Blog Archive

ದಕ: ಜೆಲ್ಲಿ ಕ್ರಶರ್ಗಳ ಎತ್ತಂಗಡಿ !

Wednesday, March 6th, 2013

ಮಂಗಳೂರು : ಧೂಳು ಮೂಲಕ ಪರಿಸರ ಹಾನಿ ಮಾಡುವ ಜೆಲ್ಲಿ ಕಲ್ಲು ಪುಡಿ ಮಾಡುವ ಕ್ರಶರ್ ಉದ್ಯಮ ಸ್ಥಗಿತೊಳಿಸಿ, ಸುರಕ್ಷಿತ ವಲಯದಲ್ಲಿ ಸ್ಥಾಪಿಸಬೇಕು ಎಂಬ ರಾಜ್ಯ ಹೈಕೋರ್ಟ್ ಆದೇಶದಂತೆ ರೂಪಿಸಿದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ ವಿಧೇಯಕದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪ್ರಥಮ ಹಂತದಲ್ಲಿ  12 ಸುರಕ್ಷಿತ ವಲಯ ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಪಡುಕೊಣಾಜೆ, ಕಡಂದಲೆ, ಪುಚ್ಚಮೊಗರು, ಐಕಳದ ಮೂರು ಕಡೆ ಮತ್ತು ನೆಲ್ಲಿಕಾರಿನ ಎರಡು ಕಡೆ, ಪುತ್ತೂರು ತಾಲೂಕಿನ ಕಬಕ, ಬೆಳ್ತಂಗಡಿಯ ಅಂಡಿಂಜೆ, […]

ಜೆಡಿಎಸ್ ನಿಂದ ಜಿಲ್ಲೆಯಲ್ಲಿ ನೂತನ ಎಚ್.ಡಿ.ಕೆ. ಯುವಸೇನೆ ಸ್ಥಾಪನೆ

Tuesday, March 5th, 2013
HDK Yuva Sene launch

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್.ಡಿ.ಕೆ. ಯುವಸೇನೆಯನ್ನು ಸ್ಥಾಪಿಸಲಾಗಿದ್ದು, ಇದರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ತನ್ನನ್ನು ಎಚ್.ಡಿ.ಕುಮಾರ ಸ್ವಾಮಿಯವರ ಶಿಫಾರಸ್ಸಿನಂತೆ , ಸೇನೆಯ ರಾಜ್ಯಾಧ್ಯಕ್ಷ ಶರಣ್ ಗೌಡರವರು ಆಯ್ಕೆ ಮಾಡಿರುವುದಾಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್ ಪ್ರಭಾಕರ್ ರವರು ತಿಳಿಸಿದರು. ನಗರದಲ್ಲಿ  ಇಂದು ಈ ವಿಚಾರ ವಾಗಿ ನಡೆದ ಪತ್ರಿಕಾ ಘೋಷ್ಠಿ ಯಲ್ಲಿ ಈ ಕುರಿತು ಮಾತನಾಡಿದ ಅವರು ಎಚ್.ಡಿ. ಕುಮಾರಸ್ವಾಮಿಯವರ ಆದರ್ಶ, ತತ್ವ ನಿಲುವು, ಬಡವರ ಪರ ಕಾಳಜಿ ಇವೆಲ್ಲವನ್ನು ಯುವಕರಲ್ಲಿ ಮೈಗೂಡಿಸುವ […]

ಲೋಕಲ್ ಇಲೆಕ್ಷನ್ : ಆಕಾಂಕ್ಷಿಗಳಿಗೆ ಇಂಜೆಕ್ಷನ್!

Tuesday, February 26th, 2013
Mangalore City Corporation

ಮಂಗಳೂರು : ರಾಜ್ಯ ಸರಕಾರ ಮತ್ತು ಎಲ್ಲ ಪಕ್ಷಗಳ ಕಸರತ್ತಿನ ಮಧ್ಯೆಯೂ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಲೋಕಲ್ ಇಲೆಕ್ಷನ್ ಗೆ ದಿನಾಂಕ ನಿಗದಿಪಡಿಸಿದೆ. ಅದು ವಿವಿಧ ಪಕ್ಷಗಳ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಇಂಜೆಕ್ಷನ್ ಚುಚ್ಚಿದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್… ಹೀಗೆ ನಾನಾ ಪಕ್ಷಗಳಲ್ಲೂ ಆಕಾಂಕ್ಷಿಗಳ ಸಾಲು ಉದ್ದಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ, […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ 15 ರಿಂದ ಕಾರ್ಯಾರಂಭಿಸಲಿರುವ ಆಮ್ ಆದ್ಮಿ ಪಾರ್ಟಿ

