ಏಳೇ ದಿನಗಳ ಕಲೆಕ್ಷನ್ 117 ಕೋಟಿ

Monday, October 11th, 2010
'ಎಂದಿರನ್

‘ಎಂದಿರನ್’ ಬಿಡುಗಡೆಯ ನಂತರ ಕೇವಲ ಏಳೇ ದಿನಗಳ ಕಲೆಕ್ಷನ್ 117 ಕೋಟಿ ರೂಪಾಯಿಗಳನ್ನು ತಲುಪಿದೆ. ಸೂಪರ್ ಸ್ಟಾರ್ ರಜನೀಕಾಂತ್, ಐಶ್ವರ್ಯಾ ರೈ ಅಭಿನಯದ ಆ ಮೂಲಕ ಎಂದಿರನ್’ ತ್ರಿ ಈಡಿಯಟ್ಸ್‌ನ್ನು  ಹಿಂದೆ ಹಾಕಿದೆ.  ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ದಾಖಲೆಯನ್ನೂ ಕೂಡಾ ಎಂದಿರನ್  ಮುರಿದಿದೆ. ಎಂದಿರನ್ ಮತ್ತು  ರೋಬೋಟ್ 2,200 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು. ತಮಿಳುನಾಡೊಂದರಲ್ಲೇ ಒಂದು ವಾರದಲ್ಲಿ ಎಂದಿರನ್ 60 ಕೋಟಿ ರೂಪಾಯಿಗಳಿಸಿದೆ. ಆಂಧ್ರಪ್ರದೇಶದಲ್ಲಿ 30 ಕೋಟಿ, ಕರ್ನಾಟಕದಲ್ಲಿ ಇದು ಎಂಟು ಕೋಟಿ ತಲುಪಿದೆ. ಇನ್ನುಳಿದಂತೆ […]

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

Wednesday, October 6th, 2010
ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಮಂಗಳೂರು : ಭಾಮಿನಿ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್. ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಭಾಮಿನಿ ಪತ್ರಿಕೆಯ ಬಿಡುಗಡೆಯನ್ನು ಆಳ್ವಾಸ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷ ಎಂ. ಮೋಹನ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭಾಮಿನಿ ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು […]

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜಿನಾಮೆ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ

Tuesday, October 5th, 2010
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಐ.ಎ.ಡಿ.ಬಿ ಹಗರಣದಲ್ಲಿ ಭಾಗಿಯಾಗಿರುವ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಟು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯೆದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ, ಮುಖ್ಯಮಂತ್ರಿಗಳು ಅದಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ಹಾಗೂ ಅವರ ಮಗ ಕಟ್ಟಾ ಜಗದೀಶ್ ನಾಯ್ಡು ಅಧಿಕಾರವನ್ನು ದುರುಪಯೋಗ ಮಾಡಿ ರಾಜ್ಯದ ಸಂಪತ್ತನ್ನು ಲೂಟಿಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ […]

ಎಂದಿರನ್’ ಚಿತ್ರವಿಮರ್ಶೆ

Tuesday, October 5th, 2010
Endiran

ಮಂಗಳೂರು : ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟನ್ನು ಹಾಕಿ ನಿರ್ದೇಶಕ ಶಂಕರ್  ‘ಎಂದಿರನ್’ ಚಿತ್ರ ನಿರ್ಮಿಸಿದ್ದಾರೆ. ‘ಎಂದಿರನ್’ ಚಿತ್ರದ ಒಟ್ಟು ಬಜೆಟ್ 162 ಕೋಟಿ ರೂಪಾಯಿಗಳು. ದೇಶಿಯ ಚಿತ್ರಗಳಲ್ಲಿ ಇಷ್ಟೊಂದು ಹಣ ಹಾಕಿದ ಚಿತ್ರ ಇದೇ ಮೊದಲು.  ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ಅದ್ಬುತ ಸ್ಟಂಟ್ ಹಾಗೂ ಸಂಭಾಷಣೆಗಳು ಚಿತ್ರದ ಹೈಲೈಟ್ಸ್. ಮೂರೂ ಭಾಷೆಗಳಲ್ಲಿ ಬಿಡುಗಡೆ ಗೊಂಡಿದೆ ಹಿಂದಿಯಲ್ಲಿ ‘ರೊಬೊಟ್’, ತಮಿಳಿನಲ್ಲಿ ‘ಎಂದಿರನ್’ ಮತ್ತು ತೆಲುಗಿನಲ್ಲಿ ‘ರೊಬೊ’.  ರಜನಿಕಾಂತ್, ಡ್ಯಾನಿ, ಐಶ್ವರ್ಯಾ ರೈ ಮುಖ್ಯ ಪಾತ್ರಗಳಲ್ಲಿರುವ ಈ ಚಿತ್ರವನ್ನು ದುಡ್ಡು […]

ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ ಉದ್ಘಾಟನೆ

Monday, October 4th, 2010
ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ

ಧರ್ಮಸ್ಥಳ : ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜನೋತ್ಸವ ಸಮಾರಂಭವನ್ನು ಧರ್ಮಸ್ಥಳದಲ್ಲಿ ಭಾನುವಾರ ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಹೇಮಾವತಿ ವಿ. ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ ರಾಜ್ಯ ಸರಕಾರ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್, ಚಲನಚಿತ್ರ ನಟ ಟೆನಿಸ್ ಕೃಷ್ಣ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಕುತ ಜನ ಮುಂದೆ, ನೀನವರ ಹಿಂದೆ, ಇಂದಿನ ವಾರ ಶುಭವಾರ, ಇಂದಿನ ದಿನವೇ ಶುಭ ದಿನವು ಧರ್ಮಸ್ಥಳಾಧೀಶ ಶರಣಂ, ಜಗದೀಶ, […]

ಪಾಂಡೇಶ್ವರದಲ್ಲಿ ಸುಸಜ್ಜಿತ ಅಗ್ನಿಶಾಮಕ ಕೇಂದ್ರ : ಜೀಜಾ ಮಾಥವನ್ ಹರಿಸಿಂಗ್.

Monday, October 4th, 2010
ಜೀಜಾ ಮಾಥವನ್ ಹರಿಸಿಂಗ್ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ

ಮಂಗಳೂರು: 1942ರಲ್ಲಿ ಸ್ಥಾಪಿತವಾದ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ 8 ಅಗ್ನಿಶಾಮಕ ವಾಹನಗಳನ್ನು ಇರಿಸುವಂತೆ ಇನ್ನು ಒಂದು ವರ್ಷದೊಳಗೆ ನವೀಕರಿಸಲಾಗುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಗ್ನಿಶಾಮಕ ದಳ ಬೆಂಗಳೂರು ಇವರು ಹೇಳಿದರು. ಅವರು ಕದ್ರಿ ಅಗ್ನಿ ಶಾಮಕ ಕೇಂದ್ರಕ್ಕೆ ಬೇಟಿ ನೀಡಿದ ಬಳಿಕ, ಪಾಂಡೇಶ್ವರ ಅಗ್ನಿ ಶಾಮಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಅಗ್ನಿ ಶಾಮಕ ಕೇಂದ್ರದ ಪರಿಶೀಲನೆ ನಡೆಸಿದರು. ಮಂಗಳೂರಿಗೆ […]

ದಂಡುಪಾಳ್ಯ ಗ್ಯಾಂಗ್ ನ 11 ಮಂದಿಗೆ ಮರಣದಂಡನೆ

Friday, October 1st, 2010
ದಂಡುಪಾಳ್ಯ ಗ್ಯಾಂಗ್

ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್  ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ […]

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ಪತ್ರಿಕಾ ಮಾರಟಕ್ಕೆ ಅಡ್ಡಿ ಪಡಿಸಿ ಅಂಗಡಿ ಜಖಂಗೊಳಿಸಿದ ದುಷ್ಕರ್ಮಿಗಳು

Monday, September 27th, 2010
Paper stall

ಮಂಗಳೂರು :  ನಗರದ ಮಿಲಾಗ್ರಿಸ್ ಬಳಿ ಟೆಲಿಫೋನ್ ಬೂತ್ ಹಾಗೂ ಪೇಪರ್ ಸ್ಟಾಲ್ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಮೆಲ್ವಿಲ್ ಪಿಂಟೋ ಎಂಬವರ ಅಂಗಡಿಗೆ ಭಾನುವಾರ ಸಂಜೆ ಆಗಮಿಸಿದ ದುಷ್ಕರ್ಮಿಗಳು ‘ಕರಾವಳಿ ಅಲೆ’ ಮಾರಾಟ ಮಾಡಬಾರದು ಎಂದು ಬೆದರಿಸಿ ಕಾಯಿನ್ ಬಾಕ್ಸ್ ಮತ್ತು ಕಪಾಟಿಗೆ ಹಾನಿ ಮಾಡಿ ‘ಕರಾವಳಿ ಅಲೆ’ಯ ಪ್ರತಿಗಳನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬೈಕ್‌ನಲ್ಲಿ ಮೂರು ಮಂದಿ ಬಂದಿದ್ದು ಒಬ್ಬಾತನ ಬಳಿ ಮಾರಕಾಯುಧ ಇತ್ತು ಎಂದು ಮೆಲ್ವಿಲ್ ಪಿಂಟೊ ತಿಳಿಸಿದ್ದಾರೆ. ಬಳಿಕ ಕಂಕನಾಡಿ ಆಸುಪಾಸಿನ […]

ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

Friday, September 24th, 2010
ದ ಕ ಎಸ್ ಪಿ ಪತ್ರಿಕಾಗೋಷ್ಠಿ

ಮಂಗಳೂರು : ರೌಡಿ ಶೀಟರ್  ತಿಂಗಳಾಡಿ ಉಮೇಶ್‌ ರೈ (36)  ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಅಮ್ಮಣ್ಣ ರೈ ಅವರ ಬಾವ ಈಶ್ವರಮಂಗಲ ನಿವಾಸಿ ಜಯರಾಜ ರೈ ಹಾಗೂ ಅರಿಯಡ್ಕ ನಿವಾಸಿಗಳಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ಬಂದಿತ ಆರೋಪಿಗಳು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಉಮೇಶ್‌ ರೈ […]