ಜಿಲ್ಲಾ ವಾರ್ತ ಇಲಾಖೆಯಲ್ಲಿ ದಿನದ ೨೪ ಗಂಟೆ ಕಾರ್ಯನಿರ್ವಹಿಸುವ ಎಂಸಿಎಂಸಿ ಸಮಿತಿ ಸ್ಥಾಪನೆ

Monday, April 8th, 2013
MCMC

ಮಂಗಳೂರು : ಸ್ಥಳೀಯ ಕೇಬಲ್‌ ಟಿ.ವಿ. ಚಾನೆಲ್‌ಗ‌ಳಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂಧಿತ ವರದಿ ಹಾಗು ಜಾಹಿರಾತುಗಳ ಬಗ್ಗೆ ಗಮನ ಹರಿಸಲು ಮೀಡಿಯಾ ಸರ್ಟಿಫಿಕೇಶನ್ ಅಂಡ್ ಮಾನಿಟರಿಂಗ್ ಕಮಿಟಿ (ಎಂಸಿಎಂಸಿ) ಯೊಂದನ್ನು ಜಾರಿಗೆ ತರಲಾಗಿದೆ. ಮಂಗಳೂರಿನ ಜಿಲ್ಲಾ ವಾರ್ತ ಇಲಾಖೆ ಕಛೇರಿ ಸಭಾಂಗಣದಲ್ಲಿ ಪ್ರಾರಂಭಗೊಂಡಿರುವ ಈ ವ್ಯವಸ್ಥೆ ದಿನದ 24 ಗಂಟೆಗಳ ಕಾಲವೂ ಕಾರ್ಯಾಚರಿಸಲಿದ್ದು,  ತಾತ್ಕಾಲಿಕ ಎರವಲು ಸೇವೆಯಲ್ಲಿ ಬೇರೆ ಬೇರೆ ಇಲಾಖೆಗಳ ಸಿಬ್ಬಂದಿಗಳನ್ನು ಈ ಕಮಿಟಿಯಲ್ಲಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗಿದೆ. ಈ ಕಮಿಟಿಯಲ್ಲಿನ ಸಿಬ್ಬಂದಿಗಳು ಮಂಗಳೂರಿನಲ್ಲಿ ಸ್ಥಳೀಯವಾಗಿ […]

ನಗರದ ವೆಲೆನ್ಸಿಯಾ ಬಳಿ ದುಷ್ಕರ್ಮಿಗಳಿಂದ ಭೀಕರ ಹತ್ಯೆ

Monday, April 8th, 2013
Murdered at Valencia

ಮಂಗಳೂರು : ಬಾನುವಾರ ರಾತ್ರಿ ನಗರದ ಕಂಪನಿಯೊಂದರ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವೆಲೆನ್ಸಿಯ ಬಳಿಯ ಮಂಗಳಾ ಬಾರ್ ಸಮೀಪ ನಡೆದಿದೆ. ಶ್ರೀ ಆದಿನಾಥೇಶ್ವರ ರೋಡ್ ಲೈನ್ಸ್ (ಟ್ರಾನ್ಸ್‌ಪೋರ್ಟ್ ) ಸಂಸ್ಥೆಯ ಮ್ಯಾನೇಜರ್ ಪ್ರಶಾಂತ್ ಯಾನೆ ಪಚ್ಚು(30) ಹತ್ಯೆಯಾದವರು. ಪ್ರಶಾಂತ್ ಅವಿವಾಹಿತರಾಗಿದ್ದು, ಮರಕಡ ಕುಂಜತ್ತಬೈಲ್ ನ ನಿವಾಸಿಯಾಗಿರುವ ಸುಂದರ ಎಂಬವರ ಪುತ್ರರಾಗಿದ್ದಾರೆ. ಬಾನುವಾರ ರಾತ್ರಿ ಸುಮಾರು 11.45 ರ ವೇಳೆ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಸುಮಾರು 7-8 ಮಂದಿಯ ತಂಡ […]

ಐವನ್ ಡಿಸೋಜ ಬೆಂಬಲಿಗರಿಂದ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ವಿರೋಧ, ಪ್ರತಿಭಟನೆ

Saturday, April 6th, 2013
Ivan D Souza's supporters

ಮಂಗಳೂರು : ಕಾಂಗ್ರೆಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಬೆನ್ನಲ್ಲೆ ಇಂದು ಅವರ ಬೆಂಬಲಿಗರು ಕಾಂಗ್ರೆಸ್ ಜಿಲ್ಲಾ ಕಚೇರಿಯ ಎದುರು ಪಕ್ಷದ ಈ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮೈಕಲ್ ಲೋಬೊ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಐವನ್ ಡಿಸೋಜ ರಿಗೆ ಟಿಕೆಟ್ ನೀಡದೆ ಕೆಲವು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡ  ಜೆ.ಆರ್ ಲೋಬೊಗೆ ನೀಡಲಾಗಿದೆ. ಇದು […]

