ಮುಂದೂಡಲ್ಪಟ್ಟ ಸರಕಾರದ ಸಪ್ತಪದಿ ವಿವಾಹ ಕಾರ್ಯಕ್ರಮ ಶೀಘ್ರದಲ್ಲೇ ಆರಂಭ

Monday, June 1st, 2020
Muzurai

ಮಂಗಳೂರು : ಕೋವಿಡ್-19 ಸೋಂಕಿನಿಂದ ಮುಂದೂಡಲ್ಪಟ್ಟಿ ರುವ ಸಪ್ತಪದಿ ವಿವಾಹ ಕಾರ್ಯಕ್ರಮ ನಿಶ್ಚಿತವಾಗಿ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ. ಸಪ್ತಪದಿ ವಿವಾಹ ಕಾರ್ಯಕ್ರಮ ಎ.26 ಮತ್ತು ಮೇ 24 ರಂದು ನಡೆಯಬೇಕಿತ್ತು. ಆದರೆ ಸೋಂಕಿನ ಕಾರಣದಿಂದ ಅದು ಮುಂದೂಡಲ್ಪಟ್ಟಿದೆ. ಈ ವಿವಾಹ ಕಾರ್ಯಕ್ರಮ ನಿಶ್ಚಿತವಾಗಿ ನಡೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸಪ್ತಪದಿ ವಿವಾಹಕ್ಕೆ ರಾಜ್ಯಾದಾದ್ಯಂತ 4500 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 1500 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಖ್ಯಮಂತ್ರಿಗಳು 50 ಜನರಿದ್ದು ವಿವಾಹ ಕಾರ್ಯಕ್ರಮ ನಡೆಸಬಹುದು […]

ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು, ಶಿವಭಾಗ್ ನ ಶಿವದೀಪ್ ಅಪಾರ್ಟ್ ಮೆಂಟ್ ಗೆ ನೋಟೀಸ್

Thursday, May 28th, 2020
pregnent-woman

ಮಂಗಳೂರು : ಶಿವದೀಪ್ ಅಪಾರ್ಟ್ ಮೆಂಟ್ ನಲ್ಲಿ ಕ್ವಾರೆಂಟೈನ್ ದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು ಸಂಭವಿಸಲು  ಕಾರಣರಾದ  ಶಿವಭಾಗ್ ನ ಖಾಸಗಿ ಅಪಾರ್ಟ್ ಮೆಂಟ್ ಗೆ ಮಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ. ಶಿವಭಾಗ್ ನ ಶಿವದೀಪ್ ಅಪಾರ್ಟ್ ಮೆಂಟ್ ಗೆ ನೋಟೀಸ್ ಜಾರಿಯಾಗಿದೆ. ಇನ್ನು ಮೂರು ದಿನಗಳ ಒಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚನೆ ನೀಡಲಾಗಿದೆ. ತಕ್ಷಣ ಮಹಿಳೆಗೆ ಅಪಾರ್ಟ್ ಮೆಂಟ್ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ವಿರುದ್ದ ಕಾನೂನು ಕ್ರಮ […]

ಪೀಡಿಯಾಟ್ರಿಕ್, ಸಮಾಲೋಚಕ, ಯೋಗ ಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Wednesday, May 27th, 2020
pediatric

ಮಂಗಳೂರು : ಡಿ.ಎನ್.ಬಿ. ಕೋರ್ಸಿನ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಸೀನಿಯರ್ ಕನ್ಸಲ್ಟಂಟ್/ ಪಿ.ಜಿ. ಟೀಚರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜೂನ್ 2 ರಂದು ವೆನ್‍ಲಾಕ್ ಜಿಲ್ಲಾ ಶಸ್ತ್ರಚಿಕಿತ್ಸರ ಕಚೇರಿಯಲ್ಲಿ ನೇರ ಸಂದರ್ಶನದ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗಲು ಬೇಕಾದ ಅರ್ಹತೆಗಳು ಇಂತಿವೆ: ಸಂಬಂಧಿಸಿದ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ(ಎಂ.ಎಸ್/ಎಂ.ಡಿ/ಡಿ.ಎನ್.ಬಿ) ಪಡೆದು 5 ವರ್ಷಗಳ ಬೋಧನಾ ಅನುಭವವಿರಬೇಕು. ಒಟ್ಟು 10 ವರ್ಷ ಸೇವೆ ಸಲ್ಲಿಸಿರಬೇಕು. ವಯೋಮಿತಿ 67 ವರ್ಷದೊಳಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು […]

