ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಾಗಿ ಶ್ರೀ ನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧ ಆಯ್ಕೆ

Tuesday, July 27th, 2021
Press Housing Board

ಮಂಗಳೂರು : ಪತ್ರಕ ರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು. ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ ಅಡ್ಕಸ್ಥಳ,ಆರಿಫ್ ಪಡುಬಿದ್ರೆ,ಜಿತೇಂದ್ರ ಕುಂದೇಶ್ವರ,ಆತ್ಮ ಭೂಷಣ್ ಭಟ್, ಸತ್ಯವತಿ, ಕೆ.ವಿಲ್ ಫ್ರೆಡ್ ಡಿ ಸೋಜ, […]

ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ ಪುತ್ತೂರಿನ ವ್ಯಕ್ತಿ ಮುಂಬಯಿಯಲ್ಲಿ ಮೃತ : ಗುರುತು ಪತ್ತೆಗೆ ಮನವಿ

Tuesday, July 27th, 2021
Shashi Poojary

ಪುತ್ತೂರು/ಮುಂಬಯಿ : ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್ )ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ, ಅವಿವಾಹಿತ 55 ವರ್ಷ ಪ್ರಾಯದ, ಶಶಿ ಪೂಜಾರಿಯವರು ದಿನಾಂಕ 26-07-2021 ನೇ ಸೋಮವಾರ ರಾತ್ರಿ ಅಸುನೀಗಿರುತ್ತಾರೆ, ಇವರು ಸುಮಾರು 35 ವರ್ಷ ದಿಂದ ಮುಂಬಯಿಯಲ್ಲಿಯೇ ವಾಸವಾಗಿದ್ದರು, ಅವರ ಹುಟ್ಟೂರು ಪುತ್ತೂರಿನಲ್ಲಿ ಅಕ್ಕ ಮತ್ತು ತಮ್ಮ ಇದ್ದರೆಂದು ಶಶಿ ಪೂಜಾರಿಯವರು ಗೆಳೆಯರೊಂದಿಗೆ ಹೇಳುತ್ತಿದ್ದರು, ಇವರ ಪರಿಚಯ ಇದ್ದವರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಆದಷ್ಟು ಬೇಗ ಈ ಕೆಳಗೆ ಇರುವ […]

ಉದ್ಯೋಗ ಖಾತರಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ.ಗಳದ್ದು : ತಾ.ಪಂ. ಇಒ ನವೀನ್ ಭಂಡಾರಿ

Tuesday, July 27th, 2021
narega

ಪುತ್ತೂರು : ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ. ಈ ಬಗ್ಗೆ ಗ್ರಾ.ಪಂ. ಮಟ್ಟದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಗ್ರಾ.ಪಂ. ಸದಸ್ಯರು ಮುತುವರ್ಜಿ ವಹಿಸಿದರೆ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಯೋಜನೆಯಿಂದ ದೊರೆಯುವ ಸವಲತ್ತುಗಳನ್ನು ತಿಳಿಸಿ ಅಂಥವರಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರದ್ದು ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ಜು.27 ರಂದು ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ತಾ.ಪಂ. ವತಿಯಿಂದ ಬನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಕೋಡಿಂಬಾಡಿ ಗ್ರಾಮ […]

ಆಸ್ಕರ್‌ ಫರ್ನಾಂಡಿಸ್‌ ಅವರ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತೆಗೆದ ವೈದ್ಯರ ತಂಡ

Tuesday, July 27th, 2021
Oscar Fernandese

ಮಂಗಳೂರು : ತೀವ್ರ ನಿಗಾ ಘಟಕದಲ್ಲಿ  ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸಿಗ ಆಸ್ಕರ್‌ ಫರ್ನಾಂಡಿಸ್‌ ಅವರ ಚಿಕಿತ್ಸೆ ಮುಂದುವರೆದಿದ್ದು ಮಂಗಳವಾರ ಮುಂಜಾನೆ ಯಶಸ್ವಿಯಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ. ನಗರದ ಖ್ಯಾತ ನ್ಯೂರೊ ಸರ್ಜನ್‌ ಡಾ.ಸುನಿಲ್‌ ಶೆಟ್ಟಿ ಹಾಗೂ ಅವರ ತಂಡ ಆಸ್ಕರ್‌  ಅವರ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ. ಸೋಮವಾರ ಮಧ್ಯರಾತ್ರಿ 12.30 ರಿಂದಲೇ ಶಸ್ತ್ರಕ್ರಿಯೆ ಪ್ರಾರಂಭಿಸಿದ್ದು ಮಂಗಳವಾರ ಮುಂಜಾನೆ 4.40 ರ ವರೆಗೂ ನಡೆದಿದೆ. ಕಾಂಗ್ರೆಸ್‌ ಮುಖಂಡರಾದ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರತಾಪಚಂದ್ರ ಶೆಟ್ಟಿ, ವಿನಯ ಕುಮಾರ್‌ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ

Monday, July 26th, 2021
Private Bus

ಮಂಗಳೂರು : ದಕ್ಷಿಣ ಕನ್ನಡ ಕೆನರಾ ಬಸ್ಸು ಮಾಲಕರ ಸಂಘ, ಮಂಗಳೂರು ಹಾಗೂ ಕರಾವಳಿ ಬಸ್ಸು ಮಾಲಕರ ಸಂಘ(ರಿ), ಉಡುಪಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಮತ್ತು ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 2021ರ ಜುಲೈ 26 ರಿಂದ ಅನ್ವಯವಾಗುವಂತೆ ಖಾಸಗಿ ಬಸ್ಸು ಪ್ರಯಾಣದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ. ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ಮಜಲು ವಾಹನಗಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಲೋ.ಮೀ.ಗೆ ಪ್ರತೀ ಪ್ರಯಾಣಿಕರಿಂದ ಕನಿಷ್ಟ ಮೊತ್ತ 00.04 ಪೈಸೆಯಂತೆ ವಸೂಲಿಸಲು […]

ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ಸೇವೆ ಸಲ್ಲಿಸುವವರು ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ನೀಡಬೇಕು

Monday, July 26th, 2021
Kukke Subrahmanya

ಮಂಗಳೂರು: ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಗುರುವಾರದಿಂದ ‘ಸರ್ಪ ಸಂಸ್ಕಾರ,’ ‘ಆಶ್ಲೇಷ ಬಲಿ,’ ನಾಗಪ್ರತಿಷ್ಠೆ ’ಮತ್ತು‘ ಮಹಾಭಿಷೇಕ ’ಮುಂತಾದ ಪ್ರಮುಖ‘ ಸೇವೆ’ಗಳನ್ನು ಪ್ರಾರಂಭಿಸಲಿದೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠ ಮತ್ತು ಮಹಾಭಿಷೇಕವನ್ನು ಕಾಯ್ದಿರಿಸುವವರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (ಕನಿಷ್ಠ ಒಂದು ಡೋಸ್) ಅಥವಾ ಆರ್ ಟಿ -ಪಿಸಿಆರ್ ನೆಗೆಟಿವ್ ವರದಿಯನ್ನು ನೀಡಬೇಕಾಗುತ್ತದೆ. ಸರ್ಪ ಸಂಸ್ಕಾರ ವಿಧಿಗಳನ್ನು ತಲಾ 90 ಭಕ್ತರಿಗೆ ಎರಡು ಬ್ಯಾಚ್‌ಗಳಲ್ಲಿ ಬೆಳಿಗ್ಗೆ 8 ಮತ್ತು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು. ಏತನ್ಮಧ್ಯೆ, ಆಶ್ಲೇಷ ಬಲಿಯನ್ನು […]

ರಾಜ್ಯದ 757 ಪ್ರಾರ್ಥನಾ ಕೇಂದ್ರಗಳಿಗೆ ನೀಡುತ್ತಿದ್ದ ಹಿಂದೂ ದೇವಸ್ಥಾನದ ಹಣಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ತಡೆ

Monday, July 26th, 2021
kota Srinivasa Poojary

ಮಂಗಳೂರು  :  ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ ನೀಡುವಂತೆ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆ. ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಎದ್ದಿರುವ ಚರ್ಚೆಯ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದ್ದು, ರಾಜ್ಯದ 757 ಪ್ರಾರ್ಥನ ಕೇಂದ್ರಗಳಿಗೆ ಹಾಗೂ 111 ವರ್ಷಾಸನ […]

ಕೊಚ್ಚಿ ತಿರುಮಲ ದೇವಳದಲ್ಲಿ ಕಾಶೀ ಮಠದ ಪೀಠಾಧಿಪತಿಗಳಾದ ಶೀಮದ್ ಸಂಯಮೀ೦ದ್ರ ತೀರ್ಥ ಶ್ರೀಪಾದಂಗವರ ಚಾತುರ್ಮಾಸ

