ಹಳಿ ತಪ್ಪಿದ ಯಶವಂತಪುರ ಎಕ್ಸ್ ಪ್ರೆಸ್ ರೈಲು ರೈಲು ಸಂಚಾರದಲ್ಲಿ ವ್ಯತ್ಯಯ

Saturday, January 5th, 2013
Yashwanthpur express train

ಮಂಗಳೂರು : ಮೈಸೂರು ವಿಭಾಗದ ಸಕಲೇಶಪುರ – ಸುಬ್ರಹ್ಮಣ್ಯ ನಡುವೆ ಶುಕ್ರವಾರ ಬೆಳಗ್ಗೆ ಯಶವಂತಪುರ – ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಪರಿಣಾಮ ಆ ಮಾರ್ಗದ ಮೂಲಕ ಜನವರಿ 4 ಮತ್ತು 5ರಂದು ಸಂಚರಿಸಬೇಕಾದ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ. ಮುಂಜಾನೆ 5:30ಕ್ಕೆ ಸಕಲೇಶಪುರ ಬಳಿ ಕಡಗರವಳ್ಳಿ-ಎಡಕುಮೇರಿ ನಡುವೆ ರೈಲಿನ ಮುಂಭಾಗದ ಎಂಜಿನ್ ಸಹಿತ ಎರಡು ಬೋಗಿ ಹಳಿ ತಪ್ಪಿದ್ದು, ಸ್ಪಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಪಘಾತದ ಪರಿಣಾಮ ಸಂಚಾರೀ ವ್ಯವಸ್ಥೆಯಲ್ಲಿ […]

ಜನವರಿ ಹದಿನೆಂಟ ರಿಂದ ಇಪ್ಪತ್ತರವರೆಗೆ ನಡೆಯಲಿರುವ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ

Friday, January 4th, 2013
Bhoothanatheshwara Kreedotsava

ಮಂಗಳೂರು : ಕರಾವಳಿ ಕರ್ನಾಟಕದ ಗ್ರಾಮೀಣ ಪ್ರದೇಶದ ಕ್ರೀಡಾಳುಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಬಹು ನಿರೀಕ್ಷಿತ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಇದೇ ಜನವರಿ 18,19 ಮತ್ತು 20,2013 ರಂದು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇದರ ಬಳಿಯಲ್ಲಿರುವ ಗದ್ದೆಯಲ್ಲಿ ನಡೆಯಲಿದ್ದು, ಪ್ರವೇಶ ಪತ್ರಗಳ ಸ್ವೀಕೃತಿ ಡಿಸೆಂಬರ್ ಒಂದರಿಂದ ಆರಂಭವಾಗಿದ್ದು ಈಗಾಗಲೇ 1500ಕ್ಕಿಂತಲೂ ಹೆಚ್ಚು ಪ್ರವೇಶಪತ್ರಗಳು ಬಂದಿದ್ದು, ಈ ವರ್ಷ ದಾಖಲೆ ಸಂಖ್ಯೆಯ ಸ್ಪರ್ಧಾಳುಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಕ್ರೀಡೋತ್ಸವದ ಮುಖ್ಯ ಸಂಘಟಕ ವಿಜಯನಾಥ […]

ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನಿಂದ ಮಂಗಳೂರು ಟು ದುಬೈ ವಿಮಾನಯಾನ ಆರಂಭ

Friday, January 4th, 2013
Jet Airways Mangalore to Duba

ಮಂಗಳೂರು : ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಜೆಟ್‌ ಏರ್‌ವೇಸ್‌ನಿಂದ ದುಬೈಗೆ ವಿಮಾನಯಾನ ಆರಂಭಗೊಂಡಿತು. ಈ ಸಂದರ್ಭ ನಡೆದ ಸಮಾರಂಭದಲ್ಲಿ ಜೆಟ್‌ ಏರ್‌ವೇಸ್‌ನ ಹಿರಿಯ ಉಪಾಧ್ಯಕ್ಷ ಗೌರಂಗ್‌ ಶೆಟ್ಟಿ ಜೆಟ್‌ಏರ್‌ವೇಸ್‌ ದುಬೈ ಮತ್ತು ಕರ್ನಾಟಕದ ಬಂದರು ನಗರ ಮಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಸಂತಸಪಡುತ್ತಿದೆ. ಇವು ವಿಶ್ವದ ಅತ್ಯುತ್ತಮ ಉದ್ಯಮ ಪೂರಕ ಕೇಂದ್ರಗಳಾಗಿದ್ದು, ಸಂಸ್ಥೆ ಆರಂಭಿಸುತ್ತಿರುವ ವಿಮಾನಯಾನಕ್ಕೆ ಪ್ರಯಾಣಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ […]

