ಆಡುಭಾಷೆಯನ್ನು ಮರೆತರೆ ನಮ್ಮ ಮೂಲವನ್ನು ಮರೆತಂತೆ: ಡಿ ವಿ ಸದಾನಂದ ಗೌಡ

Sunday, May 30th, 2021
DV Sadananda-gowda

ಮಂಗಳೂರು: ಜಾಗತೀಕರಣದ ಪ್ರಭಾವದಿಂದ ಇಂಗ್ಲಿಷ್‌ ಅನಿವಾರ್ಯ ಎಂಬಂತಾಗಿದೆ. ಇದರಿಂದ ತುಳು ಸೇರಿದಂತೆ ಹಲವು ಭಾಷೆಗಳು ನಲುಗುತ್ತಿವೆ. ಹೀಗಾಗಿ ತುಳುವರು ತಮ್ಮ ಭಾಷೆಯನ್ನು ಮರೆತು ಮೂಲವನ್ನೇ ಮರೆಯದಿರೋಣ, ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ […]

ಹೂಹಾಕುವ ಕಲ್ಲು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಹಾರ ಕಿಟ್ ಮತ್ತು ಸಹಾಯಧನ ವಿತರಣೆ

Sunday, May 30th, 2021
RSS-Balepuni

ಮಂಗಳೂರು  : ರಾಷ್ಟ್ರೀಯ ಸ್ವಯಂಸೇವಕ ಸಂಘ ಹೂಹಾಕುವ ಕಲ್ಲು ಶಾಖೆ ಬಾಳೆಪುಣಿ, ಬಂಟ್ವಾಳ ತಾಲೂಕು ಇದರ ವತಿಯಿಂದ ಬಾಳೆಪುಣಿ ಪಂಚಾಯತ್ ವ್ಯಾಪ್ತಿಗೊಳಪಟ್ಟ 12 ಮಂದಿ ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕಿಯರಿಗೆ ಆಹಾರ ಕಿಟ್ ಮತ್ತು ಸಹಾಯಧನದ ವಿತರಣಾ ಕಾರ್ಯಕ್ರಮ ನಡೆಯಿತು. ಮಹಾಮಾರಿ ಕೋರೊನದ ವಿರುದ್ಧ ನಿಯೋಜಿಸಲ್ಪಟ್ಟ ಪ್ರಜೆಗಳ ಮನೆ ಬಾಗಿಲಿಗೆ ಸಂದರ್ಶಿಸಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಮಾಜದ ಭಾಗ್ಯತಾರೆಗಳಾದ ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಊರಿನ ಸಹೃದಯ ದಾನಿಗಳ ನೆರವಿನಿಂದ ಗೌರವಿಸಲಾಯಿತು ಇಂದು ಬಾಳೆಪುಣಿ ಗ್ರಾಮದ […]

ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!

Sunday, May 30th, 2021
varahi

ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ? ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ನಿಮಗೆ ಗೊತ್ತೆ? ಬಹು ಜನರಿಗೆ ಗೊತ್ತಿರಲಿಕ್ಕಿಲ್ಲ, ಅಲ್ಲವೆ? ಹಾಗಾದರೆ ಈ ಲೇಖನ ಓದಿ. ವರಾಹಿ ದೇವಿಗೆ ಮುಡಿಪಾದ ದೇವಾಲಯವೊಂದರ ಕುರಿತು ತಿಳಿಸುತ್ತದೆ. ವರಾಹಿ ಮೂಲತಃ ಸಪ್ತ ಮಾತ್ರಿಕೆಯರಲ್ಲಿ ಒಬ್ಬಳು. ಜಗನ್ಮಾತೆಯ ಅವತಾರ ಇವಳೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ವರಾಹ ಅಂದರೆ ಕಾಡು ಹಂದಿಯ ಅಪರಿಮಿತವಾದಂತಹ ಶಕ್ತಿಯ ರೂಪ ಹೊಂದಿರುವ ದೇವಿ ಇವಳೆಂದು […]

ಕೊರೋನ ಸೋಂಕು ಮೇ 29 : ದ.ಕ. ಜಿಲ್ಲೆ 923 – 7 ಸಾವು, ಉಡುಪಿ ಜಿಲ್ಲೆ- 684 – 3 ಸಾವು, ಕಾಸರಗೋಡು – 506

Saturday, May 29th, 2021
corona Case

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ 923 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಮತ್ತು  7 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಮರಣ ಹೊಂದಿದವರಲ್ಲಿ ಮಂಗಳೂರು, ಬೆಳ್ತಂಗಡಿ, ಬಂಟ್ವಾಳದಲ್ಲಿ ತಲಾ ಎರಡು ಮತ್ತು ಪುತ್ತೂರಿನಲ್ಲಿ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 901ಕ್ಕೇರಿದೆ. ಅಲ್ಲದೆ ಶನಿವಾರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 9,345 ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರಗೆ 8,44,997 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,70,176 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು […]

ಕೊರೊನಾ ಪಾಸಿಟಿವ್ ಇದ್ದ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ

Saturday, May 29th, 2021
Jumping

ಮಂಗಳೂರು : ಕೊರೊನಾ ಪಾಸಿಟಿವ್ ಇದ್ದ ಯುವಕನೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪಡೀಲ್ ಬಳಿ ಮೇ 27 ರ ಗುರುವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಸಮೀರ್ (30)ಎಂದು ಗುರುತಿಸಲಾಗಿದೆ. ಪಡೀಲ್ ನ 7 ನೇ ಮಹಡಿಯ ಫ್ಲ್ಯಾಟ್ ನಿಂದ ಸಮೀರ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸಮೀರ್ ಅವಿವಾಹಿತರಾಗಿದ್ದು, ಮೃತದೇಹ ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ. ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಿರಂತರವಾಗಿ ಸುರಿದ ಮಳೆಗೆ ಪಂಪ್ ವೆಲ್ ಜಲಾವೃತ್ತ

