ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಪ್ತಾಹ 2011

Sunday, October 2nd, 2011
wild life week at Pilikula

ಮಂಗಳೂರು : ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಪ್ತಾಹ 2011, ವನ್ಯಜೀವಿ ವಾಸಗೃಹಗಳ ಮತ್ತು ಕರ್ಣಾಟಕ ಬ್ಯಾಂಕ್‌ ವತಿಯಿಂದ ನಿರ್ಮಿಸಲಾದ ‘ವಿಶ್ರಾಂತಿ ಕುಟೀರ’ವನ್ನು ಶನಿವಾರ ಸಚಿವ ಜೆ. ಕೃಷ್ಣ ಪಾಲೆಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪಿಲಿಕುಳ ನಿಸರ್ಗಧಾಮಕ್ಕೆ ಅಪರೂಪದ ಹೊಸ ಪ್ರಾಣಿಗಳನ್ನು ತರಲು ಆದೇಶ ಮಂಜೂರಾಗಿದೆ. ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಸರಕಾರ 43 ಲಕ್ಷ ರೂ. ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು. […]

ಎಬಿವಿಪಿ ಕಾರ್ಯ ಕರ್ತನಿಂದ ಸಚಿವ ವಿ. ಸೋಮಣ್ಣ ನವರಿಗೆ ಚಪ್ಪಲಿ ಸೇವೆ

Saturday, October 1st, 2011
V Somanna

ಬೆಂಗಳೂರು  : ನೂತನ ಮುಖ್ಯಮಂತ್ರಿ ಡಿ.ವಿ ಸದಾನಂದ  ಗೌಡರ ಸಂಪುಟದಲ್ಲಿ ಸ್ಥಾನ ಪಡೆದ ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ  ಎಬಿವಿಪಿ ಕಾರ್ಯಕರ್ತನೊರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಧಾನಸೌಧದ ಅಂಗಳದಲ್ಲಿಯೇ (ಅ.1) ಇಂದು ನಡೆಯಿತು. ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ. ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೆಳ್ಳಿರಥ ಮಂದಿರ ಉದ್ಘಾಟನೆ

Saturday, October 1st, 2011
Kudroli-chriot

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಬೆಳ್ಳಿರಥ ಮಂದಿರವನ್ನು ಶುಕ್ರವಾರ ಸಚಿವ ಬಿ. ಜನಾರ್ದನ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶತಮಾನದ ಹಿಂದೆ ಸ್ಥಾಪಿಸಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯವರ ಆಶಯದಂತೆ ಕ್ಷೇತ್ರವು ಸಮಾಜದ ಸರ್ವರಿಗೂ ಆತ್ಮವಿಶ್ವಾಸ ನೀಡುವ ಶ್ರದ್ಧಾಕೇಂದ್ರವಾಗಿದೆ ಎಂದರು. ದೇಶವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕ್ಷೇತ್ರವು ಧಾರ್ಮಿಕ ಆಚರಣೆಗಳ ಜತೆಗೆ ಸಮಾಜದ ಅಗತ್ಯಗಳಿಗೂ ಸ್ಪಂದಿಸುತ್ತಿದೆ. ಅದರ ಜೊತೆಗೆ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದು ಪೂಜಾರಿ ವಿವರಿಸಿದರು. ಜಯ ಸಿ. ಸುವರ್ಣ, ಕೆ.ಪಿ. […]