Thursday, February 14th, 2013
Aam Admi Party

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಲೋಕಪಾಲ ಮಸೂದೆಯೆ ಸೂಕ್ತ ಎಂದು ಹೇಳಿದ ಆರ್ ಟಿಐ ಕಾರಯಕರ್ತ ಅರವಿಂದ್ ಕೆಜ್ರೀವಾಲರ ಆಮ್ ಆದ್ಮಿ ಪಕ್ಷ ಫೆಬ್ರವರಿ 15 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿದೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಎಸ್. ನಂದಗೋಪಾಲ್ ತಿಳಿಸಿದರು. ಅವರು ನಿನ್ನೆ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಪ್ರಾರಂಭವಾದ ಪಕ್ಷವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ […]

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಶೀಘ್ರ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Monday, February 4th, 2013
Drugs mafia DK

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿದ್ದು,  ಇಡೀ ರಾಜ್ಯದಲ್ಲಿಯೇ ಜಿಲ್ಲೆ  ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ದೆ. ಇಲ್ಲಿ  ಹೊರದೇಶ ಹಾಗೂ ಹೊರರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ಇವರನ್ನು ಕೇಂದ್ರವಾಗಿರಿಸಿಕೊಂಡು ಡ್ರಗ್ ಮಾಫಿಯಾಗಳು ಕಾರ್ಯಾಚರಿಸುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಶೀಘ್ರವೇ ಡ್ರಗ್ಸ್ ಮಾಫಿಯಾವನ್ನು ನಮ್ಮ ಜಿಲ್ಲಾಡಳಿತ ಹಾಗೂ ಸರಕಾರಗಳು ನಿಯಂತ್ರಿಸದೇ ಹೋದಲ್ಲಿ ಯುವಜನತೆ ಅಡ್ಡದಾರಿ ಹಿಡಿಯುವ ಸಾಧ್ಯತೆ ಇದೆ ಎಂದು  ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಹೇಳಿದರು. ಡ್ರಗ್ಸ್ […]

ಸಮವಸ್ತ್ರಕ್ಕಾಗಿ ಪರದಾಡುವ ಪೊಲೀಸರು!

Tuesday, January 29th, 2013
Indian police

ಮಂಗಳೂರು : ಪೊಲೀಸರು ಲಾಠಿಚಾರ್ಜ್ ಮಾಡಿದರು… ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದರು… ಪೊಲೀಸರು ಲಂಚ ಕೇಳಿದರು… ಪೊಲೀಸರು ದರ್ಪದಿಂದ ವರ್ತಿಸಿದರು… ಪೊಲೀಸರು ಹಲ್ಲೆ ಮಾಡಿದರು… ಪೊಲೀಸರು ದೌರ್ಜನ್ಯ ಎಸಗಿದರು… ಹೀಗೆ ಸಾಗುತ್ತದೆ, ಪೊಲೀಸರ ಮೇಲಿನ ಆರೋಪ. ಕೆಲವು ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಹೀಗೆಲ್ಲ ವರ್ತಿಸಿದರೆ ಇನ್ನು ಕೆಲವರಿಗೆ ಜಾತಿ, ಧರ್ಮದ ಅಮಲು ತಗಲಿರುವುದು ಸುಳ್ಳಲ್ಲ. ಹಾಗಂತ ಎಲ್ಲ ಪೊಲೀಸರನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಕೂಡ ಸಮಂಜಸವಲ್ಲ. ಸರಕಾರದ ನೂರಾರು ಇಲಾಖೆಗಳ ಪೈಕಿ ಜನರು ಹೆದರುವುದು ಪೊಲೀಸ್ […]

ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ವಲಯಗಳು ಸುರಕ್ಷಿತವೇ?

