ಕೋರ್ಸ್ ಮುಗಿದ ನಂತರವೂ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡದಿರುವುದನ್ನು ಪ್ರಶ್ನಿಸಿ ಪ್ರತಿಭಟನೆ

Wednesday, October 30th, 2013
Academy of Career Guidance

ಮಂಗಳೂರು : ಕೋರ್ಸ್ ಮುಗಿದ ನಂತರವೂ ಯಾವುದೇ ರೀತಿಯ ಉದ್ಯೋಗವನ್ನು ಕೊಡದಿರುವ ಅಕಾಡೆಮಿ ಕ್ಯಾರಿಯರ್ ಗೈಡೆನ್ಸ್ ಇನ್ಕಾರ್ಪೋರೇಶನ್ ಸಂಸ್ಥೆಯು ಸಂತೋಷ್ ಕುಮಾರ್ ಎಂಬುವವರ ವಿರುಧ್ಢ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸೇರಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಿಕರ್ನಕಟ್ಟೆ ಬಳಿ ಇರುವ ಈ ಸಂಸ್ಥೆಯ ಸಂತೋಷ್ ಕುಮಾರ್ ಸೈನ್ಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡು ಹಲವು ರೀತಿಯ ತರಬೇತಿಗಳನ್ನು ನೀಡುತ್ತಿದ್ದು, ತರಬೇತಿಯ ನಂತರ ಉದ್ಯೋಗ ಒದಗಿಸಿಕೊಡುವ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದರು. ಹಣ ನೀಡಿ ಎಂಟು […]

ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ : ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್

Monday, October 28th, 2013
ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ : ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್

ಮಂಗಳೂರು : ದೇಶದಲ್ಲಿ ಪ್ರಜಾಪ್ರಭುತ್ವವೆಂದರೆ ಬಹುಸಂಖ್ಯಾತರ ಆಳ್ವಿಕೆ ಎಂದಾಗಿದೆ. ಬಹುಸಂಖ್ಯಾತ ರಾಗಿರುವ ಕೋಮುವಾದಿ ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಸಂಘಟನೆಗಳು ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವಲ್ಲಿ ತೊಡಗಿರುವುದಾಗಿ ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದರು. ನಗರದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಮುಸ್ಲಿಂ ಸಮುದಾಯದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆರ್‍ಎಸ್‍ಎಸ್‍ನಂ ತಹ ಕೋಮುವಾದಿ ಹಿಂದುತ್ವ […]

ಕುದ್ರೋಳಿ ದೇವಸ್ಥಾನದಲ್ಲಿದ್ದ ಮಹಿಳಾ ಅರ್ಚಕಿಯರು ನಾಪತ್ತೆ

Monday, October 28th, 2013
Mahila Archakiyaru

ಮಂಗಳೂರು : ಕುದ್ರೋಳಿ ದೇಗುಲದಲ್ಲಿ ಮಹಿಳಾ ಅರ್ಚಕಿಯರಾಗಿ ನೇಮಕಗೊಂಡಿದ್ದ ಇಬ್ಬರು ವಿಧವೆಯರು  ಕಳೆದ ಒಂದು ವಾರದಿಂದ ದೇವಸ್ಥಾನದ ಆವರಣದಲ್ಲಿ ಕಾಣಿಸುತ್ತಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಕ ಮಾಡುವ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದೇನೆ ಎಂದು ಹೇಳಿದ್ದ ಜನಾರ್ದನ ಪೂಜಾರಿ ಇದರಿಂದ ಸಾಕಷ್ಟು ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವಾರು ಮಂದಿ ಪತ್ರಿಕೆಗೆ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ಮಹಿಳಾ ಅರ್ಚಕಿಯರು ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತ […]

ಪುನೀತ್, ರಮ್ಯಾ ಅತ್ಯುತ್ತಮ ನಟ, ನಟಿ

Saturday, October 26th, 2013
best-actor

ಬೆಂಗಳೂರು : ಜಾಕಿ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮತ್ತು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಾಯಕಿ ಹಾಗೂ ಲೋಕಸಭೆ ಸದಸ್ಯೆ ರಮ್ಯಾ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಸಚಿವ ಸಂತೋಷ್‌ಲಾಡ್  ಶುಕ್ರವಾರ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ  ಹಿರಿಯ ನಿರ್ದೇಶಕ ಭಗವಾನ್ ಅಧ್ಯಕ್ಷತೆಯಲ್ಲಿನ ಸಮಿತಿ ಪಟ್ಟಿ ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿತು. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ […]

ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಷ್ಟ್ರಪತಿಗೆ ಮನವಿ ಸಲ್ಲಿಸುವ ನಿರ್ಧರ

Saturday, October 26th, 2013
belthangady

ಮಂಗಳೂರು : ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು  ಸಿಬಿಐ ಅಧಿಕಾರಿಗಳಿಗೆ ವಹಿಸಬೇಕೆಂದು ಆಗ್ರಹಿಸಿ ಬೆಳ್ತಂಗಡಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಸಭೆ  ನಡೆಯಿತು. ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಮುಂದಾಳತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಷ್ಟ್ರಪತಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಬೆಳಿಗ್ಗೆಯಿಂದಲೇ ಸಾವಿರಾರು ನಾಗರಿಕರು ಪ್ರತಿಭಟನೆಗೆ ಆಗಮಿ ಸಿದ್ದರು. ತಾಲೂಕಿನ ಎಲ್ಲೆಡೆ ಜನರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸೌಜನ್ಯ ಪ್ರಕರಣದಲ್ಲಿ ಪೊಲೀಸ್ […]

ಉಪ್ಪಳ ಮಣ್ಣಂಗುಳಿ ಸ್ಟೇಡಿಯಂ ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಕೊಲೆ

Saturday, October 26th, 2013
uppala

ಕಾಸರಗೋಡು : ಉಪ್ಪಳದ ಮಣ್ಣಂಗುಳಿ ಮೈದಾನ ಪರಿಸರದ ರಿಯಲ್‌ ಎಸ್ಟೇಟ್‌ ಉದ್ಯಮಿ ಮುತ್ತಲೀಬ್‌ ರಫೀಕ್‌ (38) ಅವರು  ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಗುಂಡು ಹಾರಿಸಿದ್ದರಿಂದಾಗಿ ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಬಡಿದು ಮುಂದಕ್ಕೆ ಸಾಗಿ ನಿಂತಿತು. ಬೆನ್ನಟ್ಟಿ ಬಂದ ತಂಡವೊಂದು ಕಾರಿಗೆ ಹಾನಿಗೊಳಿಸಿದ ಬಳಿಕ ಮುತ್ತಲೀಬ್‌ ಅವರನ್ನು ಕಾರಿನಲ್ಲೇ  ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ 10.30 ರಿಂದ 11 ಗಂಟೆಯ ಮಧ್ಯೆ ನಡೆದಿದೆ. ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಮನೆಯಿಂದ […]

ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ

Friday, October 25th, 2013
hegde

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 46ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ ಗುರುವಾರ ನೆರವೇರಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು  ಮಾತನಾಡಿ ಅಧುನಿಕ ಜಗತ್ತಿನಲ್ಲಿ ಎಷ್ಟೇ ಪರಿವರ್ತನೆಗಳಾದರೂ ನಮ್ಮ ಮೂಲ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮಾಡಬೇಕು. ಈಗ ಜನರಲ್ಲಿ ಧಾರ್ಮಿಕತೆ, ಭಕ್ತಿ ಮತ್ತು ಶ್ರದ್ಧೆ ಹೆಚ್ಚಾಗಿದ್ದು, ಅನೇಕ ದೇವಾಲಯಗಳ ಹಾಗೂ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರವಾಗಿ ಸಾನಿಧ್ಯ ವೃದ್ಧಿಯಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯೇ ದೇವರ ಸೇವೆಯಾಗಿದೆ […]