ಸ್ಪೈಸ್‌ಜೆಟ್‌ ಮಂಗಳೂರು-ಹೈದರಾಬಾದ್‌ ಪ್ರಯಾಣ ದರ ರೂ. 1,499

Saturday, October 1st, 2011
Spice Jet

ಮಂಗಳೂರು: ಸ್ಪೈಸ್‌ಜೆಟ್‌ ಲಿಮಿಟೆಡ್‌ ಮಂಗಳೂರು-ಹೈದರಾಬಾದ್‌ ನಡುವೆ ವಿಮಾನ ಸಂಚಾರವನ್ನು ನೂತನ ಅತ್ಯಾಧುನಿಕ Q – 400 ವಿಮಾನದೊಂದಿಗೆ ಶುಕ್ರವಾರ ಆರಂಭಿಸಿತು.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ವಿ. ರಾಜಾ ಮೊದಲ ವಿಮಾನ ಹೈದರಾಬಾದ್‌ನಿಂದ ಮಧ್ಯಾಹ್ನ 1 ಗಂಟೆಗೆ ನಿರ್ಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.40ಕ್ಕೆ ಇಳಿಯಲಿದೆ. ಮೊದಲ ವಿಮಾನದಲ್ಲಿ ಹೈದರಾಬಾದ್‌ನಿಂದ 67 ಮಂದಿ ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದು ಇಲ್ಲಿಂದ 73 ಮಂದಿ ತೆರಳಿದ್ದಾರೆ ಎಂದರು.ಈ ಮಾರ್ಗದಲ್ಲಿ ನಿತ್ಯ ಎರಡು ಸಂಚಾರ ನಡೆಸಲಿದೆ. ಮಂಗಳೂರು- ಹೈದರಾಬಾದ್‌ […]

ಪಂಜಿಮೊಗರುವಿನ ತಾಯಿ-ಮಗಳ ಜೋಡಿ ಕೊಲೆ ಓರ್ವ ಆರೋಪಿಯ ಬಂಧನ

Saturday, October 1st, 2011
Double Murder

ಮಂಗಳೂರು : ಮಂಗಳೂರಿನ ಪಂಜಿಮೊಗರುವಿನಲ್ಲಿ ನಡೆದಿದ್ದ ತಾಯಿ-ಮಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ರೈಲ್ವೇ ನಿಲ್ದಾಣದ ಹೊಟೇಲೊಂದರಿಂದ   ಗುರುವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಮೊದಲ ಆರೋಪಿ ಮೂರು ತಿಂಗಳ ನಂತರ ಸೆರೆ ಸಿಕ್ಕಂತಾಗಿದೆ. ಸಕಲೇಶ ಪುರದ ಹಮೀದ್ (35)ಎಂಬಾತನನ್ನು ಕುಂಬಳೆ ಪೊಲೀಸರು ಪ್ರಕರಣಕ್ಕೆ ಸಂಬಂದಿಸಿದಂತೆ ವಶಕ್ಕೆ ಪಡೆದು ಕೊಂಡಿದ್ದಾರೆ. ಬಂಧನ ಮಾಹಿತಿ ಲಭಿಸಿದ ತಕ್ಷಣ ಮಂಗಳೂರು ಫೊಲೀಸರು ಕುಂಬಳೆ ಠಾಣೆಗೆ ತೆರಳಿ ಅಲ್ಲಿಂದ ಹಮೀದ್‌ನನ್ನು ಮಂಗಳೂರಿಗೆ ಕರೆತಂದಿದ್ದಾರೆ. ಈತ ಒಂದು ತಿಂಗಳ ಹಿಂದೆ […]

ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ಹೈಕೋರ್ಟ್ ತಡೆ

Friday, September 30th, 2011
BS Yeddyurappa

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅದರೆ ಯಡಿಯೂರಪ್ಪ ವಿರುದ್ಧ ಇರುವ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತಡೆಯಾಜ್ಞೆ ಪ್ರಶ್ನಿಸಲು ಸಿರಾಜಿನ್ ಬಾಷಾ ನಿರ್ಧರಿಸಿದ್ದಾರೆ. ಸಿರಾಜಿನ್ ಪರ ವಕೀಲ ಹೇಮಂತ ರಾಜು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಎರಡು ಮೂರು ದಿನಗಳಲ್ಲಿ ಪ್ರಕರಣದ ವಿಚಾರಣೆ ಬರುವ […]