Tuesday, January 29th, 2013
coastal industrial zones

ಮಂಗಳೂರು : ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಪ್ರೈಮಸಿ ಇಂಡಸ್ಟ್ರೀಸ್ ನಲ್ಲಿ ಜನವರಿ 10ರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತ ಪ್ರಕರಣವನ್ನು ಗಮನಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ, ಎಯ್ಯಾಡಿ, ಮುಡಿಪು ಇತ್ಯಾದಿ ಕೈಗಾರಿಕಾ ವಲಯಗಳು ಅದೆಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರಿಕ ಸಮಾಜಕ್ಕೆ ಕಾಡುತ್ತಿದೆ. ಯಾಕೆಂದರೆ, ಬೈಕಂಪಾಡಿಯ `ಪ್ರೈಮಸಿ’ಯಲ್ಲಿ ಮೊನ್ನೆ ಕಾಣಿಸಿಕೊಂಡದ್ದು ಅಂತಹ ಬೆಂಕಿ ದುರಂತ. ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಪುತ್ತೂರು, ಉಡುಪಿ ಸಹಿತ 14 ಅಗ್ನಿಶಾಮಕ ದಳದ ವಾಹನಗಳು, ಎಂಸಿಎಫ್, ಎಂಆರ್ ಪಿಎಲ್, ಓಎನ್ ಜಿಸಿಯ […]

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಜನವರಿ 24 ರಂದು ನಗರದಲ್ಲಿ ಮೌನ ಮೆರವಣಿಗೆ

Wednesday, January 23rd, 2013
Walk for Women, Walk for Justice

ಮಂಗಳೂರು : ದೇಶದಲ್ಲಿ ಇತ್ತೆಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಹಿಳೆಯರು ಹಾಗೂ ಯುವತಿಯರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಗುರುವಾರ ಸಂಜೆ ನಗರದಲ್ಲಿ ಮೌನ ಮೆರವಣಿಗೆ ನಡೆಯಲಿದೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆ ಗುಲಾಬಿ ಬಿಳಿಮಲೆ ಅವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ದಕ್ಷಿಣ ಕನ್ನಡ : ಮೊಬೈಲ್ ಟವರ್‌ಗಳಿಂದ ಜನರಲ್ಲಿ ಮಾರಕ ರೋಗ ಡಿಎಚ್‌ಒ

Friday, January 4th, 2013
DHO ZP meet

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೊಬೈಲ್ ಟವರ್‌ಗಳಿಂದ ಆ ವ್ಯಾಪ್ತಿಗೆ ಒಳಪಟ್ಟ ಜನರಲ್ಲಿ ಮಾನಸಿಕ ಖಿನ್ನತೆ, ಬುದ್ಧಿಮಾಂದ್ಯ, ಕ್ಯಾನ್ಸರ್ ರೋಗ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ ಡಾ| ಒ.ಆರ್‌. ಶ್ರೀರಂಗಪ್ಪ ತಿಳಿಸಿದರು. ಗುರುವಾರ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ 10ನೇ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಮೊಬೈಲ್ ಟವರ್‌ ಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಮೊಬೈಲ್ ಟವರ್‌ನಿಂದ 500 […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ಅಧಿಕಾರ ಸ್ವೀಕಾರ

Monday, December 3rd, 2012
N. Prakash Mangalore New DC

ಮಂಗಳೂರು :ಮಂಗಳೂರು ಮಾಜಿ ಜಿಲ್ಲಾದಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ರವರು ನೂತನ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ದ.ಕ.ಜಿಲ್ಲೆಯ 123ನೇ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ರವರು ಅಧಿಕಾರ ವಹಿಸಿಕೊಂಡರು. ಈ ಮೊದಲು ಇವರು ಬೆಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 1955 ರಲ್ಲಿ ಜನಿಸಿದ ಇವರು ನಂಜನಗೂಡಿನಲ್ಲಿ ತನ್ನ ಪದವಿವರೆಗಿನ ಶಿಕ್ಷಣವನ್ನು ಪೂರೈಸಿ ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಇತಿಹಾಸ ವಿಭಾಗದಲ್ಲಿ 2ನೇ ರ್‍ಯಾಂಕ್ ನೊಂದಿಗೆ ಉತ್ತೀರ್ಣರಾಗಿ ನಂತರ ರೇಣುಕಾಚಾರ್ಯ […]