ಕೊರೋನಾ ವಾರಿಯರ್ ಬಿಕಿನಿ ಧರಿಸಿ ಪುರುಷ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ಯಾಕೆ ಗೊತ್ತಾ

Saturday, May 23rd, 2020
corona Nurse

ಮಾಸ್ಕೋ: ಮಹಾಮಾರಿ ಕೊರೋನಾ ವೈರಸ್ ಜಗತ್ತನ್ನೇ ನಡುಗಿಸುತ್ತಿದೆ. ಕೊರೋನಾ ತಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳು 24 ಗಂಟೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕೆಲಸ ಮಾಡುತ್ತಿರುವ 20 ವರ್ಷದ ನರ್ಸ್ ಒಬ್ಬರು ಕೊರೋನಾಗೆ ತುತ್ತಾಗಿರುವ ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು ಪಿಪಿಈ ಪಾರದರ್ಶಕ ಗೌನ್ ಧರಿಸಿ ಚಿಕಿತ್ಸೆ ನೀಡುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ನರ್ಸ್ ಸ್ಪಷ್ಟನೆ ನೀಡಿದ್ದಾರೆ. […]

ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು : ಪ್ರಧಾನಿ

Wednesday, May 13th, 2020
Narendra Modi

ಹೊಸದಿಲ್ಲಿ: ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು ಎಂದು ಹಲವಾರು ತಜ್ಞರು ಹೇಳಿದ್ದಾರೆ ಎಂದ ಪ್ರಧಾನಿ, ನಾವು ಯಾವಾಗಲೂ ಮಾಸ್ಕ್ ಗಳನ್ನು ಧರಿಸೋಣ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೋಣ. ಅವೆಲ್ಲದರ ಜತೆಗೆ ದೇಶದ ಆರ್ಥಿಕತೆಗೂ ಶ್ರಮಿಸೋಣ ಎಂದು ಪ್ರಧಾನಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ. ಮಂಗಳವಾರ ರಾತ್ರಿ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, […]

ಸೆಕ್ಯುರಿಟಿ ಗಾರ್ಡ್ ಯುವತಿಯನ್ನು ಬೈಕಿನಲ್ಲಿ ಕರೆದೊಯ್ದುಅರಣ್ಯ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನ

Sunday, May 3rd, 2020
Security Guard

ಉಡುಪಿ : ಸೆಕ್ಯುರಿಟಿ ಗಾರ್ಡ್ ಮಹಿಳೆಯೊಬ್ಬರನ್ನು ಸಹಾಯ ನೀಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ  ಘಟನೆ ಮೇ 2 ರ ಶನಿವಾರ ಉಡುಪಿ ಸಂತೆಕಟ್ಟೆ ಯಲ್ಲಿ ನಡೆದಿದೆ. ಬ್ರಹ್ಮಾವರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ, ಸಂತೆಕಟ್ಟೆ ಯಲ್ಲಿರುವ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಮೋಟಾರ್ ಬೈಕಿನಲ್ಲಿ  ಬಂದ ವ್ಯಕ್ತಿ ನನಗೆ ಸಹಾಯ ಮಾಡಲು ಮುಂದಾದರು, ನಾನು ಅದ್ಕಕೆ ಒಪ್ಪಿ ಅವರ ಬೈಕಿನಲ್ಲಿ ಹಿಂಬದಿ ಸವಾರಳಾಗಿ  ಹೋದೆ ಆದರೆ ಆ ವ್ಯಕ್ತಿ ಬೇರೆ ಮಾರ್ಗದಲ್ಲಿ ಕರೆದೊಯ್ದ ಅತ್ಯಾಚಾರಕ್ಕೆ ಯತ್ನಿಸಿದರು ಎಂದು ದೂರು […]

