ಚೋನಡ್ಕ ಎಂಬಲ್ಲಿ ಚೀಮೇನಿ ಪೊಲೀಸರಿಂದ ಹತ್ತು ಕಿಲೋ ಗಾಂಜಾ ವಶ

Monday, October 12th, 2020
chonadka

ಕಾಸರಗೋಡು : ಚೀಮೇನಿ ಠಾಣಾ ವ್ಯಾಪ್ತಿಯ ಚೋನಡ್ಕ ಎಂಬಲ್ಲಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಾರಟ್ ನೌಶಾದ್ (40) ಹಾಗೂ ಸಂಶುದ್ದೀನ್ (42) ಎಂದು ಗುರುತಿಸಲಾಗಿದೆ . ಸೋಮವಾರ  ಮಧ್ಯಾಹ್ನ ಚೀಮೇನಿ ಠಾಣಾ ವ್ಯಾಪ್ತಿಯ ಚೋನಡ್ಕ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಆದರೆ. ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಕೂಡಲೇ ಎಲ್ಲಾ […]

ಕೊರೊನಾ ಪ್ರಕರಣ : ದ.ಕ.ಜಿಲ್ಲೆ – 265 ಸಾವು 5

Monday, October 12th, 2020
corona

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಭಾನುವಾರ 265 ಜನರಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 26 ಸಾವಿರ ಗಡಿ ದಾಟಿದೆ. ಭಾನುವಾರ  ಪತ್ತೆಯಾಗಿರುವ ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣ ಸಂಖ್ಯೆ 26,529 ಕ್ಕೆ ಏರಿಕೆಯಾಗಿದೆ. ಕೊರೊನಾಗೆ ಭಾನುವಾರ  ಐವರು ಬಲಿಯಾಗಿದ್ದು, ಇದುವರೆಗೆ ಸೋಂಕಿಗೆ 605 ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯಲ್ಲಿ 4,180 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 283 ಮಂದಿ ಗುುಣಮುಖರಾಗಿ […]

ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆ

Sunday, October 11th, 2020
crazy guys

ಮಂಗಳೂರು  : ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಮಂಗಳಾದೇವಿ ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆಯ ಶಿಬಿರವನ್ನು ಶಾಸಕ ವೇದವ್ಯಾಸ ಕಾಮತ್ ರವರು  ಅಕ್ಟೋಬರ್  11, ರವಿವಾರ ಮಂಗಳಾದೇವಿ ಬಳಿ ಇರುವ ಅಮರ್ ಆಳ್ವಾ ರಸ್ತೆಯ ಮಂಕಿಸ್ಟ್ಯಾಂಡ್  ಗ್ರೌಂಡ್ ನಲ್ಲಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಮುಖ್ಯ ಸಚೇತರಕರಾದ ಪ್ರೇಮಾನಂದ ಶೆಟ್ಟಿ ಜನಪದ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕೊಡಿಯಲ್ ಬೈಲ್ ಹಾಗೂ ಕ್ರೇಜಿ ಗೈಸ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೆಳಗ್ಗೆಯಿಂದ ಸಂಜೆ […]

ರಿಟ್ಜ್ ಕಾರಿನಲ್ಲಿ ಅಕ್ರಮ ದನ ಸಾಗಾಟ, ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆದ ಆರೋಪಿಗಳು, ಗಾಳಿಯಲ್ಲಿ ಗುಂಡು

Sunday, October 11th, 2020
Ritz Car Cow smuggling

ಮೂಡುಬಿದಿರೆ: ರಿಟ್ಜ್  ಕಾರಿನಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಹತ್ನಿಸಿದ ಘಟನೆ ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ. ಮೂಡಬಿದಿರೆಯ ಸಮೀಪ ಮೂಡುಕೋಣಾಜೆ ಉಂಜೆಬೆಟ್ಟು ಬಳಿ ಇಂದು ನಸುಕಿನ ವೇಳೆ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಗೋಕಳ್ಳರ ಮೇಲೆ ಶೂಟೌಟ್ ಮಾಡಿದ ಪೋಲಿಸರು 6 ದನಗಳನ್ನು ರಕ್ಷಿಸಿದ್ದಾರೆ. ಶಿರ್ತಾಡಿ ಕಡೆಯಿಂದ ಹೌದಾಲ್ ಕಡೆಗೆ ಬರುತ್ತಿದ್ದ ರಿಟ್ಜ್  ಕಾರ್ ನಲ್ಲಿ ಆರು ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವ ಮಾಹಿತಿ ಪಡೆದ ಪೊಲೀಸರು […]

