ನೆಹರು ಮೈದಾನದಲ್ಲಿ ಆಕರ್ಷಕ ಕವಾಯತಿನೊಂದಿಗೆ 62 ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2011
62 ನೇ ಗಣರಾಜ್ಯೋತ್ಸವ

ಮಂಗಳೂರು:   62 ನೇ ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನ್ಯ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಶ್ರೀ ಕೃಷ್ಣ ಜೆ. ಪಾಲೆಮಾರ್ ರವರು ಇಂದು ಬೆಳಿಗ್ಗೆ ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಹಾಗೂ ನಡೆಯಲಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಮಗ್ರ ವರದಿಯನ್ನು ತನ್ನ ಗಣರಾಜೋತ್ಸವದ ಭಾಷಣದಲ್ಲಿ ವಿವರಿಸಿದರು. ದೈರ್ಯ ಸಾಹಸಕ್ಕಾಗಿ ನೀಡುವ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ಪ್ರವೀಣ ಎ.ಕೆ. ಸುಳ್ಯ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ   […]

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

Tuesday, January 25th, 2011
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಆಯೋಜಿಸಿದ 22ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು.  ಕಾರ್ಯಕ್ರಮವನ್ನು ಮಾಹೆ ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಅಫಘಾತಗಳನ್ನು ಕಡಿಮೆ ಮಾಡಬಹುದು, ವಿದ್ಯಾರ್ಥಿಗಳಿಗೆ  ಈ  ಬಗ್ಗೆ  ಶಾಲೆಯಲ್ಲಿ ಶಿಕ್ಷಣ ನೀಡುವುದರಿಂದಲೂ ಅಫಘಾತಗಳ ಬಗ್ಗೆ ಹೆಚ್ಚಿನ ಅರಿವು […]

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

Thursday, January 20th, 2011
ರಂಭಾ

ಬೆಂಗಳೂರು :  ‘ಸರ್ವರ್ ಸೋಮಣ್ಣ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ದಕ್ಷಿಣ ಭಾರತದ ನಟಿ ರಂಭಾ ಸಂಕ್ರಾಂತಿ ಹಬ್ಬ, ಜನವರಿ 14ರಂದು ಕೆನಡಾದ ಟೊರೊಂಟೊದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ಕಳೆದ ವರ್ಷದ ಏಪ್ರಿಲ್ 8ರಂದು ತಿರುಪತಿಯಲ್ಲಿ ವರಿಸಿದ್ದರು ನಂತರ ನ್ಯೂಜಿಲಂಡ್ ಗೆ ಮಧುಚಂದ್ರಕ್ಕೆಂದು ಹೋಗಿದ್ದರು. ಹೆರಿಗೆ ಆಗುವಾಗ ರಂಭಾ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ. ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ […]

ಬೀಚ್ ಉತ್ಸವ ಜನವರಿ 21, 22

Monday, January 17th, 2011
ಬೀಚ್ ಉತ್ಸವ

ಮಂಗಳೂರು: ಕರಾವಳಿ ಉತ್ಸವ 2010-11ರ ಅಂಗವಾಗಿ ಇದೇ ತಿಂಗಳ 21, 22 ಮತ್ತು 23 ಈ ಮೂರು ದಿನಗಳಂದು ಪಣಂಬೂರು ಬೀಚ್ನಲ್ಲಿ ಬೀಚೋತ್ಸವವು ಜರಗಲಿರುವುದು ಎಂದು ಸಹಾಯಕ ಆಯುಕ್ತ  ಪ್ರಭುಲಿಂಗ ಕಾವಳಿಕಟ್ಟಿ ತಿಳಿಸಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೀಚ್ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಅವರು ತಿಳಿಸಿದರು. 21ರಂದು ಸಂಜೆ 4 ಗಂಟೆಗೆ ಬೀಚ್ ಉತ್ಸವವನ್ನು ಮಾನ್ಯ ಮೇಯರ್ ರವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಬೀಚ್ ವಾಲಿಬಲ್ ಹಾಗೂ ತ್ರೋಬಾಲ್ ಪಂದ್ಯಾಟಗಳು […]

ಸಾಮಾಜಿಕ ಶಾಂತಿಗೆ ಪೊಲೀಸರ ಕೊಡುಗೆ ಗಮನೀಯ:ಸುಬೋಧ್ ಯಾದವ್

Tuesday, January 11th, 2011
ಪೋಲಿಸ್ ವಾರ್ಷಿಕ ಕ್ರೀಡಾಕೂಟ

ಮಂಗಳೂರು ಜ 11: ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಅರಕ್ಷಕರ ಸಮಯ ಪ್ರಜ್ಞೆ ಮುಂಜಾಗ್ರತೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಾಮಾಜಿಕ ಶಾಂತಿ ಮತ್ತು ಸೌಖ್ಯ ನೆಲೆಸಿದೆ ಎಂದು ದಕ್ಷಿಣಕನ್ನಡ ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಪ್ರಶಂಸಿಸಿದರು. ಅವರು ಇಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರವಾಗಿವಿವಿಧ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಶಾಂತಿ, ಸುವ್ಯವಸ್ಥೆಯಪಾಲನೆಯಲ್ಲಿ ಲೋಪಗಳಿಲ್ಲ. ಪೊಲೀಸರ ಬಿಡುವಿಲ್ಲದ ಕೆಲಸದ ನಡುವೆ ವಾರ್ಷಿಕ […]

`ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ಅಗತ್ಯ’

