ಅಮೇಠಿ ಮರೆತಿರುವ ರಾಗಾ ಇಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ : ಸ್ಮೃತಿ ಇರಾನಿ

Tuesday, May 8th, 2018
smriti-irani

ಮಂಗಳೂರು: ತಾನು ಪ್ರತಿನಿಧಿಸುವ ಅಮೇಠಿ ಕ್ಷೇತ್ರದಲ್ಲೇ ಅಭಿವೃದ್ಧಿ ಮಾಡದ ರಾಹುಲ್‌‌, ಇಲ್ಲಿ ಬಂದು ಅಭಿವೃದ್ಧಿಯ ಭಾಷಣ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ಬೆಳ್ತಂಗಡಿಯಲ್ಲಿಂದು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಗಾಂಧಿ ಕುಟುಂಬ 60 ವರ್ಷಗಳಿಂದ ಅಮೇಠಿ ಕ್ಷೇತ್ರ ಪ್ರತಿನಿಧಿಸುತ್ತಿದೆ. ಆದರೆ, ಅಲ್ಲಿ ಕನಿಷ್ಠ ರೈಲ್ವೆ ಹಳಿಯನ್ನು ತರಲು ಸಾಧ್ಯವಾಗಿಲ್ಲ. ಅಲ್ಲಿನ ಬಡಜನರ ಕಷ್ಟವನ್ನು ನೋಡಲಾಗದು. ನಾಲ್ಕು ತಲೆಮಾರುಗಳಿಂದ ಸಾಧ್ಯವಾಗದ […]

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಪತ್ರಿಕಾಗೋಷ್ಠಿ!

Tuesday, May 8th, 2018
congress

ಮಂಗಳೂರು: ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಮಾಮೂಲಿ. ಆದರೆ ಮಂಗಳೂರಿನಲ್ಲಿ ಇಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದರು. ಸಿಪಿಐ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದಿದ್ದ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ಮತ್ತು ಗುಲ್ಬರ್ಗಾದಲ್ಲಿ ಸಿಪಿಎಂ ಪಕ್ಷಕ್ಕೆ ಸಿಪಿಐ ಬೆಂಬಲ‌ ಸೂಚಿಸಿದೆ. ಸಿಪಿಐ […]

ಮಹಿಳೆಯರ ಗೌರವ ರಕ್ಷಣೆ ನನ್ನ ಹೊಣೆ – ಶ್ರೀಕರ ಪ್ರಭು

Monday, May 7th, 2018
srikar-prabhu

ಮಂಗಳೂರು: ಮಂಗಳೂರಿನ ಮಹಿಳೆಯರ ಗೌರವ ರಕ್ಷಣೆ ನನ್ನ ಪ್ರಥಮ ಆದ್ಯತೆ ಮತ್ತು ಇದನ್ನು ನೂರಕ್ಕೆ ನೂರ್ರರಷ್ಟು ಜವಾಬ್ದಾರಿಯುತವಾಗಿ ನಾನು ಮುಂದೆ ಶಾಸಕನಾಗಿ ನಿಭಾಯಿಸಲಿದ್ದೇನೆ ದಯವಿಟ್ಟು ನನ್ನನ್ನು ಆರಿಸಿಯೆಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಶ್ರೀಕರ್ ಪ್ರಭು ಅವರು ನಗರದ ಸಿ ವಿ ನಾಯಕ್ ಹಾಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಮಹಿಳಾ ಮತದಾರರ ಸಮಾವೇಶದಲ್ಲಿ ಘೋಷಿಸಿದರು. ಹಣಬಲದಿಂದ ಜನ ಸೇವೆ ಮಾಡದೇ ಚುನಾವಣೆ ಗೆಲ್ಲುವುದು ಅಸಾಧ್ಯ, ರಾಷ್ಟ್ರೀಯ ರಾಜಕೀಯ ಪಕ್ಷಗಳಲ್ಲಿ ಖಾಲಿ ಪೋಲಿಗಳು ವಿಜೃಂಬಿಸುತಿದ್ದರೆ ಇದೊಂದು […]

ಎಸೆಸೆಲ್ಸಿಯಲ್ಲಿ ಮೂಡುಬಿದಿರೆಯ ಪ್ರಾಂಶುಲಾ ಪ್ರಶಾಂತ್ ರಾಜ್ಯಕ್ಕೆ ದ್ವಿತೀಯ..!