ಯುವ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ನಿರ್ದೇಶನದ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ ಬಿಡುಗಡೆ ಸಮಾರಂಭ

Saturday, April 6th, 2013
Chellapilli Kannada movie

ಮಂಗಳೂರು : ಕರಾವಳಿಯ ಯುವ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ನಿರ್ದೆಶನದಲ್ಲಿ ಮೂಡಿ ಬಂದಿರುವ, ಕರಾವಳಿಯ ಬಹಿತೇಕ ಕಲಾವಿದರನ್ನು ಒಳಗೊಂಡ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ ಬಿಡುಗಡೆ ಸಮಾರಂಭ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಶುಕ್ರವಾರ ನಡೆಯಿತು. ಚಿತ್ರದ ದ್ವನಿ ಸುರುಳಿಯನ್ನು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್‌. ರಾಜೇಂದ್ರಕುಮಾರ್‌ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇದೀಗ ಕರಾವಳಿಯಲ್ಲೂ ಕನ್ನಡ ಚಿತ್ರಗಳನ್ನು ನಿರ್ಮಿಸಬಲ್ಲ, ನಿರ್ದೇಶಿಸಬಲ್ಲ ಪ್ರತಿಭೆಗಳಿವೆ ಎಂಬುದನ್ನು […]

ಕಾಂಗ್ರೆಸ್ : ರಾಜ್ಯ ವಿಧಾನ ಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಜೆ.ಆರ್.ಲೋಬೊ ಕಣಕ್ಕೆ

Saturday, April 6th, 2013
JR Lobo & Ivan D Souza

ಮಂಗಳೂರು : ಕಾಂಗ್ರೆಸ್ ಪಕ್ಷದಿಂದ ರಾಜ್ಯ ವಿಧಾನ ಸಭೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈಗ ಸಿದ್ಧವಾಗಿರುವ ಪಟ್ಟಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಜೆ.ಆರ್.ಲೋಬೊ ರಿಗೆ ಟಿಕೆಟ್ ನೀಡಲಾಗಿದೆ. ಕೆಲ ತಿಂಗಳ ಹಿಂದೆ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿದ  ಜೆ.ಆರ್.ಲೋಬೊ ಪಕ್ಷಕ್ಕೆ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ತೆರೆ ಮರೆಯಲ್ಲೇ  ತನ್ನ ಪಾಲಿನ ಕೆಲಸ ಮಾಡಿಕೊಂಡಿದ್ದರು. ಒಂದೆಡೆ ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ಪರ್ಧಿಸುವ ಅವಕಾಶ ಒದಗಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು […]

ಕಾರ್ಯಾಚರಣೆ ವೇಳೆ ಮೃತಪಟ್ಟ ಪೇದೆ ರಾಜಪ್ಪ ರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

Saturday, April 6th, 2013
caonstable Rajappa

ಮಂಗಳೂರು : ಮುಲ್ಕಿ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಮೃತಪಟ್ಟ ಮುಲ್ಕಿ ಠಾಣಾ ಸಿಬ್ಬಂದಿ ರಾಜಪ್ಪ(೩೦) ಅವರಿಗೆ ಶುಕ್ರವಾರ ಸಂಜೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಈ ವೇಳೆ ಅವರ ಅಂತಿಮ ನಮನಕ್ಕೆ ಗರ್ಭಿಣಿ ಪತ್ನಿ ಹಾಗೂ ಮನೆಯವರು ಆಗಮಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಪಶ್ಚಿಮ ವಲಯ ಐಜಿಪಿ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಹೂಗುಚ್ಛ ಅರ್ಪಿಸುವ ಮುಖಾಂತರ ಮೃತ ಪೇದೆಯ ಆತ್ಮಕ್ಕೆ ಚಿರಶಾಂತಿ […]

ಉಡುಪಿ ವಿದಾನಸಭಾ ಚುನಾವಣೆ : ಸುಧಾಕರ್ ಶೆಟ್ಟಿಯವರಿಗೆ ಟಿಕೆಟ್

Saturday, April 6th, 2013
Sudhakar Shetty

ಉಡುಪಿ : ಹತ್ತು ವರ್ಷಗಳ ಹಿಂದೆ ಉಡುಪಿ ಶಾಸಕ ರಘುಪತಿ ಭಟ್ ರಿಂದ ಟಿಕೇಟ್ ವಂಚಿತರಾಗಿದ್ದ  ಸುಧಾಕರ್ ಶೆಟ್ಟಿಯವರಿಗೆ ಇದೀಗ ರಘುಪತಿ ಭಟ್ ರ ಕಾರಣದಿಂದಲೇ ಉಡುಪಿ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದೆ. ರಾಸಲೀಲೆ ಪ್ರಕರಣದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದ  ಉಡುಪಿ ಶಾಸಕ ರಘುಪತಿ ಭಟ್  ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಪಕ್ಷ ರಘುಪತಿ ಭಟ್ ಗೆ ಸ್ಪರ್ಧಿಸಲು ಅವಕಾಶ […]

ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿ ಡಿಕ್ಕಿ, ಮೃತಪಟ್ಟ ಪೊಲೀಸ್ ಪೇದೆ

Friday, April 5th, 2013
Mulky mishap constabel kill

ಮಂಗಳೂರು : ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಲ್ಕಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ದಾವಣಗೆರೆ ಹೊನ್ನಾಳಿ ಮೂಲದ ರಾಜಪ್ಪ(27) ಮೃತ ಪೊಲೀಸ್ ಪೇದೆ. ಕರಾವಳಿ ಭದ್ರತಾ ಪಡೆಯ ಸಾಗರ ಕವಚ ಕಾರ್ಯಾಚರಣೆಯ ನಿಮಿತ್ತ ಗುರುವಾರ ಮಧ್ಯರಾತ್ರಿ ಮುಲ್ಕಿಯ ಬಪ್ಪನಾಡು ಚೆಕ್‌ಪೋಸ್ಟ್‌ನಲ್ಲಿ ರಾಜಪ್ಪ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಪ್ರಮೋದ್ ಮತ್ತು ಸೀತಾರಾಮ ಎಂಬ ಪೊಲೀಸ್ ಪೇದೆಗಳು ತಪಾಸಣಾ ಕಾರ್ಯದಲ್ಲಿ ತೊಡಗಿದ್ದರು. ಮುಂಜಾನೆ 3.30ರ ಸುಮಾರಿಗೆ ಉಡುಪಿಯಿಂದ […]

ಬಿ.ಸಿ. ರೋಡ್ ನಲ್ಲಿ ರೈಲ್ವೇ ಮೇಲ್ಸೇತುವೆ ಫ‌ುಟ್‌ಪಾತ್‌ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ

Friday, April 5th, 2013
Bantwal Railway overbridge

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ ನಲ್ಲಿ ರೈಲ್ವೇ ಮೇಲ್ಸೇತುವೆಯ ಫ‌ುಟ್‌ಪಾತ್‌ನ ಬದಿಯ ಬಿರುಕು ಬಿಟ್ಟ ಜಾಗದಲ್ಲಿ ಗುರುವಾರ ಲಾರಿಯೊಂದು ಚಲಿಸಿ, ಫ‌ುಟ್‌ಪಾತ್‌ ಇನ್ನಷ್ಟು ಕುಸಿದು ಲಾರಿಯ ಚಕ್ರಗಳು ಬಿರುಕು ಬಿಟ್ಟ ಜಾಗದಲ್ಲಿ ಸಿಲುಕಿಕೊಂಡ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದಾಗಿ ಬಿ.ಸಿ. ರೋಡಿನಲ್ಲಿ ಸುದೀರ್ಘ ಹೊತ್ತು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.  ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಬಿ.ಸಿ.ರೋಡಿನ ರೈಲ್ವೇ ಮೇಲ್ಸೆತುವೆಯ ಫ‌ುಟ್‌ಪಾತ್‌ ಆಗಾಗ […]

ಸರಕು ನಿರ್ವಹಣೆ : ಎನ್ಎಂಪಿಟಿ ದಾಖಲೆ

Friday, April 5th, 2013
NMPT Tamilvaanan

ಮಂಗಳೂರು : ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಟಿ) 2012-13ನೇ ಸಾಲಿನಲ್ಲಿ ಅತ್ಯಧಿಕ ಸರಕು ನಿರ್ವಹಣೆ ಮಾಡುವ ಮೂಲಕ ಎನ್‌ಎಂಪಿಟಿಯಲ್ಲಿ ಇದುವರೆಗಿನ ಅತಿ ಹೆಚ್ಚು ಸರಕು ನಿರ್ವಹಣೆ ಮಾಡಿದ ದಾಖಲೆ ಸ್ಥಾಪಿಸಿದೆ ಎಂದು ಬಂದರು ಮಂಡಳಿ ಅಧ್ಯಕ್ಷ ತಮಿಳ್‌ವಾನನ್ ತಿಳಿಸಿದರು. ಬಂದರು ಮಂಡಳಿ ಆಡಳಿತ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 32.94 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡಲಾಗಿದ್ದು, 2008 – 09ನೇ ಸಾಲಿನಲ್ಲಿ  36.69 ಮಿಲಿಯನ್‌ ಟನ್‌ ಸರಕು ನಿರ್ವಹಣೆ ಈ […]