ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ನೇಮಕ

Thursday, April 25th, 2013
Abdul Aziz Kudroli

ಮಂಗಳೂರು : ಜೆಡಿಎಸ್ ನಿಂದ ಜಿಲ್ಲೆಯಲ್ಲಿ ಸಮರ್ಪಕ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ತಮ್ಮ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಬಿ. ಸದಾಶಿವ ತಿಳಿಸಿದರು. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಘೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಜೆಡಿಎಸ್ ನಲ್ಲಿದ್ದ ವಿವಿಧ ಗೊಂದಲಗಳು ಶಮನಗೊಂಡಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು. ಪಕ್ಷ ಅಧಿಕಾರಕ್ಕೆ ಬಂದರೆ ಮಂಗಳೂರು ನಗರದ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಿಳೆಯರ ರಕ್ಷಣೆ ಮೊದಲಾದ ಸಮಸ್ಯೆಗಳನ್ನು […]

ವಿಧಾನ ಸಭಾ ಚುನಾವಣೆ ಜೆ.ಆರ್ ಲೋಬೊರನ್ನು ಬೆಂಬಲಿಸುವಂತೆ ಮನವಿ

Thursday, April 25th, 2013
Seetaram Shetty

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ  ಜೆ.ಆರ್ ಲೋಬೊ ರವರನ್ನು  ಬೆಂಬಲಿಸುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ನ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ವಕೀಲರ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಹಿರಿಯ ವಕೀಲರಾದ ಸೀತಾರಾಮ ಶೆಟ್ಟಿ, ಪುರುಷೋತ್ತಮ ಪೂಜಾರಿ, ವೆಲೆಂಟೈನ್‌ ಡಿ’ಸಿಲ್ವಾ, ನಾರಾಯಣ ಪೂಜಾರಿ, ಬಿ. ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಎಂ.ಪಿ. ಶೆಣೈ, ರಾಜೇಂದ್ರ ಕುಮಾರ್‌, ಎಂ.ಪಿ. ನೊರೋನ್ಹಾ ಉಪಸ್ಥಿತರಿದ್ದು, ಜೆ.ಆರ್‌. ಲೋಬೊ ಅವರಿಗೆ ಬೆಂಬಲ […]

ಬೆಳ್ತಂಗಡಿ : ಅಂತಾರಾಜ್ಯ ಕಳ್ಳರ ಬಂಧನ

Tuesday, April 23rd, 2013
Inter state thieves

ಬೆಳ್ತಂಗಡಿ : ಸೋಮವಾರ ಉಜಿರೆಯ ಚೆಕ್ ಪೋಸ್ಟ್ ಬಳಿ ಬೆಳ್ತಂಗಡಿ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಗೋಪಿ ಯಾನೆ ಗೋಪಿನಾಥ್(29), ಬೆಂಗಳೂರು ಕುರುಬರ ಹಳ್ಳಿಯ ಸೂರಿ ಯಾನೆ ಸುರೇಂದ್ರ(29), ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ನಿವಾಸಿ ಮಣಿ ಯಾನೆ ಮಣಿಕಂಠ (23)ಬಂಧಿತ ಆರೋಪಿಗಳು. ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಮತ್ತು ತಂಡ ಉಜಿರೆಯಲ್ಲಿ ಚುನಾವಣಾ ಸಂಬಂಧಿ ಕರ್ತವ್ಯದಲ್ಲಿದ್ದ ವೇಳೆ ಬೆಂಗಳೂರು ನೋಂದಣಿಯ ಕ್ವಾಲಿಸ್ ಕಾರ್‌ನಲ್ಲಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಸಂದರ್ಭ ಆರೋಪಿಗಳು ಕಳ್ಳತನದ ಬಗ್ಗೆ […]

