ಮೇ 2ಕ್ಕೆ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ
Tuesday, February 18th, 2014ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಮೇ 2ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ವರದಕ್ಷಿಣೆ, ವಿವಾಹಕ್ಕಾಗುವ ದುಂದುವೆಚ್ಚ ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಆರಂಭಿಸಿದ್ದು, ಪ್ರತಿವರ್ಷ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತದೆ. ಕಳೆದ ವರ್ಷದವರೆಗೆ ಧರ್ಮಸ್ಥಳದಲ್ಲಿ 11,465 ಜೋಡಿ ಸಾಮೂಹಿಕ ವಿವಾಹವಾಗಿದೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಕೊಡಲಾಗುವುದು. ವಿವಾಹವಾಗಲು ಇಚ್ಚಿಸುವವರು ಏ.28ರೊಳಗೆ ಧರ್ಮಸ್ಥಳದ ವಿವಾಹ ನೋಂದಣಿ ಕಚೇರಿಯಲ್ಲಿ ಹೆಸರು ದಾಖಲಿಸಲು […]