Monday, May 7th, 2018
pranshul-prashanth

ಮೂಡುಬಿದಿರೆ: ಮಾರ್ಚ್-ಎಪ್ರಿಲ್‌ನಲ್ಲಿ ನಡೆದ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಂಶುಲಾ ಪ್ರಶಾಂತ್ 624(99.84 ಶೇ.) ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 8 ಮಂದಿ 624 ಅಂಕಗಳನ್ನು ಗಳಿಸಿದ್ದಾರೆ. ಪ್ರಾಂಶುಲಾ ಪ್ರಶಾಂತ್ ಮೂಲತಃ ಮೂಡುಬಿದಿರೆ ಕೀರ್ತಿ ನಗರದ ನಿವಾಸಿಯಾಗಿರುವ ಪ್ರಶಾಂತ್ ಕುಮಾರ್ ಮತ್ತು ಚೇತನಾ ದಂಪತಿಯ ಪುತ್ರಿ.

ಪ್ರಧಾನಿ ಮೋದಿ ಅವರದ್ದು ಸುಳ್ಳಿನ ಕಂತೆ: ಆರ್.ಪಿ.ಎನ್. ಸಿಂಗ್ ಹೇಳಿಕೆ

Monday, May 7th, 2018
prime-minister

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆರ್.ಪಿ.ಎನ್. ಸಿಂಗ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. 45 ನಿಮಿಷಗಳ ಭಾಷಣದಲ್ಲಿ 5 ನಿಮಿಷವೂ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಉದ್ಯೋಗ ಸೃಷ್ಟಿ, ಅಭಿವೃದ್ಧಿ ಬಗ್ಗೆ ತಮ್ಮ ಭರವಸೆಯನ್ನು ಅವರು ಮರೆತಿದ್ದಾರೆ. 4 ವರ್ಷದಲ್ಲಿ ರೈತರ ಸಾಲದ ಒಂದು ರೂ. ಕೂಡ ಮನ್ನಾ ಮಾಡಲಿಲ್ಲ.ತನ್ನ ಸ್ವಂತ ಕ್ಷೇತ್ರದಲ್ಲಿ ಸ್ವಚ್ಚತೆ […]

ಕುಕ್ಕೆ ಸುಬ್ರಹ್ಮಣ್ಯ ದ ವಿದ್ಯಾರ್ಥಿನಿಗೆ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ

Monday, May 7th, 2018
subramanya

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದ ವಿದ್ಯಾರ್ಥಿನಿಗೆ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಬಂದಿದೆ. ಮಾಜಿ ಪ್ರಾಂಶುಪಾಲ, ಪತ್ರಕರ್ತ ದಿ.ವಿಠಲ ರಾವ್ ಅವರ ಪುತ್ರಿ ಅಭಿಜ್ಞಾ ರಾವ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಇವರಾಗಿದ್ದು, ಇವರ ಈ ಸಾಧನೆ ಶಾಲೆಗೆ, ಶಿಕ್ಷಕ ವೃಂದಕ್ಕೆ ಕೀರ್ತಿ ತಂದೊದಗಿಸಿದೆ.