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ವೈರಸ್ ಬಂದಿದ್ದು ದುಬೈನಿಂದ

Friday, May 1st, 2020
corona-entry

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಗೆ  ಕೊರೋನಾ ವೈರಸ್ ಬಂದಿದ್ದು ವಿದೇಶದಿಂದ.  ಮಾರ್ಚ್ 22ರಂದು ಮೊದಲ ಕೋವಿಡ್ ಸೋಂಕು  ಜಿಲ್ಲೆಯಲ್ಲಿ  ಪತ್ತೆಯಾಗಿತ್ತು. ದುಬೈನಿಂದ ಆಗಮಿಸಿದ  ಯುವಕನೊಬ್ಬನಲ್ಲಿ ಕೋವಿಡ್‌-19  ವೈರಾಣು ಪತ್ತೆಯಾಗಿತ್ತು. ಮೇಲೆ ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರು ಒಂದಿಲ್ಲೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದ್ದು, ಆ ಪೈಕಿ ಓರ್ವ ಭಟ್ಕಳ, ಓರ್ವ ಉಡುಪಿ ಹಾಗೂ ನಾಲ್ವರು ಕೇರಳದವರಾಗಿದ್ದಾರೆ. ಉಳಿದ 16 ಮಂದಿ ದ.ಕ. ಜಿಲ್ಲೆಯವರು. ಒಟ್ಟು ಸೋಂಕಿತರ […]

ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಕೆ

Tuesday, April 14th, 2020
Narendra-modi

ನವದೆಹಲಿ: ದೇಶದಾದ್ಯಂತ ಕೊರೋನಾ ಹತ್ತಿಕ್ಕಲು ಮೇ 3ರವರೆಗೂ ಲಾಕ್’ಡೌನ್ ಮುಂದುವರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ಭಾರತ ಲಾಕ್ ಡೌನ್ ಮಂಗಳವಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಜನತೆಯನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ ಮೋದಿಯವರು, ನಿಮ್ಮ ಸಹಕಾರದಿಂದ ಕೊರೋನಾ ವೈರಸ್ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ […]

ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು, 87 ಸಾವಿರದ 320 ಮಂದಿ ಮೃತ

Thursday, April 9th, 2020
corona

ಪ್ಯಾರಿಸ್: ಕೊರೋನಾ ಸೋಂಕು ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ಎಎಫ್ ಪಿ ಸಂಸ್ಥೆ ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯನ್ನಾಧರಿಸಿ ಅಂಕಿಅಂಶಗಳನ್ನು ನೀಡಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಬಹುತೇಕ ದೇಶಗಳು ಅತಿ ಗಂಭೀರ ಕೇಸುಗಳನ್ನು ಮಾತ್ರ ಪರೀಕ್ಷೆ […]

ಹುಲಿಗೂ ಕೋವಿಡ್ ಸೋಂಕು : ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ದೃಢ

Wednesday, April 8th, 2020
nadiya

ನ್ಯೂಯಾರ್ಕ್‌ : ನ್ಯೂಯಾರ್ಕ್‌ನಲ್ಲಿರುವ ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ಇರುವುದು ದೃಢವಾಗಿದೆ. ನಾಲ್ಕು ವರ್ಷ ವಯಸ್ಸಿನ ನಾಡಿಯಾ ಎಂಬ ಹೆಸರಿನ ಹುಲಿಗೆ ಸೋಂಕು ಕೋವಿಡ್  ತಗಲಿದೆ. ಜತೆಗೆ ಇತರ ಆರು ಹುಲಿ ಮತ್ತು ಸಿಂಹಗಳೂ ಅನಾರೋಗ್ಯದಿಂದ ಬಳಲುತ್ತಿವೆ. ಮೃಗಾಲಯದ ಉದ್ಯೋಗಿಯಿಂದ ಸೋಂಕು ಪ್ರಾಣಿಗಳಿಗೆ ವರ್ಗಾವಣೆ ಆಗಿರಬಹುದೆಂದು ಸದ್ಯ ಶಂಕಿಸಲಾಗುತ್ತಿದೆ. ಮಾ.27ರಂದು ಹುಲಿ ನಾಡಿಯಾ ಆರಂಭಿಕ ಲಕ್ಷಣಗಳನ್ನು ತೋರಿಸಲಾರಂಭಿಸಿತ್ತು. ಇದರ ಜತೆಗೆ ಜನಿಸಿದ ಅಝುಲ್‌ ಎಂಬ ಮತ್ತೂಂದು ಹುಲಿ, ಮೂರು ಸಿಂಹಗಳು ಒಣ ಕೆಮ್ಮು, ಆಹಾರ ಸೇವಿಸಲು ನಿರಾಸಕ್ತಿ […]