Monday, July 26th, 2021
sayamindra

ಮಂಗಳೂರು :  ಸುಕೃತ ಕೋಟಿ ಲಭ್ಯ ಮನುಷ್ಯ ಜೀವನದಲ್ಲಿ ಸತ್ ಕರ್ಮ ಮಾಡುತ್ತಿರುವುದರ ಉದ್ದೇಶ ಯಜ್ಞ-ತಪಸ್ಸು- ದಾನ ಸತ್ ಕರ್ಮಗಳು. ಯಜ್ಞಗಳು ಹಲವಿಧ ದಯಾ-ಕ್ರಮ- ಜ್ಞಾನ-ಯೋಗ-ಸ್ವಧ್ಯಾಯ ಇತ್ಯಾದಿ. ತಮ್ಮ ಯೋಗ್ಯತಾನುಸಾರ ಉತ್ತಮ-ಸಾತ್ವಿಕ ಕರ್ಮ-ಚಿಂತನೆ-ಜೀವನ ಮಾನವನ ಸಹಜ ಶೈಲಿ. ಈ ವರ್ಷದ 12 ತಿಂಗಳುಗಳಲ್ಲಿ 4 ತಿಂಗಳ ವೃತವೇ ಜಾತುರ್ಮಾಸ ವೃತ ದೈವಿಕ-ದೈಹಿಕ-ಭೌತಿಕ-ಆಧ್ಯಾತ್ಮೀಕವಾಗಿ ಯಾವುದೇ ರೀತಿಯಲ್ಲಿ ಚಿಂತನೆ ಮಾಡಿದರು-ಮಾಡದಿದ್ದರೂ ಅದರ ಗುಣ ಅದಕ್ಕೆ ಇದ್ದೇ ಇದೆ.ನಾವು ಹೇಳುವುದಕ್ಕಿಂತ ನಡತೆಯಲ್ಲಿ ಮಾಡಿ ತೋರಿಸುವ ಭಾರತೀಯ ವೇದ ಧರ್ಮದವರು,ಭಾರತೀಯರು, ಇಲ್ಲಿ ಧರ್ಮಕ್ಕೆ ನಾಶವಿಲ್ಲ.ಸನಾತನ ಧರ್ಮ-ಸರ್ವರ […]

ಕದ್ರಿ ಯೋಧ ಸ್ಮಾರಕ ಅಭಿವೃದ್ಧಿಗೆ 25 ಲಕ್ಷ – ಶಾಸಕ ಕಾಮತ್

Monday, July 26th, 2021
Vedavyas-Kamath

ಮಂಗಳೂರು: ಕಾರ್ಗಿಲ್ ಗೆಲುವಿಗೆ 22 ವರ್ಷ ಸಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಕದ್ರಿ ಯೋಧ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಕಾರ್ಗಿಲ್ ಯುದ್ಧದಲ್ಲಿ ಅನೇಕ ಯೋಧರು ಬಲಿದಾನ ಮಾಡಿದ್ದಾರೆ. ಅವರೆಲ್ಲರನ್ನೂ ರಾಜಕೀಯ ರಹಿತವಾಗಿ ಗೌರವಿಸುವ ಕೆಲಸವಾಗಬೇಕು. ಮಾತೃಭೂಮಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಭಾರತ ಎಂದೆಂದಿಗೂ ಶಾಂತಿಯನ್ನು ಬಯಸುವ ರಾಷ್ಟ್ರ. ಆದರೆ ಅದನ್ನು ಅಸಹಾಯತೆ ಎಂದು […]

ಮುಂದಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೆಸರು

Monday, July 26th, 2021
Nalin-Kumar-Kateel

ಮಂಗಳೂರು: ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನಿನ್ನೆ ರಾತ್ರೋ ರಾತ್ರಿ ಮಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ.  ಈ ಬೆಳವಣಿಗೆ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗುವ ಮುಖಂಡರ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರು ಇದೆ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚುತ್ತಿದ್ದಂತೆ, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದಿದೆ. ಹೈಕಮಾಂಡ್‌ ಬಳಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಳಿನ್‌ ಹೆಸರು ಸೇರ್ಪಡೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ. ಪುತ್ತೂರಿನಲ್ಲಿರುವ […]