ಕುಂದಾಪುರ: ಟಿಪ್ಪರ್-ಒಮ್ನಿ ಡಿಕ್ಕಿ ಓರ್ವ ಸಾವು, ಮೂರು ಮಂದಿ ಗಂಭೀರ

Tuesday, April 23rd, 2013
Accident

ಕುಂದಾಪುರ: ಒಮ್ನಿ ಹಾಗು ಟಿಪ್ಪರ್ ನಡುವೆ ಸೊಮವಾರ ಕುಂದಾಪುರದ ಹಕ್ಲಾಡಿ ಸಮೀಪ ನಡೆದ ಅಪಘಾತದಲ್ಲಿ  ಒಬ್ಬಾತ ಮೃತಪಟ್ಟಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಂದಾವರ ಉಳ್ಳೂರಿನ ರವೀಂದ್ರ ಪೂಜಾರಿ(28) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಲೂರಿನ ಸಸಿಹಿತ್ಲು ನಿವಾಸಿ ಶಂಕರ ಪೂಜಾರಿ(೪೧) ಎರಡು ದಿನಗಳ ಹಿಂದೆ ರಜೆ ನಿಮಿತ್ತ ಮುಂಬೈನಲ್ಲಿದ್ದ ತನ್ನ ಪತ್ನಿ ಸರೋಜ(೩೭)  ಹಾಗು ಪುತ್ರಿಯರಾದ ಸ್ವಪ್ನ(೧೧), ಸ್ವಯಂ(೫) ರೊಂದಿಗೆ ಊರಿಗೆ ಮರಳಿದ್ದರು. ಸೋಮವಾರ ಹೆಂಡತಿ ಸರೋಜಾ, ಮಕ್ಕಳಾದ ಸಪ್ನಾ(೧೧) ಮತ್ತು ಸ್ವಯಂ(೫) ಹಾಗು […]

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೃಷ್ಣ ಜೆ. ಪಾಲೆಮಾರ್ ರಿಂದ ಚುನಾವಣಾ ಪ್ರಚಾರ

Tuesday, April 23rd, 2013
Palemar

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,  ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೋಮವಾರ ನಗರದ ಹರಿಪದವು, ಯಯ್ಯಾಡಿ, ಹಾಗೂ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಪರಿಸರದಲ್ಲಿ ಚುನಾವಣಾ ಪ್ರಚಾರಕಾರ್ಯ ನಡೆಸಿದರು. ಅಲ್ಪಸಂಖ್ಯಾತ ಅಭ್ಯರ್ಥಿ ಈ ಬಾರಿ ತಮ್ಮ ಎದುರಾಳಿಯಾಗಿದ್ದು, ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ತಮ್ಮ ಜೊತೆಗಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಗೆಲುವು ಸಾಧಿಸುವ ಎಲ್ಲಾ  ಲಕ್ಷಣಗಳು ಇದೆ, ಜೊತೆಗೆ ನಾನು ಈ ಕ್ಷೇತ್ರದಲ್ಲಿ ಮಾಡಿದ ಜನೋಪಯೋಗಿ ಅಭಿವೃದ್ದಿ ಕಾಮಗಾರಿಗಳೆ […]

ಏಪ್ರಿಲ್ 27 ಕ್ಕೆ ಎಐಸಿಸಿ ಆಧ್ಯಕ್ಷೆ ಸೋನಿಯಾ ಗಾಂದಿ ಮಂಗಳೂರಿಗೆ ಭೇಟಿ

Monday, April 22nd, 2013
Soniya Gandhi visit to Mangalore

ಮಂಗಳೂರು : ಎಐಸಿಸಿ ಆಧ್ಯಕ್ಷೆ ಸೋನಿಯಾ ಗಾಂದಿ ಮಂಗಳೂರಿಗೆ  ಏಪ್ರಿಲ್ 25 ರ ಬದಲಿಗೆ ಏಪ್ರಿಲ್ 27 ಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ  ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದರು. ಲೋಕಸಭಾ ಅಧಿವೇಶನದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಸರ್ಕಾರದ ಪರವಾಗಿ ಸಮರ್ಥವಾದ ಉತ್ತರ ನೀಡಬೇಕಾರಿವುದರಿಂದ ಸೋನಿಯಾ ಗಾಂಧಿ ಯವರ ಉಪಸ್ಥಿತಿ ಅಗತ್ಯವಾಗಿದ್ದು ಈ ಕಾರಣದಿಂದಾಗಿ ಅವರ […]

ನಾಪತ್ತೆಯಾಗಿದ್ದ ಮಹಿಳೆ ಮೈಸೂರಿನ ಲಾಡ್ಜ್ ನಲ್ಲಿ ಪತ್ತೆ,ಸಾವು

Monday, April 22nd, 2013
missing Woman found dead

ಬಂಟ್ವಾಳ : ಕೆಲವು ದಿನಗಳ ಹಿಂದೆ ಮಗುವಿನೊಂದಿಗೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಾಬು ಪೂಜಾರಿಯವರ ಪತ್ನಿ  ಮೋಹಿನಿ ಎಂಬುವವರು ಮೈಸೂರಿನ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವಾರಗಳ ಹಿಂದೆ ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಅಲ್ಲಿಂದ ತಲೆನೋವಿಗೆ ಔಷಧಿ ತೆಗೆದುಕೊಂಡು ಬರುತ್ತೇನೆ ಎಂದು ತನ್ನ ಮಗಳು ಮನೀಷಾಳೊಂದಿಗೆ ತೆರಳಿದ ಮೋಹಿನಿ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಇವರ  ಪತಿ ಬಾಬು ಪೂಜಾರಿಯವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು […]

