ಉಡುಪಿ ಕೃಷ್ಣ ಮಠ ಹಾಗೂ ಇತರ ದೇವಸ್ಥಾನಗಳಲ್ಲಿ ಪಂಕ್ತಿಭೇದದ ವಿರುದ್ದ ದಲಿತ ಸಮಿತಿ ಪ್ರತಿಭಟನೆ

Wednesday, July 10th, 2013
Dalith samithi protest

ಮಂಗಳೂರು: ದ.ಕ. ಜಿಲ್ಲಾ ಸಮಿತಿ,  ಸಿಪಿಐಎಂ ಹಾಗೂ ದಲಿತ ಹಕ್ಕುಗಳ ಸಮಿತಿ ವತಿಯಿಂದ ಉಡುಪಿ ಕೃಷ್ಣ ಮಠ ಹಾಗೂ ಸರಕಾರದ ಸ್ವಾಧೀನದಲ್ಲಿರುವ ಇತರ ಸಂಸ್ಥೆಗಳಲ್ಲಿ ಮಡೆಮಡಸ್ನಾನ ಹಾಗೂ ಭೋಜನದಲ್ಲಿ ಪಂಕ್ತಿಭೇದ ನಡೆಸುವುದನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಸಿಪಿಐಎಂ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಮಾತನಾಡಿ ಉಡುಪಿಯ ಪೇಜಾವರ ಶ್ರೀಗಳು ಒಂದೆಡೆ ದಲಿತರ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಾರೆ ಇನ್ನೊಂದೆಡೆ ಕೃಷ್ಣ ಮಠ ದಲ್ಲೆ ಪಂಕ್ತಿಬೇಧ ಮಾಡುತ್ತಾರೆ. ಅರಕೆ […]

ತಲಪಾಡಿಯ ತಚ್ಚಣಿಯಲ್ಲಿ ಮಹಿಳೆಗೆ ಪಿಸ್ತೂಲು ತೋರಿಸಿ ಹಲ್ಲೆ

Wednesday, July 10th, 2013
Talapady shotout

ಮಂಗಳೂರು: ಕೇರಳ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಕೇಶವ್.ಬಿ ಅವರ ಮನೆಯೊಳಗೆ ಮಂಗಳವಾರ ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಪಿಸ್ತೂಲು ತೋರಿಸಿ ಬೆದರಿಸಿ ಅವರಿಗೆ ಹಲ್ಲೆ ನಡೆಸಿದ ಘಟನೆ ತಲಪಾಡಿಯ ತಚ್ಚಣಿ ಸಮೀಪದ ಮಂಡಿ ಕಟ್ಟೆಯಲ್ಲಿ ನಡೆದಿದೆ. ದುಷ್ಕರ್ಮಿಗಳಿಬ್ಬರ ಪೈಕಿ ಓರ್ವ ಏಕಾಏಕಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿದ್ದ  ಸಾಧನಾ ಕೇಶವ್ ಅವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದನು. ಮನೆಯೊಳಗೆ `ಯಾರಿದ್ದಾರೆಂದು’ ಪ್ರಶ್ನಿಸಿದ ಬಳಿಕ ಅವರ ಮೊಬೈಲಿನಿಂದ ತಾನು […]

ಕಾಸರಗೋಡು ಯುವಕನ ಇರಿದು ಕೊಲೆ, ಮೂವರು ವಶಕ್ಕೆ

Wednesday, July 10th, 2013
Sabith murder

ಕಾಸರಗೋಡು: ಮೀಪುಗುರಿಯ  ಜೆ.ಪಿ. ಕಾಲನಿ ಬಳಿ ಜುಲೈ 7ರಂದು ಬಟ್ಟೆ ಅಂಗಡಿ ಉದ್ಯೋಗಿ ಟಿ.ಎ. ಸಾಬಿತ್(19)ರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಭಾನುವಾರ ಬೆಳಗ್ಗೆ ಗೆಳೆಯ ರಶೀದ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಇರಿದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡ ಸಾಬೀತ್  ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಿದೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಅಕ್ಷಯ್ ಮತ್ತು […]

