ಕಾಪು : ರಸ್ತೆ ಅಪಘಾತ ದಂಪತಿ ಸಾವು

Wednesday, May 22nd, 2013
bike bus accident Kaup

ಕಾಪು : ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನ ಚಾಲಕ ಟ್ಯಾಂಕರೊಂದನ್ನು ಹಿಂದಿಕ್ಕುವ ಭರದಲ್ಲಿ ಕೈನೆಟಿಕ್‌ ಹೋಂಡಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಹಳೇ ಮಾರಿಗುಡಿ ದೇವಸ್ಥಾನದ ಮುಂಭಾಗದ ದ್ವಾರದ ಬಳಿ ನಡೆದಿದೆ. ಮೃತರು ಕಾಪು ಪಡು ಗ್ರಾಮದ ತೆಂಕುಕರೆ ಹೊಸಮನೆಯ ಬಾಲಕೃಷ್ಣ ಶೆಟ್ಟಿ(50), ಮತ್ತು ಅವರ ಪತ್ನಿ ಮಮತಾ ಶೆಟ್ಟಿ (40).  ಮೃತ ಬಾಲಕೃಷ್ಣ   ಕುರ್ಕಾಲು -ಸುಭಾಶ್ ನಗರದಲ್ಲಿ ಜೀನಸು ವ್ಯಾಪಾರ ನಡೆಸುತ್ತಿದ್ದು, ಮಂಗಳವಾರ ದಂಪತಿ ಕುರ್ಕಾಲುವಿನಿಂದ ಕಾಪು […]

ಜೆ.ಆರ್ ಲೋಬೊ ರಿಂದ ಮತದಾರರಿಗೆ ಕೃತಜ್ಗ್ಯತೆ ಸಲ್ಲಿಸುವ ವಿಜಯೋತ್ಸವ ಮೆರವಣಿಗೆ

Wednesday, May 22nd, 2013
J R Lobo Vijayotsava rally

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ತಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ನತೆ ಸಲ್ಲಿಸುವ ಹಿನ್ನಲೆಯಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.  ಮೆರವಣಿಗೆಯು ಸಿಗ್ನಲ್ ವೃತ್ತದ ಮೂಲಕ ಬಲ್ಮಠ ಮಾರ್ಗವಾಗಿ ಕದ್ರಿ, ನಂತೂರು ಮೂಲಕ ಸಾಗಿ ಕುಲಶೇಖರ ಕೋರ್ಡಲ್ ಚರ್ಚ್ ಹಾಲ್ ನಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು. ಗೊಂಬೆ ಕುಣಿತ, ವೈವಿಧ್ಯ ವೇಷಧಾರಿಗಳು ಮೆರವಣಿಗೆಗೆ ಮೆರುಗು ನೀಡಿದವು. ಕಾಂಗ್ರೆಸ್ ಮುಖಂಡರಾದ […]

ಮಂಗಳೂರು- ಜಮ್ಮುತಾವಿ ನವಯುಗ್ ಎಕ್ಸ್ ಪ್ರೆಸ್ ನ ವಿಶೇಷ ಕೋಚ್‌ ಸೌಲಭ್ಯಕ್ಕೆ ಡಾ| ಕೆ. ಜಯಂತ್‌ ಮುರಳಿ ಚಾಲನೆ

Tuesday, May 21st, 2013
Jammu Tavi Navyug Express

ಮಂಗಳೂರು : ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂಧಿಗಳಿಗೆ ರೈಲು ಸಂಚಾರದಲ್ಲಿ ವಿಶೇಷ ಕೋಚ್ ಗಳನ್ನು ವ್ಯವಸ್ಥೆ ಗೊಳಿಸಲಾಗಿದ್ದು, ಸೋಮವಾರ ಇಂತಹ ವಿಶೇಷ ರೈಲು ಬೋಗಿಯ ವ್ಯವಸ್ಥೆಯನ್ನು ಒಳಗೊಂಡಿರುವ ಮಂಗಳೂರು- ಜಮ್ಮುತಾವಿ ನವಯುಗ್ ಎಕ್ಸ್ ಪ್ರೆಸ್ ನ ವಿಶೇಷ ಬೋಗಿಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸಿಐಎಸ್‌ಎಫ್‌ ದಕ್ಷಿಣ ವಲಯ ಮಹಾನಿರೀಕ್ಷಕ ಡಾ| ಕೆ. ಜಯಂತ್‌ ಮುರಳಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಿಐಎಸ್‌ಎಫ್‌, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ ಹಾಗೂ ಅಸ್ಸಾಂ ರೈಫಲ್ಸ್‌ನ ಸಿಬಂದಿ […]

ರಾಜ್ಯ ಹೆದ್ದಾರಿ ಆಲಂಕಾರು ಬಳಿ ಅಪಘಾತ, ಬೈಕ್ ಸಹಸವಾರನ ಸಾವು, ಸವಾರ ಗಂಭೀರ

Tuesday, May 21st, 2013
Alankaru bike accident

ಪುತ್ತೂರು : ಸೋಮವಾರ ಮಧ್ಯಾಹ್ನ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪ ಮಾಯಿಲ್ಗ ಎಂಬಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟಿದ್ದು, ಬೈಕ್ ಸವಾರ ಗಂಬೀರವಾಗಿ ಗಾಯಗೊಂಡಿದ್ದಾರೆ. ಆಲಂಕಾರು ಗ್ರಾಮದ ಕೇಪುಳು ದಿ.ಕೃಷ್ಣಪ್ಪ ಪೂಜಾರಿ ಅವರ ಪುತ್ರ ದಿವಾಕರ (30) ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ದಿವಾಕರ ಮತ್ತು ಅವರ ಸಹೋದರ ದಿನೇಶ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ನಿಮಿತ್ತ ಆಲಂಕಾರಿನಿಂದ ಕುಂತೂರು ಕಡೆ ಹೊರಟ್ಟಿದ್ದು ಬೈಕ್ ಮಾಯಿಲ್ಗ ಸಮೀಪದ ತಿರುವುನಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ […]

ತಂದೆಯ ಅನಾರೋಗ್ಯದಿಂದ ನೊಂದ ಪುತ್ರಿ ಆತ್ಮಹತ್ಯೆ, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

Monday, May 20th, 2013
Willetha Lima Lobo

ಮಂಗಳೂರು : ನಗರದ ಕಾವೂರು ಬಳಿಯ ಬೊಲ್ಪುಗುಡ್ಡೆ ನಿವಾಸಿ ವಿಲೆಟ ಲಿಮಾ ಲೋಬೊ(26) ಎಂಬಾಕೆ ತನ್ನ ತಂದೆಯ ಅನಾರೋಗ್ಯದಿಂದ ತೀವ್ರವಾಗಿ ನೊಂದು ತನ್ನ ಸ್ವ ಗೃಹದಲ್ಲಿ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ವಿಲೆಟ ರ ತಂದೆ ವಾಲ್ಟರ್ ಲೋಬೊ ವಾರದ ಹಿಂದೆ ಮಲೇರಿಯಾಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ವಾಲ್ಟರ್ ಲೋಬೊ ರಿಗೆ ರಕ್ತದ  ಅವಶ್ಯಕತೆ ಇದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ತೆರಳಿದ ವಾಲ್ಟರ್ ಲೋಬೊ […]

ಹಿರಿಯ ನಾಯಕರ ಸಲಹೆ ಮೇರೆಗೆ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಯು.ಟಿ.ಖಾದರ್

Monday, May 20th, 2013
UT Khader

ಮಂಗಳವಾರ : ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ಸರ್ಕಾರದ ನೂತನ ಸಚಿವ ಯು.ಟಿ.ಖಾದರ್ ರವರನ್ನು ಪಕ್ಷದ ಮುಖಂಡರು, ಅಪಾರ ಸಂಖ್ಯೆಯಲ್ಲಿ ನೆರೆದ ಕಾರ್ಯಕರ್ತರು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲೆ ನಂಬಿಕೆ ಇಟ್ಟು ಸಚಿವ ಸ್ಥಾನದ ಜವಾಬ್ದಾರಿಯನ್ನು ನೀಡಿದ್ದು, ಈ ಹುದ್ದೆಯನ್ನು ಸಮರ್ಪಕವಾಗಿ ಮತ್ತು ಪ್ರಾಮಾಣಿಕನಾಗಿ ನಿರ್ವಹಿಸುವುದಾಗಿ ಅವರು ಹೇಳಿದರು. ಜೊತೆಗೆ ಹಿರಿಯ ನಾಯಕರ ಸಲಹೆ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಶಕ್ತಿಮೀರಿ […]

ಸಿದ್ದರಾಮಯ್ಯ ಸಚಿವ ಸಂಪುಟ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರಿಂದ ಪ್ರಮಾಣ ವಚನ ಸ್ವೀಕಾರ