ಉಳ್ಳಾಲ :ಕಿಡಿಗೇಡಿಗಳಿಂದ ಕಲ್ಲು ತೂರಾಟ ಬಸ್ಸುಗಳಿಗೆ ಹಾನಿ

Monday, April 22nd, 2013
Communal clash in Ullal

ಮಂಗಳೂರು : ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು ಘಟನೆ ವಿಕೋಪಕ್ಕೆ ತಿರುಗಿ, ಘಟನೆಯಿಂದ ಹಲವಾರು ಮಂದಿ ಗಾಯಗೊಂಡು, ಬಸ್ ಗಳಿಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಿನ್ನೆ ಉಳ್ಳಾಲ ಬಳಿಯ ಮೊಗವೀರಪಟ್ನದ ಬೀಚ್ ಬಳಿ ನಡೆದಿದೆ. ರವಿವಾರ ಸಂಜೆ  ಮೊಗವೀರಪಟ್ನ ಬೀಚ್‌ ಬಳಿ  ಮಕ್ಕಳೊಂದಿಗೆ ಬೀಚ್‌ ವೀಕ್ಷಿಸಲು ಬಂದಿದ್ದ ಮದನಿ ನಗರ ನಿವಾಸಿ ಖತೀಜಮ್ಮ ಮೇಲೆ ಬೀಚ್ ಬಳಿ ಕಾರಿನಲ್ಲಿ  ತಿರುಗಾಡುತ್ತಿದ್ದ ತಂಡವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಗಾಯಗೊಂಡಿದ್ದು, ಇದನ್ನು ಪ್ರಶ್ನಿಸಿದ  ಅಬೀಬ್‌ […]

ಬಿಜೆಪಿ ಚುನಾವಣಾಪ್ರಣಾಳಿಕೆಯಲ್ಲಿನ ಭರವಸೆಗಳು ಕೇವಲ ಪೊಳ್ಳು :ಜನಾರ್ಧನ ಪೂಜಾರಿ

Saturday, April 20th, 2013
Janardhan Poojari

ಮಂಗಳೂರು : ವಿಧಾನಸಭಾ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು ಗೆಲ್ಲುವ ಹಾಗು ಸಮರ್ಥ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದ್ದು ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇಬರುತ್ತದೆ ಎಂಬ ವಿಶ್ವಾಸವನ್ನು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ವ್ಯಕ್ತಪಡಿಸಿದರು. ಶುಕ್ರವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಆಡಳಿತದಿಂದ ಸೋತಿರುವ ಜನ ಈ ಬಾರಿ ಬಿಜೆಪಿ ಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುತ್ತಾರೆ ಎಂದರು. ಬಿಜೆಪಿ ಯ […]

ಫ್ಯಾಕ್ಸ್‌,ಈಮೇಲ್‌ ಮುಖಾಂತರ ದೂರು ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು : ವೈ. ಭಾಸ್ಕರ್ ರಾವ್

Saturday, April 20th, 2013
Lokayukta office Mangalore

ಮಂಗಳೂರು :  ನಗರದ ಉರ್ವಸ್ಟೋರ್  ಬಳಿ ನಿರ್ಮಿಸಲಾದ ಮಂಗಳೂರು ಲೋಕಾಯುಕ್ತ ಅಧೀಕ್ಷಕರ ಕಚೇರಿಯ ಮೊದಲ ಹಂತದ ಕಟ್ಟಡವನ್ನು ಕರ್ನಾಟಕ ಲೋಕಾಯುಕ್ತ ವೈ. ಭಾಸ್ಕರ್ ರಾವ್ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತರ ಬಳಿ ಬರುವ ಸಾರ್ವಜನಿಕ ಅಹವಾಲುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಕಡೆ ಹೆಚ್ಚಿನ ಗಮನ ಕೊಡಲಾಗುವುದು. ಲೋಕಾಯುಕ್ತ ವ್ಯವಸ್ಥೆಯಲ್ಲಿ ಇದುವರೆಗೆ ಸಾರ್ವಜನಿಕರು ಖುದ್ದಾಗಿ ಲಿಖಿತವಾಗಿ ದೂರು ಸಲ್ಲಿಸುವ ಕ್ರಮ ಇದ್ದು, ಇದೀಗ ಫ್ಯಾಕ್ಸ್‌ ಮತ್ತು ಈಮೇಲ್‌ ಮುಖಾಂತರವೂ ದೂರು ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು […]