Blog Archive

ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ :ರಮಾನಾಥ ರೈ

Thursday, October 19th, 2017
Ramanath rai

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಒಟ್ಟು 252.50 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 22ರಂದು ಬಂಟ್ವಾಳಕ್ಕೆ ಆಗಮಿಸಲಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೈ, ಈಗಾಗಲೇ ಪೂರ್ಣಗೊಂಡಿರುವ ಒಟ್ಟು ರೂ. 148.29 ಕೋಟಿಯ ಯೋಜನೆಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು, 104.21 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದರು. ಒಟ್ಟು ರೂ. 252.50 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ […]

ಕೆಪಿಸಿಸಿಯ ಮಾಜಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರುವುದು ಖಚಿತ

Wednesday, October 18th, 2017
harikrishna bhantwal

ಮಂಗಳೂರು: ಕೆಪಿಸಿಸಿಯ ಮಾಜಿ ವಕ್ತಾರ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಶಿಷ್ಯ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ. ನ. 11ರಂದು ಮಂಗಳೂರಿನಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಧಾನ ಪರಿಷತ್ ಚುನಾವಣೆ ವೇಳೆ ತನಗೆ ಟಿಕೆಟ್ ನೀಡುವುದಾಗಿ ಕೊನೆ ಕ್ಷಣದಲ್ಲಿ ಕೈಕೊಟ್ಟ ಕಾಂಗ್ರೆಸ್ ಹಿರಿಯ ನಾಯಕರ ವರ್ತನೆಯಿಂದ […]

ಬಂಟ್ವಾಳ: ಗ್ರಾಪಂ ಸದಸ್ಯೆಯೋರ್ವರ ಮಗ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ

Wednesday, October 18th, 2017
Bhantvala

ಮಂಗಳೂರು: ಯುವತಿಯ ಮೇಲೆ ಗ್ರಾಮ ಪಂಚಾಯತ್ ಸದಸ್ಯೆಯೋರ್ವರ ಮಗ  ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿಯ ಪೋಷಕರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಜೀಪಮೂಡ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌‌ ಸದಸ್ಯೆಯೋರ್ವರ ಮಗ ಜಯಂತ್‌ (20) ಎಂಬಾತನೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದೆ. ಬಂಟ್ವಾಳದ ಸಜೀಪಮೂಡದ ಮಿತ್ತಮಜಲು ಎಂಬಲ್ಲಿ ಯುವತಿ ಮನೆಯಿಂದ ಉದ್ಯೋಗಕ್ಕೆಂದು ತೆರಳುವ ವೇಳೆ ನಿರ್ಜನ ಪ್ರದೇಶದಲ್ಲಿ ಆಕೆಯನ್ನು […]

ಬಂಟ್ವಾಳ: ಮೂರು ಪೊಲೀಸ್ ಠಾಣೆಗಳ ಎಸ್ಐಗಳ ಬದಲಾವಣೆ

Tuesday, October 17th, 2017
bantwala SI

ಬಂಟ್ವಾಳ: ತಾಲೂಕಿನ ಮೂರು ಪೊಲೀಸ್ ಠಾಣೆಗಳ ಎಸ್ಐಗಳನ್ನು ಬದಲಾವಣೆ ಮಾಡುವ ಮೂಲಕ ಸರ್ಕಾರ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಐಯವರನ್ನು ಮಂಗಳೂರಿನ ಡಿಎಸ್‌‌ಪಿ ಕಚೇರಿಗೆ, ನಗರ ಠಾಣಾ ಅಪರಾಧ ವಿಭಾಗದ ಎಸ್‌‌ಐ ಅಗಿದ್ದ ಗಂಗಾಧರಪ್ಪ ಅವರನ್ನು ನೂತನವಾಗಿ ನಿರ್ಮಾಣವಾಗುವ ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌‌‌ಐ ಉಮೇಶ್‌‌ರನ್ನು ಮಂಗಳೂರು ಡಿಸಿಬಿ ಕಚೇರಿಗೆ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಎಸ್.ಐ.ಚಂದ್ರಶೇಖರ್ ಅಯ್ಯರನ್ನು ಡಿಎಸ್‌‌ಎ ಮಂಗಳೂರು ಕಚೇರಿಗೆ ವರ್ಗಾವಣೆ […]

