಕವನ್ನು ಬಲವಂತವಾಗಿ ನೀಡುವುದು, ಹಾಗೆಯೇ ವಾಸ್ತವ್ಯ ದಾಖಲೆ ಗುರುತು ಚೀಟಿ ಇದ್ದವರಿಗಷ್ಟೇ ಅಡುಗೆ ಸಂಪರ್ಕ ನೀಡುತ್ತೇವೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯುತ್ತೇವೆ ಅನ್ನುವ ಮಾತುಗಳು ಆಡಳಿತದ ಬಾಲಿಶತನವನ್ನು ಎತ್ತಿ ತೋರಿಸುತ್ತಿದೆ. ಇನ್ನು ಪ್ರತಿಯೊಬ್ಬರಿಗೂ ಪಡಿತರ ಚೀಟಿ […]

ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

Tuesday, September 16th, 2014
ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

ಮಂಗಳೂರು : ಮಂಗಳೂರು ಪುರಭವನಕ್ಕೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪುರಭವನದ ಆಧುನೀಕರಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು. ಅವರು ಮಂಗಳವಾರ(ಸೆ.16) ಪುರಭವನದಲ್ಲಿ ಮಾತನಾಡಿ, ಪುರಭವನಕ್ಕೆ ಸಂಪೂರ್ಣ ಎ.ಸಿ.ಅಳವಡಿಕೆ,ನೆಲಹಾಸು,ಹೊರಭಾಗದಲ್ಲಿ ಗ್ರಾನೈಟ್ ಅಳವಡಿಕೆ,ಆಕರ್ಷಕ ಬಾಗಿಲು ,ವಿಐಪಿ ಕೊಠಡಿ,ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು,ಡಿಸೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೋ,ಉಪಮೇಯರ್ […]

ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನದ ಸೀಮಾಪುರುಷ : ಕುಂಬ್ಳೆ

Tuesday, September 16th, 2014
SDM

ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಅವರು ಯಕ್ಷಗಾನದ ಸೀಮಾಪುರುಷ. ಪಾತ್ರ ಮತ್ತು ಕಥಾ ನಿರ್ವಹಣೆಯಲ್ಲಿ ಪರಿಪೂರ್ಣತೆ ಸಾಧಿಸಿ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿದ ಪ್ರಶ್ನಾತೀತ ಕಲಾವಿದ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಬಣ್ಣಿಸಿದರು. ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಎಸ್.ಡಿ.ಎಂ. ಕಾಲೇಜಿನಲ್ಲಿ ಸೋಮವಾರ ನಡೆದ ‘ಶೇಣಿ ಸಂಸ್ಮರಣೆ – ಕಲೋತ್ಸವ’ದಲ್ಲಿ ಅವರು ಶೇಣಿ ಸಂಸ್ಮರಣಾ ಭಾಷಣ ಮಾಡಿದರು. ಶೇಣಿ ಎಂದರೆ ಯಕ್ಷಗಾನ, ಯಕ್ಷಗಾನ ಎಂದರೆ ಶೇಣಿ ಎಂಬ ಮಾತನ್ನು ತಮ್ಮ ಜೀವಿತದ […]

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ “ನೃತ್ಯೋತ್ಸವ” ಉದ್ಘಾಟನೆ

Tuesday, September 16th, 2014
Dance

ಮಂಗಳೂರು : ವಿದ್ಯಾರ್ಥಿ ಸಾಂಸ್ಕೃತಿಕ ಹಬ್ಬಗಳು ಯುವಜನತೆಯಲ್ಲಿ ಸೃಜನಾತ್ಮಕ ಬೆಳವಣಿಗೆ ಉಂಟು ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತವೆ. ಸಂಸ್ಕೃತಿ ಕಲೆ ಕ್ರೀಡೆ ಇತ್ಯಾದಿಗಳಲ್ಲಿ ಆಸಕ್ತಿ ಉಂಟುಮಾಡಿ ಸಹೃದಯತೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯಲ್ಲಿ ಸಾಮಾಜಿಕ ಮನೋಭಾವನೆಯನ್ನು ಹುಟ್ಟುಹಾಕುತ್ತದೆ. ಈ ಒಂದು ವಿಚಾರವನ್ನು ಮನಗಂಡು ವಿಶ್ವ ವಿದ್ಯಾನಿಲಯವು ವಿವಿಧ ಕಾಲೇಜುಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿದೇಶನಾಲಯದ ನಿರ್ದೆಶಕರಾಗಿರುವ ಪ್ರೊ.ಪಿ.ಎಲ್ ಧರ್ಮ, ತಿಳಿಸಿದರು. ಅವರು ಇಂದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ವಿದ್ಯಾನಿಲಯ ಮಟ್ಟದ […]

ಗ್ರಾ.ಪಂ./ವಾರ್ಡ್ ಗಳಲ್ಲಿ ತಾಯಂದಿರ ವೇದಿಕೆ: ಅಮಿತಾ ಪ್ರಸಾದ್

Wednesday, September 10th, 2014
Amita prasad

ಮಂಗಳೂರು : ಸಮಾಜದಲ್ಲಿ ಆತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಕಡಿಮೆಯಾಗಬೇಕಿದ್ದರೆ, ಮಕ್ಕಳನ್ನು ಬಾಲ್ಯದಿಂದಲೇ ಸುಸಂಸ್ಕೃತ ರೀತಿಯಲ್ಲಿ ಬೆಳಸಬೇಕಾಗಿದೆ. ಮಕ್ಕಳ ಮೇಲೆ ತಾಯಂದಿರ ಪ್ರಭಾವ ಪರಿಣಾಮಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತೀ ಗ್ರಾಮ ಪಂಚಾಯತ್ಗಳಲ್ಲಿ ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ತಾಯಂದಿರ ವೇದಿಕೆ ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯ ದರ್ಶಿ ಡಾ.ಅಮಿತಾ ಪ್ರಸಾದ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರ ಜಂಟಿ […]

ಬಿಬಿಎಂಪಿಯ ನೂತನ ಮೇಯರ್ ಆಗಿ ಮೂಡಲಪಾಳ್ಯ ಕಾರ್ಪೊರೇಟರ್ ಎನ್. ಶಾಂತಕುಮಾರಿ

Friday, September 5th, 2014
BBMP Myor

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಆಗಿ ಮೂಡಲಪಾಳ್ಯ ಕಾರ್ಪೊರೇಟರ್ ಎನ್. ಶಾಂತಕುಮಾರಿ ಹಾಗೂ ಉಪ ಮೇಯರ್ ಆಗಿ ಕಾಮಾಕ್ಷಿಪಾಳ್ಯ ಕಾರ್ಪೊರೇಟರ್ ಕೆ.ರಂಗಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಾಂತಕುಮಾರಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ರಂಗಣ್ಣ ಅವರು ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದರು. ಬೆಳಗ್ಗೆ 9ರಿಂದ 11 ಗಂಟೆಯವರೆಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. 1 ಗಂಟೆಯವರೆಗೆ ನಾಮಪತ್ರ ಪರಿಶೀಲನೆ ನಡೆಯಿತು. ಆದರೆ ಒಂದು ಹುದ್ದೆಗೆ ಒಂದೇ ನಾಮಪತ್ರ […]