ಮಲ್ಲೇಶ್ವರಂನಲ್ಲಿ ಸರಗಳ್ಳರನ್ನು ಹಿಡಿದ ಜಗ್ಗೇಶ್

Friday, September 30th, 2011
jaggesh

ಬೆಂಗಳೂರು : ಮಲ್ಲೇಶ್ವರಂನಲ್ಲಿ ಯುವತಿಯೊಬ್ಬಳ ಸರ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಸರಗಳ್ಳರನ್ನು ನವರಸನಾಯಕ ನಟ ಜಗ್ಗೇಶ್ ಮತ್ತು ಅವರ ಕಾರಿನ ಚಾಲಕ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬಂಧಿತರು ಶೇಷಾದ್ರಿಪುರಂ ಹಾಗೂ ಆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಮಲ್ಲೇಶ್ವರಂ ಹನ್ನೊಂದನೆ ಅಡ್ದರಸ್ತೆಯಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಸಂಜೆ 6 ರ್ ಹೊತ್ತಿಗೆ ಕಾಲೇಜು ಮುಗಿಸುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸರ […]

ಕೊಪ್ಪಳ ಕರಡಿ ಸಂಗಣ್ಣ ವಿಜಯ

Thursday, September 29th, 2011
ಕೊಪ್ಪಳ ಕರಡಿ ಸಂಗಣ್ಣ ವಿಜಯ

ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜ ಕೆ. ಹಿಟ್ನಾಳ್ ಎರಡನೇ ಸ್ಥಾನ ಗಳಿಸಿದ್ದರೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು […]

ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ‘ಮಂಗಳೂರು ದಸರಾ’ಕ್ಕೆ ಚಾಲನೆ

Thursday, September 29th, 2011
Kudroli Temple

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ವರ್ಷಂಪ್ರತಿ ಜರಗುವ ವೈಭವದ ‘ಮಂಗಳೂರು ದಸರಾ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ನಡೆಯಿತು.ಉದ್ಯಮಿ ರಮೇಶ್‌ ಕುಮಾರ್‌ ಹಾಗೂ ಊರ್ಮಿಳಾ ರಮೇಶ್‌ ಕುಮಾರ್‌ ದಂಪತಿ ಪ್ರತಿಷ್ಠಾಪನಾ ದೀಪವನ್ನು ಬೆಳಗಿದರು. ಶಾರದೆಯ ವಿಗ್ರಹವನ್ನು ಕ್ಷೇತ್ರಕ್ಕೆ ಪ್ರದಕ್ಷಿಣೆ ಮಾಡಿ ನಂತರ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 11.35ಕ್ಕೆ ನವದುರ್ಗೆಯರು ಹಾಗೂ ಶಾರದೆಯ ವಿಗ್ರಹವನ್ನು ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸುವ ಮೂಲಕ ಮುಂದಿನ […]

ಸದ್ಯದಲ್ಲೇ ದುಬಾರಿಯಾಗಲಿರುವ ಆಟೋರಿಕ್ಷಾ ಪ್ರಯಾಣ ದರ

Thursday, September 29th, 2011
Channappa-Gowda

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌.ಎಸ್‌. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ಹಿನ್ನಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಆಟೋರಿಕ್ಷಾ ಚಾಲಕರ ಸಂಘಟನೆಗಳ ಪ್ರತಿನಿಧಿಗಳು, ಅಟೋ ಚಾಲಕರು, ಮಾಲಕರು, ಹಾಗೂ ಬಳಕೆ ದಾರರು ಭಾಗವಹಿಸಿದ್ದರು. ಪೆಟ್ರೋಲ್‌ ದರ ಏರಿದೆ. ಖರ್ಚು ಶೇ. 40ರಷ್ಟು ಏರಿಕೆಯಾಗಿದೆ. ಕನಿಷ್ಠ ಪ್ರಯಾಣ ದರ ಮತ್ತು ಪ್ರತೀ ಕಿ.ಮೀ. ಗೆ ಈಗ ಇರುವ ದರವನ್ನು […]