ನಗರದ ಸಂಘನಿಕೇತನ ಸಭಾಭವನದಲ್ಲಿ ಇಎಸ್ಐ ಉಪ ಪ್ರಾದೇಶಿಕ ಕಚೇರಿ ಉದ್ಘಾಟನೆ

Friday, October 25th, 2013
inogration

ಮಂಗಳೂರು  : ನಗರದ ಸಂಘನಿಕೇತನ ಸಭಾಭವನದಲ್ಲಿ ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಖಾತೆಯ ಕೇಂದ್ರ ಸಹ ಸಚಿವರಾದ ಕೋಡಿಕುನ್ನಿಲ್ ಸುರೇಶ್ ಅವರು ಮಂಗಳೂರು ಇ‌ಎಸ್ ಐ ಸಿ ಉಪ ಪ್ರಾದೇಶಿಕ ಕಚೇರಿಯ ಉದ್ಘಾಟನೆಯನ್ನು ಗುರುವಾರ  ನೆರವೇರಿಸಿದರು . ಉದ್ಯೋಗ ಖಾತೆಯ ಕೇಂದ್ರ ಸಹ ಸಚಿವರಾದ ಕೋಡಿಕುನ್ನಿಲ್ ಸುರೇಶ್ ಅವರು ಮಾತನಾಡಿ ,  ನೂರು ಹಾಸಿಗೆ ವ್ಯವಸ್ಥೆಗಳನ್ನು ಹೊಂದಿರುವ ಸುಸಜ್ಜಿತ ಇಎಸ್ ಐ ಆಸ್ಪತ್ರೆ ಮಂಗಳೂರಿನಲ್ಲಿ 1979ರಿಂದಲೇ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಬೇರೆ ಬೇರೆ ಪ್ರದೇಶಗಳಲ್ಲಿರುವ 9 ಇಎಸ್ ಐ […]

ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಜಿಲ್ಲಾದಿಕಾರಿ ಕಛೇರಿ ಮುತ್ತಿಗೆ

Friday, October 25th, 2013
Campus Front of India

ಮಂಗಳೂರು : ಮಂಗಳೂರು ಯುನಿವರ್ಸಿಟಿ ಮುಂಭಾಗದಿಂದ ಸುಮಾರು 350 ರಷ್ಟು ವಿದ್ಯಾರ್ಥಿಗಳು  ಜನಪ್ರತಿನಿಧಿಗಳ ಅಣಕು ಶವಯಾತ್ರೆ, ನ್ಯಾಯ ತಕ್ಕಡಿ ಪ್ರದರ್ಶನದ ಮೂಲಕ ಧರ್ಮಸ್ಥಳದ ಉಜಿರೆ ಎಸ್‌ಡಿ‌ಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು ಸಿಬಿ‌ಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ರ್ಯಾಲಿ ನಡೆಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಉಜಿರೆ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಒಂದು ವರ್ಷ ಕಳೆದರೂ ನೊಂದ ಹೆತ್ತವರಿಗೆ […]

ಸೌಜನ್ಯ ಪ್ರಕರಣವನ್ನು ಸಿಓಡಿ ತನಿಖೆಗೆ ಆಗ್ರಹಿಸಿ ಬಸವೇಶ್ವರ ವೃತ್ತದ ಎನ್ ಎಚ್ 66ರಲ್ಲಿ ಮಾನವ ಸರಪಳಿ ನಿರ್ಮಿಸಿ ಎಬಿವಿಪಿ ಪ್ರತಿಭಟನೆ

Thursday, October 24th, 2013
protest

ಮಂಗಳೂರು : ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ತನಿಖೆಗೆ ಆಗ್ರಹಿಸಿ ಬಸವೇಶ್ವರ ವೃತ್ತದ ಎನ್ ಎಚ್ 66ರಲ್ಲಿ ಮಾನವ ಸರಪಳಿ ನಿರ್ಮಿಸಿ ಬುಧವಾರ ಎಬಿವಿಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್.ಕೆ, ಉಜಿರೆಯ ಎಸ್.ಡಿ.ಎಂ ಕಾಲೇಜಿನ ದ್ವೀತಿಯ ಪಿ.ಯು.ಸಿ.ಯ ವಿದ್ಯಾರ್ಥಿನಿ ಸೌಜನ್ಯಳನ್ನು ಒಂದು ವರ್ಷದ ಹಿಂದೆ ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿಯ ಕಾಡಿನಲ್ಲಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 2012 ಅಕ್ಟೋಬರ್ 11 ರಂದು ಉಜಿರೆಯಲ್ಲಿ ಸೌಜನ್ಯಾಳ […]