Friday, January 7th, 2011
ಅಪರಾಧ ತಡೆ ಮಾಸ

ಮಂಗಳೂರು, ಜ.7 : ಸಮಾಜವನ್ನು ಅಪರಾಧಮುಕ್ತವಾಗಿಸಲು 16ರಿಂದ 18ರ ಹರೆಯದ ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಈ ಹರೆಯದಲ್ಲೇ ಮಕ್ಕಳು ಹಾದಿ ತಪ್ಪುವ ಅವಕಾಶಗಳು ಹೆಚ್ಚಿದ್ದು, ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಟಿ. ಸಿ ಶಿವಶಂಕರಮೂರ್ತಿ ಹೇಳಿದರು. ಅವರಿಂದು ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ರೋಶನಿ ಕಾಲೇಜಿನ ಅಪರಾಧಶಾಸ್ತ್ರ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಪಾರ […]

ಮಂಗಳೂರು ನಾಗರೀಕರ ಸುಖಕರ ಪ್ರಯಾಣಕ್ಕೆ ಕೆಎಸ್ಅರ್ ಟಿಸಿ ಬಸ್ಸುಗಳು

Thursday, January 6th, 2011
ಸುಬೋಧ್ ಯಾದವ್

ಮಂಗಳೂರು ಜ 6 : ಖಾಸಗಿ ಬಸ್ಸುಗಳ ಮೇಲಾಟದಿಂದ ಮಂಗಳೂರು ನಾಗರೀಕರಿಗೆ ಪ್ರಯಾಣ ಪ್ರಯಾಸವಾಗಿದ್ದು,ಇದರಿಂದ ಮುಕ್ತಿ ಹೊಂದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರ ಸಾರಿಗೆ ಬಸ್ಗಳನ್ನು ಓಡಿಸಲು ಪರವಾನಗಿ ನೀಡುವಂತೆ  ಕೆಎಸ್ಆರ್ಟಿಸಿ ಕಾನೂನು ಅಧಿಕಾರಿ ರಾಜೇಶ್ ಶೆಟ್ಟಿ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಸುಬೋಧ್ ಯಾದವ್ ಅವರನ್ನು ಕೋರಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಪ್ರಾಧಿಕಾರದ […]

ಪೋಲಿಯೋ ಮುಕ್ತ ಸಮಾಜಕ್ಕೆ ಪೋಲಿಯೋ ಹನಿ

Wednesday, January 5th, 2011
ಪೋಲಿಯೋ ಮುಕ್ತ ಸಮಾಜ

ಮಂಗಳೂರು ಜ.5 : ಪೋಲಿಯೋದಂತಹ ಮಾರಕ ರೋಗ ನಿರ್ಮೂಲನೆಗೆ ಅವಿರತ ಪರಿಶ್ರಮದ ಅಗತ್ಯವಿದೆ. 2007ರಲ್ಲಿ ಬೆಂಗಳೂರಿನಲ್ಲಿ ಪೋಲಿಯೋ ಪತ್ತೆಯಾಗಿತ್ತು. ಬಳಿಕ ಇದುವರೆಗೆ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ ಎಂದು ಡಾ ಸತೀಶ್ ಚಂದ್ರ ವಿವರಿಸಿದರು. ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉಸ್ತುವಾರಿ ಡಾಕ್ಟರ್ ಸತೀಶ್ ಚಂದ್ರ ಅವರು ಇದುವರೆಗಿನ ಅಂಕಿ ಅಂಶ ಹಾಗೂ ಮಾಹಿತಿ ನೀಡಿದರು. 2011 ಜನವರಿ ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ […]

ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ಜೂಟ್ ಉತ್ಪನ್ನಗಳನ್ನು ಬಳಸಿ-ರಜನಿದುಗ್ಗಣ್ಣ

Wednesday, January 5th, 2011
ಮೇಯರ್ ರಜನಿ ದುಗ್ಗಣ್ಣ

ಮಂಗಳೂರು ಜ 5 :-ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ದೇಶಿಯ ಉತ್ಪನ್ನ ಸೆಣಬಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ರವರಾದ ಶ್ರೀಮತಿ ರಜನಿ ದುಗ್ಗಣ್ಣ ಅವರು ಜನತೆಗೆ ಕರೆ ನೀಡಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ರಾಷ್ಟ್ರೀಯ ಸೆಣಬು ಮಂಡಳಿ ದಕ್ಷಿಣ ಚೆನ್ನೈ ಇವರ ವತಿಯಿಂದ ಜನವರಿ 5ರಿಂದ 9 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸೆಣಬು ಉತ್ಪನ್ನಗಳ ಮಾರಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಈ ಮಾರಾಟ ಪ್ರದರ್ಶನದಲ್ಲಿ ಪಶ್ಚಿಮ […]

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು

Tuesday, January 4th, 2011
ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆ ಫಲಿತಾಂಶ

ಬೆಂಗಳೂರು : ಎರಡು ಹಂತದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಯ ಕಡೆ ಮತದಾರ ಒಲವು ತೋರಿಸಿದ್ದಾನೆ ಬಿಜೆಪಿಯ ಭದ್ರಕೋಟೆ  ಬಳ್ಳಾರಿಯಲ್ಲಿ ಮತ್ತು ಉತ್ತರ ಕನ್ನಡದಲ್ಲಿ ಬಿಜೆಪಿ ಬಹುತೇಕ ಹಿಂದೆ ಬಿದ್ದಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೂಗ್ಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಯಡಿಯೂರಪ್ಪ ಮುಖಭಂಗವನ್ನು ತಪ್ಪಿಸಿಕೊಂಡಿದ್ದಾರೆ. ರಾಮನಗರ, ಹಾಸನ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು […]