ತುಟ್ಟಿಭತ್ತೆ ಪಡೆಯುವುದು ಭಿಕ್ಷೆಯಲ್ಲ-ಹಕ್ಕು: ಪಿ.ಸಂಜೀವ

Wednesday, July 30th, 2014
beedi

ಬಂಟ್ವಾಳ : ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ಪಾವತಿಸುವುದಕ್ಕೆ ಅಡ್ಡಿ ಮಾತಾಡುವ ಮಾಲಕರು ಪದೇ ಪದೇ ಸಭೆ ಕರೆದು ಕಾಲಾಹರಣ ಮಾಡುತ್ತಿರುವುದು ಸರಿಯಲ್ಲ, ಬೀಡಿ ಉತ್ಪಾದನೆ ಕುಂಠಿತಗೊಳ್ಳಲು ಸರಕಾರದ ಕೈಗಾರಿಕಾ ವಿರೋಧಿ ನೀತಿ ಕಾರಣ ಎಂಬ ವಾಸ್ತವಾಂಶ ತಿಳಿದಿದ್ದರೂ ಮಾಲಕರು ಸಂಬಂಧಪಟ್ಟ ಸರಕಾರದ ವಿರುದ್ಧ ಧ್ವನಿ ಎತ್ತದೆ ಬೀಡಿ ಕಾರ್ಮಿಕರಿಗೆ ಕಾನೂನು ಪ್ರಕಾರ ಕೊಡಬೇಕಾಗಿದ್ದ ತುಟ್ಟಿಭತ್ತೆಯನ್ನು ಎಪ್ರಿಲ್ ಒಂದರಿಂದಲೇ ಪಾವತಿಸಬೇಕಾಗಿದ್ದರೂ ಅನಾವಶ್ಯಕವಾಗಿ ವಿಳಂಬಿಸುತ್ತಿರುವುದು ಖಂಡನೀಯ, ಆದುದರಿಂದ ಮಾಲಕರು ಕಾರ್ಮಿಕರನ್ನು ಭಿಕ್ಷುಕರೆಂದು ಪರಿಗಣಿಸಬಾರದು ಬದಲಾಗಿ ಕಾರ್ಮಿಕರ ಪ್ರಸ್ತುತ ಸ್ಥಿತಿಗತಿಯನ್ನು ಅರ್ಥೈಸಿಕೊಂಡು […]

ವಿ.ಆರ್.ಭಟ್ ಫೇಸ್‌ಬುಕ್‌ನಲ್ಲಿ ಮಾಡಿದ ಕಮೆಂಟ್‌ಗೆ ದೂರು

Tuesday, July 29th, 2014
Prabha

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುವುದು, ಮತ್ತೊಬ್ಬರ ಪೋಸ್ಟ್‌ಗಳಿಗೆ ಪ್ರಚೋದನಕಾರಿಯಾಗಿ, ಅವಮಾನಿಸುವ ಅಥವಾ ಗೇಲಿ ಮಾಡುವ ಕಮೆಂಟ್ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಪುರೋಹಿತಶಾಹಿ ಉಪಯೋಗಕ್ಕಿಲ್ಲ ಎನ್ನುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೋರಾಟಗಾರ್ತಿ ಪ್ರಭಾ ಎನ್. ಬೆಳವಂಗಲ ಅವರಿಗೆ ಟೀಕೆ ಮಾಡುವ ಭರದಲ್ಲಿ ‘ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು’ ಎಂದು ಕಮೆಂಟ್ ಮಾಡಿದ ವಿ.ಆರ್.ಭಟ್ ಎಂಬುವರ ವಿರುದ್ಧ ಚಂದ್ರ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿ.ಆರ್.ಭಟ್ ಮಾಡಿದ ಕಮೆಂಟ್‌ಗೆ ಫೇಸ್‌ಬುಕ್‌ನಲ್ಲಿ ವ್ಯಾಪಕ ಖಂಡನೆ […]