ದಕ್ಷಿಣ ಕನ್ನಡ : ಮೊಬೈಲ್ ಟವರ್‌ಗಳಿಂದ ಜನರಲ್ಲಿ ಮಾರಕ ರೋಗ ಡಿಎಚ್‌ಒ

Friday, January 4th, 2013
DHO ZP meet

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೊಬೈಲ್ ಟವರ್‌ಗಳಿಂದ ಆ ವ್ಯಾಪ್ತಿಗೆ ಒಳಪಟ್ಟ ಜನರಲ್ಲಿ ಮಾನಸಿಕ ಖಿನ್ನತೆ, ಬುದ್ಧಿಮಾಂದ್ಯ, ಕ್ಯಾನ್ಸರ್ ರೋಗ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ ಡಾ| ಒ.ಆರ್‌. ಶ್ರೀರಂಗಪ್ಪ ತಿಳಿಸಿದರು. ಗುರುವಾರ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ 10ನೇ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಮೊಬೈಲ್ ಟವರ್‌ ಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಮೊಬೈಲ್ ಟವರ್‌ನಿಂದ 500 […]

ಕ್ಯಾಮರಾಮೆನ್ ಶರಣ್ ರಾಜ್ ಬಂಧನ ವಿರೋಧಿಸಿ ಪತ್ರಕರ್ತರ ಪ್ರತಿಭಟನೆ

Friday, January 4th, 2013
DKWJA

ಮಂಗಳೂರು :ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಸುದ್ದಿವಾಹಿನಿ ಕ್ಯಾಮರಾಮ್ಯಾನ್ ಶರಣ್ ಬಂಧನವನ್ನು ಖಂಡಿಸಿ ದೃಶ್ಯ ಮಾದ್ಯಮ ಪತ್ರಕರ್ತರ ಸಂಘ ಗುರುವಾರ ಬೀದಿಗಿಳಿದು ಹೋರಾಟ ನಡೆಸಿದರು. ಸಮಯ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರ ಇರ್ಷಾದ್ ಮಾತನಾಡಿ ಪತ್ರಕರ್ತರು ವರದಿಯನ್ನು ಸಂಗ್ರಹಿಸಲು ಮಾತ್ರ ತೆರಳಿದ್ದು ಹೋಮ್ ಸ್ಟೇ ದಾಳಿಯ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಮುನ್ನವೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದಲ್ಲಿ ಪತ್ರಕರ್ತರ ಪಾತ್ರ ಇಲ್ಲದಿರುವುದನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು […]

ನಗರದ ನೆಹರೂ ಮೈದಾನದಲ್ಲಿ ಫಿಸಿಯೋಥೆರಪಿ ಕಾಲೇಜು ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಮೌನಾಚರಣೆ

Thursday, January 3rd, 2013
Medical students candle light vigil

ಮಂಗಳೂರು : ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ವಿರೋಧಿಸಿ ಹಾಗು ಮೃತಳ ಆತ್ಮಕ್ಕೆ ಶಾಂತಿ ಕೋರಿ ನಗರದ ವಿವಿಧ ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜನವರಿ 2 ಬುಧವಾರ ನಗರದ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಈ ಸಂದರ್ಭ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಅಭಿಲಾಷ್ ಮಾತನಾಡಿ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆದಷ್ಟು ಬೇಗ ನೀಡಿ ಇಂತಹ ಪ್ರಕರಣಗಳು ನಾಗರೀಕ ಸಮಾಜದಲ್ಲಿ ಮರುಕಳಿಸಬಾರದು ಆಗ […]

ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಮರಾಮನ್ ಶರಣ್‌ರಾಜ್ ಬಂಧನ

Thursday, January 3rd, 2013
Sharan Raj

ಮಂಗಳೂರು : ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪತ್ರಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕ್ಯಾಮರಾಮನ್ ಶರಣ್‌ರಾಜ್ ಬಂಧಿತ ಆರೋಪಿಯಾಗಿದ್ದಾರೆ. ಇವರನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನ ಪೊಲೀಸ್ ಕಸ್ಟ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೋಂ ಸ್ಟೇ ದಾಳಿ ಸಂದರ್ಭ ಕ್ಯಾಮರಾಮನ್ ಶರಣ್‌ರಾಜ್ ಸ್ಥಳಕ್ಕೆ ಸುದ್ದಿ ಸಂಗ್ರಹಕ್ಕಾಗಿ ತೆರಳಿದ್ದರು. ಆದರೆ ಘಟನೆ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಕಾಲದಲ್ಲಿ ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಅವರ ವಿರುದ್ಧ […]

ಜನವರಿ 3 ರಿಂದ ಮಂಗಳೂರಿನಿಂದ ದುಬೈ ಗೆ ಜೆಟ್‌ ಏರ್‌ವೇಸ್‌ ಹಾರಾಟ

Thursday, January 3rd, 2013
Jet airways

ಮಂಗಳೂರು : ದೇಶದ ಎರಡನೇ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯಾದ ಮುಂಬಯಿ ಮೂಲದ ಜೆಟ್ ಏರ್‌ವೇಸ್, ಜನವರಿ 3ರಿಂದ ಮಂಗಳೂರು-ದುಬೈ ಮಧ್ಯೆ ಹಾರಾಟ ಆರಂಭಿಸಲಿದೆ. ಮೊದಲ ಬಾರಿಗೆ ಜೆಟ್ ಏರ್‌ವೇಸ್‌ನ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿನಿಂದ ದುಬಾಯಿಗೆ ಹಾರಾಟ ನಡೆಸಲು ಕ್ಷಣಗಣನೆ ಆರಂಭಗೊಂಡಿದೆ. ದುಬೈ ಹಾಗೂ ಮಂಗಳೂರು ನಡುವೆ ನೇರ ವಿಮಾನ ಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ಇದರ ಹಿಂದೆ ಏರ್ ಇಂಡಿಯಾ ವಿಮಾನ ಯಾನದ ಲಾಬಿ ಕೆಲಸ ಮಾಡುತ್ತಿತ್ತು ಎಂದು […]

ಸಚಿವ ಪೂಜಾರಿ ಕೊಲೆಯತ್ನ ತಪ್ಪಿತಸ್ಥರ ತನಿಖೆಗೆ ಸೂಚನೆ

Wednesday, January 2nd, 2013
Kota Shreenivaas Poojari

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನೆಗೆ ಸೋಮವಾರ ತಡರಾತ್ರಿ ಬೈಕ್ ನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಮನೆಯೊಳಗೇ ಇದ್ದ ಸಚಿವರನ್ನು ಹೊರಗೆ ಬರುವಂತೆ ಸೂಚಿಸಿ, ಅವರ ಸರ್ಕಾರಿ ಕಾರನ್ನು ಹಾನಿ ಮಾಡಿರುವುದು ಖಂಡನೀಯವಾಗಿದ್ದು ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೋಟದ ಬ್ರಹ್ಮಶ್ರೇಎ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ […]

ಬಿಜೆಪಿ ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆ : ಸಿ. ಟಿ. ರವಿ

Wednesday, January 2nd, 2013
CT Ravi

ಮಂಗಳೂರು :ಬಿಜೆಪಿ ಪಕ್ಷವು ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ತಮಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಂಗಳೂರಿನ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರದ 12.5 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಪತ್ರಿಕಾ ಭವನದ ಸಭಾಂಗಣಕ್ಕೆ ಅವಶ್ಯ ಇರುವ ಸೀಲಿಂಗ್‌ ಮತ್ತು ವಿದ್ಯುತ್‌ ಜೋಡಣೆ ಕಾಮಗಾರಿಗೆ ಅವಶ್ಯ ನೆರವು ಒದಗಿಸುವುದಾಗಿ ಭರವಸೆ […]