Blog Archive

ಗೋದಾಮುಗಳಲ್ಲಿ 50 ಕ್ವಿಂಟಾಲ್ ಈರುಳ್ಳಿ ದಾಸ್ತಾನು ಮಿತಿಗೊಳಿಸಿ : ಜಿಲ್ಲಾಧಿಕಾರಿ

Tuesday, December 10th, 2019
irulli

ಮೈಸೂರು : ಮುಕ್ತ ಮಾರುಕಟ್ಟೆಯಲ್ಲಿ ಮತ್ತು ಸಗಟು ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನಿರಿಸುವುದನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು ಸರ್ಕಾರವು ಉಲ್ಲೇಖಿತ ಅಧಿಸೂಚನೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986 ಅಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ಡೀಲರ್ ಗಳಲ್ಲಿ/ಉತ್ಪಾದಕರಲ್ಲಿ/ಕಮಿಷನ್ ಏಜೆಂಟ್ ಗಳಲ್ಲಿ ದಾಸ್ತಾನಿನ ಮಿತಿಯನ್ನು 250ಕ್ವಿಂಟಾಲ್ ಗೆ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 50ಕ್ವಿಂಟಾಲ್ ಗೆ ಮಿತಿಗೊಳಿಸಿ ಆದೇಶಿಸಲಾಗಿದೆ ಎಂದಿದ್ದಾರೆ. […]

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

Tuesday, December 3rd, 2019
handi-cap day

ಮಂಗಳೂರು: ವಿಕಲಚೇತನರು ಎಂಬುದನ್ನು ಮನಸ್ಸಿನಿಂದ ದೂರವಿಟ್ಟು, ಸಾಧನೆಯ ಹಾದಿಯಲ್ಲಿ ಸಾಗುವ ಮನೋಭಾವ ಬೆಳಿಸಿಕೊಳ್ಳಬೇಕು. ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು. ಮಂಗಳವಾರ ಪುರಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧನಗರ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ […]

ಚಾರ್ಮಾಡಿ ಘಾಟ್ ರಸ್ತೆ ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಿಸಿ : ಜಿಲ್ಲಾಧಿಕಾರಿ ಆದೇಶ

Thursday, November 28th, 2019
Charmadi-Ghat

ಮಂಗಳೂರು : ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆಯೂ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿ, ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಬುಧವಾರ ಆದೇಶ ಹೊರಡಿಸಿದ್ದಾರೆ. ಈ ರಸ್ತೆಯಲ್ಲಿ ಲಘು ವಾಹನಗಳಿಗೆ ನ.28ರಿಂದ ದಿನದ 24 ಗಂಟೆಯೂ ಮುಕ್ತ ಪ್ರವೇಶವಿದೆ. ಆದರೆ ಎಲ್ಲ ರೀತಿಯ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಚಾರ್ಮಾಡಿ ಘಾಟ್‌ನಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಗೆ ರಸ್ತೆಗಳು […]

ಮಿಷನ್ ಇಂದ್ರ ಧನುಷ್ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿ : ಜಿಲ್ಲಾಧಿಕಾರಿ ಸೂಚನೆ

Tuesday, November 19th, 2019
Madikeri

ಮಡಿಕೇರಿ : ಜಿಲ್ಲೆಯಾದ್ಯಂತ ಡಿ.2 ರಿಂದ 10 ರವರೆಗೆ ನಡೆಯುವ ಮೊದಲನೇ ಸುತ್ತಿನ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಿಷನ್ ಇಂದ್ರಧನುಷ್ ಮತ್ತು ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆಯ ಪೂರ್ವಭಾವಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ ಯಾವುದೇ ಮಗು […]

ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ : ಜಿಲ್ಲಾಧಿಕಾರಿ

Friday, November 15th, 2019
Kanakadasa-Jayanthi

ಮಡಿಕೇರಿ :  ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಕನಕದಾಸರ ಸಂದೇಶಗಳನ್ನು ತಿಳಿದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನಕದಾಸರು ’ನಾನು ಹೋದರೆ, ಹೋದೇನೂ’ ಎಂಬ ಸಂದೇಶ ಸಾರಿದ್ದಾರೆ. ’ನಾನು’ ಎಂಬುದನ್ನು ಬಿಡಬೇಕು, […]

ನ.2 ರಂದು ಉಪರಾಷ್ಟ್ರಪತಿ ಮಂಗಳೂರಿಗೆ ಆಗಮನ : ಕೂಳೂರು-ಸುರತ್ಕಲ್ ಹೆದ್ದಾರಿ ತಕ್ಷಣ ದುರಸ್ತಿಗೆ ಜಿಲ್ಲಾಧಿಕಾರಿ ಸೂಚನೆ

Thursday, October 31st, 2019
Sindhu

ಮಂಗಳೂರು : ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವೆಂಬರ್ 2ರಂದು ಮಂಗಳೂರಿಗೆ ಆಗಮಿಸುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೂಳೂರಿನಿಂದ ಸುರತ್ಕಲ್ ಎನ್‍ಐಟಿಕೆವರೆಗೆ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ನಡೆಸಲು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಾಕೀತು ಮಾಡಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪರಾಷ್ಟ್ರಪತಿಗಳ ಆಗಮನ ಪ್ರಯುಕ್ತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ನಿರಂತರ ಮಳೆಯಿಂದ ದುರಸ್ತಿ ಕಾಮಗಾರಿಗೆ ಅಡ್ಡಿಯಾಗಿದೆ. ಆದರೂ, ಉಪರಾಷ್ಟ್ರಪತಿಗಳ ಆಗಮನ […]

ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ಕ್ಕೆ ಚುನಾವಣೆ

Tuesday, October 22nd, 2019
mcc

ಮಂಗಳೂರು  : ರಾಜ್ಯ ಚುನಾವಣೆ ಆಯೋಗವು ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ ಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆ 60 ವಾರ್ಡ್ ಗಳಿಗೆ  ನವೆಂಬರ್ 12ನೇ ತಾರೀಕು ಮತದಾನ ನಡೆಯಲಿದೆ. ಅಕ್ಟೋಬರ್ 20ನೇ ತಾರೀಕು ಭಾನುವಾರದಿಂದ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿ ಆಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ  ಬಗ್ಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ 24.10.2019 ನಾಮಪತ್ರ ಸಲ್ಲಿಸಲು ಕೊನೆ ದಿನ 31.10.2019 ನಾಮಪತ್ರ ಪರಿಶೀಲಿಸಲು ಕೊನೆ ದಿನ 2.11.2019 […]

ಜೀತ ಪದ್ಧತಿ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

Wednesday, October 16th, 2019
jeeta-padhati

ವಿಜಯಪುರ : ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಯಶವಂತ ಕಾಂಬಳೆ ಎಂಬುವವರನ್ನು ಅದೇ ಗ್ರಾಮದ ರಮೇಶ ಮಸಳಿ ಹಾಗೂ ಮಲ್ಲೇಶಿ ಮಸಳಿ ಎಂಬುವವರು ಜೀತಕ್ಕೆ ಇಟ್ಟುಕೊಂಡಿರುವುದನ್ನು ಖಂಡಿಸಿ ರಾಜ್ಯ ಛಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯ ಛಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಆನಂದ ಔದಿ ಮಾತನಾಡಿ, ಬಿಜ್ಜರಗಿ […]

ಮಂಗಳೂರು : ಹೆದ್ದಾರಿ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ನಳಿನ್‌ ಕುಮಾರ್‌ ಕಟೀಲು ಸೂಚನೆ

Wednesday, October 16th, 2019
nalin-kumar

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತು ಇತರ ಕಾರಣಗಳಿಗೆ ಗುಂಡಿ ಬಿದ್ದಿರುವ ಹೆದ್ದಾರಿಯನ್ನು ತತ್‌ಕ್ಷಣವೇ ದುರಸ್ತಿ ಗೊಳಿಸುವ ಜತೆಗೆ ಈ ಕುರಿತ ಪ್ರಗತಿ ಪರಿಶೀಲನ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ರಸ್ತೆಗಳ ದುರಸ್ತಿ ಬಗ್ಗೆ ಇಲಾಖಾಧಿಕಾರಿಗಳ ಸಭೆಯಲ್ಲಿ ಸಂಸದರು ಈ ಸೂಚನೆ ನೀಡಿದ್ದಾರೆ. ಬಿ.ಸಿ. ರೋಡ್‌ನಿಂದ ಸುರತ್ಕಲ್‌ವರೆಗಿನ ಹೆದ್ದಾರಿ ಹದಗೆಟ್ಟಿದ್ದು, ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ ಕಡಿಮೆಯಾದರೂ […]

ತಲಾಖ್ ಬೇಡ, ಗಂಡ ಬೇಕು : ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಿಳೆ

Monday, October 14th, 2019
shivamogga

ಶಿವಮೊಗ್ಗ : ತಲಾಖ್ ನೀಡಿದರೆ ಕಠಿಣ ಶಿಕ್ಷೆಗೆ ಗುರಿ ಮಾಡುವ ಕಾನೂನು ದೇಶಾದ್ಯಂತ ಜಾರಿಯಾಗಿದೆ. ಆದರೂ ತಲಾಖ್ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಲೇ ಇವೆ. ಶಿವಮೊಗ್ಗದಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪತಿಯಿಂದ ತಲಾಖ್ ಶಿಕ್ಷೆಗೆ ಗುರಿಯಾದ ಆಯೇಷಾ ಸಿದ್ದಿಕಿ ತನಗೆ ತಲಾಖ್ ಬೇಡ, ಗಂಡ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಆಯೆಷಾ ಸಿದ್ದಿಕಿಗೆ ಪತಿ ಮುಸ್ತಫಾ ಬೇಗ್ ವಾಟ್ಸಪ್ ಮೂಲಕ ತಲಾಖ್ ನೀಡಿದ್ದ. ದುಬೈನಲ್ಲಿ ಕೆಲಸ ಮಾಡುತ್ತಿರುವ ಮುಸ್ತಫಾ ಪತ್ನಿಯೊಂದಿಗೆ ಸಂಬಂಧ ಕಡಿದುಕೊಂಡದ್ದಲ್ಲದೆ, ಆಕೆಗೆ […]