ಬಂಟ್ವಾಳ: ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿಶೀಲನೆ

Tuesday, October 10th, 2017
water tank

ಮಂಗಳೂರು: ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿ,ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಯು.ಐ.ಡಿ.ಎಸ್.ಎಸ್.ಎಂ.ಟಿ ಯೋಜನೆಯಡಿ 57.79 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸೋಮವಾರ ಸಂಜೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ 30ವರ್ಷಗಳವರೆಗಿನ ಜನಸಂಖೆಯನ್ನು ಆಧರಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ದಿನವೊಂದಕ್ಕೆ ಒಟ್ಟು 42 ಲಕ್ಷ ಲೀಟರ್ ಕುಡಿಯುವ […]

ಇಬ್ಬರು ಯುವಕರಿಗೆ ಚೂರಿ ಇರಿದು ದುಷ್ಕರ್ಮಿಗಳು ಪರಾರಿ

Tuesday, December 20th, 2016
two-youth-

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಪನೆ ಎಂಬಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರಿಗೆ ಚೂರಿ ಇರಿದು ಇಬ್ಬರು ಯುವಕರಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ. ರೋಡ್‌‌‌ನಿಂದ ಪೊಳಲಿ ದೇವಸ್ಥಾನಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಇರುವ ಕಲ್ಪನೆ ಎಂಬಲ್ಲಿ ಬೈಕ್‌‌‌ನಲ್ಲಿ ಸಾಗುತ್ತಿದ್ದ ಮಲ್ಲೂರಿನ ಜುನೈದ್ ಮತ್ತು ಶಾಂತಿಯಂಗಡಿ ನಿವಾಸಿ ಸಿನಾನ್ ಎಂಬುವರ ಮೇಲೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕಿನಲ್ಲಿ ಬಂದ ಮೂವರು ಇರಿದು ಪರಾರಿಯಾಗಿದ್ದು, […]

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆಯುದ ಪೂಜೆ

Tuesday, October 11th, 2016
ayudha-pooja

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆಯುದ ಪೂಜೆ ನಡೆಯಿತು. ಈ ಸಂದರ್ಭ ಡಿ.ವೈ.ಎಸ್.ಪಿ ರವೀಶ್, ವೃತ್ತ ನಿರೀಕ್ಷಕ ಮಂಜಯ್ಯ,ನಗರ ಠಾಣೆಯ ಎಸ್‌ಐ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದ ಶಾಖೆ ಮಜಲೋಡಿ ಮಿಜಾರು ಬಂಟ್ವಾಳ ಇದರ ಅಧ್ಯಕ್ಷರಾಗಿ ಉಮೇಶ್ ಮಜಲೋಡಿ ಆಯ್ಕೆ

Wednesday, July 27th, 2016
Umesh-majalody

ಬಂಟ್ವಾಳ: ಸ್ವಾಮಿ ವಿವೇಕಾನಂದ ಶಾಖೆ ಮಜಲೋಡಿ ಮಿಜಾರು ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಉಮೇಶ್ ಮಜಲೋಡಿ ಆಯ್ಕೆಯಾಗಿದ್ದಾರೆ. ಗೌರವಧ್ಯಾಕ್ಷರಾಗಿ ಚಿದಾನಂದ ಕುಜ್ಲುಬೆಟ್ಟು, ಗೌರವ ಸಲಹೆಗಾರರಾಗಿ ಗೋಪಾಲ ಮಜಲೋಡಿ, ಕಾರ‍್ಯದರ್ಶಿಯಾಗಿ ಪ್ರವೀಣ್ ಕೆಲ್ದೋಡಿ ಇವರನ್ನು ಶಾಖೆಯ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು. ಈ ಸಂದರ್ಭ ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕದ ಪ್ರಧಾನ ಕಾರ‍್ಯದರ್ಶಿ ವಸಂತ ಕುಮಾರ್ ಕೊಂಗ್ರಬೆಟ್ಟು, ಪ್ರಮುಖರಾದ ರಾಮಚಂದ್ರ ಗೌಡ, ನವೀನ್ ಮಣಿಹಳ್ಳ, ಯೋಗೀಶ್ ಕೇಲ್ದೋಡಿ, ಹರೀರ್ಶ ಮಜಲೋಡಿ ಹಾಗೂ ಶಾಖೆಯ ಸದಸ್ಯರುಗಳು ಉಪಸ್ಥಿತರಿದ್ದರು.