‘ಮೇ 10ರ ಸಂಜೆ 6ರ ಬಳಿಕ ‘ಹೊರಗಿನವರು’ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ’

Monday, May 7th, 2018
election

ಮಂಗಳೂರು: ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯ ಬಳಿಕ ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ. ಎಲ್ಲರೂ ಕ್ಷೇತ್ರ ಬಿಟ್ಟು ಸ್ವಸ್ಥಾನ ಸೇರಬೇಕು. ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ […]

ಜೆ.ಆರ್.ಲೋಬೊರಿಂದ ಬಿರುಸಿನ ಮತ ಯಾಚನೆ

Monday, May 7th, 2018
j-r-lobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಅವರು ಶನಿವಾರ ಹೊಯಿಗೆ ಬಝಾರ್, ಸುಭಾಶ್ ನಗರ, ಮರೋಳಿ ಪರಿಸರದಲ್ಲಿ ಬಿರುಸಿನ ಪ್ರಚಾರ ಪ್ರಚಾರ ಕೈಗೊಂಡರು. 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಆರ್.ಲೋಬೊ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದ ಸಾಧ್ಯವಾಗದ ರಸ್ತೆ ಅಭಿವೃದ್ಧಿಗಳು, ಚರಂಡಿ, ಫುಟ್ಪಾತ್ ನಿರ್ಮಾಣ ಕಾಮಗಾರಿಗಳು ಪ್ರಸಕ್ತ ಆರಂಭವಾಗಿದೆ. ವಾಹನಗಳ ಸಂಖ್ಯೆಗಳು […]

ಸಿಪಿಎಂ ಮುಖಂಡನ ಅಂಗಡಿಗೆ ಮತ್ತೆ ಬೆಂಕಿ ಹಚ್ಚಲು ಯತ್ನ!

Monday, May 7th, 2018
cpm-leader

ಮಂಗಳೂರು: ಸಿಪಿಎಂ ಪಕ್ಷದ ಮುಖಂಡನ ಅಂಗಡಿಗೆ ದುಷ್ಕರ್ಮಿಗಳು ಎರಡನೇ ಬಾರಿ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಸುರತ್ಕಲ್‌‌ನ ಕುಳಾಯಿಯಲ್ಲಿ ನಡೆದಿದೆ. ಸುರತ್ಕಲ್ ಭಾಗದ ಸಿಪಿಎಂ ಮುಖಂಡ ಶ್ರೀನಾಥ್ ಕುಲಾಲ್ ಎಂಬವರಿಗೆ ಸೇರಿದ ಗೋಡೌನ್ ಇದಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಚಾರದಲ್ಲಿ ಇವರು ತೊಡಗಿದ್ದಾರೆ. ಕಳೆದ ಶನಿವಾರ ರಾತ್ರಿ ಬೆಂಕಿ ಹಚ್ಚಲು ಯತ್ನಿಸಿದ್ದ ದುಷ್ಕರ್ಮಿಗಳು ಮತ್ತೆ ನಿನ್ನೆ ಸಂಜೆಯೂ ಸಹ ಬೆಂಕಿ ಹಚ್ಚಲು ಯತ್ನಿಸಿದ್ದು, ಚುನಾವಣಾ ದ್ವೇಷದಿಂದ ಈ ಕೃತ್ಯ ನಡೆದಿರುವ ಶಂಕೆ […]

SSLC ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ, ಯಾದಗಿರಿಗೆ ಮತ್ತೆ ಕೊನೆಯ ಸ್ಥಾನ

Monday, May 7th, 2018
SSLC-result

ಉಡುಪಿ: 2018 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ (ಮೇ7) ಹೊರಬಿದ್ದಿದೆ. ಈ ಬಾರಿ ಒಟ್ಟಾರೆ ಶೇ.71.93 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಶೇಕಡಾ 4ರಷ್ಟು ಹೆಚ್ಚಳವಾಗಿದೆ. ಈ ಬಾರಿಯೂ, ಬಾಲಕಿಯರೇ ಮೇಲುಗೈ, ಶೇ. 78.01ವಿದ್ಯಾರ್ಥಿನಿಯರು ತೇರ್ಗಡೆ, ಶೇ.66.56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ 67.87ಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್, 625ಕ್ಕೆ 625 ಅಂಕವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದು, 624 ಅಂಕಗಳನ್ನು […]