ಬಂಟ್ವಾಳ : ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆ

Wednesday, July 10th, 2013
Aladangady Woman

ಬಿ.ಸಿ.ರೋಡು : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿಂದ ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆಯಾದ ಘಟನೆ ವರದಿಯಾಗಿದೆ. ಕಾಣೆಯಾದವರನ್ನು ಸ್ಥಳೀಯ ನಿವಾಸಿ ಈಶ್ವರ ನಾಯ್ಕ ಎಂಬವರ ಮಗಳು ಶಶಿಕಲಾ (29) ಎಂದು ಗುರುತಿಸಲಾಗಿದೆ. ಗಂಡನ ಮನೆಗೆ ಹೋಗಿ ಬರುತ್ತೇನೆಂದು ತವರು ಮನೆಯಿಂದ ಹೊರಟವರು ಹಿಂದಿರುಗಿ ಮನೆಗೂ ಬಾರದೆ ಗಂಡನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈಕೆಯನ್ನು ಬೆಳ್ತಂಗಡಿಯ ಆಳದಂಗಡಿ ನಿವಾಸಿ ಪ್ರಭಾಕರ್ ಎಂಬಾತನೊಂದಿಗೆ ಎರಡು ತಿಂಗಳ ಹಿಂದಷ್ಟೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಿಂದ ತವರು ಮನೆಗೆ […]

ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆ

Tuesday, July 9th, 2013
Kannady Ajith Hegde

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆಯವರನ್ನು ನೂತನ ಸರಕಾರ ನಿಯುಕ್ತಿಗೊಳಿಸಿದೆ. ಕನ್ನಾಡಿ ಅಜಿತ್ ಹೆಗ್ಡೆಯವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನವೆಂಬರ್ 2011 ರಂದು ಆಧಿಕಾರ ವಹಿಸಿಕೊಂಡಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲಸಮಾಡುವ ಮುನ್ನ ಅಜಿತ್ ಹೆಗ್ಡೆಯವರು ಬೆಂಗಳೂರಿನಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ನಗರ ಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಘಟಕದ ಕಾರ್ಯನಿರ್ವಣಾಧಿಕಾರಿಯಾಗಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ವರ್ಷ […]

ಎ.ಜೆ. ಆಸ್ಪತ್ರೆ ಯಲ್ಲಿ ಚರ್ಮದ ಕ್ಯಾನ್ಸರ್ ಗೆ ಯಶಸ್ವೀ ಎಲೆಕ್ಟ್ರಾನ್ ಥೆರಪಿ

Tuesday, July 9th, 2013
Aj Hospital electron therapy

ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಪ್ರಪ್ರಥಮ ಬಾರಿಗೆ ಚರ್ಮದ ಕ್ಯಾನ್ಸರ್ ಗೆ ಎಲೆಕ್ಟ್ರಾನ್ ಥೆರಪಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. 78 ವರ್ಷದ ಮಹಿಳೆಯೋರ್ವರು ಒಂದು ವರ್ಷದಿಂದ ಕತ್ತಿನ ಭಾಗದಲ್ಲಿ ಹುಣ್ಣಿನಿಂದ ಕೂಡಿದ ಕಲೆಯಿಂದ ಬಳಲುತ್ತಿದ್ದರು. ಈ ಹುಣ್ಣು ಗುಣವಾಗುತ್ತಿರಲಿಲ್ಲ ಹಾಗೂ ಕಲೆಯು ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ರೋಗಿಯು ಎ.ಜೆ. ಆಸ್ಪತ್ರೆಗೆ ಬಂದಾಗ ಈ ಕಲೆಯು ಅನಿರ್ದಿಷ್ಟ ಆಕಾರವನ್ನು ಹೊಂದಿದ್ದು, 3×3ಸೆ.ಮೀ.ನಷ್ಟು ದೊಡ್ಡದಾಗಿತ್ತು. ಈ ರೋಗಿಗೆ ಎಲೆಕ್ಟ್ರಾನ್ ಚಿಕಿತ್ಸೆಯನ್ನು ಸೂಚಿಸಿ 8 MeVಎಲೆಕ್ಟ್ರಾನ್ ಚಿಕಿತ್ಸೆಯನ್ನು ಇದೇ ಮೇ […]

ಕಣ್ಣೂರಿನ ಗ್ಯಾರೇಜ್ ನಲ್ಲಿ ಗ್ಯಾಸ್ ಸಿಲಿಂಡರ್ ಗೆ ಬೆಂಕಿ, ತಪ್ಪಿದ ಅನಾಹುತ

Tuesday, July 9th, 2013
padil garege

ಮಂಗಳೂರು: ಕಣ್ಣೂರಿನ ಕೊಡಕ್ಕಲ್ ನ ಹಿಂದೂಸ್ತಾನ್ ಅಟೋ ವರ್ಕ್ಸ್ ನಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸಿಲಿಂಡರ್ ಗೆ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳದಿದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಕಾರ್ಬೊಹೈಡ್ರೆಡ್ ಗ್ಯಾಸ್ ಇರುವ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡ ಕೂಡಲೇ ಗ್ಯಾರೇಜ್ ಸಿಬ್ಬಂದಿಗಳೇ  ನೀರು ಹಾಕಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ 40 ನಿಮಿಷ ಕಳೆದರೂ ಘಟನಾ ಸ್ಥಳಕ್ಕೆ ಬರಲಿಲ್ಲ ಎಂದು […]

ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ರಸ್ತೆ ಅಪಘಾತಕ್ಕೆ ಬಲಿ

Tuesday, July 9th, 2013
T G Joy

ಬೆಳ್ತಂಗಡಿ: ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ಟಿ.ಜಿ. ಜೋಯ್(49) ಹಾಸನದ ಬೆಳ್ಳೂರು ಕ್ರಾಸ್ ಬಳಿ ಜುಲೈ 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಚೇತರಿಕೆ ಕಂಡು ಬಾರದೆ ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಪತ್ನಿ, ತಾಯಿ, ಪುತ್ರನನ್ನು ಅಗಲಿದ್ದಾರೆ. ಸಿರಿಯನ್ ಕೆಥೋಲಿಕ್ ಸೊಸೈಟಿ ಅಧ್ಯಕ್ಷರಾಗಿದ್ದ ಜೋಯ್, ಮಲಯಾಳಿ ಕ್ರಿಶ್ಚಿಯನ್ ಅಸೋಶಿಯೇಶನ್ ಉಪಾಧ್ಯಕ್ಷರಾಗಿದ್ದರು. ತಾ.ಪಂ.ಮಾಜಿ ಅಧ್ಯಕ್ಷರಾಗಿ, ಎಪಿಎಂಸಿ […]

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಇಲಾಖೆ ಆದ್ಯತೆ: ಆರೋಗ್ಯ ಸಚಿವ

Tuesday, July 9th, 2013
Primary Health Care Centre inaugurated at Kudupu

ಮಂಗಳೂರು : ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಇರುವ ಆಸ್ಪತ್ರೆಗಳನ್ನೇ ಸುಸ್ಸಜ್ಜಿತಗೊಳಿಸಿ ಜನರಲ್ಲಿ ರೋಗ ರುಜಿನಗಳ ಬಗ್ಗೆ ಜಾಗೃತಿ ಹಾಗೂ ರೋಗ ಮುಕ್ತ ಪರಿಸರ ನಿರ್ಮಾಣ ಆರೋಗ್ಯ ಇಲಾಖೆಯ ಆದ್ಯತೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಯು ಟಿ ಖಾದರ್ ಅವರು ಹೇಳಿದರು. ಅವರು ಸೋಮವಾರ ಕುಡುಪುವಿನಲ್ಲಿ ಒಂದು ಕೋಟಿ ಎರಡು ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಟ್ಟಡಗಳನ್ನು ನಿರ್ಮಿಸಿ, ಅಗತ್ಯ ಶುಶ್ರೂಷಾ ಉಪಕರಣಗಳಿಲ್ಲದ, ನಿರ್ವಹಣೆಯಿಲ್ಲದ ಆಸ್ಪತ್ರೆಗಳ […]

ಕೊಯಿಲ ಸುಲಿಗೆ ಪ್ರಕರಣದ ಆರೋಪಿಯ ಬಂಧನ

Tuesday, July 9th, 2013
Koila Theft case

ಮಂಗಳೂರು : ಜೂನ್ 4 ರಂದು ಪಿರ್ಯಾದುದಾರರಾದ ಶ್ರೀಮತಿ ಲತಾ, ಪ್ರಾಯ: 38 ವರ್ಷ, ಗಂಡ: ಲೋಕೇಶ್, ವಾಸ: ಕುರುವಳಿಕೆ ಮನೆ, ಕೊಯಿಲ ಗ್ರಾಮ, ಪುತ್ತೂರು ತಾಲೂಕು. ಎಂಬವರು ಕಡಬ ಪೊಲೀಸ್ ಠಾಣೆಗೆ  ಪಿರ್ಯಾದನ್ನು ನೀಡಿದ್ದು ಸಾರಾಂಶವೇನೆಂದರೆ ದಿನಾಂಕ: 04.06.2013ರಂದು  ಮಧ್ಯಾಹ್ನ 12:30 ಗಂಟೆ ಸಮಯಕ್ಕೆ ಪಿರ್ಯಾಧಿದಾರರು ಬೀಡಿಯನ್ನು ಬೀಡಿ ಬ್ರಾಂಚ್ಗೆ ಕೊಟ್ಟು, ಪುತ್ತೂರು ತಾಲೂಕು, ಕೊಯಿಲ ಗ್ರಾಮದ, ಕೆ.ಸಿ ಫಾರ್ಮ್ ಬಳಿ ಇರುವ ನೀಲಮೆ ಎಂಬಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯು […]