ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಸಂಪೂರ್ಣ ವಿವರ

Monday, March 25th, 2013

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸುಳ್ಯ ಹೊರತುಪಡಿಸಿ ಉಳಿದೆಡೆ ಬಿಜೆಪಿ ಧೂಳೀಪಟವಾಗಿದೆ. ಜೆಡಿಎಸ್, ಸಿಪಿಎಂ, ಎಸ್ ಡಿಪಿಐ ಖಾತೆ ತೆರೆದಿದ್ದರೆ ಹೊಸ ಪಕ್ಷಗಳಾದ ಕೆಜೆಪಿ, ಡಬ್ಲುಪಿಐ, ಬಿಎಸ್ಆರ್ ಹಳೆ ಪಕ್ಷಗಳಾದ ಜೆಡಿಯು, ಸಿಪಿಐ, ಐಎಂಎಲ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಜಿಲ್ಲೆಯ 189 ಸ್ಥಾನಗಳ ಪೈಕಿ ಕಾಂಗ್ರೆಸ್ 108, ಬಿಜೆಪಿ 63, ಜೆಡಿಎಸ್ 6, ಎಸ್ ಡಿಪಿಐ 5, ಸಿಪಿಎಂ 2 […]

ಬಂಟರ ಗುದ್ದಾಟ : ಕೈಯಲ್ಲಿ ಮತ್ತೇ ತಳಮಳ

Monday, March 25th, 2013
Kripa Alva Shakuntala Shetty

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರು ಬಂಟ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕಳೆದ ಅವಧಿಯಲ್ಲಿ ಸುರತ್ಕಲ್ ನಲ್ಲಿ ಅವಕಾಶ ತಪ್ಪಿದ್ದು ಗೊಂದಲಕ್ಕೆ ಕಾರಣವಾಗಿದ್ದು, ಈಗ ಮತ್ತೆ ಅದೇ ಗೊಂದಲ ಮುಂದುವರಿದಿದೆ. ಬಂಟರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಜೋರಾಗಿದೆ. ಆದರೆ ಎಲ್ಲಿ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರು ತಮಗೆ ಅವಕಾಶ ಕೊಡಲೇಬೇಕು ಎಂದು ರಾಜ್ಯ ಮಟ್ಟದಲ್ಲಿ ಹೋರಾಟಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕೂಡ […]

ನಾನ್ ವೆಜ್ ಹುಡುಗಿ ನಮಿತಾಳ ವೆಜ್ ಕತೆ !

Monday, March 25th, 2013

ಮಂಗಳೂರು : ಪಕ್ಕಾ ನಾನ್ ವೆಜ್ ಸ್ಟೇಟಸ್ ನಿಂದ ಬಂದ ಹುಡುಗಿ ಎಂದುಕೊಂಡು ಅವಳ ಕುರಿತು ಗಂಟೆಗಟ್ಟಲೆ ಮಾತನಾಡಿಕೊಂಡರೇ ಅದೆಲ್ಲ ಟೋಟಲಿ ವೇಸ್ಟ್. ನಮಿತಾ ಎನ್ನುವ ಗ್ಲಾಮರ್ ಗೊಂಬೆಗೆ ಹಿಡಿಸುವುದೆಲ್ಲ ವೆಜಿಟೇರಿಯನ್. ವೆಜ್ ನಲ್ಲೂ ಈ ಪಾಟಿ ದೇಹ ಬೆಳೆಸಲು ಸಾಧ್ಯನಾ ಎಂದರೆ ಅದು ಕೂಡ ನಮಿತಾಳಿಂದ ಸಾಧ್ಯ ಎನ್ನುವ ಮಾತು ಬಂದು ಬಿಡುತ್ತದೆ. ಬೇಸಿಕಲಿ ನಮಿತಾ ಗುಜರಾತ್ ಹುಡುಗಿ. ಮನೆಯಲ್ಲಿ ಎಲ್ಲರೂ ನಾನ್ ವೆಜ್ ಐಟಂಗಳನ್ನು ಮುಕ್ಕಿಕೊಂಡು ತಿನ್ನುತ್ತಾರೆ. ಆದರೆ ನಮಿತಾ ಮಾತ್ರ ನಾನ್ ವೆಜ್ […]

ಕಾಲಿವುಡ್ ನಲ್ಲಿ ಕುಡ್ಲದ ಪೊಣ್ಣು !

Monday, March 25th, 2013
Sanchita Shetty

ಮಂಗಳೂರು : ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್ ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..? ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ಮತದಾರ ಬದಲಾಗುತ್ತಿದ್ದಾನೆ ಪಕ್ಷಗಳು ಎಚ್ಚರವಾಗಬೇಕಿದೆ

Monday, March 25th, 2013

ಮಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳನ್ನು ನೋಡಿದರೆ ಮತದಾರ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ನಿರೀಕ್ಷೆಯಂತೆಯೇ ಆಡಳಿತರೂಢ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ನತ್ತ ಮತದಾರ ಒಲವು ತೋರಿದ್ದಾನೆ. ಹಣದ ಹೊಳೆಯೇ ಹರಿದರೂ ಮತದಾರ ಕೆಲವು ಕಡೆಯಾದರೂ ಅದರಿಂದ ಪ್ರಭಾವಿತನಾದಂತೆ ಕಾಣುತ್ತಿಲ್ಲ. ಹಲವು ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾನೆ. ಸಂಘ ಪರಿವಾರದವರು ಅಟ್ಟಹಾಸದಿಂದ ಮೆರೆದ ದಕ್ಷಿಣ ಕನ್ನಡದಲ್ಲಿ ಜನರು ಬಿಜೆಪಿಯನ್ನು ಮಣ್ಣು ಮುಕ್ಕಿಸಿದ್ದಾರೆ. ಮುಖ್ಯಮಂತ್ರಿ […]

ನಿಯಂತ್ರಣದ ಹಂಗಿಲ್ಲದೇ ಮುಂದೆ ನಡೆಯುವ ಸಿಬಿಎಸ್ಇ ಪಠ್ಯಗಳು

Monday, March 25th, 2013
CBSE Cylabase

ಮಂಗಳೂರು : ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಯೊಂದರಲ್ಲಿ ಇತ್ತೀಚೆಗೆ 4ನೇ ಕ್ಲಾಸಿನ ಇಂಗ್ಲಿಷ್ ಭಾಷಾ ಪಠ್ಯದ ಪಾಠವೊಂದನ್ನು ಕೈಬಿಡಲು ಶಾಲೆಯಲ್ಲಿಯೇ ನಿರ್ಧರಿಸಲಾಯಿತು. ಆ ಪಾಠದ ಶೀರ್ಷಿಕೆ `ದಿ ಗೋಸ್ಟ್ ಟ್ರಬಲ್’. ವಿದ್ಯಾರ್ಥಿ ಗಳಿಗೆ ಹೋಂ ವರ್ಕ್ ಮಾಡಲು ದೆವ್ವ ಸಹಕರಿಸುವ ಕತೆ ಆ ಪಾಠದಲ್ಲಿದೆ. ದೆವ್ವಗಳು ಕೂಡ ನಮ್ಮ ಬದುಕಿನಲ್ಲಿ ನೆರವಾಗುತ್ತವೆ ಎಂಬ ವಿಚಾರವನ್ನು ಒಳಗೊಂಡ ಆ ಪಾಠ ಮಕ್ಕಳ ಮನಸ್ಸಿನ ಮೇಲೆ ಅಷ್ಟೇನೂ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಆ ಪಾಠವನ್ನು ಕೈ […]

ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

Monday, March 25th, 2013
Mayor

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ […]

ಸ್ವಪ್ರತಿಷ್ಠೆಯ ಅಖಾಡವಾಗುತ್ತಿರುವ ಬಿಲ್ಲವರ ಯೂನಿಯನ್

Monday, March 25th, 2013
Naveenchandra

ಮಂಗಳೂರು : ಕಳೆದ ಒಂದು ವರುಷದ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವಿರುದ್ಧ ಸಮರ ಸಾರಿರುವ ಬಿಲ್ಲವರು ಈ ಬಾರಿಯೂ ಯೂನಿಯನ್ ಸಭೆಗೆ ಅಡ್ಡಿ ಉಂಟು ಮಾಡಿದ ಘಟನೆ ಮತ್ತೇ ನಡೆದಿದೆ. ಆದರೆ ಈ ಬಾರಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ತಂತ್ರಗಾರಿಕೆ ನಡೆಸಿಯೇ ಸಭೆ ಕರೆದಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದೆ ಕೋರಂ ಕೊರತೆ ಎದುರಿಸಿದರೂ ಸಭೆ ನಡೆದಿದೆ. ಅಖಿಲಭಾರತ ಬಿಲ್ಲವರ ಯೂನಿಯನ್ ಸಭೆ ನಡೆಯುವ ಸಮಯದಲ್ಲಿ ಕಳೆದ ಕೆಲವು ವರುಷದಿಂದ […]

ಆರ್ ಟಿ ಓ ಅಧಿಕಾರಿಗಳ ನಿರ್ಲಕ್ಷ್ಯ: ಲಾರಿಗೆ ಬೈಕ್ ಡಿಕ್ಕಿ, ಸವಾರನ ಸಾವು

Saturday, March 23rd, 2013
Baik accsident near KPT

ಮಂಗಳೂರು : ಆರ್ ಟಿ ಓ ನವರ ನಿರ್ಲಕ್ಷ್ಯದಿಂದಾಗಿ ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರಲ್ಲಿ ಒಬ್ಬ ಮೃತಪಟ್ಟರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ 10 ಗಂಟೆಗೆ ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ ನಡೆದಿದೆ. ಕಬ್ಬಿಣದ ಸರಳುಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ಟ್ರೇಲರ್ ನ್ನು ತಪಾಸಣೆಗೆಂದು ಆರ್ ಟಿಓನವರು ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ  ಸೂಚನಾ ಫಲಕವಿಲ್ಲದೆ ಹಠಾತ್ […]