ಕುಕ್ಕೆ ಸುಬ್ರಹ್ಮಣ್ಯ ಸಮೀಪ ರಸ್ತೆಗೆ ಬಂದ ಕಾಡಾನೆಗಳ ಹಿಂಡು

Saturday, October 10th, 2020
Kodagu Elephant

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪ ಇರುವ ಕೊಡಗು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾಡಾನೆಗಳ ಹಿಂಡು ಪ್ರತ್ಯಕ್ಷ ಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪ‌ ಅರಣ್ಯ ಪ್ರದೇಶ ಇದ್ದು ಇಲ್ಲಿ ಹೆಚ್ಚಾಗಿ ಕಾಡಾನೆಗಳು ಇದೆ.  ಶನಿವಾರ ಕಾಡಾನೆಗಳ ಹಿಂಡು ರಸ್ತೆ ಇದ್ದಕ್ಕಿದ್ದಂತೆ ರಸ್ತೆ ದಾಟುವ ದೃಶ್ಯ ಕಂಡು ಬಂತು. ಆನೆಗಳ ಹಿಂಡನ್ನು ಕಂಡ ವಾಹನ ಸವಾರರು ಸ್ವಲ್ಪ ಹೊತ್ತು ಅಲ್ಲೇ ವಾಹನಗಳನ್ನು ನಿಲ್ಲಿಸಿ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿದರು.

ನಾಥ ಪಂಥದ ಗುರು ಹಾಗೂ ಹಿಂದೂ ಧರ್ಮದ ನಿಂದನೆ ಯುವ ಕಾಂಗ್ರೆಸ್​ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು

Saturday, October 10th, 2020
Mithun-Rai

ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ, ಮಿಥುನ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ  ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ. ಯೋಗಿ ಆದಿತ್ಯನಾಥ್ ಹಿಂದೂ ಧರ್ಮದ ಹಾಗೂ ನಾಥ ಪಂಥದ […]

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆ ನೀಡಬೇಕು : ಶೋಭಾ ಕರಂದ್ಲಾಜೆ

Saturday, October 10th, 2020
shobha

ಉಡುಪಿ :  ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆ ವಿಧಿಸುವುದು ಸೂಕ್ತ, ಅತ್ಯಾಚಾರ ಪ್ರಕರಣಗಳಿಗೆ ಧರ್ಮ, ಜಾತಿಯ ಲೇಪನ ಹಚ್ಚುವುದು ಸರಿಯಲ್ಲ. ಇದು ಮಾನಸಿಕ ಸ್ಥಿತಿಯ ಮೇಲೆ ಅವಲಂಭಿತವಾಗಿರುತ್ತದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಕಡೆಗಳಲ್ಲಿ ಪದೇ ಪದೇ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇದೇ ಸಂದರ್ಭದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆಯೂ ಎಲ್ಲ ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅತ್ಯಾಚಾರಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ […]

ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುವ ಮಾಜಿ ಸಚಿವ ಜೈನ್

Friday, October 9th, 2020
AbhayachandraJain

ಮಂಗಳೂರು: ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅವರು ಈಗ ಕಾರು ಬಿಟ್ಟು  ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುತ್ತಿದ್ದು ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಅವರು ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಅಭಯಚಂದ್ರ ಜೈನ್ ಅವರು 71ರ ಇಳಿ ವಯಸ್ಸಿನಲ್ಲಿಲ್ಲೂ ಬಾಸ್ಕೆಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು […]

ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ, ಐವರು ವಶಕ್ಕೆ

Friday, October 9th, 2020
Kusuma

ಮಂಗಳೂರು : ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಮಂಗಳೂರು ದಕ್ಷಿಣ ಎಸಿಪಿ ನೇತೃತ್ವದ ಪೊಲೀಸ್ ತಂಡ ಶಂಕಿತ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಕಣಂತೂರು ಬೆಳ್ಳೇರಿ ಸಮೀಪ  ಸೆ. 25ರಂದು 50 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗ್ಯಾಸ್ ಸ್ಟೌವ್ ತೆರೆದ ಸ್ಥಿತಿಯಲ್ಲಿ ಮತ್ತು ಮನೆಯ ಕರ್ಟೈನ್ಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳು, ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ಪೊಲೀಸರ ತನಿಖೆಗೆ […]

ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಅಪರಿಚಿತ

Friday, October 9th, 2020
Robery

ಮಂಗಳೂರು : ವಿಟ್ಲ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯೊಂದಕ್ಕೆ ನುಗ್ಗಿ ಅಪರಿಚಿತ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ  ನಡೆದಿದೆ. ಮೇಗಿನಪೇಟೆ ನಿವಾಸಿ ಲಲಿತಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಅವರ ಮನೆಯ ಮುಂಬಾಗಿಲು ಮೂಲಕ ಅಪರಿಚಿತ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ, ಕೃತ್ಯ ಎಸಗಿದ್ದಾನೆ. ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈಕಟ್ಟಿ ಹಾಕಿ ಒಂದು ಜೊತೆ ಕಿವಿಯೋಲೆ ದರೋಡೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ಮತ್ತು […]