Saturday, May 29th, 2021
pumpwell

ಮಂಗಳೂರು : ನಿರಂತರವಾಗಿ ಸುರಿದ ಮಳೆಗೆ ಪಂಪ್ ವೆಲ್ ಜಲಾವೃತ್ತ ವಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.  ಪಂಪ್‌ವೆಲ್ ಮೇಲ್ಸೇತುವೆ ಕೆಳಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ಬೆಳಗ್ಗೆ ಹೊತ್ತು ಮಂಗಳೂರಿಗೆ ವಾಹನದಲ್ಲಿ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಶನಿವಾರ ತಡರಾತ್ರಿಯಿಂದ ಬೆಳಗ್ಗೆ ಸುಮಾರು 8 ಗಂಟೆಯವರೆಯೂ ಸುರಿದ ಮಳೆಯಿಂದಾಗಿ ನಗರದ ಹಲವು ರಾಜಕಾಲುವೆಗಳು, ಚರಂಡಿ ತೋಡುಗಳು ತುಂಬಿ ಹರಿದವು. 9 ಗಂಟೆಯ ಬಳಿಕ ಮಳೆ ಪ್ರಮಾಣ  ಕಡಿಮೆಯಾಗಿದೆ. ನಗರದ ಪಂಪ್‌ವೆಲ್ ಸೇತುವೆ ಕೆಳಭಾಗ ಸೇರಿದಂತೆ ಬೆಳಗ್ಗಿನ ಹೊತ್ತು […]

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮೂಲಕ ಉಡುಪಿ ಜಿಲ್ಲಾಡಳಿತಕ್ಕೆ ರೂ. 1,84,800 ವೆಚ್ಚದ 3 ಆಕ್ಸಿಜನ್ ಕಾನ್ಸನ್ಟ್ರೇಟರ್ ಹಸ್ತಾಂತರ

Saturday, May 29th, 2021
save Life

ಉಡುಪಿ  : ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ರೂ. 1,84,800 ವೆಚ್ಚದ 3 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ರವರ ಮೂಲಕ ಜಿಲ್ಲಾಡಳಿತಕ್ಕೆ ಶನಿವಾರ ಹಸ್ತಾಂತರಿಸಲಾಯಿತು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಛಾಯಾಗ್ರಾಹಕ ಮಂಜು ನಿರೇಶ್ವಾಲ್ಯ, ರಮೇಶ್ ಶೆಣೈ ಉಪಸ್ಥಿತರಿದ್ದರು. ಬಂಟವಾಳ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಲಾಕಡೌನ್ […]

ಭಟ್ಕಳದ ವ್ಯಕ್ತಿಯಿಂದ ರೂ. 13,17,860 ಮೌಲ್ಯದ ಅಕ್ರಮ ಚಿನ್ನ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು

Friday, May 28th, 2021
gold

ಮಂಗಳೂರು : ಕಸ್ಟಮ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಭಟ್ಕಳದ ವ್ಯಕ್ತಿಯನ್ನು ಶುಕ್ರವಾರ ಮೇ 26 ರಂದು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಿದ್ದಿಕ್ ಮಿಕ್ದಿಮ್ ಹುಸೈನ್ ಎಂಬಾತ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕ. ಆತ ದುಬೈನಿಂದ ಏರ್ ಇಂಡಿಯಾ ವಿಮಾನ IX 384 ಮೂಲಕ ಆಗಮಿಸಿದ್ದ. ಈತನ ತಪಾಸಣೆ ನಡೆಸಿದಾಗ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ 24 ಕ್ಯಾರೆಟ್ ಪರಿಶುದ್ಧತೆಯ 262 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ […]

ವ್ಯಕ್ತಿಯನ್ನು ಅಪಹರಿಸಿ ಚಿನ್ನ ದರೋಡೆ, 11 ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ

Friday, May 28th, 2021
Moodabidre Dacoity

ಮಂಗಳೂರು :  ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಚಿನ್ನ  ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (34), ಮುಹಮ್ಮದ್ ಶಾರೂಕ್ (26), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (29), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (28), ಮುಂಬೈನವರಾದ ಶೇಖ್ ಸಾಜಿದ್ ಹುಸೇನ್ (49), ಅಬ್ದುಲ್ಲಾ ಶೇಖ್ (22), ಶಾಬಾಸ್ […]

ಓಮ್ನಿ ಕಾರು ಡಿಕ್ಕಿ ಹೊಡೆದು ಇಬ್ಬರು ಒಣ ಮೀನು ವ್ಯಾಪಾರಿಗಳು ಮೃತ್ಯು

Friday, May 28th, 2021
omni car accident

ಮಂಗಳೂರು  : ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಎಂಬಲ್ಲಿ ಓಮ್ನಿ ಕಾರು ನಿಂತಿದ್ದ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ  ಶುಕ್ರವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮಂಗಳೂರಿನ ದಕ್ಕೆಯಲ್ಲಿ ಒಣ ಮೀನು ವ್ಯಾಪಾರಿಗಳಾಗಿದ್ದರು. ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ […]