ಮನೆ ಸಮೀಪದ ಬಾವಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

Wednesday, November 8th, 2023
ಮನೆ ಸಮೀಪದ ಬಾವಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ಕಾಸರಗೋಡು : ವಿದ್ಯಾರ್ಥಿ ಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ. ಪದ್ಯಾಣದ ನಿವಾಸಿ ಸಿಲ್ವೆಸ್ಟರ್ ಕ್ರಾಸ್ತ ಎಂಬವರ ಪುತ್ರ ಐವನ್ ಕ್ರಾಸ್ತ (23) ಮೃತಪಟ್ಟವನು. ಐವನ್ ತೊಕ್ಕೊಟ್ಟುವಿನ ಕಾಲೇಜೊಂದರ ಬಿ.ಎಡ್ ವಿದ್ಯಾರ್ಥಿಯಾಗಿದ್ದ. ಈತನ ಮೃತದೇಹ ಮಂಗಳವಾರ ರಾತ್ರಿ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈತ ಮಲಗುವ ಕೋಣೆ ಯೊಳಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ […]

ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳ ಹಬ್ಬ ದೀಪಾವಳಿ

Wednesday, November 8th, 2023
ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳ ಹಬ್ಬ ದೀಪಾವಳಿ

ಮಂಗಳೂರು : ದೀಪಾವಳಿ ಎಂದರೆ ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳು ಇವೇ ಕಣ್ಮುಂದೆ ಕಾಣಿಸುತ್ತವೆ. ದೀಪಾವಳಿಯಂತಹ ಹಬ್ಬವನ್ನು ಆಚರಿಸುವಾಗ, ಶಾಸ್ತ್ರವನ್ನರಿತು ಆಚರಿಸಿದರೆ, ಆನಂದದೊಂದಿಗೆ ಚೈತನ್ಯದ ಅನುಭೂತಿಯನ್ನೂ ಪಡೆಯಬಹುದು. ಶ್ರೀ ಲಕ್ಷ್ಮೀದೇವಿ, ಶ್ರೀಕೃಷ್ಣ, ಶ್ರೀರಾಮ, ಧನ್ವಂತರಿ ದೇವತೆ, ಯಮದೇವತೆ ಮುಂತಾದ ದೇವತೆಗಳನ್ನು ಸ್ಮರಿಸುವ ಈ ದೀಪೋತ್ಸವವನ್ನು ಶಾಸ್ತ್ರಕ್ಕನುಸಾರ ಆಚರಿಸೋಣ ಹಾಗೂ ಆನಂದವನ್ನು ದ್ವಿಗುಣಗೊಳಿಸೋಣ ದೀಪಾವಳಿ – ವಿವಿಧ ದಿನಗಳ ಮಹತ್ವ ಧನತ್ರಯೋದಶಿ (10.11.2023)ಸಾಧನೆಗಾಗಿ ಅನುಕೂಲ ಪರಿಸ್ಥಿತಿ ಮತ್ತು ಐಶ್ವರ್ಯವನ್ನು ಪಡೆಯಲು ಈ ದಿನ ಧನಲಕ್ಷ್ಮೀಯನ್ನು […]

ಕುಕ್ಕೆ ಸುಬ್ರಹ್ಮಣ್ಯದ ದುಡ್ಡಿನಲ್ಲಿ ನಾಲ್ಕು ವರ್ಷಗಳಿಂದ ಇನ್ನೋವಾ ಕಾರಿನಲ್ಲಿ ತಿರುಗುತ್ತಿದ್ದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು

Tuesday, November 7th, 2023
kuuke-subrahmanya

ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬಳಕೆಗೆಂದು ಖರೀದಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ದೇವಳದ ಖರ್ಚಿನಲ್ಲೇ ಬೆಂಗಳೂರಿನಲ್ಲಿ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2019ರಲ್ಲಿ ಹೊಸ ಇನ್ನೋವಾ ಕಾರನ್ನು ಖರೀದಿಸಲಾಗಿತ್ತು. ಆರಂಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೇ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಇಲಾಖಾ ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ […]

ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

Tuesday, November 7th, 2023
ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

ಮಂಗಳೂರು : ಮೂಡಬಿದ್ರೆ ಪೊಲೀಸ್ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅವರು ಹಾಗೂ ಅವರ ಠಾಣಾ ಸಿಬ್ಬಂದಿಯವರು ಬೆಳಗಿನ ಜಾವ ಮೂಡಬಿದ್ರೆ ಠಾಣ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ , ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ವಶಪಡಿಸಿ ಕೊಂಡಿರುತ್ತಾರೆ. ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲಿನ ಸಮೇತ ವಶಕ್ಕೆ ಪಡೆದು ಠಾಣೆಗೆ […]

ವ್ಯಕ್ತಿಯ ಕನಸಲ್ಲಿ ಬಂದ ಗೋಪಾಲಕೃಷ್ಣ ದೇವರು, ಬೆಳ್ತಂಗಡಿಯ ಬಳಿ ಸುಮಾರು 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆ

Tuesday, November 7th, 2023
Gopalakrishna Temple

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತೆಕ್ಕಾರು ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಮುಸ್ಲಿಮರ ವಶದಲ್ಲಿದ್ದ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಂಡು, ಉತ್ಖನನ ನಡೆಸಿದಾಗ 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ಹಿನ್ನೆಲೆ ಊರವರು ಇಲ್ಲಿ ಭವ್ಯ ದೇವಸ್ಥಾನ ನಿರ್ಮಿಸುವ ಪಣ ತೊಟ್ಟಿದ್ದಾರೆ. ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ […]