Saturday, May 18th, 2013
Ministers

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಚನೆಯಾದ, 28 ಸಚಿವರನ್ನೊಳಗೊಂಡ ಸಚಿವ ಸಂಪುಟ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗ ಹೀಗೆ ಎಲ್ಲಾ ಸಮುದಾಯಗಳಿಗೂ ಸಾಮಜಿಕ ನ್ಯಾಯವನ್ನು ಒದಗಿಸಿದ್ದಾರೆ.  ಬೆಳಗ್ಗೆ 10.30 ಕ್ಕೆ ಸರಿಯಾಗಿ ರಾಜ್ಯಪಾಲರ ರಾಜಭವನದ ಗಾಜಿನ ಮನೆಯಲ್ಲಿ ಹಲವು ಗಣ್ಯರು ಮತ್ತು ಶಾಸಕರ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರು […]

1964 ರ ಗೋ ಹತ್ಯೆ ಕಾಯ್ದೆಯನ್ನು ಜಾರಿಗೆ ತಂದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು: ಬಿ.ಮಂಜುನಾಥ ಮಂಡ್ಯ

Saturday, May 18th, 2013
Manjunath Mandya

ಮಂಗಳೂರು : ಹೊಸದಾಗಿ ಅಧಿಕಾರಕ್ಕೆ ಬಂದ  ಕಾಂಗ್ರೆಸ್ ಸರ್ಕಾರವು ಗೋ ಹತ್ಯೆ ನಿಷೇದ ಕಾಯ್ದೆಯನ್ನು ಹಿಂದೆ ಪಡೆಯುವ ಉದ್ದೇಶ ಹೊಂದಿದ್ದು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯುಂಟುಮಾಡಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಬಿ.ಮಂಜುನಾಥ್ ಮಂಡ್ಯ ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರವು ಗೋ ಹತ್ಯೆ ಕಾಯ್ದೆಯನ್ನು ಹಿಂದೆ ಪಡೆದಿದೆ ಮತ್ತು ಮಠಗಳಿಗೆ ನೀಡಿದ್ದ ದೇಣಿಗೆಯನ್ನು ಹಿಂಪಡೆದಿದೆ. ಇದು ಬಹುಸಂಖ್ಯಾತರಾದ ಹಿಂದೂಗಳ ಭಾವನೆಗೆ ದಕ್ಕೆಯುಂಟು ಮಾಡುವ ಅಲ್ಪಸಂಖ್ಯಾತರನ್ನು […]

ನಿಡ್ಡೋಡಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಭೇಟಿ, ಗ್ರಾಮಸ್ಥರ ವಿರೋಧ

Friday, May 17th, 2013
Niddodi power project

ಮೂಡುಬಿದಿರೆ : ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ದೊಡ್ಡದಾದ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಂಬಂಧಪಟ್ಟಂತೆ  ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ವಿಷಯ ತಿಳಿದ ನಿಡ್ಡೋಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು. ಗುರುವಾರ ಸುಮಾರು 11ಗಂಟೆಗೆ ಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ ಅವರ ನೇತೃತ್ವದಲ್ಲಿ  ಆಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿರಲಿಲ್ಲ. ಆದರೆ ಗ್ರಾಮ ಕರಣಿಕರು ಊರಲ್ಲಿ […]

ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಯು.ಬಿ.ರಾಜಲಕ್ಷ್ಮಿ ಯವರಿಗೆ ಡಿ.ಲಿಟ್ ಪದವಿ ಪ್ರಧಾನ

Friday, May 17th, 2013
U B Rajalakshmi

ಉಡುಪಿ : ಕನ್ನಡ ’ತರಂಗ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಯು.ಬಿ.ರಾಜಲಕ್ಷ್ಮಿ ಯವರಿಗೆ ಹಂಪಿ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಯು.ಬಿ ರಾಜಲಕ್ಷ್ಮಿ ಯವರ ’ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ- ಒಂದು ಗುಣಾತ್ಮಕ ಅಧ್ಯಯನ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಡಾಕ್ಟರ್‌ ಆಫ್ ಲಿಟರೇಚರ್‌ ಪದವಿ ನೀಡಲಾಗಿದೆ.  ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಡಿ.ಲಿಟ್‌. ಪದವಿ ಪಡೆದ ಮೊದಲ ಮಹಿಳೆ  ಎಂಬ ಹೆಗ್ಗಳಿಕೆಗೆ ರಾಜಲಕ್ಷ್ಮಿ ಪಾತ್ರರಾಗಿದ್ದಾರೆ.