ಬಂಟ್ವಾಳ: ಶಾಲೆಗೆ ಹೋದವಳು ಮನೆಗೆ ಬಾರದೆ ನಾಪತ್ತೆ

Tuesday, June 23rd, 2015
Ayesha

ಬಂಟ್ವಾಳ: ಶಾಲೆಗೆ ಹೋದ ಮಾರಿಪಳ್ಳದ ವಿದ್ಯಾರ್ಥಿನಿಯೊರ್ವಳು ಕಾಣೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಸಹದುದ್ದಿನ್ ಅವರ ತಂಗಿ ಆಯಿಷಾ 18 ಕಾಣೆಯಾಗಿರುವ ವಿದ್ಯಾರ್ಥಿ. ಮಂಗಳೂರು ಪಳ್ನೀರ್‌ನಲ್ಲಿ ಹಿದಾಯತ್ ಪೌಂಡೇಸನ್‌ನ ಅರೇಬಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಳು. ಜೂನ್ 20 ರಂದು 8 ಗಂಟೆಗೆ ಮನೆಯಿಂದ ಶಾಲೆಗೆ ಹೋದವಳು ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಆಯಿಷಾಳ ಚಿಕ್ಕಪ್ಪ ಪೋನ್ ಮಾಡಿದಾಗ ಮನೆಗೆ ಬರುತ್ತಿದ್ದೇನೆ ಎಮದು ಹೇಳಿದವಳು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು […]

ಬಂಟ್ವಾಳ: ಹಿರಿಯ ಸಾಹಿತಿ ಸಿದ್ಧಮೂಲೆಗೆ ’ಕನ್ನಡದ ಕಲ್ಹಣ ಪ್ರಶಸ್ತಿ’

Friday, March 27th, 2015
Sidhamoole

ಬಂಟ್ವಾಳ: ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮಭಟ್ಟ-80 ವರ್ಷಾಚರಣೆ ಪ್ರಯುಕ್ತ ನೀಡಲಾಗುವ ’ಕನ್ನಡದ ಕಲ್ಹಣ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರು ಆಯ್ಕೆಯಾಗಿದ್ದಾರೆ. ಹೂದೋಟ, ಗಂಗಾ ಸಲಿಲ, ನಾಲ್ಕು ಕವನಗಳು, ಪರಾಗ- ಕವನ ಸಂಕಲನ, ಕುಮಾರನ ಜನನ ಮತ್ತು ವಿಜಯ -ಗೀತಾನೃತ್ಯ ರೂಪಕ, ಕೈಲಾಸ ಮಾನಸ ಸರೋವರ ಪ್ರವಾಸ ಕಥನ, ಸೀತಾಗಾಥೆ-ಜೀವನ ಕಾವ್ಯ, ಶ್ರೀರಾಮಾಶ್ವಮೇಧ -ವಿಮರ್ಶೆ, ಕನ್ನಡ ಸಾಹಿತ್ಯದಲ್ಲಿ ಶಿವದರ್ಶನ-ಸಂಶೋಧನೆ, ಗೋವಿಂದ ಪೈಯವರ ಛಂದೋಗತಿ-ಸಂಶೋಧನೆ, ವೃಕ್ಷಾಯುರ್ವೇದ, ನಳಚರಿತ್ರೆ, ಕನ್ನಡ ಅದ್ಭುತ ರಾಮಾಯಣ-ಅನುವಾದ, ಮನುಷ್ಯಾಲಯ ಚಂದ್ರಿಕಾ-ಗೃಹವಾಸ್ತು, ಕನ್ನಡ […]