ಬಂಟ್ವಾಳದ ಎಸ್.ವಿ.ಎಸ್. ಸಂಘದಲ್ಲಿ ಬಹುಕೋಟಿ ಲೂಟಿ; ವೆಂಕಟರಮಣನ ಹೆಸರಲ್ಲಿ ಮತ್ತೊಂದು ನಾಮ

Thursday, June 13th, 2019
svs college

ಬಂಟ್ವಾಳ : ಇದು ವ್ಯಾಪಾರಕ್ಕೆ ಹೆಸರುವಾಸಿ. ಇಲ್ಲಿ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಅದರಡಿಯಲ್ಲಿ ಪ್ರಾಥಮಿಕ, ಮಾದ್ಯಮಿಕ ಮತ್ತು ಹೈಸ್ಕೂಲು ಹಾಗು ಕಾಲೇಜುಗಳನ್ನು ಹಲವು ವರ್ಷಗಳ ಹಿಂದೆ ತೆರೆಯಲಾಯಿತು. ಕಳೆದ ಐದು ದಶಕಗಳಲ್ಲಿ ಈ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ಕಲಿತು ಜೀವನದಲ್ಲಿ ಮುಂದೆ ಬಂದಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ಈ ವಿದ್ಯಾ ಸಂಸ್ಥೆಗಳ ಮಾತೃ ಸಂಸ್ಥೆಯಾದ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಅವ್ಯವಹಾರಗಳಲ್ಲಿ ಮುಳುಗಿ ನಾರತೊಡಗಿದೆ. ಬಂಟ್ವಾಳದ ಸಜ್ಜನರು ಕಟ್ಟಿದ ಈ ಸಂಸ್ಥೆಗೆ […]

ಬೈಯಪ್ಪನ ಹಳ್ಳಿಯಲ್ಲಿ ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ

Monday, June 10th, 2019
Girish karnad

ಬೆಂಗಳೂರು : ಬೆಂಗಳೂರು, ಜೂನ್ 10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,ಕನ್ನಡದ ಮೇರು ನಾಟಕಕಾರ, ಹಿರಿಯ ಸಾಹಿತಿ, ಗಿರೀಶ್ ಕಾರ್ನಾಡ್(81) ವಿಧಿವಶರಾಗಿದ್ದಾರೆ. ಬೆಂಗಳೂರಿನ ಲ್ಯಾವಲ್ಲೆರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಗಿರೀಶ್ ಕಾರ್ನಾಡ್‌ ಅವರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ […]

ಎಂ.ಎಂ.ಕಲಬುರ್ಗಿ ಹತ್ಯೆಗೆ ತರಬೇತಿ ಪಡೆದದ್ದು ಮಂಗಳೂರಿನಲ್ಲಿ

Friday, June 7th, 2019
mm-kalburgi

ಮಂಗಳೂರು  : ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಕಲಬುರ್ಗಿ ಅವರನ್ನು ಹತ್ಯೆ ಮಾಡಲು ಮಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಮಹತ್ವದ ಮಾಹಿತಿಯೊಂದು ಈಗ ಸಿಕ್ಕಿದೆ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಪ್ರವೀಣ್ ಪ್ರಕಾಶ್ ಚತುರ್ (27) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಎಸ್‌ಐಟಿ ವಶದಲ್ಲಿರುವ ಆರೋಪಿಯಿಂದ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಗೌರಿ ಲಂಕೇಶ್ ಹತ್ಯೆಗೆ ಬೆಳಗಾವಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ […]

ಶ್ರೀಮತಿ ಶೆಟ್ಟಿ ಕೊಲೆ ಆರೋಪಿ ಆಕೆಯಿಂದ 1ಲಕ್ಷ ಸಾಲ ಪಡೆದಿದ್ದ

Wednesday, May 15th, 2019
jhone

ಮಂಗಳೂರು :  ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀಮತಿ ಶೆಟ್ಟಿಯವರನ್ನು ಬರ್ಬರವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ನಗರದ ಕದ್ರಿ ಪಾರ್ಕ್, ನಂತೂರ್, ನಂದಿಗುಡ್ಡೆ ಸೇರಿದಂತೆ ವಿವಿಧೆಡೆಗಳಲ್ಲಿ ಎಸೆದು ಹೋಗಿದ್ದ ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಕೊಲೆಯಲ್ಲಿ ದಂಪತಿಗಳಿಬ್ಬರು ಭಾಗಿಯಾಗಿದ್ದು, ಬಂಧಿತರನ್ನು ವೆಲೆನ್ಸಿಯಾ ಸೂಟರ್ ಪೇಟೆಯ ಜೋನಸ್ […]

