ಮಂಗಳೂರು ; ಗಡಿನಾಡಿನಲ್ಲಿ ಸಂಭ್ರಮಿಸಿದ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ

Tuesday, February 1st, 2022
Kannada Jagruti

ಉಳ್ಳಾಲ: ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯವಾಗಿವೆ. ಆದುದರಿಂದ ಭಾಷೆಗಳ ಒಳಗಿನ ದ್ವೇಷ ಸಲ್ಲದು. ಗಡಿನಾಡಿನ ಭಾಗದಲ್ಲಿನ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಅಲ್ಲದೆ ಎಲ್ಲಾ ಪ್ರತಿಭೆಗಳನ್ನು ಗುರುತಿಸುವಂತಾದಾಗ ನಮ್ಮ ಭಾಷೆಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಇನ್ನೂ ಕನ್ನಡ ನಾಡು ನುಡಿಯ ಸೇವೆ ನಿರಂತರವಾಗಿ ನಡೆಯಬೇಕು ಎಂದು ಕರ್ನಾಟಕ ವಿಧಾನಸಭಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ, ಮಾಜಿ ಸಚಿವ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ತಿಳಿಸಿದರು. ಕರ್ನಾಟಕ ಸರ್ಕಾರದ ಕರ್ನಾಟಕ […]

ಉಡುಪಿ ಬೈಲಕೆರೆಯ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿದ ಚಾಲಾಕಿ ಕಳ್ಳ

Monday, January 31st, 2022
Scooter-Thief

ಉಡುಪಿ : ಉಡುಪಿ ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ವಸತಿ ಸಮುಚ್ಚಯದ ಬಳಿ ಕಳ್ಳನೊಬ್ಬ ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕಳವು ಮಾಡಿರುವ ಘಟನೆ ಸೋಮವಾರ ನಡೆದಿದೆ. ಸ್ಕೂಟರ್ ಕಳ್ಳತನ ಮಾಡಿರುವ ವ್ಯಕ್ತಿಯನ್ನು ಸಾಲಿಗ್ರಾಮ ಸಾಸ್ತಾನ ವ್ಯಾಪ್ತಿಯ ಯುವಕ ಸ್ಕೂಟರ್ ಸಂಖ್ಯೆ KA20 EV6577 ನ್ನು ಈತ ಕಳವು ಮಾಡಿದ್ದಾನೆ. ಬೈಕ್ ಮಾಲೀಕರು ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಬಳಿ ಹೋಂಡಾ ಡಿಯೋ‌ ಸ್ಕೂಟರ್ ಅನ್ನು ನಿಲ್ಲಿಸಿ ಕರ್ಮಷಿಯಲ್ ಪಾರ್ಸೆಲ್ ಕೊಡಲು ಹೋಗಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ […]

ಧರ್ಮಸ್ಥಳದಲ್ಲಿ ನಡೆದ ಮಹಾ ಮೃತ್ಯುಂಜಯ ಯಾಗದ ಪ್ರಸಾದ ಪ್ರಧಾನಿಗೆ ತಲುಪಿಸಿದ ಶಾಸಕ ಹರೀಶ್​ ಪೂಂಜಾ

Monday, January 31st, 2022
Harish Poonja

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿತಕ್ಕಾಗಿ ಹಾರೈಸಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನೆರವೇರಿಸಿ ಇದೀಗ ಆ ಯಾಗದ ಪ್ರಸಾದ ನೇರವಾಗಿ ಪ್ರಧಾನಿಯವರನ್ನೇ ತಲುಪಿದೆ. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಖುದ್ದಾಗಿ ಈ ಪ್ರಸಾದವನ್ನು ಕೊಂಡೊಯ್ದು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಯಾಗದಲ್ಲಿ ಮುಖ್ಯವಾಗಿ ಪಾಲ್ಗೊಂಡಿದ್ದ ಪುರೋಹಿತವೃಂದ ಕೂಡ ಶಾಸಕರೊಂದಿಗೆ ತೆರಳಿ ಮೋದಿಯವರಿಗೆ ಆಶೀರ್ವದಿಸಿದೆ. ಪ್ರಧಾನಿಯವರಿಗೆ ದೀರ್ಘಾಯಸ್ಸು ಕೋರಿ ಹಾಗೂ ಅವರ ಆರೋಗ್ಯವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗವನ್ನು […]

ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ವಧೆ ಮಾಡುತ್ತಿದ್ದ ತಂಡ ಪರಾರಿ, ಓರ್ವನ ಬಂಧನ

Monday, January 31st, 2022
karkala-police

ಕಾರ್ಕಳ : ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರುತ್ತಿದ್ದ ತಂಡವೊಂದು ಕಾರ್ಕಳ ಗ್ರಾಮಾಂತರ ಪೋಲೀಸರಿಂದ ತಪ್ಪಿಸಿಕೊಂಡ ಘಟನೆ ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ರವಿವಾರ ನಸುಕಿನ ಜಾವದಲ್ಲಿ ನಡೆದಿದೆ. ಈ ಮದ್ಯೆ ತಪ್ಪಿಸಿಕೊಳ್ಳಲೆತ್ನಿಸಿದ ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸಯ್ಯದ್ ಜುಹಾದ್(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗೋ ಸಾಗಾಟ ವಾಹನದ ಮಾಹಿತಿದಾರನಾಗಿ ಕುಕೃತ್ಯದಲ್ಲಿ ಸಕ್ರಿಯಾಗೊಂಡಿದ್ದನು ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, […]

ಮಕ್ಕಳ ಪಾಲನಾ ಸಂಸ್ಥೆಗಳನ ನೊಂದಾವಣೆ ಮಾಡುವುದು ಹಾಗೂ ನವೀಕರಣ ಮಾಡುವುದು ಕಡ್ಡಾಯ: ಜಿಲ್ಲಾಧಿಕಾರಿ

Saturday, January 29th, 2022
KV Rajendra

ಮಂಗಳೂರು : ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ಸೂಚಿಸಿದರಲ್ಲದೆ ಕೂಡಲೇ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಅವರು ಜ. 29 ರ ಶನಿವಾರ ರಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳ ಪಾಲನಾ ಸಂಸ್ಥೆಗಳನ ನೊಂದಾವಣೆ ಮಾಡುವುದು ಹಾಗೂ ನವೀಕರಣ ಮಾಡುವುದು ಕಡ್ಡಾಯವಾಗಿದ್ದು ಕೂಡಲೇ […]

ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋಗಿ ಪ್ರಾಣಕಳಕೊಂಡ ಯುವಕ

Saturday, January 29th, 2022
loyd

ಉಳ್ಳಾಲ : ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಮುಂದಾದ ಆಕೆಯ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮೇಶ್ವರ ಕಡಲ ಕಿನಾರೆಯಲ್ಲಿ‌ ಶುಕ್ರವಾರ ಸಂಜೆ ವರದಿಯಾಗಿದೆ. ಈ ನಡುವೆ ಯುವತಿಯನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಮೃತರನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಯಾನೆ ಲಾಯ್ ಎಂದು ಗುರುತಿಸಲಾಗಿದೆ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22)ಆತ್ಮ ಹತ್ಯೆಗೆ ಯತ್ನಿಸಿ ಪಾರಾದ ಯುವತಿ. ಅಶ್ವಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಲಾಯ್ಡ್ ಡಿಸೋಜ ಮತ್ತು ಅಶ್ವಿತಾ […]

ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ

Friday, January 28th, 2022
Seetaram-Kulal

ಮಂಗಳೂರು: ತುಳು ನಾಟಕ ರಂಗದ ಹಿರಿಯ ಕಲಾವಿದದ, ದಿ. ಕೆ. ಎನ್. ಟೈಲರ್ ರವರ ನಾಟಕ,ಚಲನ ಚಿತ್ರ ರಂಗದ ಒಡನಾಡಿ ಆಗಿದ್ದ ಜೆ. ಸೀತಾರಾಮ ಶೆಟ್ಟಿ (83) ಅವರು ಪಚ್ಚನಾಡಿಯ ಸ್ವಗೃಹದಲ್ಲಿ ನಿಧನರಾದರು. ಸುಮಾರು 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾಸೇವೆಯಲ್ಲಿ ತೊಡಗಿರುವ ಅವರು ಕೆ. ಎನ್. ಟೇಲರ್ ರವರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯರಾಗಿದ್ದರು. ತನ್ನ 80ರ ಹರೆಯದಲ್ಲೂ ಪುರಭವನದಲ್ಲಿ ನಡೆದ ಸೀತಾರಾಮ 80ರ ಕಾರ್ಯಕ್ರಮದಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಮಂಡಿಸಿದ ಬಜೆಟ್‍ನ ವಿವರಗಳು

Friday, January 28th, 2022
MCC-Budget

ಮಂಗಳೂರು : ಇಲ್ಲಿನ ಮಹಾನಗರ ಪಾಲಿಕೆಯ ಸವಾರ್ಂಗೀಣ ಅಭಿವೃದ್ಧಿ ದೃಷ್ಟಿಯಿಂದ ತಯಾರಿಸಲಾದ 2021-22ನೇ ಸಾಲಿನ ಪರಿಷ್ಕøತ ಆಯವ್ಯಯವನ್ನು ಹಾಗೂ 2022-23ನೇ ಸಾಲಿನ ಅಂದಾಜು ಆಯವ್ಯಯವನ್ನು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್ ಮಂಡಿಸಿದರು. ಅವರು ಜ.28ರ ಶುಕ್ರವಾರ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯವ್ಯಯ ಭಾಷಣ ಮಾಡಿ ಬಜೆಟ್ ಮಂಡಿಸಿದರು. ನಂತರ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ನಮ್ಮ ನಗರಕ್ಕಾಗಲಿ, ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಅಥವಾ ಪ್ರಪಂಚದ ಯಾವುದೇ […]

ಕಾಸರಗೋಡಿನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸರಕಾರಿ ಅಧಿಕಾರಿಗಳು

Friday, January 28th, 2022
Indian-Flag

ಕಾಸರಗೋಡು :  ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರಕಾರೀ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು  ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಘಟನೆ ನಡೆದಿದೆ. ಜಿಲ್ಲಾ ಮಟ್ಟದ ಧ್ವಜಾರೋಹಣವನ್ನು ಸಚಿವ ಅಹ್ಮದ್ ದೇವರಕೋವ್ ನೆರವೇರಿಸಿದರು. ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಾಗಲೀ ಅಥವಾ ಇತರ ಅಧಿಕಾರಿಗಳಾಗಲೀ ಗಮನ ಕೊಡಲಿಲ್ಲ. ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ನಂತರ ಸಚಿವ ಅಹಮದ್ ದೇವರಕೋವಿಲ್ ವಂದಿಸಿದರು. ಇದಾದ ಬಳಿಕ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು […]

ರಸ್ತೆ ಅಗಲೀಕರಣ, ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ನೆಲಸಮ

Friday, January 28th, 2022
Kalladka Prabhakara bhat

ಬಂಟ್ವಾಳ : ಬಿಸಿರೋಡು ಅಡ್ಡಹೊಳೆವರೆಗೆ ಚತುಷ್ಪತ ರಸ್ತೆಯ ನಿರ್ಮಾಣದ ಕಾಮಗಾರಿ ರಾತ್ರಿಹಗಲು ಎನ್ನದೆ ಭರದಿಂದ ನಡೆಯುತ್ತಿದ್ದು. ರಸ್ತೆಯ ಪಕ್ಕದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಜರಿದು ಬಿದ್ದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ . ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಜರಿದು ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ ಅಗಲೀಕರಣ ಕಾಮಗಾರಿಗಾಗಿ […]