ಕಾರ್ಯಾಚರಣೆ ವೇಳೆ ಮೃತಪಟ್ಟ ಪೇದೆ ರಾಜಪ್ಪ ರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

Saturday, April 6th, 2013
caonstable Rajappa

ಮಂಗಳೂರು : ಮುಲ್ಕಿ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಮೃತಪಟ್ಟ ಮುಲ್ಕಿ ಠಾಣಾ ಸಿಬ್ಬಂದಿ ರಾಜಪ್ಪ(೩೦) ಅವರಿಗೆ ಶುಕ್ರವಾರ ಸಂಜೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಈ ವೇಳೆ ಅವರ ಅಂತಿಮ ನಮನಕ್ಕೆ ಗರ್ಭಿಣಿ ಪತ್ನಿ ಹಾಗೂ ಮನೆಯವರು ಆಗಮಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಪಶ್ಚಿಮ ವಲಯ ಐಜಿಪಿ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಹೂಗುಚ್ಛ ಅರ್ಪಿಸುವ ಮುಖಾಂತರ ಮೃತ ಪೇದೆಯ ಆತ್ಮಕ್ಕೆ ಚಿರಶಾಂತಿ […]

ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿ ಡಿಕ್ಕಿ, ಮೃತಪಟ್ಟ ಪೊಲೀಸ್ ಪೇದೆ

Friday, April 5th, 2013
Mulky mishap constabel kill

ಮಂಗಳೂರು : ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಲ್ಕಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ದಾವಣಗೆರೆ ಹೊನ್ನಾಳಿ ಮೂಲದ ರಾಜಪ್ಪ(27) ಮೃತ ಪೊಲೀಸ್ ಪೇದೆ. ಕರಾವಳಿ ಭದ್ರತಾ ಪಡೆಯ ಸಾಗರ ಕವಚ ಕಾರ್ಯಾಚರಣೆಯ ನಿಮಿತ್ತ ಗುರುವಾರ ಮಧ್ಯರಾತ್ರಿ ಮುಲ್ಕಿಯ ಬಪ್ಪನಾಡು ಚೆಕ್‌ಪೋಸ್ಟ್‌ನಲ್ಲಿ ರಾಜಪ್ಪ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಪ್ರಮೋದ್ ಮತ್ತು ಸೀತಾರಾಮ ಎಂಬ ಪೊಲೀಸ್ ಪೇದೆಗಳು ತಪಾಸಣಾ ಕಾರ್ಯದಲ್ಲಿ ತೊಡಗಿದ್ದರು. ಮುಂಜಾನೆ 3.30ರ ಸುಮಾರಿಗೆ ಉಡುಪಿಯಿಂದ […]

ಪ್ರವೀಣನ ಕ್ಷಮಾದಾನ ಅರ್ಜಿ ತಿರಸ್ಕೃತ, ಗಲ್ಲು ಶಿಕ್ಷೆ ಖಾಯಂ

Friday, April 5th, 2013
Praveen vaamanjur

ಮಂಗಳೂರು : ಒಂದೇ ಕುಟುಂಬದ ನಾಲ್ವರನ್ನು ಸಾಮೂಹಿಕ ಹತ್ಯೆ ಮಾಡಿದ್ದ ವಾಮಂಜೂರು ಪ್ರವೀಣನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕೃತಗೊಳಿಸಿದ್ದು ಈ ಮೂಲಕ ಸುಪ್ರೀಂಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ  ಖಾಯಂಗೊಂಡಿದೆ. ಆರೋಪಿ ಪ್ರವೀಣ 1993 ರ ಫೆಬ್ರವರಿ 23 ರಂದು ಹಣಕ್ಕಾಗಿ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಆಕೆಯ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾರ ಪುತ್ರಿ ದೀಪಿಕಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈತನಿಗೆ ಮಂಗಳೂರಿನ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ […]

ಎಕ್ಕೂರಿನಲ್ಲಿ ಬಸ್-ಬೈಕ್ ಡಿಕ್ಕಿ, ಸ್ಥಳದಲ್ಲೇ ಮೃತಪಟ್ಟ ಸಹೋದರರು

Thursday, April 4th, 2013
Two brothers killed at Yekkur

ಮಂಗಳೂರು : ಎಕ್ಕೂರಿನಲ್ಲಿ ಇಂದು ಬೆಳಗ್ಗೆ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ತೊಕ್ಕೋಟಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಶಾರದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರನ್ನು ಉಮರ್ ರಶೀದ್, ಮಹಮ್ಮದ್ ನೌಶಾದ್ ಎಂದು ಗುರುತಿಸಲಾಗಿದ್ದು ಇವರಿಬ್ಬರು ತೊಕ್ಕೋಟಿನ ಮಹಮ್ಮದ್ ಎಂಬುವವರ ಮಕ್ಕಳಾಗಿದ್ದಾರೆ. ಉಮರ್ ರಶೀದ್ ಬಿ.ಕಾಂ ಪದವಿಧರನಾಗಿದ್ದು, ಮೆಡಿಕಲ್ ಶಾಪ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೌಶಾದ್ […]