ಜಿಲ್ಲೆ ಹೆಸರು ದಕ್ಷಿಣ ಕನ್ನಡವೇ ಇರಲಿ : ಎ.ಬಿ.ಇಬ್ರಾಹಿಂ

Monday, July 28th, 2014
DC AB Ibrahim

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆ ತುಳುನಾಡು ಮತ್ತಿತರ ಹೆಸರು ಸೂಕ್ತವೆಂದು ಸಾರ್ವಜನಿಕರ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದು, ಮಂಗಳೂರು ಜಿಲ್ಲೆ ಎಂಬುದಾಗಿ ಮಾರ್ಪಾಡು ಮಾಡುವ ವಿಚಾರವು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಜಿಲ್ಲೆಯ ಜನ ದಕ್ಷಿಣಕನ್ನಡ ಎಂಬ ಹೆಸರಿನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿರುವುದರಿಂದ ಜಿಲ್ಲೆಯ ಹೆಸರನ್ನು ದಕ್ಷಿಣಕನ್ನಡ ಎಂದೇ ಮುಂದುವರಿಸುವಂತೆ ಹಾಗೂ ಜಿಲ್ಲೆಗೆ ಮರು ನಾಮಕರಣ ಆವಶ್ಯಕತೆ ಇಲ್ಲವೆಂಬುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಗೆ […]

ಪತ್ರಕರ್ತರ ಸಂಘದಿಂದ ವನಮಹೋತ್ಸವ, ಹಸಿರು ಮಂಗಳೂರು ಯೋಜನೆಗೆ ಚಾಲನೆ – ಮೇಯರ್

Friday, July 25th, 2014
vanamahotsava

ಮಂಗಳೂರು : ಮಂಗಳೂರು ನಗರದಲ್ಲಿ ಕಾಂಕ್ರೀಟೀಕರಣದ ಜತೆ ಹಸುರೀಕರಣ ಕೂಡಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ `ಹಸಿರು ಮಂಗಳೂರು’ ಯೋಜನೆ ಹಮ್ಮಿಕೊಂಡಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಲೇಡಿಹಿಲ್ ನ ಪತ್ರಿಕಾ ಭವನದ ಮುಂಭಾಗದಲ್ಲಿ ಶುಕ್ರವಾರ ನಡೆದ ವನಮಹೋತ್ಸವಕ್ಕೆ ಅವರು ಚಾಲನೆ ನೀಡಿದರು. ಪಾಕರ್್ ಮತ್ತು ಮೈದಾನಗಳ ಅಭಿವೃದ್ದಿಗಾಗಿ ಪಾಲಿಕೆಯಲ್ಲಿ ಪ್ರತ್ಯೇಕ ನಿಧಿ […]

ಪತ್ರಿಕಾಗೋಷ್ಠಿ ನಡೆಸಿ ಸಿ.ಬಿ.ಐ. ತನಿಖೆಯ ದಾರಿ ತಪ್ಪಿಸುತ್ತಿರುವ ಮಹೇಶ ಶೆಟ್ಟಿ ತಿಮರೋಡಿ : ಧರ್ಮಸ್ಥಳ

Thursday, July 24th, 2014
Sowjanya Murder

ಧರ್ಮಸ್ಥಳ: ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಜಿರೆಯ ಮಹೇಶ ಶೆಟ್ಟಿ ತಿಮರೋಡಿಯವರು ಕಳೆದ ಒಂದು ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇಲ್ಲಿಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ನಿರಂತರವಾಗಿ ಮಾಡುತ್ತಿದ್ದ ಸುಳ್ಳು ಆರೋಪಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಾ ಸಾರ್ವಜನಿಕರನ್ನು ಹಾಗೂ ಶ್ರೀ ಕ್ಷೇತ್ರದ ಭಕ್ತಾದಿಗಳನ್ನು ದಾರಿ ತಪ್ಪಿಸುವ ಕಠೋರ ಪ್ರಯತ್ನವಷ್ಟೆ ಆಗಿದೆ. ಉಜಿರೆಯ ಕಾಲೇಜು ವಿದ್ಯಾರ್ಥಿನಿಯ ಹತ್ಯೆಯ ಕುರಿತು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಕಳೆದ 4 ತಿಂಗಳುಗಳಿಂದ ನಿಷ್ಪಕ್ಷಪಾತ ಹಾಗೂ […]

ಕಂಕನಾಡಿ ಮಾರುಕಟ್ಟೆಯ ಕೆಸರು ಕೊಚ್ಚೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ವರ್ತಕರು

Wednesday, July 23rd, 2014
kankanady Market

ಮಂಗಳೂರು : ಕಂಕನಾಡಿ ಮಾರುಕಟ್ಟೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ವಿವಿಧ ಚುನಾಯಿತ ಪ್ರತಿನಿಧಿಗಳಿಗೆ ಮಹಾನಗರಪಾಲಿಕೆಗೆ ಹಲವಾರು ಸಲ ಮನವಿ ಮಾಡಿಕೊಂಡಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದ ಕಾರಣ ಕಂಕನಾಡಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು ಶ್ರಮದಾನ ಮಾಡಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು. ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲು ಕಳೆದ ಹತ್ತು ತಿಂಗಳಲ್ಲಿ ಆರೋಗ್ಯ ಮಂತ್ರಿಗಳಾದ ಶ್ರೀ ಯು. ಟಿ. ಖಾದರ್, ಸ್ಥಳೀಯ ಶಾಸಕರಾದ ಶ್ರೀ ಜೆ. ಆರ್. ಲೋಬೋ, ಉಸ್ತುವಾರಿ ಮಂತ್ರಿಗಳಾದ ಶ್ರೀ ರಮಾನಾಥ ರೈ, […]

ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ 16 ವೈದ್ಯರ ತಂಡ-ಎ.ಬಿ.ಇಬ್ರಾಹಿಂ

Wednesday, July 23rd, 2014
dc ab ibrahim

ಮಂಗಳೂರು : ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ,ಅನುದಾನಿತ,ಖಾಸಗಿ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು 16 ನುರಿತ ವೈದ್ಯರ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ […]

ಮಂಗಳೂರು ನಗರದಲ್ಲಿ ತೀವ್ರವಾದ ಪಾರ್ಕಿಂಗ್ ಸಮಸ್ಯೆ : ಡಿಸಿ ವಿಶೇಷ ಸಭೆ

Saturday, July 19th, 2014
MUDA

ಮಂಗಳೂರು : ವಾಹನಗಳ ಪಾರ್ಕಿಂಗ್ ಸಮಸ್ಯೆ ಮಂಗಳೂರು ನಗರದಲ್ಲಿ ತೀವ್ರವಾಗಿ ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ ತಿಂಗಳು ವಿಶೇಷ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ಅವರು ಶನಿವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ನಗರದ ಬೆಳವಣಿಗೆಗೆ ಪೂರಕವಾಗಿ ಪಾರ್ಕಿಂಗ್ ವ್ಯವಸ್ಥೆ ಸಿದ್ಧಗೊಂಡಿಲ್ಲ. ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೂ, ರಸ್ತೆ ಅಭಿವೃದ್ಧಿ ಅದಕ್ಕೆ ಅನುಗುಣವಾಗಿಲ್ಲ. ಬಹುಮಹಡಿ ವಾಣಿಜ್ಯ ಕಟ್ಟಡಗಳು ಮತ್ತು ಅಪಾರ್ಟ್ ಮೆಂಟ್ ಗಳ ನಿರ್ಮಾಣದಲ್ಲೂ […]

ಗ್ರಾಮಸ್ನೇಹಿ ಪರಿಣಾಮಕಾರಿಗೊಳಿಸಲು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷರ ಸೂಚನೆ

Thursday, July 17th, 2014
kdp meeting

ಮಂಗಳೂರು : ಗ್ರಾಮೀಣ ಮಟ್ಟದಲ್ಲಿ ನಾಗರೀಕರ ಅಹವಾಲುಗಳನ್ನು ತಳಮಟ್ಟದಲ್ಲಿಯೇ ಆಲಿಸಲು ಪ್ರತೀ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದಲ್ಲಿ ಆರಂಭಿಸಲಾಗಿರುವ ಗ್ರಾಮಸ್ನೇಹಿ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ಮೊದಲ ಗ್ರಾಮಸ್ನೇಹಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಆಗಸ್ಟ್ 5ರಂದು ಎರಡನೇ ಕಾರ್ಯಕ್ರಮ ನಡೆಯಲಿದೆ. ಜನರ ಅಹವಾಲುಗಳನ್ನು ನೇರವಾಗಿ […]

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಪ್ರಾರಂಭ

Thursday, July 17th, 2014
Dharmasthala

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬುಧವಾರದಿಂದ ಎರಡು ತಿಂಗಳ ಕಾಲ ನಡೆಯಲಿರುವ ಪುರಾಣ ವಾಚನ-ಪ್ರವಚನ ಎಂಬ ಸತ್ಸಂಗ ಕಾರ್ಯಕ್ರಮಕ್ಕೆ ವಾಚನ-ಪ್ರವಚನಕಾರರು, ಕ್ಷೇತ್ರದ ಭಕ್ತಾದಿಗಳ ಸಮ್ಮುಖದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮಂಗಳೂರಿನ ಉದ್ಯಮಿ ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ರ ವರೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಶ್ರೀ ಕುಮಾರ ವ್ಯಾಸ ವಿರಚಿತ ಕರ್ಣಾಟ ಭಾರತ ಮಂಜರಿ ಯ ವಾಚನ – ಪ್ರವಚನ ನಡೆಯಲಿದೆ. […]