ಮಂಡ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಹೋರಾಡಲು ಸಿದ್ದನಿದ್ದೇನೆ : ಸುಮಲತಾ ಅಂಬರೀಶ್

Thursday, April 4th, 2019
sumalatha

ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ಅವರು ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಸುದೀರ್ಘ‌ ಸುದ್ದಿಗೋಷ್ಠಿಯಲ್ಲಿ ನಡೆಸಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಜನರ ಅಭಿಪ್ರಾಯದಂತೆ ರಾಜಕೀಯ ಪ್ರವೇಶಿಸಿದ್ದೇನೆ . ರಾಜಕೀಯ ಪ್ರವೇಶ ಮಾಡಿ ತಾಳ್ಮೆ ಕಲಿತಿಲ್ಲ. ತಾಳ್ಮೆ ಅನ್ನುವುದು ನನ್ನ ಹುಟ್ಟುಗುಣ, ಅಂಬರೀಶ್‌ ಅವರನ್ನು ಮದುವೆಯಾಗಿ 27 ವರ್ಷ ಸಂಸಾರ ನಡೆಸಿದ್ದೇನೆ ಇದಕ್ಕೆ ನನ್ನ ತಾಳ್ಮೆಯೆ ಕಾರಣ ಎಂದು ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದರು. ಮೂವರು ಸುಮಲತಾರಿಂದ ಜೆಡಿಎಸ್‌ಗೆ ಮತಗಳು ಬೀಳುವುದಿಲ್ಲ. ಇನ್ನೊಂದು ಸುಮಲತಾಗೆ […]

ವೀರನಾರಾಯಣ ದೇವಾಲಯದಲ್ಲಿ ಸಿಕ್ಕಿದ ರಾಜ ಕುಲಶೇಖರನ ತುಳು ಶಾಸನದಲ್ಲೇನಿದೆ !

Monday, February 25th, 2019
Murugeshi

ಮಂಗಳೂರು  : ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಮಂಗಳೂರಿನ ಕುಲಶೇಖರದ ಶ್ರೀವೀರನಾರಯಣ ದೇವಾಲಯದಲ್ಲಿ ಪತ್ತೆಯಾಗಿದೆ. ಆಳುಪ ಚಕ್ರವರ್ತಿ 1 ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ. ಈ ಶಾಸನ ಶ್ರೀ ಹರಿಯೇ ನಮಃ ಎಂಬ ಒಂದು ಸಾಲಿನ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿದೆ. ನಂತರ ಶಾಸನದಲ್ಲಿ ಸೌರ ಪಂಚಾಗದ ರೀತ್ಯಾ ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಶಾಸನೋಕ್ತ ವಿವರದ […]

ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ : ಎಂ.ಸಿದ್ಧರಾಜು

Wednesday, January 16th, 2019
Journalist

ಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ)ನ ದ.ಕ.ಜಿಲ್ಲಾ ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಬುಧವಾರ ‘ಸಂವಿಧಾನದತ್ತ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ’ದ ಬಗ್ಗೆ ಮಾಧ್ಯಮ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷ ಎಂ.ಸಿದ್ಧರಾಜು  ಉದ್ಘಾಟಿಸಿದರು. ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ. ಉದ್ಯಮಿಗಳ ಕೈಯಲ್ಲಿ ಮಾಧ್ಯಮಗಳು ಸ್ಥಾಪನೆಗೊಳ್ಳುವುದರಿಂದ ವಸ್ತುನಿಷ್ಠ ವರದಿಗಳು, ವೈಚಾರಿಕತೆ, ಸಮಾಜದ ಹಿತ ಕಾಪಾಡುವ ಸಂಗತಿಗಳು ಸುದ್ದಿಯಾಗುತ್ತಿಲ್ಲ.  ಮಾಧ್ಯಮಗಳು  ಸೇವಾ ಮನೋಭಾವವನ್ನು ಹೊಂದಿಲ್ಲ. […]

ಸಾ.ರಾ.ಗೋವಿಂದ ಪುತ್ರ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ..!