ಆಸ್ತಿ ವಿವಾದ : ಚಿಕ್ಕಪ್ಪನಿಂದ ಕೊಲೆಯಾದ ಯುವಕ

Wednesday, April 3rd, 2013
Sullia Youth killed

ಸುಳ್ಯ : ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ಆಸ್ತಿ ವಿವಾದದಿಂದಾಗಿ ಯುವಕನೋರ್ವ ಆತನ ಚಿಕ್ಕಪ್ಪನಿಂದಲೇ ಕೊಲೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ(೨೬) ಮೃತ ವ್ಯಕ್ತಿ ಯಾಗಿದ್ದು, ಈತ  ಹಾಗು ಈತನ ಚಿಕ್ಕಪ್ಪ ನಾರಾಯಣ ನಾಯ್ಕ ಈ ಇಬ್ಬರ ಕುಟುಂಬದ ನಡುವೆ ಆಸ್ತಿ ವಿಷಯವಾಗಿ ಆಗಾಗ್ಗೆ  ಕಲಹ ನಡೆಯುತ್ತಿದ್ದು ನಿನ್ನೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಆರೋಪಿನಾರಾಯಣ ನಾಯ್ಕ ಸುಳ್ಯ ರೋಟರಿ ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ […]

ಕಾಲಿವುಡ್ ನಲ್ಲಿ ಕುಡ್ಲದ ಪೊಣ್ಣು !

Monday, March 25th, 2013
Sanchita Shetty

ಮಂಗಳೂರು : ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್ ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..? ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ನಿಯಂತ್ರಣದ ಹಂಗಿಲ್ಲದೇ ಮುಂದೆ ನಡೆಯುವ ಸಿಬಿಎಸ್ಇ ಪಠ್ಯಗಳು

Monday, March 25th, 2013
CBSE Cylabase

ಮಂಗಳೂರು : ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಯೊಂದರಲ್ಲಿ ಇತ್ತೀಚೆಗೆ 4ನೇ ಕ್ಲಾಸಿನ ಇಂಗ್ಲಿಷ್ ಭಾಷಾ ಪಠ್ಯದ ಪಾಠವೊಂದನ್ನು ಕೈಬಿಡಲು ಶಾಲೆಯಲ್ಲಿಯೇ ನಿರ್ಧರಿಸಲಾಯಿತು. ಆ ಪಾಠದ ಶೀರ್ಷಿಕೆ `ದಿ ಗೋಸ್ಟ್ ಟ್ರಬಲ್’. ವಿದ್ಯಾರ್ಥಿ ಗಳಿಗೆ ಹೋಂ ವರ್ಕ್ ಮಾಡಲು ದೆವ್ವ ಸಹಕರಿಸುವ ಕತೆ ಆ ಪಾಠದಲ್ಲಿದೆ. ದೆವ್ವಗಳು ಕೂಡ ನಮ್ಮ ಬದುಕಿನಲ್ಲಿ ನೆರವಾಗುತ್ತವೆ ಎಂಬ ವಿಚಾರವನ್ನು ಒಳಗೊಂಡ ಆ ಪಾಠ ಮಕ್ಕಳ ಮನಸ್ಸಿನ ಮೇಲೆ ಅಷ್ಟೇನೂ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಆ ಪಾಠವನ್ನು ಕೈ […]

ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಯತ್ನ, ಪ್ರಮುಖ ಆರೋಪಿ ಸೈನುಲ್‌ ಅಬೀದ್‌ ನ ಬಂಧನ

Monday, March 18th, 2013
KS Sainul Abid

ಕಾಸರಗೋಡು : ಬಿಎಂಎಸ್ ಕಾರ್ಯಕರ್ತ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್(26) ರ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ತಾಯಲಂಗಾಡಿಯ ಸಿ.ಎ.ಪಿ.ಹೌಸ್‌ನ ಅಬಿ ಯಾನೆ ಕೆ.ಎಸ್‌.ಸೈನುಲ್‌ ಅಬೀದ್‌(22) ನನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಶನಿವಾರ ಬಂಧಿಸಿದ್ದಾರೆ. ೨೦೧೩  ಫೆಬ್ರವರಿ 5,  ರ ರಾತ್ರಿ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಂಚಿ ವಾಪಸ್ಸಾಗುತ್ತಿದ್ದ ಜ್ಯೋತಿಷ್ ಅವರನ್ನು ಆರು ಮಂದಿಯ ತಂಡ  ಅಡ್ಡಗಟ್ಟಿ ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ […]

ಬೆಳ್ತಂಗಡಿ : ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಾಲ್ವರ ಬಂಧನ

Wednesday, March 13th, 2013
Belthangady

ಬೆಳ್ತಂಗಡಿ :14 ವರ್ಷದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಮೇಲೆ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಫಯಾಜ್‌ (19), ನಾಸಿರ್‌ (18), ನೌಶಾದ್‌ (19), ಭಂಡಾರಿಕೋಡಿ ಮನೆ ಶಾಕೀರ್‌ (19)  ಬಂಧಿತ ಆರೋಪಿಗಳು. ಮಾರ್ಚ್ 9ರಂದು ಮನೆಗೆ ಒಂಟಿಯಾಗಿ ಬರುತ್ತಿದ್ದ ಬಂಡಾರಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಪಾದೆಗುತ್ತು ಎಂಬಲ್ಲಿ ಈ ನಾಲ್ವರು ಯುವಕರು ನೇತ್ರಾವತಿ ನದಿ ತಟದಲ್ಲಿ ಅಡ್ಡಗಟ್ಟಿ ತಮ್ಮ ಜತೆ ಬರುವಂತೆ ಒತ್ತಾಯಿಸಿದ್ದು […]