2 ಸಾವಿರ ರೂಪಾಯಿ ತಕರಾರು, ಹುಲಿ ವೇಷ ತಂಡದ ನಾಯಕನ ಹತ್ಯೆ, 3 ಆರೋಪಿಗಳು ಶರಣಾಗತಿ

Tuesday, November 7th, 2023
Akshay Kallega

ಪುತ್ತೂರು : ಕಲ್ಲೇಗ ಟೈಗರ್ಸ್‌ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್‌ ಕಲ್ಲೇಗ (26) ನನ್ನು ನವೆಂಬರ್ 6ರಂದು ತಡ ರಾತ್ರಿ 11.30ರ ಸುಮಾರಿಗೆ ಚಾಕು ಮಚ್ಚು ಬಳಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬನ್ನೂರು ಜೈನರ ಗುರಿ ನಿವಾಸಿಗಳಾದ ಚೇತು ಅಲಿಯಾಸ್‌ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್‌ ಮಣಿಯಾಣಿ ಮತ್ತು ಕೇಶವ ಕೊಲೆ ಆರೋಪಿಗಳಾಗಿದ್ದಾರೆ. ಹತ್ಯೆಯ ಮೂರನೇ ಪ್ರಮುಖ ಆರೋಪಿಯು ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಹತ್ಯೆಯಲ್ಲಿ ನೇರವಾಗಿ […]

ಮೆಸ್ಕಾಂ ಅಧಿಕಾರಿಗಳ ಕಾರಿನ ಮೇಲೆಯೇ ಬಿದ್ದ ಬೃಹತ್ ವಿದ್ಯುತ್ ಟವರ್

Monday, November 6th, 2023
Power-line

ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆ-ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್‌ ಬಳಿ ವಿದ್ಯುತ್‌ ಟವರ್‌ ಉರುಳಿ ಬಿದ್ದು ಅಧಿಕಾರಿಗಳ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಅದೃಷ್ಟವಶತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಭಾನುವಾರ ಸಂಜೆ ಸುರಿದ ಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತವಾಲುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗಕ್ಕೆ ಮಾಹಿತಿ ನೀಡಿದರು. ಕೂಡಲೇ ಮೆಸ್ಕಾಂ ಅಧಿಕಾರಿಗಳು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ […]

ಶತಾಯುಷಿ ಉಡುಪಿಯ ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ನಿಧನ

Monday, November 6th, 2023
Krishna-Bhat

ಉಡುಪಿ : ತುಳು ಲಿಪಿಕಾರ, ಪಂಚಾಂಗ ಕರ್ತ, ಸಾಹಿತಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ಅಂಗಡಿಮಾರ್ ಕೃಷ್ಣ ಭಟ್ (102) ನಿಧನರಾಗಿದ್ದಾರೆ. ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಮತ್ತೋರ್ವ ಪುತ್ರನೊಂದಿಗೆ ವಾಸವಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ ರಚನಕಾರರಾಗಿದ್ದರು. ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ ಸಹಿತ ಅನೇಕ […]

ನವೆಂಬರ್ 5 : ಬುಡನ್‌ಗಿರಿಯಲ್ಲಿ ದತ್ತಮಾಲಾ‌ ಅಭಿಯಾನ‌ : 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ​

Saturday, November 4th, 2023
Datta Peeta

ಚಿಕ್ಕಮಗಳೂರು: ನವೆಂಬರ್ 5 ರಂದು ಗುರು ದತ್ತಾತ್ರೇಯ, ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌ ನಡೆಯಲಿದೆ. ಈ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ‌ ಬಂದೋಬಸ್ತ್ ಮಾಡಲಾಗಿದೆ. ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ‌ ದರ್ಗಾ ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿ 26 ಚೆಕ್‌ಪೋಸ್ಟ್, 49 ಸೆಕ್ಟರ್ ಆಫೀಸರ್ ನೇಮಿಸಲಾಗಿದೆ. ಸೂಕ್ಷ್ಮ‌, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್‌ ಕಣ್ಗಾವಲು ಇರಿಸಿದ್ದು, ಮುನ್ನೆಚ್ಚರಿಕೆಯಿಂದ ಚಿಕ್ಕಮಗಳೂರಿನ […]

ಗಲ್ಫ್ ಉದ್ಯೋಗಿ ಜೊತೆ 19 ದಿನ ಗಳ ಹಿಂದೆ ವಿವಾಹವಾದ ಮಹಿಳೆ ಆತ್ಮಹತ್ಯೆ

Saturday, November 4th, 2023
ಗಲ್ಫ್ ಉದ್ಯೋಗಿ ಜೊತೆ 19 ದಿನ ಗಳ ಹಿಂದೆ ವಿವಾಹವಾದ ಮಹಿಳೆ ಆತ್ಮಹತ್ಯೆ

ಕಾಸರಗೋಡು : ಕೆಲವು ದಿನ ಗಳ ಹಿಂದೆ ವಿವಾಹವಾದ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ದಲ್ಲಿ ನಡೆದಿದೆ. ಪೆರ್ಲ ಉಕ್ಕಿನಡ್ಕ ದ ಮುಹಮ್ಮದ್ ರವರ ಪುತ್ರಿ ಉಮೈರಾ ಬಾನು (22) ಮೃತ ಪಟ್ಟವರು. ಉಮೈರಾ ಬಾನು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಲ್ಫ್ ಉದ್ಯೋಗಿ ಆಗಿರುವ ಉಕ್ಕಿ ನಡ್ಕ ದ ತಾಜುದ್ದೀನ್ ಜೊತೆ 19 ದಿನ ಗಳ ಹಿಂದೆ ವಿವಾಹವಾಗಿತ್ತು. ಕುಟುಂಬಸ್ಥರು ಶುಕ್ರವಾರ ಬೆಳಿಗ್ಗೆ ಸಂಬಂಧಿಕರ […]