Tuesday, November 20th, 2018
anup-actor

ಬೆಂಗಳೂರು: ಖ್ಯಾತ ನಿರ್ಮಾಪಕ ಹಾಗೂ ಫಿಲ್ಮ್ ಛೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ ಪುತ್ರ, ನಟ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಕೇಳಿ ಬಂದಿದೆ. ಹರೀಶ್ ಎಂಬಾತನಿಗೆ ತನ್ನ ಮೊಬೈಲ್ನಿಂದ ಕರೆ ಮಾಡಿ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಬಳಿ ಬರುವಂತೆ ಅನೂಪ್ ಹೇಳಿದ್ದನಂತೆ. ಅಲ್ಲಿಗೆ ಬಂದ ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ಅನೂಪ್ನಿಂದ ಎಸ್ಕೇಪ್ ಆದ ಹರೀಶ್, ಸದಾಶಿವನಗರದ ಠಾಣೆಯಲ್ಲಿ […]

ಎಂಆರ್​ಪಿಎಲ್​ನ ವಿಸ್ತರಣಾ ಯೋಜನೆ ತಡೆಗೆ ಆಗ್ರಹಿಸಿ ಪ್ರತಿಭಟನೆ..!

Tuesday, November 6th, 2018
protest

ಮಂಗಳೂರು: ನಗರದ ಹೊರವಲಯದಲ್ಲಿರುವ ಎಂಆರ್ಪಿಎಲ್ನ ವಿಸ್ತರಣಾ ಯೋಜನೆಯನ್ನು ತಡೆಹಿಡಿಯಲು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಸಂಘಟನೆಗಳಿಂದ ಹಾಗೂ ಭೂಮಾಲೀಕರಿಂದ ಪ್ರತಿಭಟನೆ‌ ನಡೆಯಿತು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಸದಸ್ಯ ವಿಲಿಯಮ್ ಮಾತನಾಡಿ, ಎಂಆರ್ ಪಿಲ್ ಕಂಪನಿಯ ವಿಸ್ತರಣಾ ಯೋಜನೆಯ ವಿರುದ್ಧ ಹೋರಾಟವನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಹಾಗೂ ಅಧಿಕಾರಿಗಳಿಗೆ ಮುಟ್ಟುವ ಹಾಗೆ ಕೈಗೊಂಡಿದ್ದೇವೆ. ಈ ಹೋರಾಟ ಇವತ್ತು ಮಾತ್ರವಲ್ಲ, ಮುಂದೆ ಕೂಡಾ ಮುಂದುವರಿಯುತ್ತದೆ. ಹಿಂದೆ ನಮ್ಮ ಹೋರಾಟ ಏನಿದ್ದರೂ ನಮ್ಮ ಗದ್ದೆಗಳಲ್ಲಿ […]

ನಟ ಅರ್ಜುನ್ ಸರ್ಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ಸಲ್ಲಿಸಿದ ನಟಿ ಶ್ರುತಿ ಹರಿಹರನ್​

Saturday, October 27th, 2018
arjun

ಬೆಂಗಳೂರು: ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ಸಲ್ಲಿಕೆ ಮಾಡಿದ್ದಾರೆ. ಇಂದು ತಮ್ಮ ವಕೀಲ ಅನಂತ್ ನಾಯ್ಕ ಜತೆ ಠಾಣೆಗೆ ಆಗಮಿಸಿದ ಅವರು, ಈ ದೂರು ಕೊಟ್ಟಿದ್ದಾರೆ. ದೂರಿನಲ್ಲಿ ಸರ್ಜಾ ಮೇಲೆ ಅರೋಪಗಳ ಸುರಿಮಳೆ ಮಾಡಿರುವ ಶ್ರುತಿ, ರಿಹರ್ಸಲ್ ಮಾಡುವಾಗ ಹಲವು ಬಾರಿ ನನ್ನನ್ನು ತಬ್ಬಿಕೊಂಡ್ರು, ಮುತ್ತು ಕೊಟ್ರು. ಊಟಕ್ಕಾಗಿ ಪದೇ ಪದೆ ಯುಬಿ ಸಿಟಿಗೆ ಬರುವಂತೆ ಕರೆಯುತ್ತಿದ್ದರು. ನಾನು ಎಷ್ಟೇ ಪ್ರತಿರೋಧಿಸಿದ್ರು ನನ್ನನ್ನು ಮೈ-ಕೈ […]